Site icon Vistara News

Thalapathy 67: ದಳಪತಿ 67 ಸಿನಿಮಾ ಬಗ್ಗೆ ಸುಳಿವು ನೀಡಿದ ರಕ್ಷಿತ್‌ ಶೆಟ್ಟಿ: ಟ್ವೀಟ್‌ ಮೂಲಕ ಸ್ಪಷ್ಟನೆ

Rakshit Shetty hints Thalapathy 67

ಬೆಂಗಳೂರು: ಕಾಲಿವುಡ್‌ ಸ್ಟಾರ್‌ ದಳಪತಿ ವಿಜಯ್‌ ‘ವಾರಿಸು’ ಸಿನಿಮಾ ಯಶಸ್ಸಿನ ಬೆನ್ನಲ್ಲೇ ದಳಪತಿ 67 ಸಿನಿಮಾ (Thalapathy 67) ಬಗ್ಗೆ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ದಿನೇ ದಿನೇ ಸಿನಿಮಾ ಕುರಿತು ಹಲವು ವದಂತಿಗಳು ಶುರುವಾಗಿದ್ದು, ಇದೀಗ ಸ್ಯಾಂಡಲ್‌ವುಡ್‌ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ. ಇದೀಗ ರಕ್ಷಿ ಶೆಟ್ಟಿ ಟ್ವೀಟ್‌ ಮೂಲಕ ಈ ವದಂತಿಗಳಿಗೆ ಫುಲ್‌ಸ್ಟಾಪ್‌ ಇಟ್ಟಿದ್ದಾರೆ.

777 ಚಾರ್ಲಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ ಪ್ರಸ್ತುತ ಹಲವಾರು ಯೋಜನೆಗಳಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ, ಅವರು ಲೋಕೇಶ್ ಕನಕರಾಜ್ ಅವರ ದಳಪತಿ 67ರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ವದಂತಿಗಳು ಹೊರಗೆ ಬಿದ್ದ ಬೆನ್ನಲ್ಲೇ ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅವರ ಮುಂಬರುವ ಚಿತ್ರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ʻʻಸಪ್ತ ಸಾಗರದಾಚೆ ಎಲ್ಲೋ ನಂತರ ನನ್ನ ಲೈನ್ ಅಪ್‌ಗಳು ಸಾಕಷ್ಟು ಸ್ಪಷ್ಟವಾಗಿವೆ. ಅಂದರೆ ರಿಚರ್ಡ್ ಆಂಥೋನಿ, ಪುಣ್ಯ ಕೋಟಿ 1 (PK 1), ಪುಣ್ಯ ಕೋಟಿ 2 (PK 2), (RA), PK 1 ಮತ್ತು 2,ಮಿಡ್ನೈಟ್ ಟು ಮೋಕ್ಷ (M2M) ಇವುಗಳು ನನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವ ನಾಲ್ಕು ಚಲನಚಿತ್ರಗಳಾಗಿವೆ. ಆದರೆ ಕಿರಿಕ್‌ ಪಾರ್ಟಿ 2 (KP2) ಗಾಗಿ ನಾನು ವಿಭಿನ್ನ ಯೋಜನೆಗಳನ್ನು ಹೊಂದಿದ್ದೇನೆ. ನೋಡೋಣ. ನೀವು ಇಂಟರ್‌ನೆಟ್‌ನಲ್ಲಿ ಓದುವ ಯಾವು ವದಂತಿಗಳು ನಿಜವಲ್ಲʼʼಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ: Thalapathy 67: ದಳಪತಿ 67 ಟೀಸರ್ ಬಿಡುಗಡೆ ದಿನಾಂಕ ಮುಂದೂಡಿಕೆ: ಹೊಸ ಅಪ್‌ಡೇಟ್‌ ನೀಡಿದ ಲೋಕೇಶ್ ಕನಕರಾಜ್!

ಇದೀಗ ರಕ್ಷಿತ್‌ ಶೆಟ್ಟಿ ಟ್ವೀಟ್‌ನಿಂದ ರಕ್ಷಿತ್ ವಿಜಯ್ ಮತ್ತು ಲೋಕೇಶ್ ಅವರ ದಳಪತಿ 67 ರ ಭಾಗವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಲೋಕೇಶ್ ಕನಕರಾಜ್ ಅವರ ಮುಂಬುರುವ ಚಿತ್ರ ದಳಪತಿ 67 ಟೀಸರ್ (Thalapathy 67) ಜನವರಿ 26, ಗುರುವಾರ ಬಿಡುಗಡೆಯಾಗಲಿದೆ ಎಂದು ವರದಿಯಾಗಿತ್ತು. ಇದರಲ್ಲಿ ದಳಪತಿ ವಿಜಯ್ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಯೋಜನೆ ತಾತ್ಕಾಲಿಕವಾಗಿ ದಳಪತಿ 67 ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: Leopard attack | ಓಂಕಾರ ಹಿಲ್ಸ್‌ ಹಿಂಭಾಗದಲ್ಲಿರುವ ಜಾಗ ನಟ ರಕ್ಷಿತ್‌ ಶೆಟ್ಟಿಗೆ ಸೇರಿದ್ದು; ಚಿರತೆ ಸೆರೆ ಕಾರ್ಯಕ್ಕೆ ಚುರುಕು

ಹೇಗಿರಲಿದೆ ದಳಪತಿ 67?

ಕಾಲೇಜು ವಿದ್ಯಾರ್ಥಿಗಳೊಂದಿಗಿನ ಸಂವಾದದ ಸಮಯದಲ್ಲಿ, ಲೋಕೇಶ್ ಕನಕರಾಜ್ ಅವರು ದಳಪತಿ 67 ಕಥಾಹಂದರದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಚಿತ್ರದಲ್ಲಿ ದಳಪತಿ ವಿಜಯ್ ಅವರನ್ನು ರೊಮ್ಯಾಂಟಿಕ್ ಅವತಾರದಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆಯೇ ಎಂದು ವಿದ್ಯಾರ್ಥಿಗಳು ನಿರ್ದೇಶಕರನ್ನು ಕೇಳಿದಾಗ, ಹೌದು ಎಂದು ಉತ್ತರಿಸಿದ್ದಾರೆ. 40ರ ಹರೆಯದ ದರೋಡೆಕೋರನ ಪಾತ್ರದಲ್ಲಿ ದಳಪತಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ತ್ರಿಶಾ ಕೃಷ್ಣನ್ ಈ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ, ಹೀಗಾಗಿ ಬಹಳ ಗ್ಯಾಪ್ ನಂತರ ವಿಜಯ್ ಜತೆ ಮತ್ತೆ ಒಂದಾಗುತ್ತಿದ್ದಾರೆ.

Exit mobile version