Site icon Vistara News

Rakul Preet Singh | ಮಾಲ್ಡೀವ್ಸ್‌ ಪ್ರವಾಸದಲ್ಲಿ ರಾಕುಲ್‌ ಪ್ರೀತ್‌ ಸಿಂಗ್‌: ಹಾಟ್‌ ಫೋಟೊ ಹಂಚಿಕೊಂಡ ನಟಿ!

Rakul Preet Singh

ಬೆಂಗಳೂರು : ನಟಿ ರಾಕುಲ್‌ ಪ್ರೀತ್‌ ಸಿಂಗ್‌ (Rakul Preet Singh ) ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಮಾಲ್ಡೀವ್ಸ್‌ ಪ್ರವಾಸದಲ್ಲಿ ರಾಕುಲ್‌ ಪ್ರೀತ್‌ ಸಿಂಗ್‌ ಎಂಜಾಯ್‌ ಮಾಡುತ್ತಿರುವ ಫೋಟೊಗಳನ್ನು ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದಾರೆ. ರಾಕುಲ್ ಇತ್ತೀಚಿಗಷ್ಟೆ ʻಥ್ಯಾಂಕ್‌ ಗಾಡ್‌ʼ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿದೆ. 

ಈ ಹಿಂದೆ ಅಷ್ಟೇ ನಟ ಹಾಗೂ ನಿರ್ಮಾಪಕ ಜಕ್ಕಿ ಬಗ್‌ನಾನಿಯೊಂದಿಗೆ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಡೇಟಿಂಗ್‌ ಮಾಡುತ್ತಿರುವುದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಜೋಡಿ ಶೀಘ್ರದಲ್ಲಿಯೇ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ ಎಂಬ ಅಧಿಕೃತ ಸುದ್ದಿ ಹೊರ ಬಂದಿತ್ತು. ರಾಕುಲ್‌ ಹಾಗೂ ಜಕ್ಕಿ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರಂತೆ. ಮದುವೆ ಡೇಟ್‌ ಮತ್ತು ಜಾಗವನ್ನು ಫಿಕ್ಸ್‌ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.

ಇದನ್ನೂ ಓದಿ | Rakul Preet Singh | ಮದುವೆ ಆಗಲಿದ್ದಾರಂತೆ ನಟಿ ರಾಕುಲ್‌: ವೈರಲ್‌ ಆಯ್ತು ಅಣ್ಣನ ಪೋಸ್ಟ್‌!

ರಾಕುಲ್‌ ಮದುವೆ ದಿನದ ಬಗ್ಗೆ ಈಗಾಗಲೇ ಎಲ್ಲರೊಂದಿಗೆ ಹಂಚಿಕೊಂಡಿಡಿದ್ದಾರೆ ಎಂದು ರಾಕುಲ್‌ ಸಹೋದರ ಅಮನ್‌ ಸಿಂಗ್‌ ಮಾಧ್ಯಮಗಳಿಗೆ ತಿಳಿಸಿರುವುದು ವರದಿಯಾಗಿತ್ತು. ಮದುವೆ ವಿಚಾರವನ್ನು ಜಕ್ಕಿ ಬಗ್‌ನಾನಿ ತಂದೆ ವಾಸು ಕೂಡ ಖಚಿತಪಡಿಸಿದ್ದು, ಮದುವೆ ತಯಾರಿ ನಡೆದಿದೆ ಎಂದಿದ್ದರು ಎಂದು ವರದಿ ಆಗಿತ್ತು.

ಇತ್ತೀಚಿಗಷ್ಟೆ ಅನನ್ಯಾ ಪಾಂಡೆ, ಮೌನಿ ರಾಯ್‌, ಜಾನ್ವಿ ಕಪೂರ್‌, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕರು ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದರು. ಇದೀಗ ರಾಕುಲ್ ಸರದಿ ಎನ್ನುತ್ತಿದ್ದಾರೆ ನೆಟ್ಟಿಗರು.

ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ರಾಕುಲ್‌!
ಕಟ್‌ಪುಟ್ಲಿʼಯಲ್ಲಿ ಕಾಣಿಸಿಕೊಂಡಿರುವ ರಾಕುಲ್, ಅನುಭೂತಿ ಕಶ್ಯಪ್ ಚೊಚ್ಚಲ ನಿರ್ದೇಶನದ ʻಡಾಕ್ಟರ್ ಜಿʼ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಜತೆ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್ ನಟನೆಯ ʻಇಂಡಿಯನ್ 2 ʼಸೇರಿದಂತೆ, ʻಛತ್ರಿವಾಲಿʼ ಸಿನಿಮಾಗಳು ಬಿಡುಗಡೆಯಾಗಲು ಸಜ್ಜಾಗಿವೆ.

ಇದನ್ನೂ ಓದಿ | Hansika Motwani | ʻಬಿಂದಾಸ್‌ʼ ಹುಡುಗಿಗೆ ಕಲ್ಯಾಣವಂತೆ: ವರ ಯಾರು?

Exit mobile version