Site icon Vistara News

Ram Charan: ವಿಶೇಷ ವಿನ್ಯಾಸದಲ್ಲಿದೆ ರಾಮ್‌ ಚರಣ್ ದಂಪತಿ ಮಗಳ ಕೋಣೆ!

Ram Charan and Upasana

ಬೆಂಗಳೂರು: ಮದುವೆಯಾಗಿ 11 ವರ್ಷಗಳ ಬಳಿಕ ರಾಮ್‌ ಚರಣ್‌ (Ram Charan)-‌ ಉಪಾಸನಾ ದಂಪತಿ ಹೆಣ್ಣು ಮಗುವಿಗೆ ಪೋಷಕರಾದರು. ಮಗುವಿನ ಹೆಸರು ‘ಕ್ಲೀಂಕಾರ ಕೊನಿಡೆಲಾ’ (Klin Kaara konidela). ಲಲಿತಾ ಸಹಸ್ರನಾಮ ನಾಮದಿಂದ ತೆಗೆದುಕೊಳ್ಳಲಾಗಿದೆ. ಉಪಾಸನಾ ಹಾಗೂ ರಾಮ್ ಚರಣ್ ತಮ್ಮ ಮಗಳಿಗಾಗಿ ವಿಶೇಷವಾಗಿ ಕೋಣೆಯನ್ನು ಡಿಸೈನ್ ಮಾಡಿಸಿದ್ದಾರೆ. ಮಗು ಜನಿಸುವ ಮುನ್ನವೇ ವಿಶೇಷ ಕೋಣೆಯನ್ನು ಉಪಾಸನಾ ಡಿಸೈನ್ ಮಾಡಿಸಿ ಆಗಿತ್ತು. ಇದೀಗ ಈ ವಿಡಿಯೊ ಹಾಗೂ ಫೋಟೊಗಳು ವೈರಲ್‌ ಆಗಿವೆ.

ಮಗುವಿಗಾಗಿ ಮಾಡಿಸಿರುವ ಕೋಣೆಯನ್ನು ಡಿಸೈನ್ ಮಾಡಿರುವುದು ಆರ್ಕ್​ಡೈಜೆಸ್ಟ್ ಇಂಡಿಯಾ ಹೆಸರಿನ ಸಂಸ್ಥೆ. ಪವಿತ್ರಾ ರಾಜಾರಾಂ ಅವರು ಕೋಣೆಯನ್ನು ವಿನ್ಯಾಸಗೊಳಿಸಿದ್ದಾರೆ. ದಂಪತಿ ಕಾಡಿನ ಮೇಲಿನ ಪ್ರೀತಿಯಿಂದ ಸ್ಫೂರ್ತಿ ಪಡೆದಿದ್ದಾರೆʼʼಎಂದು ಉಪಾಸನಾ ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ. ಹಲವಾರು ಸ್ಟಫ್ಡ್ ಆಟಿಕೆಗಳು ಮತ್ತು ವಿಶೇಷವಾಗಿ ಕ್ಯುರೇಟೆಡ್ ವಾಲ್‌ಪೇಪರ್ ಹೊಂದಿದೆ ಈ ಕೋಣೆ. ಉಪಾಸನಾ ಹಾಗೂ ರಾಮ್ ಚರಣ್ ಇಬ್ಬರಿಗೂ ಅರಣ್ಯವೆಂದರೆ ಬಹಳ ಪ್ರೀತಿಯಾದ್ದರಿಂದ ಅದೇ ಥೀಮ್ ಇರಿಸಿ ಮಗಳ ಕೋಣೆಯನ್ನು ಡಿಸೈನ್ ಮಾಡಿಸಿದ್ದಾರೆ. ಮರ, ಗಿಡಗಳ ಭಿನ್ನ ರೀತಿಯ ಚಿತ್ರಗಳು ಇಡೀ ಕೋಣೆಯ ತುಂಬೆಲ್ಲ ಇವೆ.

ಇದನ್ನೂ ಓದಿ: Ram Charan : ರಾಮ್ ಚರಣ್ ಹಾಗೂ ಉಪಾಸನಾ ಮಗಳಿಗೆ ಹೆಸರು ನಿಕ್ಕಿ; ಲಲಿತಾ ಸಹಸ್ರನಾಮ ನಾಮದಿಂದ ಆಯ್ಕೆ!

”ನಾನು ಹಾಗೂ ರಾಮ್ ಚರಣ್ ಹೋದ ಕಡೆಗಳಲ್ಲಿ ಸಂಗ್ರಹಿಸಿದ ವಸ್ತುಗಳನ್ನು ಇಲ್ಲಿ ಸೇರಿಸಿದ್ದೇವೆ. ಇಲ್ಲಿರುವ ಎಲ್ಲ ವಸ್ತಗಳಲ್ಲಿ ನಾವು, ನಮ್ಮ ನೆನಪು ಇದೆ. ಹಾಗಾಗಿಯೇ ಈ ಸ್ಥಳ ಬಹಳ ವಿಶೇಷವಾಗಿದೆ. ಮಗು ಮೊದಲು ನೋಡುವ ವಸ್ತುಗಳು, ವ್ಯಕ್ತಿಗಳು, ದೃಶ್ಯಗಳು ಬಹಳ ಮುಖ್ಯ ಹಾಗಾಗಿ ಪ್ರಕೃತಿಯನ್ನೇ ಮೂಲವಾಗಿರಿಸಿ ಕೋಣೆಯನ್ನು ವಿನ್ಯಾಸ ಮಾಡಲಾಗಿದೆ” ಎಂದಿದ್ದಾರೆ ಉಪಾಸನಾ ಕೋನಿಡೆಲಾ.

ವಿಶೇಷ ಹೆಸರನ್ನು ಇಟ್ಟ ರಾಮ್‌ಚರಣ್‌ ದಂಪತಿ!

‘ಕ್ಲೀಂಕಾರ’ ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ. ದೈವಿಕ ತಾಯಿಯಾದ ‘ಶಕ್ತಿ’ಯ ಪರಮೋಚ್ಚ ಶಕ್ತಿ ಎಂದು ಅರ್ಥ.

ರಾಮ್‌ಚರಣ್‌ ಸದ್ಯ ಗೇಮ್ ಚೇಂಜರ್‌ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಬಿಡುಗಡೆಯಾದ ವಿನಯ ವಿಧೇಯ ರಾಮ ಚಿತ್ರದ ನಂತರ ರಾಮ್ ಚರಣ್ ಮತ್ತು ಕಿಯಾರಾ ಆಡ್ವಾಣಿ ಈ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜಯರಾಮ್, ಅಂಜಲಿ ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಎಸ್ ಥಮನ್ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತಿರು ಮತ್ತು ಆರ್.ರತ್ನವೇಲು ಛಾಯಾಗ್ರಹಣ, ಶಮೀರ್ ಮಹಮ್ಮದ್ ಸಂಕಲನ ಚಿತ್ರಕ್ಕಿದೆ.ಈ ಪ್ರಾಜೆಕ್ಟ್ ಅನ್ನು ಪ್ಯಾನ್-ಇಂಡಿಯಾ ಬಿಡುಗಡೆಗಾಗಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Exit mobile version