Ram Charan : ರಾಮ್ ಚರಣ್ ಹಾಗೂ ಉಪಾಸನಾ ಮಗಳಿಗೆ ಹೆಸರು ನಿಕ್ಕಿ; ಲಲಿತಾ ಸಹಸ್ರನಾಮ ನಾಮದಿಂದ ಆಯ್ಕೆ! - Vistara News

South Cinema

Ram Charan : ರಾಮ್ ಚರಣ್ ಹಾಗೂ ಉಪಾಸನಾ ಮಗಳಿಗೆ ಹೆಸರು ನಿಕ್ಕಿ; ಲಲಿತಾ ಸಹಸ್ರನಾಮ ನಾಮದಿಂದ ಆಯ್ಕೆ!

Ram Charan: ನಟ ಚಿರಂಜೀವಿ ಟ್ವೀಟ್‌ನಲ್ಲಿ ಮೊಮ್ಮಗಳ ಹೆಸರು ಮತ್ತು ಹೆಸರಿನ ವಿಶೇಷತೆ ಬಗ್ಗೆ ರಿವೀಲ್‌ ಮಾಡಿದ್ದಾರೆ. ಲಲಿತಾ ಸಹಸ್ರನಾಮ ನಾಮದಿಂದ ಹೆಸರನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Ram Charan Grand Daughter Name
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 11 ವರ್ಷದ ಬಳಿಕ ರಾಮ್‌ಚರಣ್‌ (Ram Charan) ಹಾಗೂ ಉಪಾಸನಾ ಪೋಷಕರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಉಪಾಸನಾ ಕೋನಿಡೆಲಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಭಿಮಾನಿಗಳಿಗೆ ರಾಮ್‌ ಚರಣ್‌ ಮಗಳಿಗೆ ಯಾವ ಹೆಸರನ್ನು ಇಡಬಹುದು ಎಂದು ಕಾಯುತ್ತಿದ್ದರು. ಇದೀಗ ನಟ ಚಿರಂಜೀವಿ ಟ್ವೀಟ್‌ನಲ್ಲಿ ಮೊಮ್ಮಗಳ ಹೆಸರು ಮತ್ತು ಹೆಸರಿನ ವಿಶೇಷತೆ ಬಗ್ಗೆ ರಿವೀಲ್‌ ಮಾಡಿದ್ದಾರೆ. ಲಲಿತಾ ಸಹಸ್ರನಾಮ ನಾಮದಿಂದ ಹೆಸರನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಚಿರಂಜೀವಿ ಟ್ವೀಟ್‌

ʻʻಮಗುವಿನ ಹೆಸರು ‘ಕ್ಲೀಂಕಾರ ಕೊನಿಡೆಲಾ’ (Klin Kaara konidela). ಲಲಿತಾ ಸಹಸ್ರನಾಮ ನಾಮದಿಂದ ತೆಗೆದುಕೊಳ್ಳಲಾಗಿದೆ.. ‘ಕ್ಲೀಂಕಾರ’ ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ. ದೈವಿಕ ತಾಯಿಯಾದ ‘ಶಕ್ತಿ’ಯ ಪರಮೋಚ್ಚ ಶಕ್ತಿ ಎಂದು ಅರ್ಥ. ಪುಟ್ಟ ರಾಜಕುಮಾರಿಯು ಬೆಳೆದಂತೆ ಈ ಗುಣಗಳನ್ನು ತನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳುತ್ತಾಳೆ ಎಂದು ನಮಗೆಲ್ಲರಿಗೂ ತಿಳಿದಿದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ram Charan: ನಟ ರಾಮ್‌ ಚರಣ್‌, ಉಪಾಸನಾ ದಂಪತಿಗೆ ಹೆಣ್ಣು ಮಗು ಜನನ

ಕೆಲವು ದಿನಗಳ ಹಿಂದಷ್ಟೆ ಆಸ್ಪತ್ರೆಯಿಂದ ಮನೆಗೆ ತೆರಳಿದ ರಾಮ್ ಚರಣ್ ಹಾಗೂ ಉಪಾಸನಾ ಸಂಭ್ರಮದಿಂದ ಮಗುವಿನ ತೊಟ್ಟಿಲ ಶಾಸ್ತ್ರ ಮಾಡಿದ್ದಾರೆ. ಜೂನ್ 30ರಂದು ರಾಮ್ ಚರಣ್ ನಿವಾಸದಲ್ಲಿ ಶಾಸ್ತ್ರೋಪ್ತವಾಗಿ ತೊಟ್ಟಿಲ ಶಾಸ್ತ್ರ ನೆರವೇರಿಸಿದ್ದಾರೆ. ಈ ಸಂಭ್ರಮದಲ್ಲಿ ಮೆಗಾಸ್ಟಾರ್ ಕುಟುಂಬದವರು ಹಾಗೂ ಉಪಾಸನಾ ಅವರ ಕಮ್ಮಿನೇನಿ ಕುಟುಂಬದವರು ಭಾಗಿಯಾಗಿದ್ದರು.

ಇದನ್ನೂ ಓದಿ: Ram Charan: ನಟ ರಾಮ್‌ ಚರಣ್‌, ಉಪಾಸನಾ ದಂಪತಿಗೆ ಹೆಣ್ಣು ಮಗು ಜನನ

ಹೈದರಾಬಾದ್​ನ ಮನೆಯಲ್ಲಿಯೇ ತೊಟ್ಟಿಲ ಶಾಸ್ತ್ರ ನಡೆಯುತ್ತಿದ್ದು ಕಾರ್ಯಕ್ರಮದ ತಯಾರಿಯ ವಿಡಿಯೊವನ್ನು ಉಪಾಸನಾ ಕೋನಿಡೇಲ ಇನ್​ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಚಿರಂಜೀವಿ ಮನೆಯ ಮಧ್ಯದಲ್ಲಿರುವ ಮರಕ್ಕೆ ವಿಶೇಷ ಅಲಂಕಾರ ಮಾಡಲಾಗಿದ್ದು ಅದರ ಮುಂದೆಯೇ ತೊಟ್ಟಿಲು ತೂಗು ಹಾಕಲು ಕಂಬಗಳನ್ನು ನೆಟ್ಟು ಹೂವುಗಳಿಂದ ಅಲಂಕರಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Kannada New Movie: `ಕುಂಟೆಬಿಲ್ಲೆ’ ಸಿನಿಮಾದ ಮುಹೂರ್ತ: ಶುಭಕೋರಿದ ಗಣ್ಯರು

Kannada New Movie: ಪೋಷಕ ಪಾತ್ರಗಳಲ್ಲಿ ಕಿಶೋರ್, ಪವಿತ್ರಾ ಲೋಕೇಶ್, ಶಂಕರ್ ಅಶ್ವಥ್, ಚಂದ್ರಪ್ರಭ ಮೊದಲಾದವರು ನಟಿಸಲಿದ್ದಾರೆ.
ʻನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ʻಕುಂಟೆಬಿಲ್ಲೆ‌ʼ. ಅದೇ ಟೈಟಲ್ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಕಟ್ಟಿಕೊಡಲಿದ್ದೇವೆʼ ಎಂದು ನಿರ್ದೇಶಕ ಸಿದ್ದೇಗೌಡ ತಿಳಿಸಿದರು. ಹತ್ತಕ್ಕೂ ಹೆಚ್ಚು ಚಿತ್ರ ಮಾಡಿರುವ ಮೇಘ ಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Kannada New Movie meghashri starrer kuntebille goes on floor
Koo

ಬೆಂಗಳೂರು: ಈ ಮೊದಲು `ದಕ್ಷ ಯಜ್ಞ’, ತರ್ಲೆ ವಿಲೇಜ್’, ಋತುಮತಿ ಚಿತ್ರಗಳನ್ನು (Kannada New Movie) ನಿರ್ದೇಶನ ಮಾಡಿದ್ದ ಸಿದ್ದೇಗೌಡ ಜಿ.ಬಿ‌.ಎಸ್. ಅವರು `ಕುಂಟೆಬಿಲ್ಲೆ’ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಯುವ ನಟ ಯದು ಮೊದಲ ಬಾರಿಗೆ ನಾಯಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ‌. ಹತ್ತಕ್ಕೂ ಹೆಚ್ಚು (kuntebille goes on floor) ಚಿತ್ರ ಮಾಡಿರುವ ಮೇಘ ಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಪೋಷಕ ಪಾತ್ರಗಳಲ್ಲಿ ಕಿಶೋರ್, ಪವಿತ್ರಾ ಲೋಕೇಶ್, ಶಂಕರ್ ಅಶ್ವಥ್, ಚಂದ್ರಪ್ರಭ ಮೊದಲಾದವರು ನಟಿಸಲಿದ್ದಾರೆ.
ʻನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ʻಕುಂಟೆಬಿಲ್ಲೆ‌ʼ. ಅದೇ ಟೈಟಲ್ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಕಟ್ಟಿಕೊಡಲಿದ್ದೇವೆʼ ಎಂದು ನಿರ್ದೇಶಕ ಸಿದ್ದೇಗೌಡ ತಿಳಿಸಿದರು. ನಿರ್ಮಾಪಕ ಎಸ್.ಬಿ. ಶಿವು ಮಾತನಾಡಿ, ʻಜೀವಿತ ಕ್ರಿಯೇಷನ್‌ನಿಂದ ಒಳ್ಳೆಯ ಸಿನಿಮಾ ಮಾಡಿದ್ದೇವೆ. ಯದು ಹೊಸ ಪ್ರತಿಭೆ ಆಗಿದ್ದು ಅವರನ್ನೇ ನಾಯಕರನ್ನಾಗಿ ಮಾಡಿಕೊಂಡಿದ್ದೇವೆʼ ಎಂದರು. ಮತ್ತೊಬ್ಬ ನಿರ್ಮಾಪಕ ಕುಮಾರ್ ಗೌಡ ಮಾತನಾಡಿ,
ʻನಿರ್ಮಾಣ ಕ್ಷೇತ್ರ ನನಗೆ ಹೊಸದು. 30 ವರ್ಷದ ಹಿಂದೆ ನಾನೊಬ್ಬ ಕಲಾವಿದ ಆಗಬೇಕು ಎಂದು ಬೆಂಗಳೂರಿಗೆ ಹೋಗಿದ್ದವನು‌. ಆದರೆ ಅದು ಸಾಧ್ಯವಾಗಿರಲಿಲ್ಲ‌. ಈಗ ಅದನ್ನು ನನ್ನ ಮಗನ ಮೂಲಕ ಈಡೇರಿಸಿಕೊಳ್ಳುತ್ತಿದ್ದೇನೆ. ನನ್ನ ಮಗನಿಗೆ ರಂಗಭೂಮಿ ಕಡೆಗೆ ಆಸಕ್ತಿ ಇತ್ತು . ಇದೀಗ ವಿದ್ಯಾಭ್ಯಾಸ ಮುಗಿಸಿ ನಟನೆ ಕಡೆಗೆ ಬರುತ್ತಿದ್ದಾನೆ. ಈಗ ನಾನೇ ಮುಂದೆ ನಿಂತು ನಿರ್ದೇಶಕ ಸಿದ್ದೇಗೌಡ ಅವರ ಗರಡಿಗೆ ಬಿಟ್ಟಿದ್ದೇವೆ. ನನ್ನ ಮಗನಿಗೆ ಹೊಂದುವಂತ ಒಳ್ಳೆಯ ಕತೆ ಇದೆ. ಸಿನಿಮಾ ಚೆನ್ನಾಗಿ ಮೂಡಿಬರಲಿದೆʼ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು‌.

ಇದನ್ನೂ ಓದಿ: Kannada New Movie: ಮನರಂಜನೆಯ ರಸದೌತಣ ಬಡಿಸಲು ಬಂದ ʻಮೂರನೇ ಕೃಷ್ಣಪ್ಪʼ: ಟ್ರೈಲರ್‌ ಔಟ್‌!

ಮೇಘಶ್ರೀ ಮಾತಿಗಿಳಿದು, ʻʻಟೈಟಲ್ ನಷ್ಟೇ ಸ್ಕ್ರಿಪ್ಟ್ ಕೂಡ ಚೆನ್ನಾಗಿದೆ. ಕನ್ನಡದಲ್ಲಿ ಈ ರೀತಿಯ ಸ್ಟೋರಿ ಕೇಳಿರಲಿಲ್ಲ. ಒಳ್ಳೆಯ ತಂಡ ಸಿಕ್ಕಿದ್ದು, ನಾನು ಹಳ್ಳಿಯೊಂದರ ಶ್ರೀಮಂತ ಕುಟುಂಬದ ಹುಡುಗಿಯ ಪಾತ್ರ ಮಾಡಲಿದ್ದೇನೆ ಎಂದರು.
ನಾಯಕ ಯದು ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ‌. ಆ ನಿಟ್ಟಿನಲ್ಲಿ ಪಾತ್ರ ಮಾಡುವೆʼʼ ಎಂದರು.

ಹಿರಿಯ ನಟ ಶಂಕರ್ ಅಶ್ವಥ್ ಮಾತನಾಡಿ, ʻʻಅಕ್ಷಯ ತೃತೀಯ ದಿನದಂದು ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ‌. ಅದೇ ರೀತಿ ಈ ಚಿತ್ರಕ್ಕೂ ಒಳ್ಳೆಯದಾಗಲಿ. ನನ್ನದು ನಾಯಕಿಯ ತಂದೆ ಪಾತ್ರ‌. ಒಂದು ಗ್ರಾಮೀಣ ಆಟ ಜೀವನದಲ್ಲಿ ಎಷ್ಟು ಮುಖ್ಯ ಆಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದಾರೆ‌. ವಿಭಿನ್ನ ಮತ್ತು ಕುತೂಹಲಕಾರಿ ಚಿತ್ರ ಇದಾಗಿರಲಿದೆʼʼ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಸಂಭಾಷಣೆ ಬರೆದಿರುವ ಮಧು ಮಾತನಾಡಿ ʻʻನಾನು ಪ್ರತಿ ಸಿನಿಮಾಗೆ ಬರೆಯುವಾಗಲೂ ಹೊಸದಾಗಿಯೇ ಬರೆಯುತ್ತೇನೆ. ಈ ಚಿತ್ರದ ಕಥೆ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಸಂಭಾಷಣೆ ಬರೆದಿದ್ದೇನೆ. ಹಳ್ಳಿಯ ನೈಜ ಘಟನೆಗಳು ಇಲ್ಲಿ ಇವೆʼʼ ಎಂದು ತಿಳಿಸಿದರು. ಒಂದು ಗ್ರಾಮೀಣ ಆಟ ಜೀವನದಲ್ಲಿ ಎಷ್ಟು ಮುಖ್ಯ ಆಗುತ್ತದೆ ಎನ್ನುವುದು ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ. ವಿಭಿನ್ನ ಮತ್ತು ಕುತೂಹಲಕಾರಿ ಚಿತ್ರ ಇದಾಗಿರಲಿದೆ ಎನ್ನುವ ವಿಶ್ವಾಸ ಚಿತ್ರತಂಡದ್ದು.

Continue Reading

ಸ್ಯಾಂಡಲ್ ವುಡ್

Brinda Acharya: ‘ಸಾವಿರ ಗುಂಗಲಿ’ ಒಲವಿನ ಸವಾರಿ ಹೊರಟ ಬೃಂದಾ ಆಚಾರ್ಯ-ಭರತ್ ಬೋಪಣ್ಣ!

Brinda Acharya: ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರುವ `ಸಾವಿರ ಗುಂಗಲ್ಲಿ’ ಆಲ್ಬಂ ಸಾಂಗ್ ಈಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ. ಇತ್ತೀಚಿನ ದಿನಮಾನದಲ್ಲಿ ಸಿನಿಮಾಗಳಾಚೆಗೆ ಹಾಡುಗಳು ರೂಪುಗೊಳ್ಳೋದೇ ಅಪರೂಪ. ಇಂಥಾ ಹೊತ್ತಲ್ಲಿ `ಸಾವಿರ ಗುಂಗಲ್ಲಿ’ ಎಂಬ ಆಲ್ಬಂ ಸಾಂಗ್ ತನ್ನ ನವಿರು ಶೈಲಿಯೊಂದಿಗೆ ಕೇಳುಗರನ್ನೆಲ್ಲ ಸೋಕುತ್ತಿದೆ.

VISTARANEWS.COM


on

Brinda Acharya Saavira Gungali Video Song Out
Koo

ಬೆಂಗಳೂರು: ನಿಂತ ನಿಲುವಿನಲ್ಲೇ ಆವರಿಸಿಕೊಳ್ಳಬಲ್ಲ ಹಾಡೊಂದಕ್ಕಾಗಿ ಅನುಕ್ಷಣವೂ ಹಾತೊರೆಯುವ ದೊಡ್ಡದೊಂದು ಸಂಗೀತ ಪ್ರೇಮಿಗಳ ದಂಡು ನಮ್ಮ ನಡುವಲ್ಲಿದೆ. ಯಾವ ಸುಳಿವೂ ಕೊಡದೆ ಚೆಂದದ್ದೊಂದು ಹಾಡು ಅಚಾನಕ್ಕಾಗಿ ಕಿವಿ ಸೋಕಿದರೆ ಅವರಿಗೆಲ್ಲ ಅಕ್ಷರಶಃ ರೋಮಾಂಚನ. ಬೃಂದಾ ಆಚಾರ್ಯ (Brinda Acharya) ಮತ್ತು ಭರತ್ ಬೋಪಣ್ಣ (Bharath Bopanna) ನಟಿಸಿರುವ ಆಲ್ಬಂ ಸಾಂಗ್`ಸಾವಿರ ಗುಂಗಲ್ಲಿ’ ಈಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ.

ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರುವ `ಸಾವಿರ ಗುಂಗಲ್ಲಿ’ ಆಲ್ಬಂ ಸಾಂಗ್ ಈಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ. ಇತ್ತೀಚಿನ ದಿನಮಾನದಲ್ಲಿ ಸಿನಿಮಾಗಳಾಚೆಗೆ ಹಾಡುಗಳು ರೂಪುಗೊಳ್ಳೋದೇ ಅಪರೂಪ. ಇಂಥಾ ಹೊತ್ತಲ್ಲಿ `ಸಾವಿರ ಗುಂಗಲ್ಲಿ’ ಎಂಬ ಆಲ್ಬಂ ಸಾಂಗ್ ತನ್ನ ನವಿರು ಶೈಲಿಯೊಂದಿಗೆ ಕೇಳುಗರನ್ನೆಲ್ಲ ಸೋಕುತ್ತಿದೆ. ಮತ್ತಷ್ಟು ಮನಸುಗಳನ್ನು ಆವರಿಸಿಕೊಳ್ಳುತ್ತಾ ಮುಂದುವರಿಯುತ್ತಿದೆ. ಅಂದಹಾಗೆ, ಕೃಷ್ಣ ನಂಜುಂಡಯ್ಯನವರ ಪರಿಕಲ್ಪನೆ, ನಿರ್ದೇಶನದಲ್ಲಿ ಮೂಡಿ ಬಂದಿದೆ. ಬೃಂದಾ ಆಚಾರ್ಯ, ಭರತ್ ಬೋಪಣ್ಣ, ಮಯೂರ್ ಸಾಗರ್, ಕೃತಿಕಾ ಗೌಡ, ಮಾನಿನಿ ಪಿ ರಾವ್ ಮುಂತಾದವರು ಸದರಿ ಆಲ್ಬಂ ಹಾಡಿನ ಭಾಗವಾಗಿದ್ದಾರೆ.

ಇದನ್ನೂ ಓದಿ: Dolly Dhananjay:  ಡಾಲಿ ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ನಾಳೆ ಬಿಡುಗಡೆ

ಹಾಡಿನ ಪ್ರಧಾನ ಆಕರ್ಷಣೆಯಾಗಿ ಬೃಂದಾ ಆಚಾರ್ಯ ಕಾಣಿಸುತ್ತಾರೆ. ಹಾಡಿನ ನೆರಳಲ್ಲಿ ಕಥೆಯೊಂದು ಸರಿಯುವಂತೆ ಭಾಸವಾಗುವ ಈ ಆಲ್ಬಂ ಸಾಂಗ್, ಕೇಳುಗರನ್ನೆಲ್ಲ ಒಂದೇ ಸಲಕ್ಕೆ ಸೆಳೆಯುವಂತಿದೆ. ವಿಶೇಷವೆಂದರೆ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಪ್ರಮೋದ್ ಮರವಂತೆ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅದು ಪೃಥ್ವಿ ಭಟ್ ಧ್ವನಿಯಲ್ಲಿ ಮೂಡಿ ಬಂದಿದೆ. ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಈ ಹಾಡು ಅದ್ದೂರಿಯಾಗಿ, ಅರ್ಥವತ್ತಾಗಿ ಮೂಡಿ ಬಂದಿದೆ. ಹೆಚ್ಚಿನ ವೀಕ್ಷಣೆ ಪಡೆಯುತ್ತಾ ಮುಂದುವರೆಯುತ್ತಿರುವ ಸದರಿ ಆಲ್ಬಂ ಸಾಂಗಿನ ಸವಾರಿಯೀಗ ಟ್ರೆಂಡಿಂಗಿನತ್ತ ಮುಖ ಮಾಡಿದೆ. ಆ ಮೂಲಕ ಇದರ ಹಿಂದಿರುವ ಕನಸು, ಶ್ರಮ, ಶ್ರದ್ಧೆಗಳೆಲ್ಲವೂ ಸಾರ್ಥಕವಾದಂತಾಗಿದೆ.

ಬೃಂದಾ ಆಚಾರ್ಯ ಇದೀಗ ಹಲವಾರು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ಅದರ ನಡುವೆಯೂ ಇಂಥಾದ್ದೊಂದು ನವಿರು ಹಾಡಿಗೆ ಜೀವ ತುಂಬುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೀರಿಯಲ್ ಜಗತ್ತಿನಿಂದ ಬಂದು, ಇದೀಗ ನಾಯಕನಾಗಿ ನೆಲೆಗಾಣುತ್ತಿರುವ ಭರತ್ ಬೋಪಣ್ಣ ಕೂಡಾ ಅಷ್ಟೇ ಚೆಂದಗೆ ನಟಿಸಿದ್ದಾರೆ.

ಜೋಯ್ ಕಾಸ್ಟಾ ಸಂಗೀತ ನಿರ್ದೇಶನ, ಎನ್.ಕೆ ರಾಜ್ ಛಾಯಾಗ್ರಹಣ, ತಮಿಳರಸನ್ ಎಂ. ಸಂಕಲನ, ಅನಿಲ್ ಸಹ ನಿರ್ದೇಶನ ಇದೆ.

Continue Reading

ಸ್ಯಾಂಡಲ್ ವುಡ್

Kannada New Movie: ಮನರಂಜನೆಯ ರಸದೌತಣ ಬಡಿಸಲು ಬಂದ ʻಮೂರನೇ ಕೃಷ್ಣಪ್ಪʼ: ಟ್ರೈಲರ್‌ ಔಟ್‌!

Kannada New Movie: ರೆಡ್ ಡ್ರ್ಯಾಗನ್ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಗೆ ಮೋಹನ್ ರೆಡ್ಡಿ ಜಿ, ರವಿಶಂಕರ್ ಹಣ ಹೂಡಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಇಟ್ಟುಕೊಂಡು ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಸಂಪತ್ ಮೈತ್ರೀಯಾ ನಾಯಕನಾಗಿ ನಟಿಸುತ್ತಿದ್ದರೆ, ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಶ್ರೀಪ್ರಿಯಾ ನಾಯಕಿಯಾಗಿದ್ದಾರೆ.

VISTARANEWS.COM


on

Kannada New Movie Moorane Krishnappa trailer Out
Koo

ಬೆಂಗಳೂರು: ವಿಭಿನ್ನ ಕಥಾನಕದ ಮೂಲಕವೇ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಹೊರಟಿರುವ ಸಿನಿಮಾ ʻಮೂರನೇ ಕೃಷ್ಣಪ್ಪʼ. ಇದೀಗ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಲೂಸ್ ಮಾದ ಯೋಗಿ (Kannada New Movie) ಸಂಭಾಷಣೆಯಲ್ಲಿ‌ ಶುರುವಾಗುವ ಟ್ರೈಲರ್‌ನಲ್ಲಿ ಕೋಲಾರ‌ ಕನ್ನಡ‌ , ರಂಗಾಯಣ ರಘು, ಸಂಪತ್ ಮೈತ್ರಿಯಾಯಂತಹ ಅದ್ಭುತ ಕಲಾವಿದರ ಅಭಿನಯ, ಹಳ್ಳಿ ಸೊಗಡನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಟ್ರೇಲರ್ ಪ್ರಾಮಿಸಿಂಗ್ ಆಗಿದ್ದು, ಸಿನಿಪ್ರಿಯರಿಗೆ ಮನರಂಜನೆ ಗ್ಯಾರೆಂಟಿ ಎಂಬ ಸಂದೇಶ ರವಾನಿಸಿದೆ.

‘ಮೂರನೇ ಕೃಷ್ಣಪ್ಪ’ ಸಿನಿಮಾವನ್ನು ನವೀನ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಶೀರ್ಷಿಕೆಯೊಂದಿಗೆ ಪ್ರೇಕ್ಷಕರನ್ನು ರಂಜಿಸುವುದಕ್ಕೆ ನವೀನ್ ಮುಂದಾಗಿದ್ದಾರೆ.

ರೆಡ್ ಡ್ರ್ಯಾಗನ್ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಗೆ ಮೋಹನ್ ರೆಡ್ಡಿ ಜಿ, ರವಿಶಂಕರ್ ಹಣ ಹೂಡಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಇಟ್ಟುಕೊಂಡು ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಸಂಪತ್ ಮೈತ್ರೀಯಾ ನಾಯಕನಾಗಿ ನಟಿಸುತ್ತಿದ್ದರೆ, ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಶ್ರೀಪ್ರಿಯಾ ನಾಯಕಿಯಾಗಿದ್ದಾರೆ.

ಇದನ್ನೂ ಓದಿ: Kannada New Movie: ‘ಗಾಡ್ ಪ್ರಾಮಿಸ್’ ಚಿತ್ರಕ್ಕೆ ಮುನ್ನುಡಿ; ಆನೆಗುಡ್ಡೆ ಗಣಪತಿ ದೇಗುಲದಲ್ಲಿ ಮುಹೂರ್ತ

ಇವರೊಂದಿಗೆ ತುಕಾಲಿ ಸಂತೋಷ್, ಉಗ್ರಂ ಮಂಜು ಸೇರಿದಂತೆ ಹಲವರು ನಟಿಸಿದ್ದಾರೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಕ್ಕೆ ಆನಂದ್ ರಾಜವಿಕ್ರಮ್ ಸಂಗೀತ ನೀಡಿದ್ದು, ಶ್ರೀಕಾಂತ್ ಎಡಿಟಿಂಗ್ ಮಾಡಿದ್ದರೆ, ಯೋಗಿ ಕ್ಯಾಮೆರಾ ಹ್ಯಾಂಡಲ್ ಮಾಡಿದ್ದಾರೆ. ಮೇ 24ಕ್ಕೆ ಮೂರನೇ ಕೃಷ್ಣಪ್ಪನ ಕಥೆ ತೆರೆಗೆ ಬರಲಿದೆ.

Continue Reading

ಸ್ಯಾಂಡಲ್ ವುಡ್

Vimala Raman: ಖಳನಟನ ಜತೆ ಪ್ರೀತಿಲಿ ಬಿದ್ದ ʻಆಪ್ತರಕ್ಷಕʼ ನಟಿ

Vimala Raman: ಕನ್ನಡದಲ್ಲಿ ‘ಆಪ್ತರಕ್ಷಕ’ ಚಿತ್ರದಲ್ಲಿ ನಾಗವಲ್ಲಿ ಆಗಿ ವಿಮಲಾ ರಾಮನ್ ಮಿಂಚಿದ್ದರು. ರಾಜರಾಜೇಂದ್ರ ಎನ್ನುವ ಮತ್ತೊಂದು ಚಿತ್ರದಲ್ಲಿ ಕೂಡ ನಟಿಸಿದ್ದರುವಯಸ್ಸು 40 ದಾಟಿದರೂ ಮದುವೆ ಬಗ್ಗೆ ಮೌನವಾಗಿಯೇ ಇದ್ದ ಆಕೆ ಇದೀಗ ನಟ ವಿನಯ್ ರೈ ಜತೆ ಪ್ರೀತಿಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.

VISTARANEWS.COM


on

Vimala Raman confirms her relationship with this villan actor
Koo

ಆಸ್ಟ್ರೇಲಿಯಾ ಮೂಲದ ವಿಮಲಾ ರಾಮನ್ ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡದಲ್ಲಿ ‘ಆಪ್ತರಕ್ಷಕ’ ಚಿತ್ರದಲ್ಲಿ ನಾಗವಲ್ಲಿ ಆಗಿ ವಿಮಲಾ ರಾಮನ್ ಮಿಂಚಿದ್ದರು. ರಾಜರಾಜೇಂದ್ರ ಎನ್ನುವ ಮತ್ತೊಂದು ಚಿತ್ರದಲ್ಲಿ ಕೂಡ ನಟಿಸಿದ್ದರು

ಮುಂಬೈನಲ್ಲಿ ತುಳು ಕುಟುಂಬದಲ್ಲಿ ಹುಟ್ಟಿ ಬೆಳೆದ ವಿನಯ್ ರೈ ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದರು. ಇದೀಗ ನಟಿ ವಿನಯ್ ರೈ ಜತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.

ವಿನಯ್‌ ರೈ ಜತೆ ಆತ್ಮೀಯವಾಗಿ ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ ನಟಿ.

ವಯಸ್ಸು 40 ದಾಟಿದರೂ ಮದುವೆ ಬಗ್ಗೆ ಮೌನವಾಗಿಯೇ ಇದ್ದ ಆಕೆ ಇದೀಗ ನಟ ವಿನಯ್ ರೈ ಜತೆ ಪ್ರೀತಿಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Arvind Kejriwal: ಚೀನಾದಿಂದ ಭಾರತದ ನೆಲ ವಾಪಸ್‌ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

ಇತ್ತೀಚೆಗೆ ಸೂಪರ್ ಹಿಟ್ ಆದ ‘ಹನುಮಾನ್’ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು ವಿನಯ್ ರೈ.
Continue Reading
Advertisement
prajwal revanna case
ಪ್ರಮುಖ ಸುದ್ದಿ22 mins ago

Prajwal Revanna Case: ಎಸ್‌ಐಟಿಗೆ ಸವಾಲೆಸೆದ ನವೀನ್‌ ಗೌಡ; ದೇವರಾಜೇಗೌಡ, ಪ್ರೀತಂಗೌಡ ಆಪ್ತರು ಎಸ್‌ಐಟಿ ಕಸ್ಟಡಿಗೆ?

Health Tips Kannada Stay away from these foods to get rid of acne
ಆಹಾರ/ಅಡುಗೆ22 mins ago

Health Tips Kannada: ಈ ಆಹಾರಗಳಿಂದ ದೂರವಿದ್ದರೆ ಮೊಡವೆ ಸಮಸ್ಯೆಯಿಂದ ಪಾರಾಗಬಹುದು!

Kannada New Movie meghashri starrer kuntebille goes on floor
ಸ್ಯಾಂಡಲ್ ವುಡ್37 mins ago

Kannada New Movie: `ಕುಂಟೆಬಿಲ್ಲೆ’ ಸಿನಿಮಾದ ಮುಹೂರ್ತ: ಶುಭಕೋರಿದ ಗಣ್ಯರು

Brinda Acharya Saavira Gungali Video Song Out
ಸ್ಯಾಂಡಲ್ ವುಡ್52 mins ago

Brinda Acharya: ‘ಸಾವಿರ ಗುಂಗಲಿ’ ಒಲವಿನ ಸವಾರಿ ಹೊರಟ ಬೃಂದಾ ಆಚಾರ್ಯ-ಭರತ್ ಬೋಪಣ್ಣ!

pm narendra Modi Varanasi road show
Lok Sabha Election 20241 hour ago

PM Nanrendra Modi: ನಾಳೆ ವಾರಾಣಸಿಯಲ್ಲಿ ಮೋದಿ 3ನೇ ಬಾರಿ ನಾಮಪತ್ರ ಸಲ್ಲಿಕೆ, ಇಂದು ವೈಭವದ ರೋಡ್‌ ಶೋ

Food Tips Kannada adulterated food effect health
ಲೈಫ್‌ಸ್ಟೈಲ್1 hour ago

Food Tips Kannada: ಕಲಬೆರಕೆ ಆಹಾರಗಳಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Jyoti Rai seeks divine blessings at tirupathi
ಕಿರುತೆರೆ1 hour ago

Jyoti Rai: ವೈರಲ್ ವಿಡಿಯೊ ಬೆನ್ನಲ್ಲೇ ಜ್ಯೋತಿ ರೈ ಟೆಂಪಲ್‌ ರನ್‌!

Kochi Tour
ಪ್ರವಾಸ2 hours ago

Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?

Prajwal Revanna Case HD Revanna jailed
ಪ್ರಮುಖ ಸುದ್ದಿ2 hours ago

HD Revanna Jailed: ಇಂದು ಏನಾಗುತ್ತೆ ಎಚ್‌ಡಿ ರೇವಣ್ಣ ಭವಿಷ್ಯ? ಜಾಮೀನು ಅರ್ಜಿ ಮತ್ತೆ ವಿಚಾರಣೆ

ICMR  Good Health Guidelines
ಆರೋಗ್ಯ2 hours ago

ICMR Good Health Guidelines: ಆರೋಗ್ಯವಾಗಿರಲು ಎಷ್ಟು ಗಂಟೆ ನಿದ್ದೆ ಮಾಡಬೇಕು, ಎಷ್ಟು ಗಂಟೆ ಕೆಲಸ ಮಾಡಬೇಕು? ಆಹಾರ ಏನಿರಬೇಕು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather forecast karnataka rains
ಮಳೆ3 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ5 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ15 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ16 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ16 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ20 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ21 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ1 day ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

ಟ್ರೆಂಡಿಂಗ್‌