Site icon Vistara News

Oscar Academy : ಆಸ್ಕರ್‌ ಅಕಾಡೆಮಿ ಸದಸ್ಯರಾಗಲು ಜೂ. ಎನ್‌ಟಿಆರ್‌, ರಾಮ್‌ಚರಣ್‌ಗೆ ಆಹ್ವಾನ; ರಾಜಮೌಳಿಗೆ ಆಮಂತ್ರಣವಿಲ್ಲವೇಕೆ?

Ram Charan, Jr NTR

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ ಅಕಾಡೆಮಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು, ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದೆ. ಅದರ ಬೆನ್ನಲ್ಲೇ ಇದೀಗ ಆಸ್ಕರ್‌ ಅಕಾಡೆಮಿಯು ಆರ್‌ಆರ್‌ಆರ್‌ ಸಿನಿಮಾದ ನಟರಿಗೆ ಅಕಾಡೆಮಿಯ (Oscar Academy) ಸದಸ್ಯರಾಗಲು ಆಮಂತ್ರಣವನ್ನು ಕಳಹಿಸಿಕೊಟ್ಟಿದೆ.

ಅಕಾಡೆಮಿ ಸದಸ್ಯರಾಗಲು ಆರ್‌ಆರ್‌ಆರ್‌ ನಟರಾದ ಜೂ. ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ಅವರಿಗೆ ಆಹ್ವಾನ ಕಳುಹಿಸಿಕೊಡಲಾಗಿದೆ. ಅದರ ಜತೆಯಲ್ಲಿ ಸಂಗೀತ ವಿಭಾಗದಲ್ಲಿ ಎಂ.ಎಂ.ಕೀರವಾಣಿ ಮತ್ತು ಚಂದ್ರಬೋಸ್‌, ಪ್ರೊಡಕ್ಷನ್‌ ಡಿಸೈನ್‌ ವಿಭಾಗದಲ್ಲಿ ಸಾಬು ಸಿರಿಲ್‌, ನಿರ್ದೇಶನದ ವಿಭಾಗದಲ್ಲಿ ಮಣಿರತ್ನಂ ಮತ್ತು ಚೈತನ್ಯ ತಮ್ಹಾನೆ, ಡಾಕ್ಯುಮೆಂಟರಿ ವಿಭಾಗದಲ್ಲಿ ಶೌನಕ್‌ ಸೇನ್‌, ನಿರ್ಮಾಪಕರ ವಿಭಾಗದಲ್ಲಿ ಸಿದ್ಧಾರ್ಥ್‌ ರಾಯ್‌ ಕಪೂರ್‌ ಮತ್ತು ಕರಣ್‌ ಜೋಹರ್‌, ವಿಎಫ್‌ಎಕ್ಸ್‌ ವಿಭಾಗದಲ್ಲಿ ಹರೇಶ್‌ ಹಿಂಗೋರಾಣಿ ಮತ್ತು ಪಿ.ಸಿ.ಸನತ್‌, ಉತ್ಪಾದನೆ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಕ್ರಾಂತಿ ಶರ್ಮಾ ಅವರಿಗೆ ಅಕಾಡೆಮಿಯ ಸದಸ್ಯರಾಗಲು ಆಮಂತ್ರಣ ನೀಡಲಾಗಿದೆ.

ಇದನ್ನೂ ಓದಿ: Viral Video: ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿದ ನದಿ; ಆತಂಕದ ಮಧ್ಯೆಯೇ ಕಾರಣ ಹೇಳಿದ ಬಿಯರ್​ ಫ್ಯಾಕ್ಟರಿ
ವಿಶೇಷವೆಂದರೆ ಅಕಾಡೆಮಿಯು ಆಸ್ಕರ್‌ ಗೆದ್ದ ಆರ್‌ಆರ್‌ಆರ್‌ ಸಿನಿಮಾದ ನಿರ್ದೇಶಕ ರಾಜಮೌಳಿ ಅವರಿಗೇ ಸದಸ್ಯರಾಗಲು ಆಮಂತ್ರಣವನ್ನು ನೀಡಿಲ್ಲ. ಈ ವಿಚಾರ ಅನೇಕ ಕಡೆಗಳಲ್ಲಿ ಚರ್ಚೆಯಾಗುತ್ತಿದೆ.

ರಾಜಮೌಳಿ ಅವರು ಸದ್ಯದಲ್ಲೇ SSMB 29 ಸಿನಿಮಾದ ಕೆಲಸ ಪ್ರಾರಂಭಿಸಲಿದ್ದಾರೆ. ಮಹೇಶ್‌ ಬಾಬು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದು ಮಹೇಶ್‌ ಬಾಬು ಮತ್ತು ರಾಜಮೌಳಿ ಕಾಂಬಿನೇಶನ್‌ನ ಮೊದಲನೇ ಸಿನಿಮಾವಾಗಿರಲಿದೆ. ಇದೊಂದು ಆಕ್ಷನ್‌ ಸಿನಿಮಾ ಎಂದು ಹೇಳಲಾಗಿದೆ.

Exit mobile version