ಬೆಂಗಳೂರು: 11 ವರ್ಷದ ಬಳಿಕ ರಾಮ್ಚರಣ್ (Ram Charan) ಹಾಗೂ ಉಪಾಸನಾ ಪೋಷಕರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಉಪಾಸನಾ ಕೋನಿಡೆಲಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಭಿಮಾನಿಗಳಿಗೆ ರಾಮ್ ಚರಣ್ ಮಗಳಿಗೆ ಯಾವ ಹೆಸರನ್ನು ಇಡಬಹುದು ಎಂದು ಕಾಯುತ್ತಿದ್ದರು. ಇದೀಗ ನಟ ಚಿರಂಜೀವಿ ಟ್ವೀಟ್ನಲ್ಲಿ ಮೊಮ್ಮಗಳ ಹೆಸರು ಮತ್ತು ಹೆಸರಿನ ವಿಶೇಷತೆ ಬಗ್ಗೆ ರಿವೀಲ್ ಮಾಡಿದ್ದಾರೆ. ಲಲಿತಾ ಸಹಸ್ರನಾಮ ನಾಮದಿಂದ ಹೆಸರನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಚಿರಂಜೀವಿ ಟ್ವೀಟ್
ʻʻಮಗುವಿನ ಹೆಸರು ‘ಕ್ಲೀಂಕಾರ ಕೊನಿಡೆಲಾ’ (Klin Kaara konidela). ಲಲಿತಾ ಸಹಸ್ರನಾಮ ನಾಮದಿಂದ ತೆಗೆದುಕೊಳ್ಳಲಾಗಿದೆ.. ‘ಕ್ಲೀಂಕಾರ’ ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ. ದೈವಿಕ ತಾಯಿಯಾದ ‘ಶಕ್ತಿ’ಯ ಪರಮೋಚ್ಚ ಶಕ್ತಿ ಎಂದು ಅರ್ಥ. ಪುಟ್ಟ ರಾಜಕುಮಾರಿಯು ಬೆಳೆದಂತೆ ಈ ಗುಣಗಳನ್ನು ತನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳುತ್ತಾಳೆ ಎಂದು ನಮಗೆಲ್ಲರಿಗೂ ತಿಳಿದಿದೆʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Ram Charan: ನಟ ರಾಮ್ ಚರಣ್, ಉಪಾಸನಾ ದಂಪತಿಗೆ ಹೆಣ್ಣು ಮಗು ಜನನ
And the baby’s name is ‘Klin Kaara Konidela ‘..
— Chiranjeevi Konidela (@KChiruTweets) June 30, 2023
Taken from the Lalitha Sahasranamam .. the name ‘Klin Kaara’ .. signifies a transformative purifying energy that brings about a spiritual awakening!
All of us are sure the little one, the Little Princess will imbibe these… pic.twitter.com/OKCf7Hw18z
ಕೆಲವು ದಿನಗಳ ಹಿಂದಷ್ಟೆ ಆಸ್ಪತ್ರೆಯಿಂದ ಮನೆಗೆ ತೆರಳಿದ ರಾಮ್ ಚರಣ್ ಹಾಗೂ ಉಪಾಸನಾ ಸಂಭ್ರಮದಿಂದ ಮಗುವಿನ ತೊಟ್ಟಿಲ ಶಾಸ್ತ್ರ ಮಾಡಿದ್ದಾರೆ. ಜೂನ್ 30ರಂದು ರಾಮ್ ಚರಣ್ ನಿವಾಸದಲ್ಲಿ ಶಾಸ್ತ್ರೋಪ್ತವಾಗಿ ತೊಟ್ಟಿಲ ಶಾಸ್ತ್ರ ನೆರವೇರಿಸಿದ್ದಾರೆ. ಈ ಸಂಭ್ರಮದಲ್ಲಿ ಮೆಗಾಸ್ಟಾರ್ ಕುಟುಂಬದವರು ಹಾಗೂ ಉಪಾಸನಾ ಅವರ ಕಮ್ಮಿನೇನಿ ಕುಟುಂಬದವರು ಭಾಗಿಯಾಗಿದ್ದರು.
ಇದನ್ನೂ ಓದಿ: Ram Charan: ನಟ ರಾಮ್ ಚರಣ್, ಉಪಾಸನಾ ದಂಪತಿಗೆ ಹೆಣ್ಣು ಮಗು ಜನನ
Klin Kaara Konidela 😍@AlwaysRamCharan @upasanakonidela pic.twitter.com/8emWJoJcra
— Chiranjeevi Konidela (@KChiruTweets) June 30, 2023
ಹೈದರಾಬಾದ್ನ ಮನೆಯಲ್ಲಿಯೇ ತೊಟ್ಟಿಲ ಶಾಸ್ತ್ರ ನಡೆಯುತ್ತಿದ್ದು ಕಾರ್ಯಕ್ರಮದ ತಯಾರಿಯ ವಿಡಿಯೊವನ್ನು ಉಪಾಸನಾ ಕೋನಿಡೇಲ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಚಿರಂಜೀವಿ ಮನೆಯ ಮಧ್ಯದಲ್ಲಿರುವ ಮರಕ್ಕೆ ವಿಶೇಷ ಅಲಂಕಾರ ಮಾಡಲಾಗಿದ್ದು ಅದರ ಮುಂದೆಯೇ ತೊಟ್ಟಿಲು ತೂಗು ಹಾಕಲು ಕಂಬಗಳನ್ನು ನೆಟ್ಟು ಹೂವುಗಳಿಂದ ಅಲಂಕರಿಸಲಾಗಿದೆ.