Site icon Vistara News

Ramachari Serial: ‘ಅಣ್ಣಯ್ಯ’ ಸಿನಿಮಾ ಹಾಡು ರೀಕ್ರಿಯೇಟ್ ಮಾಡಿ ಸಖತ್‌ ಸ್ಟೆಪ್ಸ್‌ ಹಾಕಿದ ಚಾರು-ರಾಮಾಚಾರಿ!

mouna guddemane rithvik krupakar

ಬೆಂಗಳೂರು: ರಾಮಾಚಾರಿ ಧಾರಾವಾಹಿ (Ramachari Serial) ದಿನೇ ದಿನೇ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಾರುವಿನ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರಿಬ್ಬರ ಜೋಡಿ ಕಂಡು ನಿಜಜೀವನದಲ್ಲಿಯೂ ಒಂದಾಗಿ ಎಂದು ಅವರ ಅಭಿಮಾನಿಗಳು ಕಮೆಂಟ್‌ ಮಾಡುತ್ತಿದ್ದಾರೆ. ರಾಮಾಚಾರಿ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು ರವಿಚಂದ್ರನ್ ನಟನೆಯ ‘ಅಣ್ಣಯ್ಯ’ ಸಿನಿಮಾದ ಹಾಡನ್ನು ರೀಕ್ರಿಯೇಟ್ ಮಾಡಲಾಗಿದೆ. ರವಿಚಂದ್ರನ್, ಮಧೂ ಕುಣಿದಿದ್ದ ಹಾಡಿಗೆ ರಾಮಾಚಾರಿ, ಚಾರು (Mouna Guddemane) ಸ್ಟೆಪ್ಸ್‌ ಹಾಕಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸುದ್ದು ಮಾಡುತ್ತಿದೆ.

ಲಂಗ ದಾವಣಿಯಲ್ಲಿ ಚಾರು ಮಿಂಚಿದರೆ, ಪಂಜೆಯಲ್ಲಿ ರಾಮಾಚಾರಿ ಸಖತ್‌ ಕ್ಯೂಟ್‌ ಆಗಿ ಕಂಡಿದ್ದಾರೆ. ರಾಮಾಚಾರಿ ಈಗ ಪ್ರೇಮಚಾರಿ ಆಗಿದ್ದಾರೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ‘ಅಣ್ಣಯ್ಯ’ ಸಿನಿಮಾದಲ್ಲಿ ಇರುವಂತೆ ಸಾಂಗ್ ಮೂಡಿ ಬಂದಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಈ ಹಾಡಿನ ಮೇಕಿಂಗ್‌ ವಿಡಿಯೊ ಕೂಡ ರಿವೀಲ್ ಆಗಿ ಸದ್ದು ಮಾಡುತ್ತಿದೆ.

ರಾಮಾಚಾರಿ ಹಾಗೂ ಚಾರು ಶೂಟಿಂಗ್‌ನ ಬಿಡುವಿನ ವೇಳೆಯಲ್ಲಿ ರೀಲ್ಸ್‌ ಹಾಗೂ ಡ್ಯಾನ್ಸ್‌ ಮಾಡುತ್ತಲೇ ಇರುತ್ತಾರೆ. ಇದಕ್ಕೆ ನೆಟ್ಟಿಗರು ಈಗ ಹೇಗಿದ್ದರೂ ಜೋಡಿ ಆಗಿದ್ದೀರಾ? ನಿಜ ಜೀವನದಲ್ಲೂ ಸಹ ನೀವಿಬ್ಬರೂ ಗಂಡ ಹೆಂಡತಿಯಾದರೆ ಚೆನ್ನಾಗಿ ಇರುತ್ತದೆ ಎಂದು ಸಲಹೆ ನೀಡುತ್ತಿದ್ದಾರೆ.

ಇದನ್ನೂ ಓದಿ: Kichcha Sudeep: ತಾಕತ್ ಇದ್ರೆ ಹೇಡಿ ಸೂರಪ್ಪ ಬಾಬು ಮನೆ ಅಡ್ರೆಸ್ ಕೊಡ್ಲಿ; ಕಿಚ್ಚನ ಕಾಂಟ್ರವರ್ಸಿಗೆ ಚಂದ್ರಚೂಡ್ ಎಂಟ್ರಿ!

ರಾಮಾಚಾರಿ ಹಾಗೂ ಚಾರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಧಾರಾವಾಹಿಯಲ್ಲಿ ಇಬ್ಬರ ಮನೆಯಲ್ಲಿ ಯಾರಿಗೂ ಇಷ್ಟವಿಲ್ಲದಿದ್ದರೂ ರಾಮಾಚಾರಿ, ಚಾರು ಮದುವೆ ಆಗಿದ್ದಾರೆ. ಆಚಾರ್ಯರಿಗೂ ಇದು ಇಷ್ಟವಿಲ್ಲ. ಆದರೆ ಏನೇನೋ ಮಾಡಿ ಇಬ್ಬರು ಮನೆ ಸೇರಿದ್ದಾರೆ. ಎಲ್ಲರನ್ನು ಒಪ್ಪಿಸುವ ಲೆಕ್ಕಚಾರದಲ್ಲಿದ್ದಾರೆ.

Exit mobile version