ಬೆಂಗಳೂರು: ರಾಮ್‌ಚರಣ್ ಮತ್ತು ಪತ್ನಿ ಉಪಾಸನಾ ಕಾಮನೇನಿ ಈಗ ವೇಕೇಶನ್ ಮೂಡಿನಲ್ಲಿದ್ದಾರೆ. ತಮ್ಮ ರೆಟ್ರೋ ಸ್ಟೈಲ್‌ನಲ್ಲಿ ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ಸಖತ್ ಸುದ್ದಿಯಾಗಿದ್ದರು. ಅಪ್ಪನ ತರಹ ಕಾಣುತ್ತಿದ್ದಾರೆ ಎಂದು ಸಾಕಷ್ಟು ಜನ ಪಾಸಿಟಿವ್ ಕಮೆಂಟ್ ಮಾಡಿದ್ದರು. ಈಗ ಈ ಜೋಡಿ ತಮ್ಮ 10ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
2012ರಲ್ಲಿ ಈ ಜೋಡಿ ಮದುವೆ ಆಗಿದ್ದು, ಜೂನ್ 14ರಂದು ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳಲಿದೆ. ಇದೀಗ ಇನ್ಸ್ಟಾ ಪೋಸ್ಟ್ ಮೂಲಕ ಇಬ್ಬರೂ ಬಿಳಿ ಉಡುಪಿನಲ್ಲಿ ಟ್ವಿನ್ನಿಂಗ್‌ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ | Tollywood News: ರೆಟ್ರೋ ಲುಕ್‌ನಲ್ಲಿ ಮಿಂಚಿದ ರಾಮ್‌ಚರಣ್!
ಇಬ್ಬರೂ ಒಬ್ಬರೊಬ್ಬರು ರೊಮ್ಯಾಂಟಿಕ್ ಆಗಿ ಮುಗಳ್‌ನಗುತ್ತಾ ಪೋಸ್ ನೀಡಿ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಮ್‌ಚರಣ್ ಈ ಹಿಂದೆ ಕೂಡ ಸಾಕಷ್ಟು ಪೋಸ್ಟ್ ಹಂಚಿಕೊಂಡು ಸುದ್ದಿ ಮಾಡಿದ್ದರು. ಪತ್ನಿ ಉಪಾಸನಾ ಕೂಡ ಸಾಮಾ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡುತ್ತಲೇ ಇರುತ್ತಾರೆ. ಈ ಹಿಂದೆ ಆಚಾರ್ಯ ಸಿನಿಮಾ ಕುರಿತ ಪೋಸ್ಟ್ ಹಂಚಿಕೊಂಡು, ʼಆಚಾರ್ಯ ಮೂವಿ ನನ್ನ ಪ್ರೀತಿಯ ಅತ್ತೆಗೋಸ್ಕರ, ತೆರೆಯ ಮೇಲೆ ಬರಲು ಸಿದ್ಧʼ ಎಂದು ಪೋಸ್ಟ್ ಶೇರ್ ಮಾಡಿದ್ದರು. ಅತ್ತೆ ಮತ್ತು ಸೊಸೆಯ ಪ್ರೀತಿಗೆ ಜನರು ಕಮೆಂಟ್ ಮೂಲಕ ಖುಷಿಯನ್ನು ಹಂಚಿಕೊಂಡಿದ್ದರು.
ಆರ್‌ಆರ್‌ಆರ್ ಸಿನಿಮಾ ಸಂದರ್ಭದಲ್ಲಿ ರಾಮ್‌ಚರಣ್ ಏರ್‌ಪೋರ್ಟ್‌ನ ಟ್ರಾಲಿಯಲ್ಲಿ ಉಪಾಸನಾ ಅವರನ್ನು ಕೂರಿಸಿ ಎಳೆದುಕೊಂಡು ಹೋಗುವ ಪೋಟೊ ಶೇರ್ ಮಾಡಿ, ʼರೆಡಿ ಫಾರ್ RRRʼ ಎಂದು ಕ್ಯಾಪ್ಷನ್ ನೀಡಿ ಪ್ರಮೋಟ್ ಮಾಡಿದ್ದರು.
ಕ್ರಿಸ್ಮಸ್ ಸಂದರ್ಭದಲ್ಲಿ ಶುಭಾಶಯ ತಿಳಿಸಿ, ʼಎಂದೆದಿಗೂ ಕೃತಜ್ಞರಾಗಿರುತ್ತೇವೆ, ಪ್ರೀತಿಯಿಂದ ರಾಮ್ ಚರಣ್, ಬ್ರಾಟ್, ಬ್ರಿಟ್ನಿ, ನತಾಶಾ, ಬೆನ್, ರೈಮ್ʼ ಎಂದು ತಮ್ಮ ಪ್ರೀತಿಯ ನಾಯಿ ಮರಿಗಳೊಂದಿಗೆ ಹಾರೈಸಿದ್ದರು.
ದೀಪಾವಳಿ ದಿನದಂದು ರಾಮಚರಣ್ ಅವರೊಂದಿಗೆ, ʼನನ್ನ ಜೀವನವನ್ನು ತುಂಬಾ ವಿಶೇಷವಾಗಿಸಿದಕ್ಕಾಗಿ ಎಲ್ಲರಿಗೂ ಧನವ್ಯವಾದಗಳುʼ ಎಂದು ಬರೆದುಕೊಂಡಿದ್ದರು.
ಉಪಾಸನಾ ಪತಿ ರಾಮ್‌ಚರಣ್ ಅವರ ಸಿನಿಮಾಗೆ ಸಾಥ್ ಕೊಡುತ್ತಾ ಬಂದಿದ್ದು, ಅವರ ಇನ್ಸ್ಟಾ ಪೋಸ್ಟ್‌ಗೆ ಜನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ರಾಮ್‌ಚರಣ್ ನಿರ್ದೇಶಕ ಶಂಕರ್ ಅವರ RC 15 ಸಿನಿಮಾದಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ | ನೆಚ್ಚಿನ ನಟನನ್ನು ಭೇಟಿಯಾಗಲು 400 ಕಿ.ಮೀ ಕಾಲ್ನಡಿಗೆಯಲ್ಲಿ ಹೊರಟ ಅಭಿಮಾನಿ!