Site icon Vistara News

ಆರ್ಕೆಸ್ಟ್ರಾ ಮೈಸೂರು ಚಿತ್ರದ ಟ್ರೇಲರ್‌ ಲಾಂಚ್ ಮಾಡಿದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ

ಬೆಂಗಳೂರು: ಚಿತ್ರರಂಗದ ಚಟುವಟಿಕೆಗಳಿಂದ ಸಾಮಾನ್ಯವಾಗಿ ದೂರ ಇರುವ ಸ್ಯಾಂಡಲ್‌ವುಡ್‌ ಕ್ವೀನ್‌, ನಟಿ ರಮ್ಯಾ ಇತ್ತೀಚೆಗೆ ಮತ್ತೆ ಸಕ್ರಿಯರಾಗಿದ್ದಾರೆ. ರಕ್ಷಿತ್‌ ಶೆಟ್ಟಿ ಅವರ ʻ777 ಚಾರ್ಲಿʼ ಸಿನಿಮಾವನ್ನು ಹೊಗಳಿ ಸುದ್ದಿಯಾದ ಅವರು, ಇದೀಗ ʻಆರ್ಕೆಸ್ಟ್ರಾ ಮೈಸೂರುʼ ಸಿನಿಮಾದ ಟ್ರೇಲರ್‌ ಲಾಂಚ್ ಮಾಡಿದ್ದಾರೆ.

ಲಾಂಚ್‌ ಮಾಡುವುದಕ್ಕೂ ಮೊದಲೇ ತಾವು ಎಕ್ಸೈಟ್‌ ಆಗಿರುವುದಾಗಿ ರಮ್ಯಾ ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಚಿತ್ರದ ಟ್ರೇಲರ್‌ ಅನ್ನು ರಮ್ಯಾ ಡಿಜಿಟಲ್ ಆಗಿ ಲಾಂಚ್ ಮಾಡಿದ್ದಾರೆ. ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಅರ್ಪಣೆ ಮಾಡುತ್ತಿರುವ ಈ ಸಿನಿಮಾವನ್ನು ರಘು ದೀಕ್ಷಿತ್‌ ನಿರ್ಮಿಸುತ್ತಿದ್ದಾರೆ. ಜತೆಗೆ ಸಂಗೀತವನ್ನೂ ನೀಡಿದ್ದಾರೆ.

ಈ ಸಿನಿಮಾಗೆ ಧನಂಜಯ್ ಹಾಡುಗಳನ್ನು ಬರೆದಿದ್ದಾರೆ. ಈ ಮೊದಲು ಬಾರಿಸು ಕನ್ನಡ ಡಿಂಡಿಮವ ಹಾಡು ಮಾಡಿದ್ದ ತಂಡ ಈ ಚಿತ್ರದಲ್ಲೂ ಕೆಲಸ ಮಾಡಿದೆ.

ಇದನ್ನೂ ಓದಿ: Thalaiva 169: 12 ವರ್ಷದ ಬಳಿಕ ಮತ್ತೆ ರೊಮ್ಯಾನ್ಸ್‌ಗೆ ರೆಡಿಯಾದ ಲೋಕ ಸುಂದರಿ-ಸೂಪರ್‌ ಸ್ಟಾರ್

Exit mobile version