ಬೆಂಗಳೂರು: ಮೋಹಕ ತಾರೆ ರಮ್ಯಾ (Ramya) ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ಸೂರ್ಯ ಜತೆಗಿನ ಫೋಟೊ ಹಂಚಿಕೊಂಡು ಚಿತ್ರದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. 2008ರಲ್ಲಿ ‘ಸೂರ್ಯ ಸನ್ ಆಫ್ ಕೃಷ್ಣಮೂರ್ತಿ’ (Surya S/O Krishnan) ಸಿನಿಮಾ ಸೂಪರ್ ಹಿಟ್ ಆಗಿತ್ತು. ನಟಿ ರಮ್ಯಾ ಅವರಿಗೂ ಒಳ್ಳೆಯ ಜನಪ್ರಿಯತೆ ತಂದುಕೊಟ್ಟಿತ್ತು. ಈ ಸಿನಿಮಾ ಮೂಲಕವೇ ಕಾಲಿವುಡ್ ಸಿನಿಮಾರಂಗದಲ್ಲಿ ಮಿಂಚಿದ್ದರು. ಈ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ ರಮ್ಯಾ.
ʻʻಈ ಚಿತ್ರದಲ್ಲಿ ಕೆಲಸ ಮಾಡಲು ಇಷ್ಟವಾಯಿತು. ಈ ಚಿತ್ರ ಚಿತ್ರೀಕರಿಸಿದಾಗ ನನಗೆ 22 ವರ್ಷ. ನಾನು ಹಿಂದೆಂದೂ ಅನುಭವಿಸದಂತಹ ಭಾವನೆಗಳನ್ನು ಇಲ್ಲಿ ತೋರಿಸಬೇಕಿತ್ತು. ನಾನು ಜೀವನ, ನಷ್ಟ, ಸಂಬಂಧಗಳ ಬಗ್ಗೆ ತುಂಬ ಕಲಿತಿದ್ದೇನೆ. ನನಗೆ ಪ್ರಿಯಾ ಪಾತ್ರ ಯಾವಾಗಲೂ ತಾಳ್ಮೆ ಮತ್ತು ಪ್ರೀತಿಯ ಸಾರಾಂಶವಾಗಿದ್ದಾಳೆ. ಆಕೆಯ ಹಾಗೆ ನಾನು ಪ್ರೀತಿಸಬಹುದೆಂದು ನಾನು ಬಯಸುತ್ತೇನೆ. ಹೇಗಾದರೂ, ಜುಲೈ 21ರಂದು ಈ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ, ಕಲ್ಟ್-ಕ್ಲಾಸಿಕ್‌ನ ಮ್ಯಾಜಿಕ್ ನೀವು ಆನಂದಿಸಿ ಎಂದು ರಮ್ಯಾ ಬರೆದಿದ್ದಾರೆ.
ರಮ್ಯಾ ಸ್ಯಾಂಡಲ್‌ವುಡ್‌ಗೆ (Sandalwood) ಕಂಬ್ಯಾಕ್ ಆಗಿದ್ದಾರೆ. ‘ಉತ್ತರಕಾಂಡ’ (Uttarakanda Movie) ಸಿನಿಮಾದಲ್ಲಿ ಮಿಂಚಲು ಸಕಲ ಸಿದ್ಧತೆ ಮಾಡುತ್ತಿದ್ದಾರೆ. ಈಗಾಗಲೇ ಹಾಸ್ಟೆಲ್ ಹುಡುಗರು ಸಿನಿಮಾದಲ್ಲಿ ಲೆಕ್ಚರ್ ಪಾತ್ರವನ್ನು ನಿಭಾಯಿಸಿದ್ದಾರೆ.
ಇದನ್ನೂ ಓದಿ: Ramya Actress | ʻಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಚಿತ್ರಕ್ಕೆ ಮೋಹಕ ತಾರೆ ರಮ್ಯಾ ಸಾಥ್!
ರಮ್ಯಾ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಆಕಾಶ್, ಅಮೃತಧಾರೆ, ಆದಿ, ಸೇವಂತಿ ಸೇವಂತಿ, ಲಕ್ಕಿ, ಮುಸ್ಸಂಜೆ ಮಾತು, ಜೊತೆ ಜೊತೆಯಲಿ, ಸಂಜು ವೆಡ್ಸ್ ಗೀತಾ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿ ರಮ್ಯಾ ನಟಿಸಿದ್ದಾರೆ.