Site icon Vistara News

Ranveer Singh | ಸಾವಿರ ಜನರೆದುರೂ ಬೆತ್ತಲಾಗಬಲ್ಲೆ ಎಂದ ರಣವೀರ್‌ ಸಿಂಗ್‌

ನವ ದೆಹಲಿ: ಬಾಲಿವುಡ್‌ ನಟ ರಣವೀರ್‌ ಸಿಂಗ್‌ (Ranveer Singh) ನಗ್ನರಾಗಿ ಪೋಸ್‌ ಕೊಟ್ಟ ಫೋಟೋ ಈಗ ಇಂಟರ್ನೆಟ್‌ನಲ್ಲಿ ಟ್ರೆಂಡ್‌ ಆಗುತ್ತಿದೆ. ‌ʼಪೇಪರ್‌ʼ ಎಂಬ ಪತ್ರಿಕೆಯೊಂದಕ್ಕೆ ರಣವೀರ್‌ ಸಿಂಗ್ ನಗ್ನರಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಈಗ ಆ ಫೋಟೋಗಳು ವೈರಲ್‌ ಆಗಿದ್ದು, ಹಲವು ನೆಟ್ಟಿಗರು ಕಟು ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ನಟ ರಣವೀರ್ ಸಿಂಗ್‌ ಒಂದಲ್ಲ ಒಂದು ರೀತಿಯಲ್ಲಿ ಇಂಟರ್‌ನೆಟ್‌ನಲ್ಲಿ ಟ್ರೆಂಡ್‌ ಆಗುತ್ತಲೇ ಇರುತ್ತಾರೆ. ಕೆಲವೊಮ್ಮೆ ತಮ್ಮ ವಿಚಿತ್ರವಾದ ಉಡುಗೆಗಳಿಂದ, ಮಾತುಗಳಿಂದ ಅಥವಾ ವರ್ತನೆಗಳಿಂದ ಅವರು ಸುದ್ದಿಯಾಗುತ್ತಲೇ ಇರುತ್ತಾರೆ. ಆದರೆ, ರಣವೀರ್‌ ಸಿಂಗ್‌ ಅವರ ಇತ್ತೀಚಿನ ಈ ಫೋಟೋ ಶೂಟ್‌ ಕಂಡು ಅವರ ಫ್ಯಾನ್‌ಗಳೇ ತಬ್ಬಿಬ್ಬಾಗಿದ್ದಾರೆ!

ʼನಗ್ನತೆ ನನಗೇನು ಕಷ್ಟವಲ್ಲʼ

ʼಪೇಪರ್‌ʼ ಪತ್ರಿಕೆ ರಣವೀರ್‌ ಅವರ ಸಂದರ್ಶನ ನಡೆಸಿದ್ದು, ಈ ಸಂದರ್ಭಕ್ಕಾಗಿ ಫೋಟೊಶೂಟ್‌ ನಡೆಸಲಾಗಿತ್ತು. ಇದರಲ್ಲಿ ರಣವೀರ್‌ ಸಿಂಗ್ ಬಗೆಬಗೆಯ ಭಂಗಿಗಳಲ್ಲಿ‌ ಸಂಪೂರ್ಣ ಬೆತ್ತಲಾಗಿ ಪೋಸ್‌ ನೀಡಿದ್ದಾರೆ.

ಈ ಹಿಂದೆಯೂ ಬೇಫಿಕ್ರೆ ಎಂಬ ಸಿನಿಮಾದಲ್ಲಿ ರಣವೀರ್‌ ನಗ್ನರಾಗಿದ್ದ ಒಂದು ದೃಶ್ಯವಿತ್ತು. ಆದರೆ, ಇಂಥ ಚಿತ್ರಗಳಿಗಾಗಿ ಫೋಟೊಶೂಟ್‌ ನಡೆಸಿದ್ದು ಇದೇ ಮೊದಲ ಬಾರಿ. ಈ ಸಂದರ್ಶನದಲ್ಲಿ ರಣವೀರ್‌ “ನಗ್ನತೆ ನನಗೇನು ಕಷ್ಟವಲ್ಲʼʼ ಎಂದು ಹೇಳಿದ್ದಾರೆ. “ಕೆಲವು ಪಾತ್ರಗಳ ಅಭಿನಯದಲ್ಲಿ ನೀವು ನನ್ನ ಅಂತರಾಳವನ್ನು ಗಮನಿಸಬಹುದು. ಅದಕ್ಕೆ ಏನಂತೀರಿ? ಅದು ನಿಜವಾದ ನಗ್ನತೆʼʼ ಎಂದಿದ್ದಾರೆ. ಅಲ್ಲದೆ, ಸಾವಿರ ಜನರ ಎದುರು ಕೂಡ ನಾನು ನಗ್ನನಾಗಬಲ್ಲೆ ಎಂದು ರಣವೀರ್‌ ಹೇಳಿಕೊಂಡಿದ್ದಾರೆ.

ದೀಪಿಕಾ ಏನೆಂದುಕೊಳ್ಳಬಹುದು?

ರಣವೀರ್‌ ಸಿಂಗ್‌ ಅವರ ಈ ಫೋಟೊಗಳು ಇನ್‌ಸ್ಟಾಗ್ರಾಂನಲ್ಲೂ ಸುಂಟರಗಾಳಿ ಎಬ್ಬಿಸಿದೆ. ಈ ಫೋಟೊ ನೋಡಿ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. “ಈ ಫೋಟೊ ನೋಡಿ ದೀಪಿಕಾ ಅಕ್ಕ ಏನು ಹೇಳಬಹುದು?ʼ ಎಂದೊಬ್ಬರು ಪ್ರಶ್ನಿಸಿದ್ದಾರೆ!

ಇದನ್ನೂ ಓದಿ: Viral Video | ತಿಂಗಳಿಗೆ ಒಂದೇ ಪಿಜ್ಜಾ ಸೇವಿಸುವುದಾಗಿ ಒಪ್ಪಂದಕ್ಕೆ ಸಹಿ ಮಾಡಿದ ನವಜೋಡಿ!

Exit mobile version