ಮುಂಬೈ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆಂದು ಹಿಂದಿ ಬಿಗ್ ಬಾಸ್ 17(Bigg Boss) ಸೀಸನ್‌ನ ಮಾಜಿ ಸ್ಪರ್ಧಿಯೊಬ್ಬರು (ex-contestant) ತಮ್ಮ ಸ್ನೇಹಿತನ ವಿರುದ್ಧ ದೂರು ನೀಡಿದ್ದಾರೆ(Rape Case. ಕಿರು ತೆರೆ ನಟಿಯೂ ಆಗಿರುವ ಬಿಬ್ ಬಾಸ್ ಮಾಜಿ ಸ್ಪರ್ಧಿಯು ದಕ್ಷಿಣ ದಿಲ್ಲಿಯ ತಿಗ್ರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ(FIR Filed ). ಆಗಾಗ ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ಳುವ ನಟಿ, 2023ರಲ್ಲಿ ಡಿಯೋಲಿ ರಸ್ತೆಯಲ್ಲಿರುವ ಫ್ಲಾಟ್‌ನಲ್ಲಿ ಸ್ನೇಹಿತ ರೇಪ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ(Sexual Assault).
ಆರೋಪಿಯು ನನಗೆ 2022ರಿಂದ ಪರಿಚಿತನಾಗಿದ್ದಾನೆ. ನಾನು ಕಳೆದ ವರ್ಷ ದೆಹಲಿಯಲ್ಲಿದ್ದಾಗ, ಆರೋಪಿಯು ತನ್ನ ಕೆಲವು ಸ್ನೇಹಿತರು ನನ್ನನ್ನು ಭೇಟಿಯಾಗಲು ಬಯಸಿದ್ದರು ಎಂದು ಹೇಳಿದ್ದ. ಆರಂಭದಲ್ಲಿ ನಾನು ನಿರಾಕರಿಸಿದೆ. ಆದರೆ ಆರೋಪಿಯು ನನ್ನನ್ನು ಒತ್ತಾಯಿಸುತ್ತಲೇ ಇದ್ದನು. ಹಾಗಾಗಿ, ನಾನು ಅವನನ್ನು ಕಳೆದ ವರ್ಷ ಊಟದ ಸಮಯದಲ್ಲಿ ಭೇಟಿಯಾದೆ. ಸಭೆಯ ಸಮಯದಲ್ಲಿ ಅವನು ನನಗೆ ಮಾದಕ ದ್ರವ್ಯ ನೀಡಿ ನಂತರ ನನ್ನ ಮೇಲೆ ಅತ್ಯಾಚಾರ ಮಾಡಿದ. ಅಲ್ಲದೇ ಮದುವೆಯಾಗುವುದಾಗಿ ಭರವಸೆ ನೀಡಿದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.
ನಗ್ನ ವಿಡಿಯೋಗಳ ಮೂಲಕ ಆರೋಪಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದೂ ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ. “ಆರೋಪಿಯು ನನ್ನ ನಗ್ನ ವೀಡಿಯೊಗಳು ಮತ್ತು ನಗ್ನ ಚಿತ್ರಗಳ ಬಗ್ಗೆ ನನ್ನನ್ನು ಕೇಳುತ್ತಲೇ ಇದ್ದ. ಅವನು ನನ್ನನ್ನು ಶೀಘ್ರದಲ್ಲೇ ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದ. ಮದುವೆಗೆ ಒತ್ತಾಯಿಸುತ್ತಿದ್ದಂತೆ ನನ್ನ ನಗ್ನ ವಿಡಿಯೋ ಹಾಗೂ ಚಿತ್ರಗಳನ್ನು ಬಹಿರಂಗ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಮೇರೆಗೆ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದ್ದು, ಆರೋಪಿಯನ್ನು ಇನ್ನೂ ಬಂಧಿಸಿಲ್ಲ. ಇದೇ ವೇಳೆ, ಪೊಲೀಸರು ದೂರು ನೀಡಿದ ಬಿಗ್ ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿಯನ್ನು ಗುರುತನ್ನು ಮರೆ ಮಾಚಿದ್ದಾರೆ.
ಈ ಸುದ್ದಿಯನ್ನೂ ಓದಿ: Sexual Assault : 16ರ ಬಾಲಕಿಯನ್ನು ಮನೆಗೆ ಕರೆಸಿ ಅತ್ಯಾಚಾರ ಮಾಡಿದ ಮೂವರು ಬಾಲಕರು