Site icon Vistara News

Raquel Welch Death: ʻಒನ್ ಮಿಲಿಯನ್ ಇಯರ್ಸ್ B.Cʼ ಸಿನಿಮಾ ಖ್ಯಾತಿಯ ನಟಿ ರಾಕೆಲ್ ವೆಲ್ಚ್ ಇನ್ನಿಲ್ಲ

Raquel Welch

ಬೆಂಗಳೂರು: ತ್ರಿ ಮಸ್ಕಿಟೀರ್ಸ್ (Three Musketeers) ಮತ್ತು ಫೆಂಟಾಸ್ಟಿಕ್ ವಾಯೇಜ್ (Fantastic Voyage) ಸೇರಿದಂತೆ ಕೆಲವು ಜನಪ್ರಿಯ ಚಲನಚಿತ್ರಗಳಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾದ ಅಮೆರಿಕನ್ ನಟಿ ರಾಕೆಲ್ ವೆಲ್ಚ್ (82) (Raquel Welch) ನಿಧನರಾಗಿದ್ದಾರೆ. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. 60ರ ದಶಕದಲ್ಲಿ ಅವರು ಹಾಲಿವುಡ್‌ನಲ್ಲಿ ಸೆಕ್ಸ್ ಸಿಂಬಲ್ ಎಂದೇ ಖ್ಯಾತರಾಗಿದ್ದರು. ತಮ್ಮ ಮಾದಕ ಮೈಮಾಟದಿಂದ ಗುರುತಿಸಿಕೊಂಡಿದ್ದರು.

“ರಾಕೆಲ್ ಅವರ 50 ವರ್ಷಗಳ ವೃತ್ತಿಜೀವನದಲ್ಲಿ 30 ಚಲನಚಿತ್ರಗಳು ಮತ್ತು 50 ಟೆಲಿವಿಷನ್‌ ಸಿರೀಸ್‌ಗಳಲ್ಲಿ ಅಭಿನಯಿಸಿದ್ದಾರೆ. ಗೋಲ್ಡನ್ ಗ್ಲೋಬ್ ವಿಜೇತರೂ ಹೌದು. ರಾಕೆಲ್ ಅವರಿಗೆ ಮಗ ಡೇಮನ್ ವೆಲ್ಚ್ ಮತ್ತು ಮಗಳು ತಹ್ನೀ ವೆಲ್ಚ್ ಇದ್ದಾರೆ.

ಇದನ್ನೂ ಓದಿ: Javed Khan Amrohi: ಜಾವೇದ್ ಖಾನ್ ಅಮ್ರೋಹಿ ನಿಧನಕ್ಕೆ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ ಸೆಲೆಬ್ರಿಟಿಗಳು

ರಾಕೆಲ್ ವೆಲ್ಚ್ ವೃತ್ತಿಜೀವನ

1966ರಲ್ಲಿ ಬಿಡುಗಡೆಯಾದ ʻಒನ್ ಮಿಲಿಯನ್ ಇಯರ್ಸ್ B.Cʼ (One Million Years BC) ಚಿತ್ರದಲ್ಲಿ ಕೇವ್‌ ವುಮೆನ್‌ ಪಾತ್ರದ ಮೂಲಕ ಖ್ಯಾತಿಯನ್ನು ಗಳಿಸಿದ ಹಿರಿಯ ಅಮೆರಿಕನ್ ನಟಿ ಇವರು. ಜಿಂಕೆ-ಚರ್ಮದಿಂದ ಕೂಡಿರುವಂತಹ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದರು. ಸ್ಯಾನ್ ಡಿಯಾಗೋ ಸ್ಟೇಟ್ ಕಾಲೇಜಿಗೆ ಸೇರಿದ ನಂತರ ಅವರು ರಂಗಭೂಮಿ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಸ್ಥಳೀಯ ಸ್ಯಾನ್ ಡಿಯಾಗೋ ದೂರದರ್ಶನ ಕೇಂದ್ರದಲ್ಲಿ ಹವಾಮಾನ ನಿರೂಪಕಿಯಾಗಿ ಸೇರಿದರು.

ಐದು ದಶಕಗಳಲ್ಲಿ ವ್ಯಾಪಿಸಿರುವ ಅವರ ವೃತ್ತಿಜೀವನದಲ್ಲಿ, ರಾಕೆಲ್ ವೆಲ್ಚ್ 30ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು 50 ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. 1974 ರಲ್ಲಿ ಬಿಡುಗಡೆಯಾದ ದಿ ತ್ರಿ ಮಸ್ಕಿಟೀರ್ಸ್ ಚಲನಚಿತ್ರದಲ್ಲಿನ ಅಭಿನಯಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದರು.

Exit mobile version