Javed Khan Amrohi: ಜಾವೇದ್ ಖಾನ್ ಅಮ್ರೋಹಿ ನಿಧನಕ್ಕೆ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ ಸೆಲೆಬ್ರಿಟಿಗಳು - Vistara News

ಬಾಲಿವುಡ್

Javed Khan Amrohi: ಜಾವೇದ್ ಖಾನ್ ಅಮ್ರೋಹಿ ನಿಧನಕ್ಕೆ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ ಸೆಲೆಬ್ರಿಟಿಗಳು

ಶ್ವಾಸಕೋಶದ ವೈಫಲ್ಯದಿಂದ ಅಮ್ರೋಹಿ ವಿಧಿವಶರಾಗಿದ್ದಾರೆ. ಜಾವೇದ್ ಖಾನ್ ಅಮ್ರೋಹಿ (Javed Khan Amrohi) ನಿಧನಕ್ಕೆ ಬಾಲಿವುಡ್‌ ಸೆಲೆಬ್ರಿಟಿಗಳು ಹಾಗೂ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

VISTARANEWS.COM


on

Javed Khan Amrohi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಫೆ.14ರಂದು ನಿಧನರಾದ ಹಿರಿಯ ನಟ ಜಾವೇದ್ ಖಾನ್ ಅಮ್ರೋಹಿ (Javed Khan Amrohi) ಚಿತ್ರರಂಗದ ಗಣ್ಯರು ಟ್ವೀಟ್‌ಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ಅವರಿಗೆ 60 ವಯಸ್ಸಾಗಿತ್ತು. ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ’, ಚಕ್ ದೇ ಇಂಡಿಯಾ’, ‘ಲಗಾನ್’ ಮುಂತಾದ ಚಲನಚಿತ್ರಗಳಲ್ಲಿ ಹೆಸರುವಾಸಿಯಾಗಿದ್ದರು. ಶ್ವಾಸಕೋಶದ ವೈಫಲ್ಯದಿಂದ ಅಮ್ರೋಹಿ ವಿಧಿವಶರಾಗಿದ್ದಾರೆ.

ಜಾವೇದ್ ಖಾನ್ ಅಮ್ರೋಹಿ ನಿಧನಕ್ಕೆ ಬಾಲಿವುಡ್‌ ಸೆಲೆಬ್ರಿಟಿಗಳು ಹಾಗೂ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶಬಾನಾ ಅಜ್ಮಿ ಅವರು ಹಿರಿಯ ನಟರೊಂದಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ”ಜಾವೇದ್ ಖಾನ್ ಅಮ್ರೋಹಿ ಅವರು ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್‌ನ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಸಂತಾಪʼʼಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Javed Khan Amrohi: ‘ಲಗಾನ್’‌, ‘ಚಕ್‌ ದೇ ಇಂಡಿಯಾ’ ಖ್ಯಾತಿಯ ನಟ ಜಾವೇದ್‌ ಖಾನ್‌ ಅಮ್ರೋಹಿ ಇನ್ನಿಲ್ಲ

ʻʻಸಿನಿಮಾ ಜಗತ್ತಿಗೆ ಇದು ತುಂಬಲಾರದ ನಷ್ಟ. ಜಾವೇದ್ ಖಾನ್ ಅಮ್ರೋಹಿ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪʼʼ ಎಂದು ಸುನೀಲ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ.

ನಟ ಡ್ಯಾನಿಶ್ ಹುಸೇನ್ ಅವರು ಜಾವೇದ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ʻʻಜಾವೇದ್ ಖಾನ್ ಆಮ್ರೋಹಿ ಭಾಯ್ ಅವರ ನಿಧನದ ಬಗ್ಗೆ ಕೇಳಲು ಬೇಸರವಾಯಿತು. ಇದು ವಿದಾಯದ ಸಮಯ ಎಂದು ತೋರುತ್ತದೆʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ವಾಸಕೋಶದ ವೈಫಲ್ಯದಿಂದಾಗಿ ಅವರು ನಿಧನರಾದರು. ಅವರ ಅಂತ್ಯಕ್ರಿಯೆ ಫೆಬ್ರವರಿ 14 ರಂದು ನಡೆಯಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Madhu Chopra: ಮಗಳು-ಅಳಿಯನ ವಯಸ್ಸಿನ ಅಂತರ ಬಗ್ಗೆ ಪ್ರಿಯಾಂಕಾ ಚೋಪ್ರಾ ತಾಯಿ ಹೇಳಿದ್ದೇನು?

Madhu Chopra: ಮಧು ಚೋಪ್ರಾ ಮಾತನಾಡಿ ʻʻವಯಸ್ಸಿನ ಅಂತರವಿದೆ. ಹೌದು. ಹುಡುಗ ಒಳ್ಳೆಯವನು. ಅದೇ ರೀತಿ ನನ್ನ ಮಗಳು ಒಳ್ಳೆಯವಳು. ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತಾರೆ. ಅವರಿಬ್ಬರನ್ನು ನೋಡಿ ನನಗೆ ಸಂತೋಷವಾಗಿದೆ. ಜನರು ಹಾಗೇ ಏನು ಬೇಕಾದರೂ ಮಾತನಾಡುತ್ತಾರೆ. ನಿಕ್‌ ಭಾರತಕ್ಕೆ ಬಂದು ನನ್ನನ್ನು ಭೇಟಿಯಾದಾಗ, ಪ್ರಿಯಾಂಕಾ ಇಲ್ಲದಿದ್ದಾಗ ನನ್ನನ್ನು ಊಟಕ್ಕೆ ಕರೆದೊಯ್ದರು. ಪ್ರಿಯಾಂಕಾಗೆ ಯಾವ ರೀತಿಯ ಹುಡುಗ ಬೇಕು ಎಂದು ಬಯಸುತ್ತೀರಿ ಎಂದು ನಿಕ್ ಕೇಳಿದರು. ಆ ಗುಣಗಳು ನಿಕ್‌ನಲ್ಲಿತ್ತು ಎಂದರು.

VISTARANEWS.COM


on

Madhu Chopra on Priyanka Chopra-Nick Jonas' age gap
Koo

ಬೆಂಗಳೂರು: ಪ್ರಿಯಾಂಕಾ (Priyanka Chopra) ಮತ್ತು ನಿಕ್ ಜೋನಾಸ್ 2018ರ ಡಿಸೆಂಬರ್ 1ರಂದು ಮದುವೆಯಾದರು. ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಕೆಲವು ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ (Madhu Chopra) ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದರು. ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಇತ್ತೀಚೆಗೆ ತಮ್ಮ ಮಗಳು ಮತ್ತು ನಿಕ್ ಜೋನಾಸ್ ಅವರ ಸಂಬಂಧವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮಗಳು ಮತ್ತು ಅಳಿಯನಿಗೆ ಇರುವ 10 ವರ್ಷ ವಯಸ್ಸಿನ ಅಂತರ ಬಗ್ಗೆ ಮಾತನಾಡಿದ್ದಾರೆ.

ಮಧು ಚೋಪ್ರಾ ಮಾತನಾಡಿ ʻʻವಯಸ್ಸಿನ ಅಂತರವಿದೆ. ಹೌದು. ಹುಡುಗ ಒಳ್ಳೆಯವನು. ಅದೇ ರೀತಿ ನನ್ನ ಮಗಳು ಒಳ್ಳೆಯವಳು. ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತಾರೆ. ಅವರಿಬ್ಬರನ್ನು ನೋಡಿ ನನಗೆ ಸಂತೋಷವಾಗಿದೆ. ಜನರು ಹಾಗೇ ಏನು ಬೇಕಾದರೂ ಮಾತನಾಡುತ್ತಾರೆ. ನಿಕ್‌ ಭಾರತಕ್ಕೆ ಬಂದು ನನ್ನನ್ನು ಭೇಟಿಯಾದಾಗ, ಪ್ರಿಯಾಂಕಾ ಇಲ್ಲದಿದ್ದಾಗ ನನ್ನನ್ನು ಊಟಕ್ಕೆ ಕರೆದೊಯ್ದರು. ಪ್ರಿಯಾಂಕಾಗೆ ಯಾವ ರೀತಿಯ ಹುಡುಗ ಬೇಕು ಎಂದು ಬಯಸುತ್ತೀರಿ ಎಂದು ನಿಕ್ ಕೇಳಿದರು. ಆ ಗುಣಗಳು ನಿಕ್‌ನಲ್ಲಿತ್ತು ಎಂದರು.

ಇದನ್ನೂ ಓದಿ: Met Gala 2024: ಮೆಟ್‌ ಗಾಲಾದಲ್ಲಿ ಆಲಿಯಾ ಹಾಜರಿ: ಪ್ರಿಯಾಂಕಾ ಚೋಪ್ರಾ ಗೈರು!

2018ರಲ್ಲಿ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ 2022ರ ಜನವರಿಯಲ್ಲಿ ತಮಗೆ ಹೆಣ್ಣುಮಗು ಹುಟ್ಟಿದ್ದಾಗಿ ತಿಳಿಸಿದ್ದರು. ಹಾಗೇ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾಗಿಯೂ ಹೇಳಿದ್ದರು. ಈ ಒಂದು ವರ್ಷದಲ್ಲಿ ಪ್ರಿಯಾಂಕಾ ಚೋಪ್ರಾ ಮಗುವನ್ನು ಎತ್ತಿಕೊಂಡಿರುವ ಫೋಟೊಗಳು ವೈರಲ್​ ಆಗಿದ್ದರೂ ಕೂಡ ಮಗುವಿನ ಮುಖ ಬಹಿರಂಗವಾಗಿರಲಿಲ್ಲ. ಬಳಿಕ ಪ್ರಿಯಾಂಕಾ ಮಗುವಿನ ಮುಖವನ್ನು ರಿವೀಲ್‌ ಮಾಡಿದರು.

ಕೆಲವು ದಿನಗಳ ಹಿಂದೆ ಪ್ರಿಯಾಂಕ ಚೋಪ್ರಾ (Priyanka Chopra) ತಮ್ಮ ಸಹೋದರ ಸಿದ್ಧಾರ್ಥ ಅವರ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಭಾಗಿಯಾಗಿದ್ದರು.ಸಿದ್ಧಾರ್ಥ ಹಾಗೂ ನೀಲಂ ಎಂಗೇಜ್ ಮೆಂಟ್ ನಲ್ಲಿ ಕುಟುಂಬದ ಸದಸ್ಯರು ಹಾಗೂ ಒಂದಷ್ಟು ಆತ್ಮೀಯ ಸ್ನೇಹಿತರು ಪಾಲ್ಗೊಂಡಿದ್ದರು. ಸಿದ್ದಾರ್ಥ ಹಾಗೂ ನೀಲಂ ಜೋಡಿಯ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಈ ಸಂದರ್ಭದಲ್ಲಿ ಪ್ರಿಯಾಂಕ ದಂಪತಿಗಳ ಜೊತೆ ತಾಯಿ ಮಧು ಚೋಪ್ರಾ, ಸೋದರ ಸಂಬಂಧಿ ಮನ್ನಾರ್ ಚೋಪ್ರಾ, ಆತ್ಮೀಯ ಸ್ನೇಹಿತೆ ತಮನ್ನಾ ದತ್ ಪಾಲ್ಗೊಂಡಿದ್ದರು. ಇನ್ನು ಸಾಂಪ್ರಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಪ್ರಿಯಾಂಕ ಕುಟುಂಬದ ಫೋಟೊ ಸಖತ್ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.

Continue Reading

ಸಿನಿಮಾ

India Highest Paid Item Girl : ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಗರ್ಲ್ ಯಾರು? ಮಲೈಕಾ, ಸನ್ನಿ, ನೋರಾ ಅಲ್ವೇ ಅಲ್ಲ!

India Highest Paid Item Girl : ಈ ಹಿಂದೆ ಕೆಲವೇ ಕೆಲವು ನಟಿಯರು ಮಾತ್ರ ಅದರಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಟಾಪ್ ನಟಿಯರೂ ಈ ರೀತಿಯ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಐಟಂ ಸಾಂಗ್‌ಗಳನ್ನು ಮಾಡಲು ಹೀರೋಗಿಂತ ಹೆಚ್ಚಿನ ಸಂಭಾವನೆ ಪಡೆದ ಉದಾಹರಣೆ ಸಾಕಷ್ಟಿದೆ. ಕರೀನಾ ಕಪೂರ್ ಐಟಂ ಡ್ಯಾನ್ಸ್​ಗೆ 1.5 ಕೋಟಿ ರೂಪಾಯಿ ಪಡೆಯುತ್ತಾರೆ. ತಮನ್ನಾ ಭಾಟಿಯಾ ಒಂದು ಹಾಡಿಗೆ ರೂ. 1 ಕೋಟಿ ರೂ., ಕತ್ರಿನಾ ಕೈಫ್ ವಿಶೇಷ ಸಾಂಗ್​ನಲ್ಲಿ ಕಾಣಿಸಿಕೊಳ್ಳಲು 2 ಕೋಟಿ ರೂಪಾಯಿ ಪಡೆಯುತ್ತಾರೆ.

VISTARANEWS.COM


on

India Highest Paid Item Girl not Malaika Nora, Katrina, Sunny
Koo

ಬೆಂಗಳೂರು: ಮಲೈಕಾದಿಂದ ಹಿಡಿದು ಸನ್ನಿ ಲಿಯೋನ್‌ವರೆಗೆ (India Highest Paid Item Girl ) ಅನೇಕ ನಟಿಯರು ಚಿತ್ರಗಳಲ್ಲಿ ಐಟಂ ಹಾಡುಗಳನ್ನು ಮಾಡಿದ್ದಾರೆ. 4ರಿಂದ 5 ನಿಮಿಷದ ಹಾಡಿಗೆ ಹೆಜ್ಜೆ ಹಾಕುವುದಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆದ ಅನೇಕ ಹೀರೋಯಿನ್​ಗಳು ಇದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಐಟಂ ಸಾಂಗ್‌ಗಳು ಸಿನಿಮಾದಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತಿವೆ. ಈ ಹಿಂದೆ ಕೆಲವೇ ಕೆಲವು ನಟಿಯರು ಮಾತ್ರ ಅದರಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಟಾಪ್ ನಟಿಯರೂ ಈ ರೀತಿಯ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಐಟಂ ಸಾಂಗ್‌ಗಳನ್ನು ಮಾಡಲು ಹೀರೋಗಿಂತ ಹೆಚ್ಚಿನ ಸಂಭಾವನೆ ಪಡೆದ ಉದಾಹರಣೆ ಸಾಕಷ್ಟಿದೆ.

ಐಟಂ ಸಾಂಗ್‌ಗೆ ಹೆಜ್ಜೆ ಹಾಕುವವರ ಸಂಭಾವನೆ ಗಗನಕ್ಕೇರಿದೆ. ಈ ಒಬ್ಬ ‘ಐಟಂ ಗರ್ಲ್’ ಈಗ ಅನೇಕ ನಾಯಕ ನಟಿಯರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಪುಷ್ಪಾ ದಿ ರೈಸ್‌ ಸಿನಿಮಾದ ಊ ಅಂಟವಾ ಹಾಡಿಗೆ ಚಿತ್ರದಲ್ಲಿ ಐದು ನಿಮಿಷಗಳ ಕಾಲ ಕಾಣಿಸಿಕೊಂಡಿದ್ದಕ್ಕಾಗಿ ದಕ್ಷಿಣದ ಸೂಪರ್‌ಸ್ಟಾರ್ ಸಮಂತಾ ರುತ್ ಪ್ರಭು 5 ಕೋಟಿ ರೂ. ಸಂಭಾವನೆ ಪಡೆದುಕೊಂಡರು. ಭಾರತೀಯ ಚಿತ್ರರಂಗದ ಯಾವ ನಟಿಯರೂ ಈ ರೀತಿ ಹಣ ಗಳಿಕೆ ಮಾಡಿಲ್ಲ. ಐಟಂ ಸಾಂಗ್‌ಗಳಿಗಾಗಿ ಹೆಚ್ಚು ಸಂಭಾವನೆ ಪಡೆಯುವ ಇತರ ನಟಿಯರೆಂದರೆ ನೋರಾ ಫತೇಹಿ ಮತ್ತು ಸನ್ನಿ ಲಿಯೋನ್. ಇಬ್ಬರೂ ಪ್ರತಿ ಹಾಡಿಗೆ 2 ಕೋಟಿ ರೂ ಪಡೆದುಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ ಐಟಂ ಸಾಂಗ್‌ಗಳ ರಾಣಿ ಮಲೈಕಾ ಅರೋರಾ ಇಂದು 50 ಲಕ್ಷದಿಂದ 1 ಕೋಟಿ ರೂ. ಚಾರ್ಚ್‌ ಮಾಡುತ್ತಾರೆ.

ವಿಚಿತ್ರವೆಂದರೆ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರು ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಕಡಿಮೆ ಸಂಭಾವನೆ ಪಡೆದುಕೊಂಡಿದ್ದಾರೆ. ಪುಷ್ಪಾ ದಿ ರೈಸ್ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರಕ್ಕಾಗಿ ರಶ್ಮಿಕಾ ಕೇವಲ 2 ಕೋಟಿ ರೂ. ಸಂಭಾವನೆ ಪಡೆದರೆ, ಜಾನ್ವಿ ಕಪೂರ್, ತಮನ್ನಾ ಭಾಟಿಯಾ ಮತ್ತು ಪೂಜಾ ಹೆಗ್ಡೆಯಂತಹ ಇತರ ಜನಪ್ರಿಯ ನಟಿಯರೆಲ್ಲರೂ ಪ್ರತಿ ಚಿತ್ರಕ್ಕೆ 5 ಕೋಟಿ ರೂ.ಗಿಂತ ಕಡಿಮೆ ಸಂಭಾವನೆ ಪಡೆಯುತ್ತಾರೆ ಕೇವಲ ಒಂದು ಹಾಡಿಗೆ ಸಮಂತಾ ಗಳಿಸಿದ ಗಳಿಸಿದ್ದು ಬರೋಬ್ಬರಿ 5 ಕೋಟಿ ರೂ.

ಇದನ್ನೂ ಓದಿ: Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್‌!

ಕರೀನಾ ಕಪೂರ್ ಐಟಂ ಡ್ಯಾನ್ಸ್​ಗೆ 1.5 ಕೋಟಿ ರೂಪಾಯಿ ಪಡೆಯುತ್ತಾರೆ. ತಮನ್ನಾ ಭಾಟಿಯಾ ಒಂದು ಹಾಡಿಗೆ ರೂ. 1 ಕೋಟಿ ರೂ., ಕತ್ರಿನಾ ಕೈಫ್ ವಿಶೇಷ ಸಾಂಗ್​ನಲ್ಲಿ ಕಾಣಿಸಿಕೊಳ್ಳಲು 2 ಕೋಟಿ ರೂಪಾಯಿ ಪಡೆಯುತ್ತಾರೆ. ಸಮಂತಾ ಆರಂಭದಲ್ಲಿ ಐಟಂ ಸಾಂಗ್‌ ಮಾಡಲು ಹಿಂಜರಿದಿದ್ದರು. ನಂತರ ಒಪ್ಪಿ ಖುಷಿಯಿಂದ ಡ್ಯಾನ್ಸ್ ಮಾಡಿದರು ಎಂದು ವರದಿಯಾಗಿದೆ.

Continue Reading

ಸಿನಿಮಾ

Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!

ಬಾಲಿವುಡ್ ನ ಆದರ್ಶ ಜೋಡಿಯಲ್ಲಿ ಶಾರುಖ್ ಮತ್ತು ಗೌರಿ ಅವರೂ ಸೇರಿದ್ದಾರೆ. ಈ ಜೋಡಿ ಮದುವೆಯಾಗಿ 33 ವರ್ಷಗಳಾಗಿದ್ದು ಮೂವರು ಮಕ್ಕಳ ಪೋಷಕರಾಗಿದ್ದರೆ. ಧರ್ಮದ ವಿಚಾರದಲ್ಲಿ ಗೌರಿ (Gauri Khan) ಈಗಲೂ ಹಿಂದುವಾಗಿಯೇ ಉಳಿದಿದ್ದಾರೆ. ಇದಕ್ಕೆ ಕಾರಣ ಏನೆಂಬುದನ್ನು ಅವರೇ ಹೇಳಿದ್ದಾರೆ.

VISTARANEWS.COM


on

By

Gauri Khan
Koo

ಬಾಲಿವುಡ್ ನ (bollywood) ಆದರ್ಶ ದಂಪತಿಗಳ ಸಾಲಿನಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ (Shah Rukh Khan), ಗೌರಿ ಖಾನ್ (Gauri Khan) ದಂಪತಿಯೂ ಇದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರಿಬ್ಬರ ನಡುವಿನ ಪ್ರೀತಿ ಮತ್ತು ಹೊಂದಾಣಿಕೆ. ಇದು ಅವರ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಂತೆ ಮಾಡಿದೆ.

ಅಭಿಮಾನಿಗಳನ್ನು ಪ್ರೀತಿ, ವಾತ್ಸಲ್ಯದಿಂದ ಕಾಣುವ ಈ ದಂಪತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಾನು ನಿಮ್ಮೊಂದಿಗೆ ಬೆಳೆಯಲು ಬಯಸುತ್ತೇನೆ ಎಂದು ಹೇಳಿ ಮತ್ತೆ ಎಲ್ಲರ ಮನ ಗೆದ್ದಿದ್ದಾರೆ.

ಗೌರಿ ಮತ್ತು ಶಾರುಖ್ ಖಾನ್ ಅವರ ಧರ್ಮ ಬೇರೆಬೇರೆಯಾದರೂ ಇದು ಅವರಿಬ್ಬರ ನಡುವಿನ ಪ್ರೀತಿಗೆ ಅಡ್ಡಿಯಾಗಲಿಲ್ಲ. ಮದುವೆಯ ಮೊದಲು ಕೆಲವು ತೊಂದರೆಗಳು ಎದುರಾದರೂ ಮದುವೆಯ ಬಳಿಕ ದಂಪತಿ ಎಂದರೆ ಹೀಗಿರಬೇಕು ಎನ್ನುವಷ್ಟು ಇವರಿಬ್ಬರೂ ಮಾದರಿಯಾಗಿದ್ದಾರೆ.

ಕಿಂಗ್ ಖಾನ್ ಮೊದಲಿನಿಂದಲೂ ತನ್ನ ರಾಣಿಗೆ ಆದರ್ಶ ಪತಿ. ಶಾರುಖ್ ಖಾನ್ ಮುಸ್ಲಿಂ ಆಗಿರುವುದರಿಂದ ಮದುವೆಯಾದ ಬಳಿಕ ಗೌರಿ ಮುಸ್ಲಿಂ ಆಗಿ ಮತಾಂತರವಾಗುತ್ತಾರೆ ಎನ್ನುವ ಹೇಳಿಕೆಗಳು ಜೋರಾಗಿ ಕೇಳಿ ಬಂದಿತ್ತು. ಹೀಗಾಗಿ ಅವರಿಗೂ ಪದೇಪದೇ ತಾವು ಮುಸ್ಲಿಂ ಆಗಿ ಮತಾಂತರಗೊಳ್ಳುವುದಿಲ್ಲ ಎಂದು ಹೇಳಬೇಕಾದ ಸಂದರ್ಭಗಳು ಎದುರಾಗಿತ್ತು.

ಇತ್ತೀಚೆಗೆ ಕರಣ್ ಜೋಹರ್ ಅವರ ಕಾರ್ಯಕ್ರಮ ಕಾಫಿ ವಿತ್ ಕರಣ್‌ನಲ್ಲಿಹೃತಿಕ್ ರೋಷನ್ ಅವರ ಪತ್ನಿ ಸುಸ್ಸಾನ್ನೆ ಖಾನ್ ಅವರೊಂದಿಗೆ ಗೌರಿ ಆಗಮಿಸಿದ್ದರು. ಅಲ್ಲಿ ಗೌರಿ ಮುಸ್ಲಿಂ ಆಗಿ ಮತಾಂತರಗೊಳ್ಳದಿರುವ ಕುರಿತು ಚರ್ಚೆ
ನಡೆದಿತ್ತು.

ಯಾಕೆ ಮತಾಂತರವಾಗಲಿಲ್ಲ?

ಶಾರುಖ್ ಖಾನ್ ಅವರ ಧರ್ಮಕ್ಕೆ ನಾನು ಮತಾಂತರವಾಗುವುದಿಲ್ಲ ಎಂದು ಗೌರಿ ಖಾನ್ ಹೇಳಿರುವ ಹಳೆಯ ವಿಡಿಯೋ ಈಗ ಮತ್ತೆ ಸದ್ದು ಮಾಡಿದೆ. ಇದರಲ್ಲಿ ಅವರು ತಾವು ಇಸ್ಲಾಂ ಧರ್ಮಕ್ಕೆ ಮತಾಂತರವಾಗದೇ ಉಳಿಯಲು ಕಾರಣವನ್ನೂ ಕೊಟ್ಟಿದ್ದಾರೆ.

ನಮ್ಮಿಬ್ಬರ ಮಧ್ಯೆ ಸಮತೋಲನವಿದೆ. ನಾನು ಶಾರುಖ್ ಅವರ ಧರ್ಮವನ್ನು ಗೌರವಿಸುತ್ತೇನೆ. ಮತ್ತು ಅವರೂ ನನ್ನ ಧರ್ಮವನ್ನು ಗೌರವಿಸುತ್ತಾರೆ. ಹೀಗಾಗಿ ನಾನು ಮತಾಂತರಗೊಂಡು ಮುಸ್ಲಿಂ ಆಗಬೇಕು ಈ ಎನ್ನುವುದರಲ್ಲಿ ಅರ್ಥವಿಲ್ಲ. ಪರಸ್ಪರ ಜೊತೆಯಾಗಿ ಬಾಳಲು ಅದು ಅನಿವಾರ್ಯ ಎಂಬುದನ್ನು ನಾನು ನಂಬುವುದಿಲ್ಲ. ಪ್ರತಿಯೊಬ್ಬರೂ ವೈಯಕ್ತಿಕ ಮತ್ತು ಅವರ ಧರ್ಮವನ್ನು ಅನುಸರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?


ಶಾರುಖ್‌ನಂತೆ ನನ್ನ ಧರ್ಮವನ್ನು ಯಾವತ್ತೂ ಅಗೌರವಗೊಳಿಸುವುದಿಲ್ಲ. ಮಗ ಆರ್ಯನ್ ತನ್ನ ತಂದೆಯ ಧರ್ಮವನ್ನು ಅನುಸರಿಸುತ್ತಾನೆ. ಆರ್ಯನ್ ಗೆ ಶಾರುಖ್‌ ಎಂದರೆ ತುಂಬಾ ಇಷ್ಟ.ಹೀಗಾಗಿ ಆತ ಅವರ ಧರ್ಮವನ್ನು ಅನುಸರಿಸುತ್ತಾನೆ ಎಂದು ನಾನು ಭಾವಿಸುತ್ತೇನೆ. ನಾನು ಮುಸ್ಲಿಂ ಎಂದು ಅವರಿಬ್ಬರು ಯಾವಾಗಲೂ ಹೇಳುತ್ತಿರುತ್ತಾರೆ. ಅದನ್ನು ನಾನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ ಗೌರಿ ಖಾನ್.

ಶಾರುಖ್ ಖಾನ್ ಹಾಗೂ ಗೌರಿ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 33 ವರ್ಷಗಳಾಗಿವೆ. ಬಾಲಿವುಡ್‌ನ ಈ ಸುವರ್ಣ ದಂಪತಿಗೆ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ಎಂಬ ಮೂರು ಮಕ್ಕಳಿದ್ದಾರೆ.

Continue Reading

ಕ್ರಿಕೆಟ್

Andre Russell Dance: ಬಾಲಿವುಡ್ ನಟಿ ಅನನ್ಯಾ ಪಾಂಡೆ ಜತೆ ‘ಲುಟ್ ಪಟ್ ಗಯಾ’ ಹಾಡಿಗೆ ಡ್ಯಾನ್ಸ್​ ಮಾಡಿದ ಆ್ಯಂಡ್ರೆ ರಸೆಲ್​

Andre Russell Dance: ಇತ್ತೀಚಿಗೆ ರಸೆಲ್ ತನ್ನ ಕಾರಿನಲ್ಲಿ ಪ್ರಯಾಣಿಸುವಾಗ ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಶಾರುಖ್​ ಖಾನ್​ ನಟನೆಯ(Shah Rukh Khan) ಡಂಕಿ ಚಲನಚಿತ್ರದ ಅಪ್ರತಿಮ ಹಾಡು “ಲುಟ್ ಪುಟ್ ಗಯಾ” ಹಾಡನ್ನು ಹಾಡಿದ್ದರು. ಈ ವೇಳೆ ರಿಂಕು ಸಿಂಗ್​ ಕೂಡ ರಸೆಲ್​ಗೆ ಸಾಥ್​ ನೀಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು.

VISTARANEWS.COM


on

Andre Russell Dance:
Koo

ಮುಂಬಯಿ: ಭಾನುವಾರ(ಮೇ 26) ನಡೆದಿದ್ದ ಐಪಿಎಲ್​ ಫೈನಲ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿ ಮೂರನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿತು. ಈ ಗೆಲುವಿನ ಬಳಿಕ ಕೆಕೆಆರ್​ ತಂಡ ಪಬ್​ನಲ್ಲಿ ಪಾರ್ಟಿ ಮಾಡಿತ್ತು. ಇದೇ ವೇಳೆ ಆ್ಯಂಡ್ರೆ ರಸೆಲ್(Andre Russell Dance)​ ಅವರು ಬಾಲಿವುಡ್ ನಟಿ ಅನನ್ಯಾ ಪಾಂಡೆ(Ananya Pandey) ಜತೆ ಶಾರೂಖ್ ಖಾನ್ ಅಭಿನಯದ ಡಂಕಿ ಚಿತ್ರದ​ ‘ಲುಟ್ ಪಟ್ ಗಯಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಇತ್ತೀಚಿಗೆ ರಸೆಲ್ ತನ್ನ ಕಾರಿನಲ್ಲಿ ಪ್ರಯಾಣಿಸುವಾಗ ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಶಾರುಖ್​ ಖಾನ್​ ನಟನೆಯ(Shah Rukh Khan) ಡಂಕಿ ಚಲನಚಿತ್ರದ ಅಪ್ರತಿಮ ಹಾಡು “ಲುಟ್ ಪುಟ್ ಗಯಾ” ಹಾಡನ್ನು ಹಾಡಿದ್ದರು. ಈ ವೇಳೆ ರಿಂಕು ಸಿಂಗ್​ ಕೂಡ ರಸೆಲ್​ಗೆ ಸಾಥ್​ ನೀಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು.

ವೆಸ್ಟ್​ ಇಂಡೀಸ್​ ತಂಡ ಸ್ಫೋಟಕ ಬ್ಯಾಟರ್​ ರಸೆಲ್(Andre Russell) ಬಾಲಿವುಡ್​ ನಟಿ ಅವಿಕಾ ಗೋರ್(Avika Gor) ಜತೆ ಲುಂಗಿಯಲ್ಲಿ ಮಸ್ತ್​ ಸ್ಟೆಪ್ಸ್ ಹಾಕಿದ ವಿಡಿಯೊ ಕೂಡ ಕೆಲವು ದಿನಗಳ ಹಿಂದೆ ವೈರಲ್​ ಆಗಿತ್ತು. ​’ಲಡ್ಕಿ ತು ಕಮಲ್ ಕಿ’ ಎನ್ನುವ ಹಾಡಿಗೆ ರೆಸೆಲ್ ಅವಿಕಾ ಸೇರಿ ಹೆಜ್ಜೆ ಹಾಕಿರುವ ಈ ಹಾಡು ಯೂಟ್ಯೂಬ್​ನಲ್ಲಿ ಮೇ 9 ರಂದು ಬಿಡುಗಡೆಯಾಗಿತ್ತು.

ಈ ಹಾಡಿನಲ್ಲಿ ರಸೆಲ್​ ಕೇಸರಿ ಬಣ್ಣದ ಲುಂಗಿ ತೊಟ್ಟು, ಕಪ್ಪು ಬಣ್ಣದ ಬನಿಯನ್ ಹಾಗೂ ಸ್ಟೈಲಿಶ್ ಶರ್ಟ್​ ಧರಿಸಿ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ. ಅವಿಕಾ ಗೋರ್ ನೀಲಿ ಸೀರೆಯಲ್ಲಿ ಮಿಂಚುವ ಜತೆಗೆ ಬೋಲ್ಡ್​ ಆಗಿ ಸೊಂಟ ಬಳುಕಿಸಿದ್ದಾರೆ. ಅವಿಕಾ ಗೋರ್ ಭಾರತೀಯ ನಟಿಯಾಗಿದ್ದು, ಅವರು ಮುಖ್ಯವಾಗಿ ಹಿಂದಿ ಮತ್ತು ತೆಲುಗು ಚಲನಚಿತ್ರಗಳು ಮತ್ತು ಕಿರುತೆರೆಯಲ್ಲಿ ನಟಿಸುತ್ತಾರೆ.

ಇದನ್ನೂ ಓದಿ IPL 2024 : ಇದು ಕಾಕತಾಳಿಯವೇ? ಐಪಿಎಲ್ ಮತ್ತು ಡಬ್ಲ್ಯುಪಿಎಲ್​ ಫೈನಲ್ ರಿಸಲ್ಟ್​​ನಲ್ಲಿದೆ ಸಾಮ್ಯತೆ

ಮೂರನೇ ಟ್ರೋಫಿ ಗೆದ್ದ ಕೆಕೆಆರ್​


ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಅತ್ಯಂತ ನೀರಸ ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಹೈದರಾಬಾದ್​ ತಂಡ 18.3 ಓವರ್​ಗಳಲ್ಲಿ 113 ರನ್​ಗೆ ಸರ್ವಪತನ ಕಂಡಿತು. ಈ ಅಲ್ಪ ಮೊತ್ತವನ್ನು ಚೇಸಿಂಗ್​ ನಡೆಸಿದ ಕೆಕೆಆರ್​ ಕೇವಲ 10.3 ಓವರ್​ನಲ್ಲಿ 2 ವಿಕೆಟ್​ ನಷ್ಟಕ್ಕೆ 114 ರನ್​ ಬಾರಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿತು. ಇದು ಕೆಕೆಆರ್​ಗೆ ಒಲಿದ ಮೂರನೇ ಐಪಿಎಲ್​ ಟ್ರೋಫಿ.

Continue Reading
Advertisement
Modi Meditation
ದೇಶ6 mins ago

Modi Meditation: ಮೋದಿ ಧ್ಯಾನ ಮಾಡುವುದೂ ನೀತಿ ಸಂಹಿತೆ ಉಲ್ಲಂಘನೆ ಎಂದ ಕಾಂಗ್ರೆಸ್;‌ ಆಯೋಗಕ್ಕೆ ದೂರು!

T20 World Cup 2024
ಕ್ರೀಡೆ9 mins ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಎಷ್ಟು ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ?

Self Harming
ಕರ್ನಾಟಕ50 mins ago

Self Harming: ಶಾಲೆಗೆ ಹೋಗಲು ಬೇಸತ್ತು 11 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

Rudram II
ದೇಶ1 hour ago

Rudram II: ಆಗಸದಿಂದಲೇ ವೈರಿಗಳನ್ನು ನಾಶಪಡಿಸುವ ರುದ್ರಂ II ಕ್ಷಿಪಣಿ ಪ್ರಯೋಗ ಯಶಸ್ವಿ; ಶತ್ರುಗಳಿಗೆ ನಡುಕ!

Chahal-Dhanashree
ಕ್ರೀಡೆ2 hours ago

Chahal-Dhanashree: ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದ್ದಾರಾ ಚಹಲ್?; ಕುತೂಹಲ ಮೂಡಿಸಿದ ಪತ್ನಿಯ ಪೋಸ್ಟ್!

Timing change of 5 trains arriving at Sri Siddharooda Swamiji Railway Station Hubballi
ಹುಬ್ಬಳ್ಳಿ2 hours ago

Hubballi Train: ಪ್ರಯಾಣಿಕರೇ ಗಮನಿಸಿ; ಹುಬ್ಬಳ್ಳಿಗೆ ಆಗಮಿಸುವ 5 ರೈಲುಗಳ ಸಮಯ ಬದಲಾಗಿದೆ

Valmiki corporation Scam
ಕರ್ನಾಟಕ2 hours ago

Valmiki Corporation Scam: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ; ಎಂಡಿ, ಲೆಕ್ಕಾಧಿಕಾರಿ ಅಮಾನತು

PM Kisan Samman
ಕೃಷಿ2 hours ago

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

Nita Ambani
ವಾಣಿಜ್ಯ2 hours ago

Nita Ambani: ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ ರೂಪಾಯಿ!

Team India Coach
ಕ್ರೀಡೆ2 hours ago

Team India Coach: ಅಭಿಮಾನಿಗಳು ಬಯಸಿದರೂ ಕೋಚ್​ ಹುದ್ದೆಗೆ ಧೋನಿ ಅನರ್ಹ; ಕಾರಣವೇನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌