ಬೆಂಗಳೂರು: ರಶ್ಮಿಕಾ ಮಂದಣ್ಣ (Rashmika Mandanna) ನವೆಂಬರ್ 30ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಬಿಳಿಯ ಬಣ್ಣದ ಸ್ವೆಟ್‌ಶರ್ಟ್ ಧರಿಸಿದ್ದರು. ಅದೇ ದಿನ ವಿಜಯ್ ದೇವರಕೊಂಡ ತೆಲಂಗಾಣದಲ್ಲಿ ನಡೆದಿರುವ ಚುನಾವಣೆಯಲ್ಲಿ ಅದೇ ರೀತಿಯ ಸ್ವೆಟ್‌ಶರ್ಟ್ ಧರಿಸಿದ್ದರು. ಇಬ್ಬರೂ ಒಂದೇ ರೀತಿ ಮತ್ತೆ ಸೇಮ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ವದಂತಿಗಳು ವ್ಯಾಪಕವಾಗಿ ಹರದಾಡುತ್ತಿವೆ.
ವಿಜಯ್ ಒಡೆತನದ ರೌಡಿ ಬ್ರ್ಯಾಂಡ್ ಸ್ವೆಟ್‌ಶರ್ಟ್ ಇದಾಗಿತ್ತು. ರಶ್ಮಿಕಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ, ವಿಜಯ್ ಅವರು ಸ್ವೆಟ್‌ಶರ್ಟ್ ಧರಿಸಿ ಹೈದರಾಬಾದ್‌ನ ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದರು. ಒಂದೇ ದಿನ ಮುಂಬೈ ಮತ್ತು ಹೈದರಾಬಾದ್‌ನಲ್ಲಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸ್ವೆಟ್‌ಶರ್ಟ್‌ಗಳ ಕಾರಣದಿಂದ ಟ್ವಿನ್ನಿಂಗ್ ಮಾಡಿದ್ದಾರೆ. ಈ ಜೋಡಿಯ ಹಲವು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಬಟ್ಟೆ ಬ್ರ್ಯಾಂಡ್ ರಿಲೀಸ್ ಆಗುವ ಮುನ್ನವೇ ಇಬ್ಬರು ಅದರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಅವರೊಂದಿಗೆ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು ರಶ್ಮಿಕಾ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಈ ರೀತಿಯಲ್ಲಿ ಒಟ್ಟಾಗಿ ಸಮಯ ಕಳೆದಿದ್ದು ಇದೇ ಮೊದಲೇನು ಅಲ್ಲ. ಈ ಮೊದಲು ಅನೇಕ ಬಾರಿ ಇಬ್ಬರೂ ಒಟ್ಟಾಗಿ ಪ್ರವಾಸ ತೆರಳಿದ್ದರು. ಆದರೆ, ಇದು ಗೊತ್ತಾಗದ ರೀತಿಯಲ್ಲಿ ನಡೆದುಕೊಂಡಿದ್ದರು. ಕೆಲವು ತಿಂಗಳ ಹಿಂದೆ, ರಶ್ಮಿಕಾ ಮತ್ತು ವಿಜಯ್ ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಅವರ ಅಪಾರ್ಟ್‌ಮೆಂಟ್‌ನ ಟೆರೇಸ್‌ನಲ್ಲಿ ಪೋಸ್ ಕೊಟ್ಟಿದ್ದರು.ಇಬ್ಬರೂ ಈ ಹಿಂದೆ ಟರ್ಕಿಯಲ್ಲಿ ಕಾಲ ಕಳೆದಿರುವ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: Rashmika Mandanna: ನಾನಿ ಸಿನಿಮಾ ಈವೆಂಟ್‌ನಲ್ಲಿ ವಿಜಯ್-ರಶ್ಮಿಕಾ ಮಾಲ್ಡೀವ್ಸ್ ಫೋಟೊ; ತಬ್ಬಿಬ್ಬಾದ ಮೃಣಾಲ್!
Rashmika rowdy wear edi release ayina vestundi kada🥲….kothaga em jarigindi👀 https://t.co/fJCvQ42HNI
— CHAITRA (@Chaitra87159356) November 30, 2023
ಟರ್ಕಿಯಲ್ಲಿ ವಕೇಶನ್ ಮೂಡ್‌ನಲ್ಲಿರುವ ಫೋಟೊ ಹಾಗೂ ವಿಡಿಯೊ ಹಂಚಿಕೊಂಡಿದ್ದರು. ಸುತ್ತಾಟವನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದರು. ಅವರು ಕ್ಲಿಕ್ಕಿಸಿಕೊಂಡ ಫೋಟೊ ಬ್ಯಾಕ್ಗ್ರೌಂಡ್ ವಿಜಯ್ ದೇವರಕೊಂಡ ಟರ್ಕಿಯಿಂದ ಪೋಸ್ಟ್ ಮಾಡಿದ್ದ ಫೋಟೊ ಸೇಮ್ ಇತ್ತು. ವಿಜಯ್ ದೇವರಕೊಂಡ ಅವರ ಇತ್ತೀಚಿನ ಖುಷಿ ಚಿತ್ರೀಕರಣವನ್ನು ಟರ್ಕಿಯಲ್ಲಿ ಮಾಡಿದ್ದರು. ಈ ವೇಳೆ ರಶ್ಮಿಕಾ ಅವರು ವಿಜಯ್ ಜತೆ ಟರ್ಕಿಗೆ ಹೋಗಿದ್ದರು ಎನ್ನಲಾಗಿತ್ತು..