Rashmika Mandanna: ರಶ್ಮಿಕಾ- ವಿಜಯ್‌ ಟ್ವಿನ್ನಿಂಗ್‌; ತೆಲಂಗಾಣ ಎಲೆಕ್ಷನ್‌ನಲ್ಲಿ ಸಿಕ್ಕಿಬಿದ್ದ ನಟ! - Vistara News

South Cinema

Rashmika Mandanna: ರಶ್ಮಿಕಾ- ವಿಜಯ್‌ ಟ್ವಿನ್ನಿಂಗ್‌; ತೆಲಂಗಾಣ ಎಲೆಕ್ಷನ್‌ನಲ್ಲಿ ಸಿಕ್ಕಿಬಿದ್ದ ನಟ!

Rashmika Mandanna: ವಿಜಯ್ ಒಡೆತನದ ರೌಡಿ ಬ್ರ್ಯಾಂಡ್‌ ಸ್ವೆಟ್‌ಶರ್ಟ್ ಇದಾಗಿತ್ತು. ರಶ್ಮಿಕಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ, ವಿಜಯ್ ಅವರು ಸ್ವೆಟ್‌ಶರ್ಟ್ ಧರಿಸಿ ಹೈದರಾಬಾದ್‌ನ ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದರು.

VISTARANEWS.COM


on

Rashmika in Mumbai Vijay in Hyderabad twin in matching sweatshirts
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಶ್ಮಿಕಾ ಮಂದಣ್ಣ (Rashmika Mandanna) ನವೆಂಬರ್ 30ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಬಿಳಿಯ ಬಣ್ಣದ ಸ್ವೆಟ್‌ಶರ್ಟ್ ಧರಿಸಿದ್ದರು. ಅದೇ ದಿನ ವಿಜಯ್ ದೇವರಕೊಂಡ ತೆಲಂಗಾಣದಲ್ಲಿ ನಡೆದಿರುವ ಚುನಾವಣೆಯಲ್ಲಿ ಅದೇ ರೀತಿಯ ಸ್ವೆಟ್‌ಶರ್ಟ್ ಧರಿಸಿದ್ದರು. ಇಬ್ಬರೂ ಒಂದೇ ರೀತಿ ಮತ್ತೆ ಸೇಮ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ವದಂತಿಗಳು ವ್ಯಾಪಕವಾಗಿ ಹರದಾಡುತ್ತಿವೆ.

ವಿಜಯ್ ಒಡೆತನದ ರೌಡಿ ಬ್ರ್ಯಾಂಡ್‌ ಸ್ವೆಟ್‌ಶರ್ಟ್ ಇದಾಗಿತ್ತು. ರಶ್ಮಿಕಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ, ವಿಜಯ್ ಅವರು ಸ್ವೆಟ್‌ಶರ್ಟ್ ಧರಿಸಿ ಹೈದರಾಬಾದ್‌ನ ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದರು. ಒಂದೇ ದಿನ ಮುಂಬೈ ಮತ್ತು ಹೈದರಾಬಾದ್‌ನಲ್ಲಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸ್ವೆಟ್‌ಶರ್ಟ್‌ಗಳ ಕಾರಣದಿಂದ ಟ್ವಿನ್ನಿಂಗ್ ಮಾಡಿದ್ದಾರೆ. ಈ ಜೋಡಿಯ ಹಲವು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಬಟ್ಟೆ ಬ್ರ್ಯಾಂಡ್‌ ರಿಲೀಸ್ ಆಗುವ ಮುನ್ನವೇ ಇಬ್ಬರು ಅದರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಅವರೊಂದಿಗೆ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು ರಶ್ಮಿಕಾ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಈ ರೀತಿಯಲ್ಲಿ ಒಟ್ಟಾಗಿ ಸಮಯ ಕಳೆದಿದ್ದು ಇದೇ ಮೊದಲೇನು ಅಲ್ಲ. ಈ ಮೊದಲು ಅನೇಕ ಬಾರಿ ಇಬ್ಬರೂ ಒಟ್ಟಾಗಿ ಪ್ರವಾಸ ತೆರಳಿದ್ದರು. ಆದರೆ, ಇದು ಗೊತ್ತಾಗದ ರೀತಿಯಲ್ಲಿ ನಡೆದುಕೊಂಡಿದ್ದರು. ಕೆಲವು ತಿಂಗಳ ಹಿಂದೆ, ರಶ್ಮಿಕಾ ಮತ್ತು ವಿಜಯ್ ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಅವರ ಅಪಾರ್ಟ್‌ಮೆಂಟ್‌ನ ಟೆರೇಸ್‌ನಲ್ಲಿ ಪೋಸ್‌ ಕೊಟ್ಟಿದ್ದರು.ಇಬ್ಬರೂ ಈ ಹಿಂದೆ ಟರ್ಕಿಯಲ್ಲಿ ಕಾಲ ಕಳೆದಿರುವ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ: Rashmika Mandanna: ನಾನಿ ಸಿನಿಮಾ ಈವೆಂಟ್‌ನಲ್ಲಿ ವಿಜಯ್-ರಶ್ಮಿಕಾ ಮಾಲ್ಡೀವ್ಸ್ ಫೋಟೊ; ತಬ್ಬಿಬ್ಬಾದ ಮೃಣಾಲ್‌!

ಟರ್ಕಿಯಲ್ಲಿ ವಕೇಶನ್‌ ಮೂಡ್‌ನಲ್ಲಿರುವ ಫೋಟೊ ಹಾಗೂ ವಿಡಿಯೊ ಹಂಚಿಕೊಂಡಿದ್ದರು. ಸುತ್ತಾಟವನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದರು. ಅವರು ಕ್ಲಿಕ್ಕಿಸಿಕೊಂಡ ಫೋಟೊ ಬ್ಯಾಕ್​ಗ್ರೌಂಡ್ ವಿಜಯ್ ದೇವರಕೊಂಡ ಟರ್ಕಿಯಿಂದ ಪೋಸ್ಟ್ ಮಾಡಿದ್ದ ಫೋಟೊ ಸೇಮ್‌ ಇತ್ತು. ವಿಜಯ್ ದೇವರಕೊಂಡ ಅವರ ಇತ್ತೀಚಿನ ಖುಷಿ ಚಿತ್ರೀಕರಣವನ್ನು ಟರ್ಕಿಯಲ್ಲಿ ಮಾಡಿದ್ದರು. ಈ ವೇಳೆ ರಶ್ಮಿಕಾ ಅವರು ವಿಜಯ್‌ ಜತೆ ಟರ್ಕಿಗೆ ಹೋಗಿದ್ದರು ಎನ್ನಲಾಗಿತ್ತು..

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Kannada New Movie: `ಸಂಭವಾಮಿ ಯುಗೇಯುಗೇ’ ಚಿತ್ರದ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆ

ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಕ್ತಾಯವಾಗಿದೆ. ಚನ್ನಪಟ್ಟಣದ ಸುತ್ತಮುತ್ತ ಹೆಚ್ಚಿನ ಚಿತ್ರೀಕರಣ ನಡೆದಿದೆ. ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿರುವ ಚಿತ್ರತಂಡ ಮೊದಲಹೆಜ್ಜೆಯಾಗಿ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಪ್ರಾಂಕ್ರಿನ್ ರಾಖಿ ಅವರ ಹಿನ್ನೆಲೆ ಸಂಗೀತ, ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ರವೀಶ್ ಆತ್ಮಾರಾಮ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಗೀತಾ ಮಾಸ್ಟರ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ದಿನೇಶ್ ರಾಜನ್.

VISTARANEWS.COM


on

Kannada New Movie Sambavami Yuge Yuge 4K Motion Poster
Koo

ಬೆಂಗಳೂರು: ಶ್ರೀಕೃಷ್ಣ ಭಗವದ್ಗೀತೆಯಲ್ಲಿ “ಸಂಭವಾಮಿ ಯುಗೇಯುಗೇ” (Kannada New Movie) ಎಂಬ ಮಾತನ್ನು ಹೇಳಿದ್ದಾನೆ. ಅಧರ್ಮ ಹೆಚ್ಚಾದಾಗ ನಾನು ಪುನಃ ಪುನಃ ಬರುತ್ತಿರುತ್ತೇನೆ ಎಂದು ಈ ಮಾತಿನ ಅರ್ಥ. ಕೃಷ್ಣ ಹೇಳಿದ ಈ ಮಾತೇ ಈಗ ಚಿತ್ರದ ಶೀರ್ಷಿಕೆಯಾಗಿದೆ.

ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸುತ್ತಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ ಜಯ್ ಶೆಟ್ಟಿ ನಾಯಕನಾಗಿ ನಟಿಸಿರುವ “ಸಂಭಾವಮಿ ಯುಗೇಯುಗೇ” ಚಿತ್ರದ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮೋಷನ್ ಪೋಸ್ಟರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ‌. ಭಗವದ್ಗೀತೆಯ ಈ ವಾಕ್ಯವನೇ ಆದರ್ಶವಾಗಿಟ್ಟುಕೊಂಡು ನಿರ್ದೇಶಕರು ಕಥೆ ಬರೆದಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಚೇತನ್ ಚಂದ್ರಶೇಖರ್ ಶೆಟ್ಟಿ ಅವರದೆ.

ಪಕ್ಕಾ ಕಮರ್ಷಿಯಲ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಸೇರಿದಂತೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಇದೆ ಎನ್ನುತ್ತಾರೆ ನಿರ್ದೇಶಕರು.

ಇದನ್ನೂ ಓದಿ: Kannada New Movie: `ಅನರ್ಥ’ ಸಿನಿಮಾ ಟೀಸರ್‌ ಔಟ್‌!

ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಕ್ತಾಯವಾಗಿದೆ. ಚನ್ನಪಟ್ಟಣದ ಸುತ್ತಮುತ್ತ ಹೆಚ್ಚಿನ ಚಿತ್ರೀಕರಣ ನಡೆದಿದೆ. ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿರುವ ಚಿತ್ರತಂಡ ಮೊದಲಹೆಜ್ಜೆಯಾಗಿ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ.

“ಸಂಭಾವಮಿ ಯುಗೇಯಗೇ” ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಪುರಾನ್ ಶೆಟ್ಟಿಗಾರ್ ಸಂಗೀತ ನೀಡಿದ್ದಾರೆ. ಪ್ರಾಂಕ್ರಿನ್ ರಾಖಿ ಅವರ ಹಿನ್ನೆಲೆ ಸಂಗೀತ, ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ರವೀಶ್ ಆತ್ಮಾರಾಮ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಗೀತಾ ಮಾಸ್ಟರ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ದಿನೇಶ್ ರಾಜನ್.

ಜಯ್ ಶೆಟ್ಟಿ ಅವರಿಗೆ ನಾಯಕಿಯಾಗಿ ನಿಶಾ ರಜಪೂತ್ ಅಭಿನಯಿಸಿದ್ದಾರೆ. ಪ್ರಮೋದ್ ಶೆಟ್ಟಿ, ಸುಧಾರಾಣಿ, ಭವ್ಯ, ಅಶೋಕ್ ಕುಮಾರ್, ಮಧುರಗೌಡ ಪ್ರಮುಖಪಾತ್ರದಲ್ಲಿದ್ದಾರೆ. ಅಭಯ್ ಪುನೀತ್, ಬಾಲ ರಾಜವಾಡಿ, ಅಶ್ವಿನ್ ಹಾಸನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

Continue Reading

ಸಿನಿಮಾ

Pavithra Jayaram: ಅಮ್ಮ ಮತ್ತು ಚಂದ್ರಕಾಂತ್‌ ಒಡನಾಟ ಹೇಗಿತ್ತು ಅಂತ ನಮಗೆ ಗೊತ್ತು ಎಂದ ಪವಿತ್ರ ಜಯರಾಮ್ ಮಗ!

Pavithra Jayaram ಚಂದು ಮತ್ತು ಪವಿತ್ರಾ ಮದುವೆ ಆಗಲು ನಿರ್ಧರಿಸಿದ್ದರು ಎಂಬ ಸುದ್ದಿ ಹರಿದಾಡಿದೆ. ಆ ಬಗ್ಗೆ ಇದೇ ಮೊದಲ ಬಾರಿಗೆ ಪವಿತ್ರಾ ಜಯರಾಮ್​ ಅವರ ಪುತ್ರ ಪ್ರಜ್ವಲ್​ ಪ್ರತಿಕ್ರಿಯೆ ನೀಡಿದ್ದಾರೆ. ಅಮ್ಮ ಮತ್ತು ಚಂದು ಅವರು ಎಷ್ಟು ಒಳ್ಳೆಯ ಸ್ನೇಹಿತರು ಎಂಬುದು ನಮಗೆ ಮತ್ತು ಇಂಡಸ್ಟ್ರಿಯವರಿಗೆ ಗೊತ್ತು. ಅವರ ಒಡನಾಟ ಹೇಗಿತ್ತು ಅಂತ ನಾವು ನೋಡಿದ್ದೇವೆ. ಮದುವೆ ಆಗುವ ಪ್ಲ್ಯಾನ್​ ಇತ್ತು ಎಂಬುದನ್ನೆಲ್ಲ ನಾನು ಸಂದರ್ಶನದಲ್ಲಿ ನೋಡಿದೆ. ಆದರೆ ಅಷ್ಟೊಂದು ಮಾತುಕತೆ ಆಗಿರಲಿಲ್ಲ. ಅಷ್ಟೊಂದು ನಮಗೂ ಗೊತ್ತಿರಲಿಲ್ಲ ಎಂದರು.

VISTARANEWS.COM


on

Pavithra Jayaram Trinayani Serial Son Prajwal Reaction
Koo

ಬೆಂಗಳೂರು: ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ (Trinayani Serial) ಜನಪ್ರಿಯರಾಗಿದ್ದ ಕನ್ನಡತಿ ಪವಿತ್ರ ಜಯರಾಮ್ (Pavithra Jayaram)‌ ಅವರು ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ ನಟ ಚಂದ್ರಕಾಂತ್‌ (Chandrakanth) ಆತ್ಮಹತ್ಯೆ ಮಾಡಿಕೊಂಡರು. ಇದಾದ ಬಳಿಕ ಈ ಘಟನೆಯಿಂದ ಖಿನ್ನತೆಗೊಳಗಾಗಿ ಚಂದ್ರಕಾಂತ್‌ ಅವರು ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಾಗಿತ್ತು. ಚಂದು ಮತ್ತು ಪವಿತ್ರಾ ಮದುವೆ ಆಗಲು ನಿರ್ಧರಿಸಿದ್ದರು ಎಂಬ ಸುದ್ದಿ ಹರಿದಾಡಿದೆ. ಆ ಬಗ್ಗೆ ಇದೇ ಮೊದಲ ಬಾರಿಗೆ ಪವಿತ್ರಾ ಜಯರಾಮ್​ ಅವರ ಪುತ್ರ ಪ್ರಜ್ವಲ್​ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜ್ವಲ್‌ ಈ ಬಗ್ಗೆ ಮಾತನಾಡಿ ʻಅಮ್ಮನಿಗೆ ಊರಿನ ಜತೆ ಒಡನಾಟ ತುಂಬ ಚೆನ್ನಾಗಿಯೇ ಇತ್ತು. ಚಿತ್ರರಂಗ ಎಂದರೆ ನಿಮಗೆ ಗೊತ್ತು. ನಾನು ಇಂಡಸ್ಟ್ರಿಗೆ ಬಂದರೂ ನನ್ನ ಜತೆ ಯಾರಾದರೂ ಇದ್ದಾರೆ ಅಂದರೆ ಫಸ್ಟ್‌ ಈ ರೀತಿ ರೂಮರ್ಸ್‌ ಹುಟ್ಟಿಕೊಳ್ಳುತ್ತೆ. ಚಂದ್ರಕಾಂತ್‌ ಕುಟುಂಬ ಕೂಡ ಬೇಸರದಲ್ಲಿದೆ. ಅಮ್ಮ ಮತ್ತು ಚಂದು ಅವರು ಎಷ್ಟು ಒಳ್ಳೆಯ ಸ್ನೇಹಿತರು ಎಂಬುದು ನಮಗೆ ಮತ್ತು ಇಂಡಸ್ಟ್ರಿಯವರಿಗೆ ಗೊತ್ತು. ಅವರ ಒಡನಾಟ ಹೇಗಿತ್ತು ಅಂತ ನಾವು ನೋಡಿದ್ದೇವೆ. ಮದುವೆ ಆಗುವ ಪ್ಲ್ಯಾನ್​ ಇತ್ತು ಎಂಬುದನ್ನೆಲ್ಲ ನಾನು ಸಂದರ್ಶನದಲ್ಲಿ ನೋಡಿದೆ. ಆದರೆ ಅಷ್ಟೊಂದು ಮಾತುಕತೆ ಆಗಿರಲಿಲ್ಲ. ಅಷ್ಟೊಂದು ನಮಗೂ ಗೊತ್ತಿರಲಿಲ್ಲʼʼ ಎಂದರು.

ಇದನ್ನೂ ಓದಿ: Pavithra Jayaram: ನನ್ನ ಗಂಡನಿಗೂ ಪವಿತ್ರಾಗೂ ‘ಸಂಬಂಧ’ ಇದ್ದದ್ದು ನಿಜ ಎಂದ ಚಂದ್ರಕಾಂತ್‌ ಪತ್ನಿ!

ಚಂದ್ರಕಾಂತ್‌ ಪತ್ನಿ ಹೇಳಿದ್ದೇನು?

ಶಿಲ್ಪಾ ಪ್ರೇಮಾ ಈ ಬಗ್ಗೆ ಮಾತನಾಡಿ ʻʻಇಬ್ಬರ ಮಧ್ಯೆ ಸಂಬಂಧ ಇರುವುದು 5 ವರ್ಷ ಮುಂಚೆಯೇ ತಿಳಿದಿತ್ತು. ನನಗೆ ಗೊತ್ತಾದ ಮೇಲೆ ರಾತ್ರಿಯೆಲ್ಲ ಕುಡಿದು ನನಗೆ ಚಂದ್ರಕಾಂತ್‌ ಹೊಡೆಯುತ್ತಿದ್ದರು. ಒಮ್ಮೆ ಪವಿತ್ರಾ ಕೂಡ ನನಗೆ ನೇರವಾಗಿ ಕೆರೆ ಮಾಡಿ ಅವನು ನನ್ನ ಗಂಡ, ಏನು ಮಾಡಿಕೊಳ್ಳುತ್ತೀಯಾ ಮಾಡಿಕೋ ಎಂದು ಹೇಳಿದ್ದಳು. ಈ ವಿಚಾರ ಪವಿತ್ರಾ ಮಕ್ಕಳಿಗೂ ಗೊತ್ತಿತ್ತು. ಅವರ ಲೈಫ್ ಅವರದ್ದು ಅವರ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಲ್ಲ ಎಂದು ಪವಿತ್ರಾ ಮಗ ಹೇಳಿದ್ದ. ಮನೆಗೆ ಬಂದರೂ ಪವಿತ್ರಾ ಫೋಟೊವನ್ನು ಚಂದ್ರಕಾಂತ್‌ ನೋಡುತ್ತಿದ್ದರು. ಇವರೂ ನನಗೆ ಸಹಾಯ ಮಾಡದೇ ಇದ್ದರೂ ನನ್ನ ಮಕ್ಕಳನ್ನು ನಾನೇ ಸಲುಹಿದೆʼʼ ಎಂದಿದ್ದರು.

ಪವಿತ್ರಾ ಮಗಳ ಸ್ಪಷ್ಟನೆ ಏನು?

ಮಗಳು ಪ್ರತೀಕ್ಷಾ ಮಾತನಾಡಿ ʻ ಚಂದ್ರಕಾಂತ್‌ ಅವರ ಸಾವಿನ‌ ಸುದ್ದಿ ನಮಗೆ ಟಿವಿಯಲ್ಲಿ ನೋಡಿ ಗೊತ್ತಾಯ್ತು. ಚಂದ್ರಕಾಂತ್‌ ಮತ್ತು ನಮ್ಮಮ್ಮ‌ ಉತ್ತಮ ಸ್ನೇಹಿತರಾಗಿದ್ದರು. ಅವರ ಸಂಬಂಧದ ಬಗ್ಗೆ ಟಿವಿಯಲ್ಲಿ ಏನೇನೋ ಮಾತಾಡ್ತಿದ್ದಾರೆ. ಅಮ್ಮನ ಅಂತ್ಯಕ್ರಿಯೆ ಆಗೋವವರೆಗೂ ಚಂದ್ರಕಾಂತ್‌ ಇದ್ದು ಹೋಗಿದ್ದರು. ಚಂದ್ರಕಾಂತ್‌ ಅವರು ಹೈದರಾಬಾದ್‌ಗೆ ಹೋದ ನಂತರವೂ ನನಗೆ ಪೋನ್ ಮಾಡಿ ಮಾತನಾಡುತ್ತಿದ್ದರು. ಆರೋಗ್ಯ ಚೆನ್ನಾಗಿ ನೋಡ್ಕೊ, ಪರೀಕ್ಷೆ ಇದೆ ತಯಾರಿ ಮಾಡ್ಕೊ ಎಂದೆಲ್ಲಾ ಧೈರ್ಯ ಹೇಳ್ತಿದ್ದರು. ಆದರೆ ಈಗ ಹೀಗಾಗಿದೆ. ಅಮ್ಮ ಮತ್ತು ಚಂದ್ರಕಾಂತ್‌ ಉತ್ತಮ ಸ್ನೇಹಿತರಾಗಿದ್ದರು. ಅಮ್ಮ ಹೈದರಾಬಾದ್‌ಗೆ ತೆರಳಿ ಆರು ವರ್ಷ ಆಯ್ತು. ಆಗನಿಂದಲೂ ಚಂದ್ರಕಾಂತ್‌ ಅಮ್ಮನಿಗೆ ಪರಿಚಯ. ಒಂದೇ ಸಿರೀಯಲ್ ನಲ್ಲಿ ನಟನೆ ಮಾಡುವ ಸಹ ನಟರ ಜತೆಗಿನ ಸಂಬಂಧ ಹೇಗಿರೋತ್ತೊ ಅಮ್ಮ ಮತ್ತು ಚಂದ್ರಕಾಂತ್‌ ಅವರ ಸಂಬಂಧವೂ ಹಾಗೆ ಇತ್ತುʼʼ‌ ಎಂದರು.

ಮಾತು ಮುಂದುವರಿಸಿ ʻʻನನ್ನ ಅಮ್ಮ ಮತ್ತು ಅಪ್ಪ ಅವರ ಸಂಬಂಧ ಕೂಡ ಚೆನ್ನಾಗಿಯೇ ಇತ್ತು. ನಾನು, ಅಣ್ಣ ಇಬ್ಬರೂ ಕಳೆದ ಎರಡು ವರ್ಷಗಳಿಂದ ಅಮ್ಮನ ಜತೆಗೆ ಹೈದರಾಬಾದ್‌ನಲ್ಲಿ ನೆಲೆಸಿದ್ದೆವು. ಈಗ ನಾವು ನಮ್ಮ ಅಮ್ಮನನ್ನು ಕಳೆದುಕೊಂಡಿದ್ದೇವೆ. ಅವರು ನಮ್ಮ ಕುಟುಂಬದ ದೊಡ್ಡ ಪಿಲ್ಲರ್‌. ನಾವಿನ್ನ ಚಿಕ್ಕವರು. ನಮಗೂ ಭವಿಷ್ಯವಿದೆ. ಯಾರೂ ಅಮ್ಮನ ಸಂಬಂಧ ಬಗೆಗೆ ತಪ್ಪಾಗಿ ಮಾತಾಡಬೇಡಿ. ನಮ್ಮಷ್ಟಕ್ಕೆ ನಮ್ಮನ್ನು ಬದುಕಲು ಬಿಡಿʼʼ ಎಂದಿದ್ದಾರೆ ಪ್ರತೀಕ್ಷಾ

Continue Reading

ಸ್ಯಾಂಡಲ್ ವುಡ್

IPL 2024 : ʻಅಶ್ವಿನಿ ದೊಡ್ಮನೆಯ ಅದೃಷ್ಟ ದೇವತೆ’: ತುಚ್ಛ ಪದ ಬಳಸಿದವರಿಗೆ ಭಾರೀ ತಿರುಗೇಟು!

IPL 2024: ಸೋತಾಗ ಅಶ್ವಿನಿ ಪುನೀತ್ ರಾಜ್ ಕುಮಾರನ್ನ ಹೀಯಾಳಿಸಿದವರಿಗೆ ಜನ ತಿರುಗೇಟು ನೀಡುತ್ತಿದ್ದಾರೆ. ಆರ್ ಸಿ ಬಿ ಗೆಲುವಿನ ಬೆನ್ನಲ್ಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಫೋಟೋ ವೈರಲ್ ಆಗುತ್ತಿದೆ. ದೊಡ್ಮನೆಯ ಅದೃಷ್ಟ ದೇವತೆಯಿಂದ ಪ್ಲೇ ಆಫ್‌ಗೆ ಎಂಟ್ರಿ ಕೊಡುತ್ತಿದೆ. ಅದೃಷ್ಟ ತಂದ ಹೆಣ್ಣು ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಫೋಟಿ ಹಾಕಿ ಪೋಸ್ಟ್ ಮಾಡಲಾಗುತ್ತಿದೆ.

VISTARANEWS.COM


on

IPL 2024 The people paid revenge for the controversial post ashwini Puneeth Rajkumar
Koo

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ 2024ರ 68ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ (CSK) ವಿರುದ್ಧ 27 ರನ್‌ಗಳಿಂದ ಜಯಗಳಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) 4ನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದೆ. ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ (KKR), ರಾಜಸ್ಥಾನ್ ರಾಯಲ್ಸ್ (RR) ಮತ್ತು ಸನ್‌ ರೈಸರ್ಸ್‌ ಹೈದರಾಬಾದ್ (SRH) ಪ್ಲೇ ಆಫ್‌ನಲ್ಲಿ ಸ್ಥಾನ ಪಡೆದಿವೆ. ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಇದೆಲ್ಲದರ ನಡುವೆ ಗಜಪಡೆ ಪೋಸ್ಟ್ ಟ್ರೆಂಡ್ ಆಗುತ್ತಿದೆ. ಟೂರ್ನಿ ಆರಂಭದಲ್ಲಿ ಆರ್‌ಸಿಬಿ ತಂಡ ಕಳಪೆ ಪ್ರದರ್ಶನ ತೋರಿತ್ತು. ಹಾಗಾಗಿ ಭಾರೀ ಟೀಕೆ, ಟ್ರೋಲ್ ಎದುರಿಸುವಂತಾಗಿತ್ತು. ಅಂತಹ ಸಮಯದಲ್ಲೇ ಕಿಡಿಗೇಡಿ ಒಬ್ಬ ಇದಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಸರು ಎಳೆದು ತಂಡ ಅವಹೇಳಕಾರಿ ಪೋಸ್ಟ್ ಮಾಡಿದ್ದ. ಇದೀಗ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ದೊಡ್ಮನೆಯ ಅದೃಷ್ಟ ದೇವತೆ ಎಂದು ಜನರು ಟ್ವೀಟ್‌ ಮಾಡುತ್ತಿದ್ದಾರೆ.

ಸೋತಾಗ ಅಶ್ವಿನಿ ಪುನೀತ್ ರಾಜ್ ಕುಮಾರನ್ನ ಹೀಯಾಳಿಸಿದವರಿಗೆ ಜನ ತಿರುಗೇಟು ನೀಡುತ್ತಿದ್ದಾರೆ. ಆರ್ ಸಿ ಬಿ ಗೆಲುವಿನ ಬೆನ್ನಲ್ಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಫೋಟೋ ವೈರಲ್ ಆಗುತ್ತಿದೆ. ದೊಡ್ಮನೆಯ ಅದೃಷ್ಟ ದೇವತೆಯಿಂದ ಪ್ಲೇ ಆಫ್‌ಗೆ ಎಂಟ್ರಿ ಕೊಡುತ್ತಿದೆ. ಅದೃಷ್ಟ ತಂದ ಹೆಣ್ಣು ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಫೋಟಿ ಹಾಕಿ ಪೋಸ್ಟ್ ಮಾಡಲಾಗುತ್ತಿದೆ.

ಇದನ್ನೂ ಓದಿ: IPL 2024 : ಐಪಿಎಲ್‌ ಬೆಟ್ಟಿಂಗ್‌ಗಾಗಿ ಮೈ ತುಂಬಾ ಸಾಲ; ನೇಣಿಗೆ ಶರಣಾದ ಯುವಕ

ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅತಿಥಿಯಾಗಿ ಹೋಗಿದ್ದರು. “ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದರಿಂದಲೇ ಆರ್‌ಸಿಬಿ ಪದೇ ಪದೆ ಸೋಲುತ್ತಿದೆ” ಎಂದು ಗಜಪಡೆ ಟ್ವಿಟರ್‌ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಸದ್ಯ ಆರ್‌ಸಿಬಿ ತಂಡ ಪ್ಲೇ ಆಫ್‌ಗೆ ಹೋಗುವುದು ಖಚಿತವಾಗುತ್ತಿದ್ದಂತೆ ಹಲವರು ಅವಹೇಳಕಾರಿ ಪೋಸ್ಟ್ ನೆನಪಿಸಿ ತಿರುಗೇಟು ನೀಡುತ್ತಿದ್ದಾರೆ.

ಇದನ್ನೂ ಓದಿ: IPL 2024 : ಐಪಿಎಲ್‌ ಬೆಟ್ಟಿಂಗ್‌ಗಾಗಿ ಮೈ ತುಂಬಾ ಸಾಲ; ನೇಣಿಗೆ ಶರಣಾದ ಯುವಕ

ಏನಿದು ಘಟನೆ?

ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದಕ್ಕಾಗಿಯೇ ಆರ್​ಸಿಬಿ ಸೋಲುತ್ತಿದೆ ಎಂದು ‘ಗಜಪಡೆ’ (@GAJAPADE6) ಹೆಸರಿನ ಟ್ವಿಟರ್ ಅಕೌಂಟ್ ಕೀಳು ಮಟ್ಟದ ಟ್ವೀಟ್ ಮಾಡಿತ್ತು. ಆರ್​ಸಿಬಿ ಸೋಲುವುದಕ್ಕೂ, ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೂ ಏನು ಸಂಬಂಧ? ಎಂದು ಅಪ್ಪು ಫ್ಯಾನ್ಸ್‌ ಆಕ್ರೋಶ ಹೊರಹಾಕಿ, ಈಗಾಗಲೇ ಅಪ್ಪು ಫ್ಯಾನ್ಸ್‌ ಕಾನೂನು ಕ್ರಮ ಮುಂದಾಗಿದ್ದರು.

ಕೀಳುಮಟ್ಟದ ಟ್ವೀಟ್‌ ಬಗ್ಗೆ ಸಮಾಧಾನವಾಗಿಯೇ ಉತ್ತರ ಕೊಟ್ಟಿದ್ದ ದೊಡ್ಮನೆ ಸೊಸೆ!

ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದರು. ʻʻಬೇರೆ ಆಯ್ಕೆ ಇಲ್ಲ.. ಜೀವನ ಅಂದುಕೊಂಡಷ್ಟು ಸುಲಭವಿಲ್ಲ, ಜೀವನ ಹೇಗೋ ನಡೆದುಕೊಂಡು ಹೋಗುತ್ತಿದೆ. ಕಷ್ಟ ಇದ್ದರೂ ಎಲ್ಲವನ್ನು ಸ್ವೀಕರಿಸಬೇಕುʼʼಎಂದು ಹೇಳಿದ್ದರು.

Continue Reading

ಬಾಲಿವುಡ್

Kattappa To Turn Modi: ಮೋದಿ ಪಾತ್ರದಲ್ಲಿ `ಬಾಹುಬಲಿ’ ಕಟ್ಟಪ್ಪ!

Kattappa To Turn Modi: ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದರು. ಆ ಬಳಿಕ ಕೆಲವು ಚಿತ್ರ ನಿರ್ಮಾಪಕರು ಅವರ ಜೀವನಗಾಥೆಯ ಬಗ್ಗೆ ಆಸಕ್ತಿಯನ್ನು ತಳೆದರು. ನಿರ್ದೇಶಕ ಓಮುಂಗ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ‘ಪಿಎಂ ನರೇಂದ್ರ ಮೋದಿ(PM Narendra Modi)’ ಸಿನಿಮಾವನ್ನು ಪ್ರಕಟಿಸಿದರು ಮತ್ತು 2019ರಲ್ಲಿ ಈ ಸಿನಿಮಾ ಬಿಡುಗಡೆಯಾಯಿತು. ಪ್ರಧಾನಿ ನೇರಂದ್ರ ಮೋದಿ ಅವರ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ಅವರು ನಟಿಸಿದ್ದಾರೆ. ವಿವೇಕ್ ತಂದೆ ಸುರೇಶ್ ಒಬೆರಾಯ್ ಅವರು ಚಿತ್ರದ ನಿರ್ಮಾಪಕರ ಪೈಕಿ ಒಬ್ಬರು.

VISTARANEWS.COM


on

Kattappa To Turn Modi Sathyaraj To Play Biopic On Prime Minister
Koo

ಬೆಂಗಳೂರು: ಬ್ಲಾಕ್‌ಬಸ್ಟರ್ `ಬಾಹುಬಲಿ’ ಸಿನಿಮಾದಲ್ಲಿ ಕಟ್ಟಪ್ಪ (Kattappa To Turn Modi) ಪಾತ್ರಕ್ಕೆ ಹೆಸರುವಾಸಿಯಾದ ಹಿರಿಯ ನಟ ಸತ್ಯರಾಜ್ (Veteran actor Sathyaraj) ಅವರು ಪ್ರಧಾನಿ ನರೇಂದ್ರ ಮೋದಿ (Biopic On Prime Minister) ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಪಾತ್ರವನ್ನು ಸಿನಿಮಾ ತಜ್ಞ ರಮೇಶ್ ಬಾಲಾ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿಯವರ ಜೀವನ ತೆರೆ ಮೇಲೆ ಬಂದಿರುವುದು ಇದೇನು ಮೊದಲಲ್ಲ. 2019 ರಲ್ಲಿ, ನಟ ವಿವೇಕ್ ಒಬೆರಾಯ್, ಓಮಂಗ್ ಕುಮಾರ್ ನಿರ್ದೇಶಿಸಿದ ಜೀವನಚರಿತ್ರೆಯ ಚಿತ್ರದಲ್ಲಿ ಕಂಡು ಬಂದಿದ್ದರು. ಇದಲ್ಲದೆ, ಮಹೇಶ್ ಠಾಕೂರ್, ಲಾಲ್ಜಿ ಡಿಯೋರಿಯಾ, ರಜಿತ್ ಕಪೂರ್ ಮತ್ತು ಕೆಕೆ ಶುಕ್ಲಾ ಅವರಂತಹ ಇತರ ನಟರು ಮೋದಿ ಕುರಿತು ಸಿನಿಮಾ ಮಾಡಿದ್ದಾರೆ. ಮೋದಿ ಪಾತ್ರದಲ್ಲಿ ಸತ್ಯರಾಜ್​ ಕಾಣಿಸಿಕೊಳ್ಳಲಿದ್ದಾರೆ ಎಂಬುದು ದಕ್ಷಿಣ ಭಾರತದ ಹಿರಿಯ ನಟನ ಬಗ್ಗೆ ಹೆಚ್ಚುತ್ತಿರುವ ಜನಪ್ರಿಯತೆಯನ್ನೂ ತೋರಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದರು. ಆ ಬಳಿಕ ಕೆಲವು ಚಿತ್ರ ನಿರ್ಮಾಪಕರು ಅವರ ಜೀವನಗಾಥೆಯ ಬಗ್ಗೆ ಆಸಕ್ತಿಯನ್ನು ತಳೆದರು. ನಿರ್ದೇಶಕ ಓಮುಂಗ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ‘ಪಿಎಂ ನರೇಂದ್ರ ಮೋದಿ(PM Narendra Modi)’ ಸಿನಿಮಾವನ್ನು ಪ್ರಕಟಿಸಿದರು ಮತ್ತು 2019ರಲ್ಲಿ ಈ ಸಿನಿಮಾ ಬಿಡುಗಡೆಯಾಯಿತು. ಪ್ರಧಾನಿ ನೇರಂದ್ರ ಮೋದಿ ಅವರ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ಅವರು ನಟಿಸಿದ್ದಾರೆ. ವಿವೇಕ್ ತಂದೆ ಸುರೇಶ್ ಒಬೆರಾಯ್ ಅವರು ಚಿತ್ರದ ನಿರ್ಮಾಪಕರ ಪೈಕಿ ಒಬ್ಬರು.

ಇದನ್ನೂ ಓದಿ: Actor Sathyaraj: `ಬಾಹುಬಲಿ’ ಕಟ್ಟಪ್ಪನ ತೊಡೆ ಮೇಲೆ ಕುಳಿತ ಈ ಕ್ಯೂಟ್‌ ನಟ ಯಾರು? ಹೇಳಿ ನೋಡೋಣ!

ಭಾರೀ ವಿವಾದವಾಗಿತ್ತು

2019ರ ಏಪ್ರಿಲ್- ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಿಗದಿಯಾಗಿತ್ತು. ಚುನಾವಣೆಯ ಕಾವು ಜೋರಾಗಿತ್ತು. ಇದೇ ಸಂದರ್ಭದಲ್ಲಿ ನಿರ್ಮಾಪಕರು ಪಿಎಂ ನರೇಂದ್ರ ಮೋದಿ ಸಿನಿಮಾ ಬಿಡುಗಡೆಗೆ ಮುಂದಾದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಮಧ್ಯೆ ಒಣ ರಗಳೆಗೂ ಕಾರಣವಾಯಿತು. ಪಿಎಂ ನರೇಂದ್ರ ಮೋದಿ ಸಿನಿಮಾ ಮತದಾರರಿಗೆ ಆಮಿಷ ಒಡ್ಡಬಹುದು ಎಂಬ ಆರೋಪ ಕೇಳಿ ಬಂತು. ಹಾಗಾಗಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಸಿನಿಮಾಗೆ ಬಿಡುಗಡೆಯ ಭಾಗ್ಯ ಸಿಗಲಿಲ್ಲ. ಫಲಿತಾಂಶ ಪ್ರಕಟವಾದ ಮಾರನೇ ದಿನ ಅಂದರೆ 2019 ಮೇ 24ರಂದು ಸಿನಿಮಾ ಬಿಡುಗಡೆಯಾಯಿತು.

ಬಿಡುಗಡೆ ಮುನ್ನ ಭಾರೀ ಸದ್ದಿಗೆ ಕಾರಣವಾಗಿದ್ದ ಪಿಎಂ ನರೇಂದ್ರ ಮೋದಿ ಸಿನಿಮಾ, ಬಿಡುಗಡೆಯ ಬಳಿಕ ಅಷ್ಟೇನೂ ಸದ್ದು ಮಾಡಲಿಲ್ಲ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆಯೂ ಸಿಗಲಿಲ್ಲ. 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಹಿಂದಿ ಭಾಷೆಯ ಚಿತ್ರವು ತನ್ನ ಲೈಫ್‌ ಟೈಮ್‌ನಲ್ಲಿ 28 ಕೋಟಿ ರೂ. ಗಳಿಕೆ ಮಾಡಿತ್ತು.

ಸ್ಫೂರ್ತಿಯಾದರು ಮೋದಿ

ಬಹುಶಃ ಸಂಪೂರ್ಣವಾಗಿ ಮೋದಿ ಅವರನ್ನು ಕೇಂದ್ರವಾಗಿಟ್ಟು ಈವರೆಗೆ ಅಷ್ಟೇನೂ ಚಿತ್ರಗಳ ಬಂದಿಲ್ಲ. ಆದರೆ, ಕೆಲವು ಸಿನಿಮಾಗಳಿಗೆ ಅವರು ಸ್ಫೂರ್ತಿಯಾಗಿದ್ದಾರೆ. ಕೆಲವು ಪಾತ್ರಗಳನ್ನು ಅವರನ್ನು ಹೋಲುತ್ತವೆ. ಹಾಗಾಗಿ, ಮೋದಿ ಅವರಿಗೂ ಸಿನಿಮಾ ರಂಗಕ್ಕೂ ನಂಟಿದೆ ಎದು ಹೇಳಬಹುದು.

Continue Reading
Advertisement
RCB vs CSK
ಕ್ರೀಡೆ16 mins ago

RCB vs CSK: ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ ಬರೆದ ಆರ್​ಸಿಬಿ-ಚೆನ್ನೈ ಪಂದ್ಯ

Rain News
ಕರ್ನಾಟಕ29 mins ago

Rain News: ಕುಷ್ಟಗಿಯಲ್ಲಿ ಸಿಡಿಲು ಬಡಿದು ರೈತ ಸಾವು, ಯುವಕನಿಗೆ ಗಂಭೀರ ಗಾಯ

Prajwal Revanna Case
ಕರ್ನಾಟಕ44 mins ago

ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲ; ಹೊಸ ಆಡಿಯೊದಲ್ಲಿ ಶಿವರಾಮೇಗೌಡ ಸ್ಫೋಟಕ ಹೇಳಿಕೆ

Rohit Sharma
ಕ್ರೀಡೆ57 mins ago

Rohit Sharma: ಐಪಿಎಲ್ ಪ್ರಸಾರಕರ ವಿರುದ್ಧ ಕಿಡಿ ಕಾರಿದ ಹಿಟ್​ಮ್ಯಾನ್​ ರೋಹಿತ್​

R Ashok
ರಾಜಕೀಯ1 hour ago

R Ashok: ರಾಜ್ಯದಲ್ಲಿ ಮಳೆಗಿಂತ ಹೆಚ್ಚಾಗಿ ಕೊಲೆಗಳೇ ನಡೆಯುತ್ತಿವೆ: ಆರ್‌.ಅಶೋಕ್‌ ಕಿಡಿ

Thailand Open 2024
ಬ್ಯಾಡ್ಮಿಂಟನ್2 hours ago

Thailand Open 2024: ಥಾಯ್ಲೆಂಡ್‌ ಓಪನ್‌ ಗೆದ್ದ ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿ

Prajwal Revanna Case
ಕರ್ನಾಟಕ2 hours ago

Prajwal Revanna Case: ಪೆನ್‌ಡ್ರೈವ್‌ ಕೇಸ್‌ಗೆ ಟ್ವಿಸ್ಟ್;‌ ದೇವರಾಜೇಗೌಡ, ಡಿಕೆಶಿ ಆಡಿಯೊ ಬಯಲು, ಇಲ್ಲಿದೆ ಸ್ಫೋಟಕ ಮಾಹಿತಿ

Money Guide
ಮನಿ-ಗೈಡ್2 hours ago

Money Guide: ಪ್ಯಾನ್‌ ಕಾರ್ಡ್‌ ಇಲ್ಲದೆಯೂ ಸಿಬಿಲ್‌ ಸ್ಕೋರ್‌ ಪರಿಶೀಲಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

Road Accident
ಕ್ರೈಂ2 hours ago

Road Accident: ಬೆಂಗಳೂರು, ಗದಗದಲ್ಲಿ ಸರಣಿ ಅಪಘಾತ; ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಮನೆಗಳೇ ಭಸ್ಮ

Janhvi Kapoor felt sexualised at the age of 12
ಬಾಲಿವುಡ್2 hours ago

Janhvi Kapoor: 12ನೇ ವಯಸ್ಸಿನಲ್ಲಿಯೇ ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೊ ಅಪ್‌ಲೋಡ್‌ ಆಗಿತ್ತು ಎಂದ ಶ್ರೀದೇವಿ ಮಗಳು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌