ಬೆಂಗಳೂರು: ರಶ್ಮಿಕಾ ಮಂದಣ್ಣ (Rashmika Mandanna) ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ. ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲಿ ನಟಿ ಆಗಾಗ ಫೋಟೊಗಳನ್ನು ಮತ್ತು ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೇ ಟ್ರೋಲಿಗೂ ಗುರಿಯಾಗುತ್ತಿರುತ್ತಾರೆ. ಇದೀಗ ತಮ್ಮ ಚೊಚ್ಚಲ ಸಿನಿಮಾ ಕಿರಿಕ್ ಪಾರ್ಟಿ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ರಕ್ಷಿತ್ ಶೆಟ್ಟಿ ಬಂಡವಾಳ ಹಾಕಿ ನಾಯಕ ನಟನಾಗಿ ನಟಿಸಿದ ‘ಕಿರಿಕ್ ಪಾರ್ಟಿ’ ಮೂಲಕ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಈ ಹಿಂದೆ ಸಂದರ್ಶನವೊಂದರಲ್ಲಿ ಮೊದಲ ಸಿನಿಮಾ ಆಫರ್ ಬಂದ ವಿಷಯ ಮಾತನಾಡುವಾಗ ಮೊದಲು ನಟಿಸಿದ ಚಿತ್ರ, ಯಾವ ನಿರ್ಮಾಣ ಸಂಸ್ಥೆ ಎಂದು ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡದೆ ಕೈಗಳಿಂದ ಕೋಟ್ ರೀತಿಯಲ್ಲಿ ಸನ್ನೆ ಮಾಡಿ ಭಾರಿ ಟೀಕೆಗೆ ಒಳಗಾಗಿದ್ದರು. ಆದರೆ ಇದೀಗ ನಟಿ ಪರಂವಃ ಸ್ಟುಡಿಯೋಸ್ ಬಗ್ಗೆ ಮಾತನಾಡಿದ್ದಾರೆ.
ವಾಸ್ತವವಾಗಿ, ಕಿರಿಕ್ ಪಾರ್ಟಿ ಯಶಸ್ಸಿಗೆ ರಕ್ಷಿತ್ ಮತ್ತು ರಿಷಬ್ ಅವರಿಗೆ ಮನ್ನಣೆ ನೀಡದ ನಂತರ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಚಿತ್ರರಂಗದಲ್ಲಿ ನಿಷೇಧಿಸಲಾಗಿದೆ ಎಂಬ ವರದಿಗಳಿವೆ. ಈಗ, ಹಾರ್ಪರ್ಸ್ ಬಜಾರ್‌ಗೆ ನೀಡಿದ ಹೊಸ ಸಂದರ್ಶನದಲ್ಲಿ, ರಕ್ಷಿತ್ ಶೆಟ್ಟಿ ನಿರ್ಮಾಣದ ಕಿರಿಕ್ ಪಾರ್ಟಿಯಲ್ಲಿ ಸಾನ್ವಿ ಜೋಸೆಫ್ ಪಾತ್ರವನ್ನು ಹೇಗೆ ಪಡೆದರು ಎಂಬುದನ್ನು ರಶ್ಮಿಕಾ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ
ನಟಿ ಮಾತನಾಡಿ “ನಾನು ನನ್ನನ್ನು ಎಂದಿಗೂ ನಟಿನಾಗಿ ನನ್ನನ್ನು ನೋಡಿಲ್ಲ. ನಾನು ಕೆಲವು ಪಾತ್ರಗಳಿಗಾಗಿ ಆಡಿಷನ್ ಮಾಡಿದ್ದೇನೆ. ಆದರೆ ಎಲ್ಲಿಯೂ ಚಾನ್ಸ್ ಸಿಕ್ಕಿರಲಿಲ್ಲ. ನಟನೆ ನನ್ನ ಹಣೆಬರಹದಲ್ಲಿಲ್ಲ ಎಂದು ನಾನು ಸಮಾಧಾನ ಮಾಡಿಕೊಳ್ಳಲು ಆರಂಭಿಸಿದೆ. ಆದರೆ, 2014ರಲ್ಲಿ ಟೈಮ್ಸ್ ಫ್ರೆಶ್ ಫೇಸ್‌ನಲ್ಲಿ ಗೆದ್ದ ಬಳಿಕ ನನಗೆ ಪರಂವಃ ಸ್ಟುಡಿಯೋಸ್‌ನಿಂದ (ನಿರ್ಮಾಣ ಸಂಸ್ಥೆ) ಕರೆ ಬಂತು. ನನ್ನ ಚೊಚ್ಚಲ ಚಿತ್ರವಾದ ಕಿರಿಕ್ ಪಾರ್ಟಿ ಚಿತ್ರಕ್ಕಾಗಿ ಸಾನ್ವಿ ಜೋಸೆಫ್ ಎಂಬ ಪಾತ್ರಕ್ಕೆ ಕರೆದರು,” ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.
ಟ್ರೋಲ್‌ಗೆ ಗುರಿಯಾಗಿದ್ದ ನಟಿ
ಈ ಹಿಂದೆ ಸಂದರ್ಶನವೊಂದರಲ್ಲಿ ರಶ್ಮಿಕಾ ಅವರು ತಮ್ಮ ಸಿನಿ ಪಯಣವನ್ನು ಮಾತನಾಡಿದ್ದರು. ಈ ವೇಳೆ ʻʻನಾನು ಫ್ರೆಶ್ ಫೇಸ್ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆದರೆ ನನಗೆ ಅದರಲ್ಲಿ ಭಾಗವಹಿಸಲು ಮನಸಿರಲಿಲ್ಲ. ನನ್ನ ಶಿಕ್ಷಕರು ತುಂಬಾ ಪ್ರೋತ್ಸಾಹ ನೀಡಿದರು. ಬಳಿಕ ಅದರಲ್ಲಿ ವಿಜೇತಳಾದೆ. ಪೇಪರ್ನಲ್ಲಿ ಫೋಟೊ ಬಂತುʼʼ ಎಂಬಿತ್ಯಾದಿ ವಿಚಾರಗಳನ್ನು ಹೇಳಿಕೊಂಡಿದ್ದರು. ನಂತರ ತಮಗೆ ಮೊದಲ ಸಿನಿಮಾ ಆಫರ್ ಬಂದ ವಿಷಯ ಮಾತನಾಡುವಾಗ ಮೊದಲು ನಟಿಸಿದ ಚಿತ್ರ, ಯಾವ ನಿರ್ಮಾಣ ಸಂಸ್ಥೆ ಎಂದು ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡದೆ ಕೈಗಳಿಂದ ಕೋಟ್ ರೀತಿಯಲ್ಲಿ ಸನ್ನೆ ಮಾಡಿ ತೋರಿಸಿದ್ದರು ನಟಿ. ಈ ಕುರಿತಾಗಿ ನೆಟ್ಟಿಗರು ಗರಂ ಆಗಿದ್ದು, ಟ್ರೋಲ್ ಮಾಡಿದ್ದರು.
ತಿರುಗೇಟು ನೀಡಿದ್ದ ರಿಷಬ್ ಶೆಟ್ಟಿ
ಇತ್ತ ರಿಷಬ್ ಶೆಟ್ಟಿ ಅವರು ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ತಿರುಗೇಟು ನೀಡವಂತೆ ಕೈ ಸನ್ನೆಯಲ್ಲಿಯೇ ಉತ್ತರಿಸಿದ್ದರು. ರಿಷಬ್ ಶೆಟ್ಟಿ ಅವರಿಗೆ ಸಂದರ್ಶನಕಾರರು ʻʻರಶ್ಮಿಕಾ, ಸಮಂತಾ, ಕೀರ್ತಿ ಸುರೇಶ್ ಮತ್ತು ಸಾಯಿ ಪಲ್ಲವಿ ಇವರೆಲ್ಲರೂ ಒಳ್ಳೆಯ ಕಲಾವಿದರು. ಯಾರ ಜತೆ ಕೆಲಸ ಮಾಡಲು ಇಚ್ಛಿಸುತ್ತೀರಿʼʼ ಎಂದು ಪ್ರಶ್ನೆ ಕೇಳಿದ್ದಾರೆ. ಎಲ್ಲಿಯೂ ರಶ್ಮಿಕಾ ಹೆಸರನ್ನು ಹೇಳದ ರಿಷಬ್ ಶೆಟ್ಟಿ ʻʻಹೊಸ ಕಲಾವಿದರ ಜತೆ ಕೆಲಸ ಮಾಡಲು ಇಷ್ಟ. ನೀವು ಹೇಳಿದ ಹೆಸರುಗಳಲ್ಲಿ ಕೆಲವು (ಕೋಟ್ ಸನ್ನೆ ಮಾಡಿ) ನಟಿಯರು ನನಗೆ ಇಷ್ಟವಿಲ್ಲ. ಸಾಯಿಪಲ್ಲವಿ ಮತ್ತು ಸಮಂತಾ ಅವರ ಅಭಿನಯ ನನಗೆ ಇಷ್ಟʼʼ ಎಂದು ಖಡಕ್ ಆಗಿ ಉತ್ತರ ನೀಡಿದ್ದರು.
ಇದನ್ನೂ ಓದಿ: Rashmika Mandanna: Lakme Fashion Weekನಲ್ಲಿ ರ‍್ಯಾಂಪ್ ವಾಕ್ ಮಾಡಿದ ರಶ್ಮಿಕಾ ಮಂದಣ್ಣ
ಕೆಲಸದ ಮುಂಭಾಗದಲ್ಲಿ, ರಶ್ಮಿಕಾ ಮಂದಣ್ಣ ಮಿಷನ್ ಮಜ್ನು ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಇದು ಬಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ರಶ್ಮಿಕಾ ಅವರ ಮೊದಲ ಚಿತ್ರವಾಗಿದೆ. ಸದ್ಯ ಅವರು ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.