ಸಿನಿಮಾ
Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳೊಂದಿಗೆ ಟ್ವಿಟರ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ದ್ವೇಷ ಮಾಡುವವರನ್ನು ಹೇಗೆ ಎದುರಿಸಬೇಕು ಎನ್ನುವುದನ್ನೂ ಹೇಳಿದ್ದಾರೆ.
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ. ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲಿ ನಟಿ ಆಗಾಗ ಫೊಟೋಗಳನ್ನು ಮತ್ತು ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ದ್ವೇಷ ಮಾಡುವವರಿಂದ ಬಚಾವಾಗುವುದು ಹೇಗೆ ಎನ್ನುವ ಪಾಠವನ್ನೂ ತಮ್ಮ ಅಭಿಮಾನಿಗಳಿಗೆ ಹೇಳಿ ಕೊಟ್ಟಿದ್ದಾರೆ.
ಇದನ್ನೂ ಓದಿ: Rashmika Mandanna: Lakme Fashion Weekನಲ್ಲಿ ರ‍್ಯಾಂಪ್ ವಾಕ್ ಮಾಡಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಅವರು ಸೋಮವಾರದಂದು ಟ್ವಿಟರ್‌ನಲ್ಲಿ ಅಭಿಮಾನಿಗಳೊಂದಿಗೆ ಒಂದಿಷ್ಟು ಸಮಯ ಮಾತನಾಡಿದ್ದಾರೆ. ಮಾತುಕತೆ ಆರಂಭಿಸುವುದಕ್ಕೂ ಮೊದಲು ಟ್ವೀಟ್ ಮಾಡಿದ್ದ ನಟಿ, “ನನ್ನ ಪ್ರೀತಿ ಪಾತ್ರರಿಗೆ ಹಾಯ್, ನಾನು ನಿಮ್ಮೆಲ್ಲ ಟ್ವೀಟ್ ಮತ್ತು ಕಾಮೆಂಟ್‌ಗಳನ್ನು ಓದುತ್ತೇನೆ. ನನ್ನ ಹೃದಯ ಪ್ರೀತಿಯಿಂದ ತುಂಬಿದೆ. ನಿಮ್ಮನ್ನೆಲ್ಲ ತುಂಬ ಮಿಸ್ ಮಾಡಿಕೊಂಡಿದ್ದೇನೆ. ಹಾಗಾಗಿ ಈಗ ಸ್ವಲ್ಪ ಹೊತ್ತು ಮಾತನಾಡೋಣವೇ? ಸಮಯ ಈಗ ಶುರುವಾಗಿದೆ” ಎಂದು ಬರೆದುಕೊಂಡಿದ್ದಾರೆ.
ನಟಿಯ ಟ್ವೀಟ್‌ಗೆ ಪ್ರತಿಯಾಗಿ ಅಭಿಮಾನಿಯೊಬ್ಬರು, “ನೀವು ದ್ವೇಷಿಸುವವರನ್ನು ಹೇಗೆ ಎದುರಿಸುತ್ತೀರಿ. ಏನಾದರೂ ಟಿಪ್ಸ್ ಇದಿಯೇ?” ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿರುವ ನಟಿ, “ನಿಮ್ಮನ್ನು ದ್ವೇಷ ಮಾಡುವವರನ್ನು ಎಷ್ಟರ ಮಟ್ಟಿಗೆ ಪ್ರೀತಿಸಿ ಎಂದರೆ ಅವರೇ ದ್ವೇಷಿಸುವುದನ್ನು ಬಿಟ್ಟು ಪ್ರೀತಿ ಮಾಡಿಬಿಡಬೇಕು” ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಟ್ವೀಟ್‌ಗಲೂ ಸಾಮಾಜಿಕ ಜಾಲಯತಾಣಗಳಲ್ಲಿ ವೈರಲ್ ಆಗಿವೆ.
ರಶ್ಮಿಕಾ ಮಂದಣ್ಣ ಅವರು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಹಿರಿತೆರೆಗೆ ಬಂದವರು. ಚಮಕ್, ಅಂಜನಿ ಪುತ್ರ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಳೆದ ವರ್ಷ ಅಮಿತಾಭ್ ಬಚ್ಚನ್ ನಟನೆಯ ಗುಡ್ ಬೈ ಸಿನಿಮಾ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ.
ಸಿನಿಮಾ
Aamir Khan : ದಕ್ಷಿಣ ಭಾರತ ಸಿನಿಮಾದಲ್ಲಿ ವಿಲನ್ ಆಗ್ತಾರಂತೆ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್!
ರಾಜಮೌಳಿ ಅವರ ಸಿನಿಮಾವೊಂದರಲ್ಲಿ ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರು ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ವರದಿಗಳು ಹರಿದಾಡುತ್ತಿವೆ.
ಮುಂಬೈ: ಸಿನಿಮಾ ರಂಗದಲ್ಲಿ ಸದ್ಯ ದಕ್ಷಿಣ ಭಾರತವು ಬಾಲಿವುಡ್‌ಗಿಂತ ಮೇಲುಗೈ ಸಾಧಿಸಿಕೊಂಡು ಮುನ್ನುಗ್ಗುತ್ತಿದೆ. ಬಾಲಿವುಡ್ ಮಂದಿ ಕೂಡ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್ ಎಂದೆನಿಸಿಕೊಂಡಿರುವ ಆಮೀರ್ ಖಾನ್ (Aamir Khan) ಕೂಡ ದಕ್ಷಿಣ ಭಾರತದ ಸಿನಿಮಾಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.
ಆರ್‌ಆರ್‌ಆರ್ ಸಿನಿಮಾ ಮೂಲಕ ಆಸ್ಕರ್ ಪ್ರಶಸ್ತಿ ತಂದುಕೊಟ್ಟಿರುವ ನಿರ್ದೇಶಕ ರಾಜಮೌಳಿ ಅವರ ಸಿನಿಮಾವೊಂದರಲ್ಲಿ ಆಮೀರ್ ಖಾನ್ ನಟಿಸಲಿದ್ದಾರೆ ಎನ್ನಲಾಗಿದೆ. ಅದರಲ್ಲೂ ಆಮೀರ್ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವ ವರದಿಯಿದೆ. ಸಿನಿಮಾದಲ್ಲಿ ಮಹೇಶ್ ಬಾಬು ಅವರು ಹೀರೋ ಆಗಿರಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Viral News: ಇದು ಮೂಗಿನಿಂದ ಬಂದ ಕೊಳಲ ನಾದ! ಸರ್ಕಾರಿ ಶಾಲೆಯ ಶಿಕ್ಷಕನ ಕಲೆ ನೋಡಿ ಬೆಕ್ಕಸ ಬೆರಗಾದ ಜನ
ಈ ಸಿನಿಮಾ ಇನ್ನೂ ಕಥೆ ನಿರ್ಮಾಣದ ಹಂತದಲ್ಲಿದೆ. ರಾಜಮೌಳಿ ಮತ್ತು ಅವರ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಿದ್ದು, ಅದು ಪೂರ್ಣಗೊಂಡ ನಂತರ ಮಾತ್ರವೇ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.
ಆಮೀರ್ ಖಾನ್ ಅವರು ಕೊನೆಯದಾಗಿ ಲಾಲ್ ಸಿಂಗ್ ಛಡ್ಡಾ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾಗೆ ನಿರೀಕ್ಷೆಯಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ. ಹಾಗಾಗಿ ಅಮೀರ್ ಅವರು ದೊಡ್ಡ ಹೆಸರಾಗಬಲ್ಲಂತಹ ಸಿನಿಮಾಕ್ಕಾಗಿಯೇ ಕಾಯುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅವರು ಮುಂಬೈನಲ್ಲಿ ನಡೆದ ‘ಕ್ಯಾರಿ ಆನ್ ಜಟ್ಟಾ 3’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆಗ ಅವರ ಮುಂದಿನ ಸಿನಿಮಾ ಬಗ್ಗೆ ಕೇಳಿದಾಗ, “ಸದ್ಯ ನಾನು ನನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದೇನೆ. ನಾನು ಮಾನಸಿಕವಾಗಿ ಸಿದ್ಧವಾದಾಗ ಮುಂದಿನ ಸಿನಿಮಾದ ಬಗ್ಗೆ ಯೋಚಿಸುತ್ತೇನೆ” ಎಂದು ಹೇಳಿದ್ದರು.
ಸಿನಿಮಾ
Sudipto Sen: ದಿ ಕೇರಳ ಸ್ಟೋರಿ ನಿರ್ದೇಶಕರಿಂದ ಮತ್ತೊಂದು ಸಿನ್ಮಾ; ಇದು ಸತ್ಯಕಥೆಯಲ್ಲ, ಜೀವನಚರಿತ್ರೆ
ಕೇರಳ ಸ್ಟೋರಿ ಸಿನಿಮಾದ ನಿರ್ದೇಶಕ ಸುದೀಪ್ತೊ ಸೇನ್ (Sudipto Sen) ಅವರು ಮತ್ತೊಂದು ಜೀವನ ಚರಿತ್ರೆಯನ್ನು ಸಿನಿಮಾವಾಗಿಸಲು ಸಿದ್ಧವಾಗಿದ್ದಾರೆ. ಅದಕ್ಕಾಗಿ ನಾಯಕ ನಟನ ಹುಡುಕಾಟ ನಡೆಯುತ್ತಿದೆ.
ಮುಂಬೈ: ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ನಿರ್ದೇಶಿಸಿರುವ ದಿ ಕೇರಳ ಸ್ಟೋರಿ ಸಿನಿಮಾ ಹಲವಾರು ಕಾರಣಗಳಿಂದ ವಿವಾದದ ಸುಳಿಗೆ ಸಿಲುಕಿಕೊಂಡಿದೆ. ಅದೇ ಕಾರಣಗಳಿಂದಾಗಿ ಸಿನಿಮಾ ಒಳ್ಳೆಯ ಗಳಿಕೆಯನ್ನೂ ಮಾಡಿಕೊಂಡಿದೆ. ಆ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸುದೀಪ್ತೋ ಅವರು ಮತ್ತೊಂದು ಸಿನಿಮಾ ಮಾಡುವುದಕ್ಕೆ ಅಣಿಯಾಗಿದ್ದಾರೆ. ಆದರೆ ಈ ಬಾರಿ ನೈಜ ಕಥೆಯಲ್ಲ, ಜೀವನ ಚರಿತ್ರೆಯನ್ನೇ ಮಾಡುತ್ತಿದ್ದಾರೆ.
ಭಾರತದ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾದ ಸುಬ್ರತಾ ರಾಯ್ ಅವರು ಜೂನ್ 10ರಂದು ತಮ್ಮ 75ನೇ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾರೆ. ಆ ವೇಳೆಯೇ ಸುದೀಪ್ತೋ ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಸುದೀಪ್ತೋ ಅವರು ಸುಬ್ರತಾ ರಾಯ್ ಅವರ ಜೀವನ ಕಥೆಯನ್ನೇ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: The Kerala Story : ಕಮಲ ಹಾಸನ್‌ಗೆ ಮಾತಿನ ತಿರುಗೇಟು ಕೊಟ್ಟ ನಿರ್ದೇಶಕ ಸುದೀಪ್ತೋ ಸೇನ್
ನಿರ್ಮಾಪಕರಾಗಿರುವ ಸಂದೀಪ್ ಸಿಂಗ್ ಮತ್ತು ಜಯಂತಿಲಾಲ್ ಗಡ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ. ಸಹಾರಾ ಇಂಡಿಯಾ ಪರಿವಾರದ ಸಂಸ್ಥಾಪಕರಾಗಿರುವ ಸುಬ್ರತಾ ಅವರ ಜೀವನ ಚರಿತ್ರೆಯುಳ್ಳ ಸಿನಿಮಾಕ್ಕೆ ಸಹಾಶ್ರೀ ಎಂದು ಹೆಸರಿಡಲಾಗಿದೆ.
ಸಿನಿಮಾ ಘೋಷಣೆಯಾಗುತ್ತಿದ್ದಂತೆಯೇ ಸಿನಿಮಾದಲ್ಲಿ ಸುಬ್ರತಾ ಪಾತ್ರವನ್ನು ಯಾರು ನಿಭಾಯಿಸಲಿದ್ದಾರೆ ಎನ್ನುವ ಪ್ರಶ್ನೆಗಳು ಎದ್ದಿವೆ. ಅದಕ್ಕೆಂದು ಸೂಪರ್ ಸ್ಟಾರ್ ನಟರನ್ನು ಪರಿಗಣಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಯಾರು ತೆರೆಯ ಮೇಲೆ ಸುಬ್ರತಾ ರಾಯ್ ಆಗಿ ಮಿಂಚಲಿದ್ದಾರೆ ಎನ್ನುವ ವಿಚಾರ ಇನ್ನು ಕೆಲವು ದಿನಗಳಲ್ಲಿ ಹೊರಬೀಳಲಿದೆ.
South Cinema
Actor Jeetendra: ಶ್ರೀದೇವಿ, ರೇಖಾ ಜತೆ ಅಫೇರ್ ಇದ್ರೂ ಹೇಮಾ ಮಾಲಿನಿ ಜತೆ ಮದುವೆಯಾಗಲು ಹೊರಟಿದ್ರು ನಟ ಜೀತೇಂದ್ರ!
Actor Jeetendra: ನಟ ಜೀತೇಂದ್ರ ಅವರ ವೈಯಕ್ತಿಕ ಜೀವನ ಮಾತ್ರ ಸಾಕಷ್ಟು ವಿವಾದತ್ಮಕವಾಗಿತ್ತು. ಹಲವಾರು ನಟಿಯರೊಂದಿಗೆ ಅವರ ಹೆಸರು ತುಳುಕು ಹಾಕಿಕೊಂಡಿತ್ತು.
ಬೆಂಗಳೂರು: 80ರ ದಶಕದಲ್ಲಿ ಬಾಲಿವುಡ್ ನಟ ಜೀತೇಂದ್ರ (Actor Jeetendra) ಅವರು ಬಾಲಿವುಡ್ ಚಿತ್ರರಂಗವನ್ನೇ ಆಳಿದವರು. ಅವರ ಅಂದವಾಗಿರಲಿ, ನೃತ್ಯವಾಗಲಿ, ನಟನೆಯಾಗಲಿ ಸಖತ್ ಕ್ರೇಜ್ ಹುಟ್ಟು ಹಾಕಿತ್ತು. ಪ್ರತಿಯೊಬ್ಬ ನಟಿಗೂ ಆಗಿನ ಕಾಲಕ್ಕೆ ಅವರ ಜತೆ ತೆರೆ ಹಂಚಿಕೊಳ್ಳುವ ಕನಸಾಗಿತ್ತು. ಆದರೆ ನಟ ಜೀತೇಂದ್ರ ಅವರ ವೈಯಕ್ತಿಕ ಜೀವನ ಮಾತ್ರ ಸಾಕಷ್ಟು ವಿವಾದತ್ಮಕವಾಗಿತ್ತು. ಹಲವಾರು ನಟಿಯರೊಂದಿಗೆ ಅವರ ಹೆಸರು ತುಳುಕು ಹಾಕಿಕೊಂಡಿತ್ತು.
ಜೀತೇಂದ್ರ ಅವರು ವಿ ಶಾಂತಾರಾಮ್ ಅವರ ʻನವರಂಗ್ʼ ಚಿತ್ರದ ಮೂಲಕ ಜೂನಿಯರ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 30 ಟೇಕ್‌ಗಳ ಬಳಿಕವೂ ಸಿನಿಮಾಗೆ ಡೈಲಾಗ್ ಡೆಲಿವರಿ ಮಾಡಲು ಪರಾದುಡುತ್ತಿದ್ದರು. ಆದರೆ, 5 ವರ್ಷಗಳ ನಂತರ, ಅದೇ ನಿರ್ದೇಶಕರು ಅವರನ್ನು ಗೀತ್ ಗಾಯ ಪಥರೋನ್ ನೇ (Geet Gaaya Patharon Ne) ಚಿತ್ರದಲ್ಲಿ ನಾಯಕನನ್ನಾಗಿ ಮಾಡಿದರು. ಅವರ ಶ್ರಮ ಕೊನೆಗೂ ಫಲ ನೀಡಿತು. ನಂತರ, ನಟ ಫರ್ಜ್, ಹಂಜೋಲಿ, ಕಾರವಾನ್, ಹಿಮ್ಮತ್ವಾಲಾ, ಧರಮ್ ವೀರ್, ತೋಹ್ಫಾ ಮತ್ತು ಅನೇಕ ಇತರ ಸೂಪರ್ ಹಿಟ್ ಚಲನಚಿತ್ರಗಳನ್ನು ನೀಡಿದರು.
ವರದಿಯ ಪ್ರಕಾರ, ನಟ ಜೀತೇಂದ್ರ ಅವರು ಶೋಭಾ ಕಪೂರ್ ಅವರನ್ನು ಮೊದಲು ಭೇಟಿಯಾದರು. ಬಳಿಕ ಅವರನ್ನೇ ಮದುವೆಯಾದರು. ಆದರೆ ಆಗ ಶೋಭಾ ಕಪೂರ್ ಅವರಿಗೆ ಕೇವಲ 14 ವರ್ಷ. ಆಗ ಅವರಿಗೆ ಮೊದಲ ನೋಟದಲ್ಲೇ ಪ್ರೀತಿಯಾಗಿರಲಿಲ್ಲ. ಬರಬರುತ್ತ ಇಬ್ಬರ ಸಂಬಂಧ ಗಟ್ಟಿಯಾಗ ತೊಡಗಿತು. ಜೀತೇಂದ್ರ ಅವರ ತಂದೆಗೆ ಹೃದಯಾಘಾತವಾದ ನಂತರ, ಜೀತೇಂದ್ರ ತಮ್ಮ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡರು. ಶೋಭಾ ಗಗನಸಖಿಯಾದರು. ಇದಾದ ಬಳಿಕ ಜೀತೇಂದ್ರʻ ಏಕ್ ಬೇಚಾರʼ ಚಿತ್ರದ (Ek Bechara) ಚಿತ್ರೀಕರಣದ ಸಮಯದಲ್ಲಿ ರೇಖಾಗೆ ಹತ್ತಿರವಾಗಿದ್ದರು. ಜೋಡಿಯು ಸೂಪರ್ ಹಿಟ್ ಆಯಿತು. ಮತ್ತೆ ಇದೇ ಜೋಡಿ ಅನೋಖಿ ಅದಾದಲ್ಲಿ (Anokhi Ada) ನಟಿಸಿತು. ಹೀಗೆ ರೇಖಾ ಅವರಿಗೆ ನಟ ಜೀತೇಂದ್ರ ಹತ್ತರವಾದಂತೆ ಶೋಭಾ ಜತೆಗಿನ ಸಂಬಂಧ ಕೊನೆಗೊಂಡಿತು.
ಇದನ್ನೂ ಓದಿ: Samantha Ruth Prabhu: ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಊ ಅಂಟಾವ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಸಮಂತಾ!
ಜಿತೇಂದ್ರ ಹಾಗೂ ಹೇಮಾ ಮಾಲಿನಿ ನಡುವೆ ಸಂಬಂಧದ ವದಂತಿಗಳು ಹರಿದಾಡಿದ್ದವು. ಹೇಮಾ ಮಾಲಿನಿ ಅವರ ಪುಸ್ತಕ `ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್’ ಪ್ರಕಾರ, ಹೇಮಾ ಮಾಲಿನಿ ಧರ್ಮೇಂದ್ರ ಅವರನ್ನು ಪ್ರೀತಿಸುತ್ತಿದ್ದರು. ಆದರೆ ಹೇಮಾ ಮಾಲಿನಿ ಹಾಗೂ ಜೀತೇಂದ್ರ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸಿರಲಿಲ್ಲ. ಆದರೆ ಈ ಎರಡೂ ಕುಟುಂಬಕ್ಕೆ ಹೇಮಾ ಮಾಲಿನಿ ಹಾಗೂ ಜೀತೇಂದ್ರ ಮದುವೆಯಾಗಬೇಕೆಂದು ಬಯಸಿತ್ತು. ಇವರಿಬ್ಬರೂ ಇನ್ನೇನು ಮದುವೆಯಾಗಬೇಕೆಂಬಷ್ಟರಲ್ಲಿ ಧರ್ಮೇಂದ್ರ ಅವರು ಜೀತೇಂದ್ರ ಅವರ ಪತ್ನಿ ಶೋಭಾ ಜತೆಗೆ ಹೋಗಿ ಮದುವೆಯನ್ನು ತಡೆದರು. ಜೀತೇಂದ್ರ ಅವರಿಗೆ ಇಬ್ಬರು ಮಕ್ಕಳಿದ್ದಾರೆ, ತುಷಾರ್ ಕಪೂರ್ ಹಾಗೂ, ಏಕ್ತಾ ಕಪೂರ್.
South Cinema
Samantha Ruth Prabhu: ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಊ ಅಂಟಾವ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಸಮಂತಾ!
Samantha Ruth Prabhu: ಕಪ್ಪು ಬಣ್ಣದ ಗ್ಲಾಮರಸ್ ಡ್ರೆಸ್ ಧರಿಸಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಸ್ಟೆಪ್ ಹಾಕಿದ್ದಾರೆ ನಟಿ ಸಮಂತಾ.
ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ವರುಣ್ ಧವನ್ ಸದ್ಯ ವಿದೇಶದಲ್ಲಿದ್ದಾರೆ. ರಾಜ್ ಮತ್ತು ಡಿಕೆ ಅವರೊಂದಿಗೆ ತಮ್ಮ ಸಿಟಾಡೆಲ್ ಸಿರೀಸ್ ಚಿತ್ರೀಕರಣದಲ್ಲಿದ್ದಾರೆ. ಚಿತ್ರೀಕರಣದ ಬಿಡುವಿನ ವೇಳೆ ಬೆಲ್‌ಗ್ರೇಡ್‌ನ ಕ್ಲಬ್ ಒಂದಕ್ಕೆ ಮೋಜು ಮಾಡಲು ಹೋಗಿದ್ದ ವೇಳೆ ಸಮಂತಾರ ಊ ಅಂಟಾವ ಊಹು ಅಂಟಾವ ಹಾಡಿಗೆ ಸಮಂತಾ, ವರುಣ್ ಧವನ್ ಹಾಗೂ ಇತರರು ಹಾಡಿಗೆ ಸಖತ್ ಸ್ಟೆಪ್ಗಳನ್ನು ಹಾಕಿದ್ದಾರೆ. ಆ ವಿಡಿಯೊ ಇದೀಗ ವೈರಲ್ ಆಗಿದೆ.
ವರುಣ್, ಸಮಂತಾ ಮತ್ತು ಸಿಕಂದರ್ ಖೇರ್ ಪ್ರಸ್ತುತ ಸರ್ಬಿಯಾದಲ್ಲಿ ಸಿಟಾಡೆಲ್ ಚಿತ್ರೀಕರಣದಲ್ಲಿದ್ದಾರೆ. ಕಪ್ಪು ಬಣ್ಣದ ಗ್ಲಾಮರಸ್ ಡ್ರೆಸ್ ಧರಿಸಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಸ್ಟೆಪ್ ಹಾಕಿದ್ದಾರೆ ನಟಿ ಸಮಂತಾ. ವರುಣ್ ಧವನ್ ಸಹ ಖುಷಿಯಾಗಿ ಊ ಅಂಟಾವ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಸಮಂತಾ-ವರುಣ್ ಜತೆಗೆ ಚಿತ್ರತಂಡದ ಇನ್ನೂ ಕೆಲವು ಸದಸ್ಯರು ಪಬ್ನಲ್ಲಿ ಹಾಜರಿದ್ದು ಅವರೂ ಸಹ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಪ್ರಿಯಾಂಕಾ ಚೋಪ್ರಾ ನಟಿಸಿರುವ ಇಂಗ್ಲೀಷ್ ವೆಬ್ ಸರಣಿಯ ಹಿಂದಿ ಅವತರಣಿಕೆ ಇದಾಗಿದೆ. ಇಂಗ್ಲೀಷ್ನಲ್ಲಿ ರೂಸ್ಸೋ ಬ್ರದರ್ಸ್ ಈ ವೆಬ್ ಸರಣಿಗೆ ಚಿತ್ರಕತೆ ಬರೆದು ನಿರ್ಮಾಣ ಮಾಡಿದ್ದರೆ ಹಿಂದಿಯಲ್ಲಿ ರಾಜ್ ಮತ್ತು ಡಿಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ವೆಬ್ ಸರಣಿಯು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: Samantha Ruth Prabhu : ಹಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಸಮಂತಾ! ಯಾವ ಸಿನಿಮಾ?
ವೈರಲ್ ವಿಡಿಯೊ
Samantha item song craze is unbelievable 🥵🥵#SamanthaRuthPrabhu #Pushpa pic.twitter.com/BNZ2V6BOwj
— Actress Glam (@actressglam) June 10, 2023
ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಸಮಂತಾ?
‘ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್‌ನಲ್ಲಿ ಸಮಂತಾ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಫ್ಯಾಮಿಲಿ ಮ್ಯಾನ್ ಸಿರೀಸ್ ಬರುವ ಸಮಯದಲ್ಲಿ ಸಮಂತಾ ಅವರು ನಾಗಚೈತನ್ಯ ಅವರಿಗೆ ವಿಚ್ಛೇದನ ನೀಡಿರಲಿಲ್ಲ. ಆದರೆ ಸಿರೀಸ್‌ನಲ್ಲಿ ಸಮಂತಾ ನಟಿಸಿರುವ ದೃಶ್ಯಗಳೇ ಇಬ್ಬರನ್ನು ಬೇರೆ ಮಾಡಿದ್ದು ಎನ್ನುವ ಸುದ್ದಿ ವೈರಲ್ ಆಗಿತ್ತು. ‘ಫ್ಯಾಮಿಲಿ ಮ್ಯಾನ್ 2’ ಸಿರೀಸ್ ನಿರ್ದೇಶಿಸಿದ್ದ ರಾಜ್ ಮತ್ತು ಡಿಕೆ ‘ಸಿಟಾಡೆಲ್’ ಭಾರತೀಯ ವರ್ಷನ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಸಿರೀಸ್‌ನಲ್ಲಿ ಸಮಂತಾ, ಪ್ರಿಯಾಂಕಾ ಚೋಪ್ರಾರಂತೆ ಹಾಟ್ ದೃಶ್ಯಗಳನ್ನು ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಸಮಂತಾ ರುತ್ ಪ್ರಭು (Samantha) ಮತ್ತು ವಿಜಯ್ ದೇವರಕೊಂಡ (Vijay Devarakonda) ಕಾಂಬಿನೇಶನ್ ಸಿನಿಮಾವಾದ ʼಖುಷಿʼ ಇದೇ ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. 2018ರ ʼಮಹಾನಟಿʼ ಚಿತ್ರದ ನಂತರ ವಿಜಯ್ ಹಾಗೂ ಸ್ಯಾಮ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ʼಖುಷಿʼ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ.
-
ಪ್ರಮುಖ ಸುದ್ದಿ2 hours ago
Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!
-
ಆರೋಗ್ಯ45 mins ago
Health Tips: ಮೊಸರಿನ ಜೊತೆಗೆ ಈ ಆಹಾರಗಳನ್ನು ತಿಂದರೆ ಅಪಾಯ ಕಟ್ಟಿಟ್ಟಬುತ್ತಿ!
-
ಕ್ರಿಕೆಟ್22 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕ್ರಿಕೆಟ್21 hours ago
Viral News: ಶುಭಮನ್ ಗಿಲ್ಗೆ ಪ್ರಪೋಸ್ ಮಾಡಿದ ಯುವತಿ; ಸಾರಾ ತೆಂಡೂಲ್ಕರ್ ರಿಯ್ಯಾಕ್ಷನ್ ಹೇಗಿತ್ತು?
-
ದೇಶ18 hours ago
Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್
-
ಕ್ರಿಕೆಟ್19 hours ago
WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್ ಫೈನಲ್ ಪಂದ್ಯ!
-
ಕರ್ನಾಟಕ17 hours ago
BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ
-
South Cinema19 hours ago
Adipurush Movie: ಮುಟ್ಟಾದವರು ಆದಿಪುರುಷ್ ಸಿನ್ಮಾ ನೋಡೋದು ಬೇಡ! ರಾಹುಕಾಲದಲ್ಲಿ ಶೋ ಬೇಡ್ವೇ ಬೇಡ