ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ದಳಪತಿ ವಿಜಯ್ ಕಾಂಬಿನೇಶನ್ನ ʻವಾರಿಸುʼ ಚಿತ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಪ್ರಾಣಿಗಳನ್ನು ಅನುಮತಿ ಇಲ್ಲದೇ ಸಿನಿಮಾದಲ್ಲಿ ಬಳಸಿಕೊಂಡಿದ್ದಕ್ಕಾಗಿ ಪ್ರಾಣಿ ದಯಾ ಸಂಘದವರು ಚಿತ್ರತಂಡಕ್ಕೆ ನೋಟಿಸ್ ನೀಡಿದೆ.
ಚಿತ್ರ ಈ ಹಿಂದೆ ಅಷ್ಟೇ ಹಾಡನ್ನು ಬಿಡುಗಡೆ ಮಾಡಿದ್ದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಅಧಿಕಾರಿಗಳ ಅನುಮತಿ ಇಲ್ಲದೆ ಸಿನಿಮಾ ತಂಡ ಚಿತ್ರೀಕರಣದಲ್ಲಿ ಆನೆಗಳನ್ನು ಬಳಸಿಕೊಂಡ ಪರಿಣಾಮ ಪ್ರಾಣಿ ದಯಾ ಸಂಘ ನೋಟಿಸ್ ನೀಡಿದೆ. ಈ ಬಗ್ಗೆ ಮುಂದಿನ ಏಳು ದಿನಗಳಲ್ಲಿ ವಿವರಣೆ ನೀಡುವಂತೆ ಅರಣ್ಯಾಧಿಕಾರಿಗಳು ʻವಾರಿಸುʼ ತಂಡಕ್ಕೆ ಸೂಚಿಸಿದ್ದಾರೆ. ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Vijay Thalapathy | ವಿಜಯ್ ದಳಪತಿ-ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು ಸಿನಿಮಾ ಸಾಂಗ್ ಔಟ್!
ನಿಯಮಗಳ ಪ್ರಕಾರ ಶೂಟಿಂಗ್ನಲ್ಲಿ ಪ್ರಾಣಿಗಳನ್ನು ಬಳಸಿಕೊಂಡರೆ ಪ್ರತಿಯೊಬ್ಬ ವ್ಯಕ್ತಿಯು ನೋಂದಾಯಿಸಿಕೊಳ್ಳಬೇಕು. ಈ ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ ದಿಲ್ ರಾಜ್ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ | Vijay Thalapathy | ತುನಿವು, ವಾರಿಸು ಪೋಸ್ಟರ್ ವಾರ್; ಅಜಿತ್ ಫ್ಯಾನ್ಸ್ ಕೆರಳಿಸಿದ ದಳಪತಿ ಅಭಿಮಾನಿಗಳು