ಬೆಂಗಳೂರು: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ನಟನೆ ಮೂಲಕ ಒಳ್ಳೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಮಿಂಚಿದ ನಟಿಗೆ ಅಭಿಮಾನಿ ಬಳಗ ಸಾಕಷ್ಟು ಇದೆ. ಆಗಾಗ ನಟಿ ತಮ್ಮ ವೈಯಕ್ತಿಕ ಕಾರಣಗಳಿಂದಲೂ ಸುದ್ದಿಯಾಗುತ್ತಲೇ ಇರುತ್ತಾರೆ. ರಶ್ಮಿಕಾ ಮತ್ತು ಅವರ ಸಹನಟ ವಿಜಯ್ ದೇವರಕೊಂಡ ಇಬ್ಬರೂ ಡೇಟಿಂಗ್‌ನಲ್ಲಿ ಇದ್ದಾರೆ ಎಂಬ ವದಂತಿಗಳಿಗೆ ನಟಿ ನಾವು ಒಳ್ಳೆಯ ಸ್ನೇಹಿತರು ಎಂದು ಸಮರ್ಥಿಸಿಕೊಂಡಿದ್ದಾರೆ.
ಆದಾಗ್ಯೂ, ಈ ನಡುವೆ ರಶ್ಮಿಕಾ ಹಾಗೂ ವಿಜಯ್ ರಿಲೇಶನ್‌ಶಿಪ್‌ನಲ್ಲಿ ಇಲ್ಲ. ಈಗಾಗಲೇ ನಟಿ ಬೇರೆಯವರ ಜತೆ ಪ್ರೀತಿಯಲ್ಲಿ ಇದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ತೆಲುಗು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅವರನ್ನು ಸದ್ಯ ರಶ್ಮಿಕಾ ಪ್ರೀತಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜೋಡಿ ಸಾಮಾನ್ಯವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
ವದಂತಿಗಳು ಪ್ರಾರಂಭವಾದದ್ದು ಹೇಗೆ?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮೊದಲ ಬಾರಿಗೆ ಪರಶುರಾಮ್ ನಿರ್ದೇಶನದ 2018ರ ʻಗೀತ ಗೋವಿಂದಂʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಚಲನಚಿತ್ರ ಸೂಪರ್ ಸಕ್ಸೆಸ್ ಕಂಡಿತು. 2019 ರಲ್ಲಿ, ರಶ್ಮಿಕಾ ಮತ್ತು ವಿಜಯ್ ಮತ್ತೆ ʻಡಿಯರ್ ಕಾಮ್ರೇಡ್ʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಸಿನಿಮಾ ಹಿಟ್ ಆಗಿದ್ದು, ಮತ್ತೊಮ್ಮೆ ಇವರಿಬ್ಬರ ಕೆಮಿಸ್ಟ್ರಿ ಟಾಕ್ ಆಫ್ ದಿ ಟೌನ್ ಆಯಿತು. 2019ರ ಆರಂಭದಲ್ಲಿ, ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ವದಂತಿಗಳು ಹೊರಹೊಮ್ಮಲು ಶುರುವಾದವು. ಹಲವಾರು ಪಾರ್ಟಿಗಳಲ್ಲಿ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ಊಹಾಪೋಹಗಳು ಶುರುವಾದವು. ಆದಾಗ್ಯೂ, ಇಬ್ಬರೂ ವದಂತಿಗಳು ಶುರುವಾದಂತೆ ತಮ್ಮಿಬರ ಮಧ್ಯೆ ಏನೂ ಇಲ್ಲ. ಇಬ್ಬರು ಸ್ನೇಹಿತರು ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: Rashmika Mandanna: ಸಮಂತಾ ನಟಿಸಬೇಕಿದ್ದ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ!
ರಶ್ಮಿಕಾ ಅವರು ವಿಜಯ್ ಬಗ್ಗೆ ಹೇಳಿದ್ದೇನು?
ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಅಭಿಮಾನಿಗಳೊಂದಿಗೆ ಸೆಷನ್ ನಡೆಸುತ್ತಲೇ ಇರುತ್ತಾರೆ. ಹಿಂದೊಮ್ಮೆ ಅಭಿಮಾನಿಯೊಬ್ಬರು ರಶ್ಮಿಕಾ ಅವರಿಗೆ ʻʻವಿಜಯ್ ದೇವರಕೊಂಡ ನಿಮಗೆ ಎಷ್ಟು ಮುಖ್ಯ?”ಎಂದು ಕೇಳಿದ ಪ್ರಶ್ನೆಗೆ ರಶ್ಮಿಕಾ ಪ್ರತಿಕ್ರಿಯೆ ನೀಡಿ ʻʻಬೆಸ್ಟ್ ಫ್ರೆಂಡ್ʼʼಎಂದು ಹೇಳಿದರು.
ದುಲ್ಕರ್ ಸಲ್ಮಾನ್, ರಶ್ಮಿಕಾ ಮಂದಣ್ಣ ಮತ್ತು ಮೃಣಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸೀತಾ ರಾಮಂ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿಜಯ್ ಅವರನ್ನು ಆಹ್ವಾನಿಸಲಾಗಿತ್ತು. ಈವೆಂಟ್‌ನಲ್ಲಿ, ವಿಜಯ್ ನಟಿಯನ್ನು ಅಭಿನಂದಿಸಿದರು, “ರಶ್ಮಿಕಾ, ನೀವು ಯಾವಾಗಲೂ ಸುಂದರವಾಗಿ ಕಾಣುತ್ತೀರಿ” ಎಂದು ಹೇಳುವ ಮೂಲಕ, ವೇದಿಕೆಯಿಂದ ಕೆಳಗಿಳಿದ ನಂತರ, ಇಬ್ಬರು ಪರಸ್ಪರ ತಬ್ಬಿಕೊಂಡರು. ಈ ಕ್ಷಣದ ವಿಡಿಯೊ ವೈರಲ್ ಆಗಿದ್ದು, ವಿಜಯ್ ಮತ್ತು ರಶ್ಮಿಕಾ ಅಭಿಮಾನಿಗಳು ಸಂತೋಷಪಟ್ಟರು.
ರಶ್ಮಿಕಾ ಜತೆಗಿನ ಸಂಬಂಧದ ಕುರಿತು ವಿಜಯ್ ಹೇಳಿದ್ದೇನು?
ಕಾಫಿ ವಿತ್ ಕರಣ್‌ನ ಸಂಚಿಕೆಯಲ್ಲಿ, ವಿಜಯ್ ಅವರಿಗೆ ರಶ್ಮಿಕಾ ಮತ್ತು ಅವರ ಸಂಬಂಧದ ಬಗ್ಗೆ ಕೇಳಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ನಟ ʻʻನನ್ನ ವೃತ್ತಿಜೀವನದ ಆರಂಭದ ವರ್ಷಗಳಲ್ಲಿ ನಾವು ಒಟ್ಟಿಗೆ ಎರಡು ಚಿತ್ರಗಳನ್ನು ಮಾಡಿದ್ದೇವೆ. ನಾನು ಅವರನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ಅದು ಒಳ್ಳೆಯ ಸ್ನೇಹಿತೆಯಾಗಿʼʼ ಎಂದಿದ್ದರು.
ಇವರಿಬ್ಬರು ಅದೆಷ್ಟೋ ಬಾರಿ ಮಾಧ್ಯಮಗಳ ಮುಂದೆ ತಮ್ಮಿಬ್ಬರ ಮಧ್ಯೆ ಏನೂ ಇಲ್ಲ ಎಂದು ಹೇಳಿಕೆ ನೀಡಿದ್ದರೂ, ಅವರ ಅಭಿಮಾನಿಗಳು ಮಾತ್ರ ಜೋಡಿ ಹಕ್ಕಿಗಳು ಎಂದೇ ಭಾವಿಸಿದ್ದಾರೆ.