Rashmika Mandanna Relationship with Vijay Deverakonda Rashmika Mandanna: ವಿಜಯ್‌ ದೇವರಕೊಂಡ- ರಶ್ಮಿಕಾ ಸಂಬಂಧದ ಬಗ್ಗೆ ವದಂತಿಗಳು ಹುಟ್ಟಿಕೊಂಡದ್ದು ಹೇಗೆ? - Vistara News

South Cinema

Rashmika Mandanna: ವಿಜಯ್‌ ದೇವರಕೊಂಡ- ರಶ್ಮಿಕಾ ಸಂಬಂಧದ ಬಗ್ಗೆ ವದಂತಿಗಳು ಹುಟ್ಟಿಕೊಂಡದ್ದು ಹೇಗೆ?

ರಶ್ಮಿಕಾ (Rashmika Mandanna) ಮತ್ತು ಅವರ ಸಹನಟ ವಿಜಯ್ ದೇವರಕೊಂಡ ಇಬ್ಬರೂ ಡೇಟಂಗ್‌ನಲ್ಲಿ ತೊಡಗಿದ್ದಾರೆ ಎಂಬ ವದಂತಿಗಳಿಗೆ ನಟಿ ನಾವು ಒಳ್ಳೆಯ ಸ್ನೇಹಿತರು ಎಂದು ಸಮರ್ಥಿಸಿಕೊಂಡಿದ್ದಾರೆ.
ಆದಾಗ್ಯೂ, ಈ ನಡುವೆ ರಶ್ಮಿಕಾ ಹಾಗೂ ವಿಜಯ್‌ ರಿಲೇಶನ್‌ಶಿಪ್‌ನಲ್ಲಿ ಇಲ್ಲ. ಈಗಾಗಲೇ ನಟಿ ಬೇರೆಯವರ ಜತೆ ಪ್ರೀತಿಯಲ್ಲಿ ಇದ್ದಾರೆ

VISTARANEWS.COM


on

Rashmika Mandanna Relationship with Vijay Deverakonda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ನಟನೆ ಮೂಲಕ ಒಳ್ಳೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಮಿಂಚಿದ ನಟಿಗೆ ಅಭಿಮಾನಿ ಬಳಗ ಸಾಕಷ್ಟು ಇದೆ. ಆಗಾಗ ನಟಿ ತಮ್ಮ ವೈಯಕ್ತಿಕ ಕಾರಣಗಳಿಂದಲೂ ಸುದ್ದಿಯಾಗುತ್ತಲೇ ಇರುತ್ತಾರೆ. ರಶ್ಮಿಕಾ ಮತ್ತು ಅವರ ಸಹನಟ ವಿಜಯ್ ದೇವರಕೊಂಡ ಇಬ್ಬರೂ ಡೇಟಿಂಗ್‌ನಲ್ಲಿ ಇದ್ದಾರೆ ಎಂಬ ವದಂತಿಗಳಿಗೆ ನಟಿ ನಾವು ಒಳ್ಳೆಯ ಸ್ನೇಹಿತರು ಎಂದು ಸಮರ್ಥಿಸಿಕೊಂಡಿದ್ದಾರೆ.

ಆದಾಗ್ಯೂ, ಈ ನಡುವೆ ರಶ್ಮಿಕಾ ಹಾಗೂ ವಿಜಯ್‌ ರಿಲೇಶನ್‌ಶಿಪ್‌ನಲ್ಲಿ ಇಲ್ಲ. ಈಗಾಗಲೇ ನಟಿ ಬೇರೆಯವರ ಜತೆ ಪ್ರೀತಿಯಲ್ಲಿ ಇದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ತೆಲುಗು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅವರನ್ನು ಸದ್ಯ ರಶ್ಮಿಕಾ ಪ್ರೀತಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜೋಡಿ ಸಾಮಾನ್ಯವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

ವದಂತಿಗಳು ಪ್ರಾರಂಭವಾದದ್ದು ಹೇಗೆ?

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮೊದಲ ಬಾರಿಗೆ ಪರಶುರಾಮ್ ನಿರ್ದೇಶನದ 2018ರ ʻಗೀತ ಗೋವಿಂದಂʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಚಲನಚಿತ್ರ ಸೂಪರ್‌ ಸಕ್ಸೆಸ್‌ ಕಂಡಿತು. 2019 ರಲ್ಲಿ, ರಶ್ಮಿಕಾ ಮತ್ತು ವಿಜಯ್ ಮತ್ತೆ ʻಡಿಯರ್ ಕಾಮ್ರೇಡ್ʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಸಿನಿಮಾ ಹಿಟ್ ಆಗಿದ್ದು, ಮತ್ತೊಮ್ಮೆ ಇವರಿಬ್ಬರ ಕೆಮಿಸ್ಟ್ರಿ ಟಾಕ್ ಆಫ್ ದಿ ಟೌನ್ ಆಯಿತು. 2019ರ ಆರಂಭದಲ್ಲಿ, ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ವದಂತಿಗಳು ಹೊರಹೊಮ್ಮಲು ಶುರುವಾದವು. ಹಲವಾರು ಪಾರ್ಟಿಗಳಲ್ಲಿ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ಊಹಾಪೋಹಗಳು ಶುರುವಾದವು. ಆದಾಗ್ಯೂ, ಇಬ್ಬರೂ ವದಂತಿಗಳು ಶುರುವಾದಂತೆ ತಮ್ಮಿಬರ ಮಧ್ಯೆ ಏನೂ ಇಲ್ಲ. ಇಬ್ಬರು ಸ್ನೇಹಿತರು ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ: Rashmika Mandanna: ಸಮಂತಾ ನಟಿಸಬೇಕಿದ್ದ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ!

ರಶ್ಮಿಕಾ ಅವರು ವಿಜಯ್‌ ಬಗ್ಗೆ ಹೇಳಿದ್ದೇನು?

ರಶ್ಮಿಕಾ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಅಭಿಮಾನಿಗಳೊಂದಿಗೆ ಸೆಷನ್‌ ನಡೆಸುತ್ತಲೇ ಇರುತ್ತಾರೆ. ಹಿಂದೊಮ್ಮೆ ಅಭಿಮಾನಿಯೊಬ್ಬರು ರಶ್ಮಿಕಾ ಅವರಿಗೆ ʻʻವಿಜಯ್ ದೇವರಕೊಂಡ ನಿಮಗೆ ಎಷ್ಟು ಮುಖ್ಯ?”ಎಂದು ಕೇಳಿದ ಪ್ರಶ್ನೆಗೆ ರಶ್ಮಿಕಾ ಪ್ರತಿಕ್ರಿಯೆ ನೀಡಿ ʻʻಬೆಸ್ಟ್ ಫ್ರೆಂಡ್ʼʼಎಂದು ಹೇಳಿದರು.

ದುಲ್ಕರ್ ಸಲ್ಮಾನ್, ರಶ್ಮಿಕಾ ಮಂದಣ್ಣ ಮತ್ತು ಮೃಣಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸೀತಾ ರಾಮಂ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿಜಯ್ ಅವರನ್ನು ಆಹ್ವಾನಿಸಲಾಗಿತ್ತು. ಈವೆಂಟ್‌ನಲ್ಲಿ, ವಿಜಯ್ ನಟಿಯನ್ನು ಅಭಿನಂದಿಸಿದರು, “ರಶ್ಮಿಕಾ, ನೀವು ಯಾವಾಗಲೂ ಸುಂದರವಾಗಿ ಕಾಣುತ್ತೀರಿ” ಎಂದು ಹೇಳುವ ಮೂಲಕ, ವೇದಿಕೆಯಿಂದ ಕೆಳಗಿಳಿದ ನಂತರ, ಇಬ್ಬರು ಪರಸ್ಪರ ತಬ್ಬಿಕೊಂಡರು. ಈ ಕ್ಷಣದ ವಿಡಿಯೊ ವೈರಲ್ ಆಗಿದ್ದು, ವಿಜಯ್ ಮತ್ತು ರಶ್ಮಿಕಾ ಅಭಿಮಾನಿಗಳು ಸಂತೋಷಪಟ್ಟರು.

ರಶ್ಮಿಕಾ ಜತೆಗಿನ ಸಂಬಂಧದ ಕುರಿತು ವಿಜಯ್‌ ಹೇಳಿದ್ದೇನು?

ಕಾಫಿ ವಿತ್ ಕರಣ್‌ನ ಸಂಚಿಕೆಯಲ್ಲಿ, ವಿಜಯ್‌ ಅವರಿಗೆ ರಶ್ಮಿಕಾ ಮತ್ತು ಅವರ ಸಂಬಂಧದ ಬಗ್ಗೆ ಕೇಳಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ನಟ ʻʻನನ್ನ ವೃತ್ತಿಜೀವನದ ಆರಂಭದ ವರ್ಷಗಳಲ್ಲಿ ನಾವು ಒಟ್ಟಿಗೆ ಎರಡು ಚಿತ್ರಗಳನ್ನು ಮಾಡಿದ್ದೇವೆ. ನಾನು ಅವರನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ಅದು ಒಳ್ಳೆಯ ಸ್ನೇಹಿತೆಯಾಗಿʼʼ ಎಂದಿದ್ದರು.

ಇವರಿಬ್ಬರು ಅದೆಷ್ಟೋ ಬಾರಿ ಮಾಧ್ಯಮಗಳ ಮುಂದೆ ತಮ್ಮಿಬ್ಬರ ಮಧ್ಯೆ ಏನೂ ಇಲ್ಲ ಎಂದು ಹೇಳಿಕೆ ನೀಡಿದ್ದರೂ, ಅವರ ಅಭಿಮಾನಿಗಳು ಮಾತ್ರ ಜೋಡಿ ಹಕ್ಕಿಗಳು ಎಂದೇ ಭಾವಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಟಾಲಿವುಡ್

Actor Dhanush: ಧನುಷ್‌ ಬರ್ತ್‌ಡೇ ಸ್ಪೆಷಲ್‌; ‘ಕುಬೇರ’ ಸಿನಿಮಾದಿಂದ ಲುಕ್‌ ಪೋಸ್ಟರ್‌ ಔಟ್‌!

Actor Dhanush: ‘ಕುಬೇರ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ನಾಗಾರ್ಜುನ, ಸಂದೀಪ್ ಕಿಶನ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೂಪರ್ ಸ್ಟಾರ್ ಧನುಷ್ ನಟನೆಯ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ʻಕುಬೇರʼ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

VISTARANEWS.COM


on

Actor Dhanush new poster from Kubera unveiled on his birthday
Koo

ಬೆಂಗಳೂರು: ಕಾಲಿವುಡ್‌ ನಟ ಧನುಷ್ (Actor Dhanush) ಅವರ ಮುಂಬರುವ ಚಿತ್ರ ‘ಕುಬೇರ’ ಸಿನಿಮಾ ಬಿಗ್‌ ಅಪ್‌ಡೇಟ್‌ ಕೊಟ್ಟಿದೆ. ಇಂದು ಧನುಷ್‌ ಅವರ ಜನುಮದಿನ. 41ನೇ ಹುಟ್ಟುಹಬ್ಬದಂದು ನಟನ ಹೊಸ ಪೋಸ್ಟರ್ ಔಟ್‌ ಆಗಿದೆ. ಧನುಷ್‌ ಅವರ ಹೊಸ ಲುಕ್‌ ಕಂಡು ಸಿನಿರಸಿಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಧನುಷ್ ಅವರು ತಮ್ಮ ಮುಂಬರುವ ಚಿತ್ರ ‘ಕುಬೇರ’ ಹೊಸ ಪೋಸ್ಟರ್‌ನಲ್ಲಿ ಸ್ವಲ್ಪ ಡಲ್‌ ಆಗಿ ಕಂಡಿದ್ದಾರೆ. ʻಕುಬೇರ’ ಧನುಷ್ ಅವರ 51 ನೇ ಚಿತ್ರವಾಗಿದೆ. , ‘ಕುಬೇರ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ನಾಗಾರ್ಜುನ, ಸಂದೀಪ್ ಕಿಶನ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೂಪರ್ ಸ್ಟಾರ್ ಧನುಷ್ ನಟನೆಯ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ʻಕುಬೇರʼ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿ ಮತ್ತು ಅಮಿಗೋಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್‌ನಡಿಯಲ್ಲಿ ಸುನೀಲ್ ನಾರಂಗ್ ಮತ್ತು ಪುಸ್ಕುರ್ ರಾಮ್ ಮೋಹನ್ ರಾವ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ‘ಶೇಖರ್ ಕಮ್ಮುಲ ಅವರ ಕುಬೇರ’ ಒಂದು ಪ್ಯಾನ್-ಇಂಡಿಯಾ ಬಹುಭಾಷಾ ಚಿತ್ರವಾಗಿದ್ದು, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ.

ಈಗಾಗಲೇ ಧನುಷ್ ಅವರ ರಾಯನ್‌ ಸಿನಿಮಾ ತೆರೆ ಕಂಡಿದೆ. ಧನುಷ್‌ ಬರೆದು ನಿರ್ದೇಶಿಸಿರುವ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ʻರಾಯನ್ʼ ಸಿನಿಮಾವನ್ನು ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಜುಲೈ 26ಕ್ಕೆ ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ: Actor Dhanush: ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆ ಹೋದ ನಟ ಧನುಷ್

ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ರಾಯನ್‌’ (Raayan). ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿದ್ದರು. 2017 ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ʻರಾಯನ್‌ʼ ಅವರ ಎರಡನೇ ನಿರ್ದೇಶನದ ಸಿನಿಮಾ. ಧನುಷ್‌ ಕೊನೆಯದಾಗಿ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಕಾಣಿಸಿಕೊಂಡರು. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಮೂರ್ ಪ್ರಮುಖ ಪಾತ್ರಗಳಲ್ಲಿದ್ದರು.

Continue Reading

ಸ್ಯಾಂಡಲ್ ವುಡ್

Shiva Rajkumar: ಸಾಯಿಕುಮಾರ್‌ಗೆ ಶಿವಣ್ಣ ಡ್ಯೂಪ್ ಆಗಿದ್ದ ಸಿನಿಮಾ ಯಾವುದು? ಆ ದೃಶ್ಯಕ್ಕೆ ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ!

Shiva Rajkumar: ಕನ್ನಡದಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶನದ ‘AK-47’ ಸಿನಿಮಾ ಹಿಟ್ ಆಗಿತ್ತು. ಶಿವರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದ ಚಿತ್ರಕ್ಕೆ ಕೋಟಿ ರಾಮು ಬಂಡವಾಳ ಹೂಡಿದ್ದರು. ವಿಶೇಷ ಅಂದ್ರೆ ಈ ಚಿತ್ರವನ್ನು ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ತರಲಾಗಿತ್ತು. ‘AK-47’ ಕನ್ನಡ ಚಿತ್ರದಲ್ಲಿ ಶಿವಣ್ಣ ಹೀರೊ ಆಗಿ ನಟಿಸಿದರೆ ತೆಲುಗಿನಲ್ಲಿ ಸಾಯಿಕುಮಾರ್ ಮಿಂಚಿದ್ದರು.

VISTARANEWS.COM


on

Shiva Rajkumar played the dupe for saikumar in film
Koo

ಬೆಂಗಳೂರು: ಸಿನಿಮಾಗಳಲ್ಲಿ ಡ್ಯೂಪ್ ಹಾಕುವುದು ಸರ್ವೇ ಸಾಮಾನ್ಯ. ತೆಲುಗು ನಟ ಸಾಯಿಕುಮಾರ್‌ಗೆ (Shiva Rajkumar) ಕನ್ನಡ ನಟ ಶಿವರಾಜ್‌ಕುಮಾರ್ ಒಂದು ಸಿನಿಮಾದಲ್ಲಿ ಡ್ಯೂಪ್ ಹಾಕಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ : ಸಾಯಿಕುಮಾರ್‌ ಈ ವಿಚಾರವನ್ನು ಬಹಿರಂಗಪಡಿಸಿದ್ದರು.ಕನ್ನಡದಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶನದ ‘AK-47’ ಸಿನಿಮಾ ಹಿಟ್ ಆಗಿತ್ತು. ಶಿವರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದ ಚಿತ್ರಕ್ಕೆ ಕೋಟಿ ರಾಮು ಬಂಡವಾಳ ಹೂಡಿದ್ದರು. ವಿಶೇಷ ಅಂದ್ರೆ ಈ ಚಿತ್ರವನ್ನು ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ತರಲಾಗಿತ್ತು. ‘AK-47’ ಕನ್ನಡ ಚಿತ್ರದಲ್ಲಿ ಶಿವಣ್ಣ ಹೀರೊ ಆಗಿ ನಟಿಸಿದರೆ ತೆಲುಗಿನಲ್ಲಿ ಸಾಯಿಕುಮಾರ್ ಮಿಂಚಿದ್ದರು.

ಈ ಬಗ್ಗೆ ನಟ ಸಾಯಿ ಕುಮಾರ್‌ ಮಾತನಾಡಿ ʻʻAK 47 ಸಿನಿಮಾದ ಮಾಡುವಾಗ ಡಬಲ್‌ ವರ್ಷನ್‌ ಮಾಡಬೇಕು ಎಂದು ರಾಮು ಅವರ ಪ್ಲ್ಯಾನ್‌ ಆಗಿತ್ತು. ಲಾಕ್‌ಅಪ್‌ಡೆತ್‌ ಸಿನಿಮಾ ಕೊಟ್ಟಿದ್ದು ಓಂ ಪ್ರಕಾಶ್‌. ರಾಮು ಅವರೇ ಪ್ರೊಡ್ಯೂಸರ್‌ ಆಗಿದ್ದರು. ಆ ಸಿನಿಮಾ ಕನ್ನಡವನ್ನು ಶಿವಣ್ಣ ಮಾಡ್ತಾರೆ, ತೆಲುಗು ನೀವು ಮಾಡಿ ಅಂದರು. ಖಂಡಿತ ಮಾಡ್ತೀನಿ ಎಂದೆ. ಬಾಂಬೆಯಲ್ಲಿ ಮೇಜರ್‌ ಎಪಿಸೋಡ್‌ ಇತ್ತು. ಅವರದ್ದು ನಂದೂ ಸೇಮ್‌ ಕಾಸ್ಟ್ಯೂಮ್‌ ಇತ್ತು. ಆದರೆ ನಾನು ಶೂಟ್‌ ಮಾಡುವಾಗ ಗಾಯಕ್ಕೆ ಒಳಗಾದೆ. ನನಗೆ ಏಟು ಬಿತ್ತು. ಆಸ್ಪತ್ರೆಗೆ ಕರೆದುಕೊಂಡರು. ತಿರಗಾ ಬಂದು ಮತ್ತೆ ಶೂಟಿಂಗ್‌ ಬಂದೆವು. ಟೆಲಿ ಶಾಟ್‌ ಒಂದು ಇತ್ತು. ಬಳಿಕ ನನ್ನ ಶಾಟ್‌ ಎಲ್ಲ ಅವರೇ ಮಾಡಿದ್ರು. ಇನ್ನು ಫೈಟ್ ಮಾಡುವಾಗ ಅಪ್ ಶಾಟ್ ಹೊಡೆಯಬೇಕಿತ್ತು. ಶಿವಣ್ಣ ತುಂಬಾ ಚೆನ್ನಾಗಿ ಮಾಡಿದರು. ನನಗೂ ಮಾಡೋಕೆ ಹೇಳ್ತಾರೆ ಅಂತ ನನಗೆ ಭಯವಾಗಿತ್ತು. ನನ್ನನ್ನು ಕರೆದು ಮಾಡಿ ಎಂದಾಗ ಆಗಲ್ಲ ಎಂದೆ. ಇಲ್ಲ ಮಾಡಲೇಬೇಕು ಎಂದ್ರು. ಶಿವಣ್ಣ ಬಂದ್ರು. ಸೇಮ್ ಡ್ರೆಸ್‌ನಲ್ಲಿ ಇದ್ರು. ಸ್ವಲ್ಪ ಆಂಗಲ್ ಚೇಂಜ್ ಮಾಡ್ಕೊಳ್ಳಿ ಸಾಯಿಗೆ ನಾನೇ ಡ್ಯೂಪ್ ಮಾಡ್ತೀನಿ ಅಂತ ಶಿವಣ್ಣ ಮಾಡಿಬಿಟ್ರು. ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ನಾನು ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದೆ. ಸಿನಿಮಾ ಎಲ್ಲಾ ಚೆನ್ನಾಗಿತ್ತು. ಆ ಶಾಟ್‌ಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದರು. ಆದರೆ ಜನ ಅಂದುಕೊಂಡಿದ್ದು ನಾನು ಅಂತ. ಆ ಕ್ಕ್ರೆಡಿಟ್‌ ಶಿವಣ್ಣ ಅವರಿಗೆ ಸೇರಬೇಕು ಎಂದರು.

ಇದನ್ನೂ ಓದಿ: Ajith Kumar: ಪ್ರಶಾಂತ್ ನೀಲ್- ಅಜಿತ್ ಭೇಟಿಯಾಗಿದ್ದು ನಿಜ; ಸಿನಿಮಾ ಬಗ್ಗೆ ಮ್ಯಾನೇಜರ್ ಹೇಳಿದ್ದೇನು?

ನಟ ಸಾಯಿಕುಮಾರ್ ಅವರನ್ನು ಕನ್ನಡ ಸಿನಿರಸಿಕರು ಡೈಲಾಗ್ ಕಿಂಗ್ ಎಂದೇ ಹೇಳುತ್ತಾರೆ. ಕನ್ನಡದ ‘ಲಾಕಪ್‌ ಡೆತ್’ ಸಿನಿಮಾ ಮೂಲಕ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. ‘ಪೊಲೀಸ್ ಸ್ಟೋರಿ’ ಸಿನಿಮಾ ದಾಖಲೆ ಬರೆದಿತ್ತು. ಮುಂದೆ ‘ಮುದ್ದಿನ ಕಣ್ಮಣಿ’, ‘ಅಗ್ನಿ ಐಪಿಎಸ್’, ‘ಪೊಲೀಸ್ ಸ್ಟೋರಿ-2’, ‘ಕಲ್ಪನಾ’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದರು. ಇದೀಗ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಎನ್ನುವ ಚಿತ್ರದಲ್ಲಿ ನಿರೂಪ್ ಭಂಡಾರಿ ಜೊತೆ ನಟಿಸುತ್ತಿದ್ದಾರೆ.

Continue Reading

South Cinema

Rashmika Mandanna: ದೇವರ ನಾಡಲ್ಲಿ ರಶ್ಮಿಕಾ ಬೋಲ್ಡ್‌ ಡ್ಯಾನ್ಸ್‌; ನಟಿಯನ್ನು ನೋಡಲು ಮುಗಿಬಿದ್ದ ಫ್ಯಾನ್ಸ್!

Rashmika Mandanna: ಕರುನಾಗಪಲ್ಲಿಯಲ್ಲಿ ವೆಡ್ಸ್ ಇಂಡಿಯಾ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭಕ್ಕೆ  ಗುರುವಾರ ಬೆಳಗ್ಗೆ 9 ಗಂಟೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ರಶ್ಮಿಕಾ ಆಗಮಿಸುತ್ತಿದ್ದಂತೆ,  ಅವರನ್ನು ಬರಮಾಡಿಕೊಳ್ಳಲು ಸಾವಿರಾರು ಫ್ಯಾನ್ಸ್‌ ಒಂದೆಡೆ ಸೇರಿದ್ದರು. 

VISTARANEWS.COM


on

Rashmika Mandanna attends an event in Kerala receives love
Koo

ಬೆಂಗಳೂರು: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಎರಡು ವರ್ಷಗಳ ಬಳಿಕ ದೇವರ ನಾಡು ಕೇರಳಕ್ಕೆ ಆಗಮಿಸಿದ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಕೇರಳದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. 2000 ಕ್ಕೂ ಹೆಚ್ಚು ಜನ ನಟಿಯನ್ನು ನೋಡಲು ಮುಗಿ ಬಿದ್ದಿದ್ದರು. ಕರುನಾಗಪಲ್ಲಿಯಲ್ಲಿ ವೆಡ್ಸ್ ಇಂಡಿಯಾ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭಕ್ಕೆ  ಗುರುವಾರ ಬೆಳಗ್ಗೆ 9 ಗಂಟೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ರಶ್ಮಿಕಾ ಆಗಮಿಸುತ್ತಿದ್ದಂತೆ,  ಅವರನ್ನು ಬರಮಾಡಿಕೊಳ್ಳಲು ಸಾವಿರಾರು ಫ್ಯಾನ್ಸ್‌ ಒಂದೆಡೆ ಸೇರಿದ್ದರು. 

ಇದೀಗ ರಶ್ಮಿಕಾ ಫೋಟೊ ಶೇರ್‌ ಮಾಡಿ “ನಾನು ನಿಮ್ಮೆಲ್ಲರನ್ನು ಭೇಟಿಯಾದಾಗ ನನ್ನ ಹೃದಯ ತುಂಬಿ ಬಂತು. ಧನ್ಯವಾದಗಳು ಕರುನಾಗಪಲ್ಲಿ. ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ದಕ್ಷಿಣದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಹೀಗಾಗಿ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯುತ್ತಾರೆ. ನಿನ್ನೆ (ಜು. 25) ಕೇರಳದ ಕೊಲ್ಲಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದರು, ಆದರೆ ನಟಿಯನ್ನು ವೀಕ್ಷಿಸಲು 2000 ಕ್ಕೂ ಹೆಚ್ಚು ಅಭಿಮಾನಿಗಳು ಜಮಾಯಿಸಿದರು. ನಟಿಯನ್ನು ಸ್ವಾಗತಿಸಲು ಕಾರ್ಯಕ್ರಮದ ಸಮಯದಲ್ಲಿ ರಶ್ಮಿಕಾ ಮಂದಣ್ಣ ನಟಿಸಿರುವ ಸಿನಿಮಾಗಳ ಹಲವಾರು ಹಾಡುಗಳನ್ನು ಪ್ರಸಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಸಿರು ಸೀರೆಯಲ್ಲಿ ಕಾಣಿಸಿಕೊಂಡರು ರಶ್ಮಿಕಾ.

ಇದನ್ನೂ ಓದಿ: Ajith Kumar: ಪ್ರಶಾಂತ್ ನೀಲ್- ಅಜಿತ್ ಭೇಟಿಯಾಗಿದ್ದು ನಿಜ; ಸಿನಿಮಾ ಬಗ್ಗೆ ಮ್ಯಾನೇಜರ್ ಹೇಳಿದ್ದೇನು?

ʻರಂಜಿತಮೆ’ ಹಾಡು ಪ್ಲೇ ಆಗುತ್ತಿದ್ದಂತೆ ನೃತ್ಯ ಮಾಡಲು ಪ್ರಾರಂಭಿಸಿದರು ನಟಿ. ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ತಮ್ಮ ಎಂದಿನ ಸ್ಟೈಲ್‌ನಲ್ಲಿ ಫ್ಲೈಯಿಂಗ್‌ ಕಿಸ್‌ ನೀಡಿದ್ದಾರೆ ನಟಿ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸಲ್ಮಾನ್‌ ಖಾನ್‌ ಅವರ ಸಿಕಂದರ್‌ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಅದೇ ರೀತಿ ಛಾವಾ ಸಿನಿಮಾಗೆ ರಶ್ನಿಕಾ ನಾಯಕಿ. ಪುಷ್ಪ ಸಿನಿಮಾಗೂ ರಶ್ಮಿಕಾ ನಾಯಕಿ.  ಈಗ ಒಂದೇ ದಿನ ರಶ್ಮಿಕಾ ಅವರ ಈ ಎರಡು ಸಿನಿಮಾಗಳು ರಿಲೀಸ್ ಆಗೋ ಸಾಧ್ಯತೆ ಇದೆ ಎಂದು ವರದಿಯಾಗಿದೆ.

‘ಪುಷ್ಪ 2’ ಸಿನಿಮಾ ಡಿಸೆಂಬರ್ 6ರಂದು ರಿಲೀಸ್ ಮಾಡೋದಾಗಿ ತಂಡದವರು ಘೋಷಣೆ ಮಾಡಿದ್ದಾರೆ. ಅದೇ ರೀತಿ ರಶ್ಮಿಕಾ ನಟನೆಯ ‘ಛವಾ’ ಕೂಡ ಡಿಸೆಂಬರ್ 6ಕ್ಕೆ ಬಿಡುಗಡೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ‘ಪುಷ್ಪ 2’ ಘೋಷಣೆ ಆದ ಬಳಿಕ ಈ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ ಆ ರೀತಿ ಆಗಿಲ್ಲ. ಈ ಚಿತ್ರ ಕೂಡ ಅಂದುಕೊಂಡಂತೆ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

Continue Reading

ಕಾಲಿವುಡ್

Ajith Kumar: ಪ್ರಶಾಂತ್ ನೀಲ್- ಅಜಿತ್ ಭೇಟಿಯಾಗಿದ್ದು ನಿಜ; ಸಿನಿಮಾ ಬಗ್ಗೆ ಮ್ಯಾನೇಜರ್ ಹೇಳಿದ್ದೇನು?

Ajith Kumar: ಇವರಿಬ್ಬರ ಕಾಂಬಿನೇಷನ್‌ನಲ್ಲಿ ಒಂದಲ್ಲ ಎರಡು ಸಿನಿಮಾ ಬರುತ್ತದೆ. ಇತ್ತೀಚೆಗೆ ಇಬ್ಬರೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು.. ಈ ಬಗ್ಗೆ ನಟ ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

Ajith Kumar Neel not collaborating for a film
Koo

ಬೆಂಗಳೂರು: ನಿರ್ದೇಶಕ ಪ್ರಶಾಂತ್ ನೀಲ್ ಜತೆ ತಮಿಳು ನಟ ಅಜಿತ್ (Ajith Kumar) ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿತ್ತು. ಈಗಾಗಲೇ ‘ಸಲಾರ್-2’ ಹಾಗೂ ‘NTR31’ ಸಿನಿಮಾಗಳನ್ನು ಪ್ರಶಾಂತ್ ನೀಲ್ ಒಪ್ಪಿಕೊಂಡಿದ್ದಾರೆ. ಮತ್ತೊಂದು ಕಡೆ ನಟ ಅಜಿತ್ ‘ವಿಡಾಮುಯರ್ಚಿ’ ಹಾಗೂ ‘ಗುಡ್‌ ಬ್ಯಾಡ್ ಅಗ್ಲಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಒಂದಲ್ಲ ಎರಡು ಸಿನಿಮಾ ಬರುತ್ತದೆ. ಇತ್ತೀಚೆಗೆ ಇಬ್ಬರೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು.. ಈ ಬಗ್ಗೆ ನಟ ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ ಪ್ರತಿಕ್ರಿಯಿಸಿದ್ದಾರೆ.

ಅಜಿತ್ ಮತ್ತು ಪ್ರಶಾಂತ್ ನೀಲ್ ಒಟ್ಟಿಗೆ ಸಿನಿಮಾ ಮಾಡುತ್ತಿಲ್ಲ ಎಂದು ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ ಸ್ಪಷ್ಟಪಡಿಸಿದ್ದಾರೆ. “ಈ ವದಂತಿಗಳು ಹುಟ್ಟಿಕೊಂಡಿದ್ದು ಆನ್‌ಲೈನ್‌ನಲ್ಲಿ . ಇದು ಸತ್ಯವಲ್ಲ. ಅಜಿತ್ ಸರ್ ಮತ್ತು ಪ್ರಶಾಂತ್ ನೀಲ್ ಭೇಟಿ ಆಗಿದ್ದು ನಿಜ. ಒಬ್ಬರಿಗೊಬ್ಬರು ಅತ್ಯುನ್ನತ ಗೌರವವನ್ನು ಹೊಂದಿದ್ದಾರೆ. ಆದರೆ ಅವರು ಭೇಟಿಯಾದಾಗ ಯಾವುದೇ ಸಿನಿಮಾ ಬಗ್ಗೆ ಚರ್ಚಿಸಿಲ್ಲ. ನಾನು ಪ್ರಶಾಂತ್ ಸರ್ ಜತೆಗೆ ಅಜಿತ್ ಸಿನಿಮಾ ಮಾಡುವುದನ್ನು ನೋಡಲು ಇಷ್ಟಪಡುತ್ತೇನೆ. ಆದರೆ ಸದ್ಯದಲ್ಲಿ ಅಂತಹ ಯಾವುದೇ ಸಾಧ್ಯತೆ ಇಲ್ಲ” ಎಂದು ಸುರೇಶ್ ಚಂದ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸುದ್ದಿ ಕೇಳಿ ಥಲಾ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

ಇದನ್ನೂ ಓದಿ: Kannada New Movie: ʼಜೀನಿಯಸ್ ಮುತ್ತʼನಿಗೆ ಸಾಥ್ ನೀಡಿದ ʼಚಿನ್ನಾರಿ ಮುತ್ತʼ; ಆಗಸ್ಟ್‌ನಲ್ಲಿ ಸಿನಿಮಾ ರಿಲೀಸ್‌

ಈಗಾಗಲೇ ತೆಲುಗಿನಲ್ಲಿ ‘ಸಲಾರ್’ ಕತೆ ಹೇಳಲು ಆರಂಭಿಸಿದ್ದಾರೆ. ತಾರಕ್ ಜೊತೆ ಮತ್ತೊಂದು ಚಿತ್ರವನ್ನು ಘೋಷಿಸಿದ್ದಾರೆ. ‘ಸಲಾರ್-2’ ಹಾಗೂ ‘NTR31’ ಬಳಿಕ ನೀಲ್ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎನ್ನುವುದು ಗೊತ್ತಿಲ್ಲ.

ಮಗಿಜ್ ತಿರುಮೇನಿ ನಿರ್ದೇಶನದ ‘ವಿದಾ ಮುಯಾರ್ಚಿ’ ಚಿತ್ರದಲ್ಲಿ ಅಜಿತ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಮೈತ್ರಿ ಮೂವೀ ಮೇಕರ್ಸ್ ‘ಪುಷ್ಪ’ ಸಿನಿಮಾ ನಿರ್ಮಾಣ ಮಾಡಿ ಸಾಕಷ್ಟು ಲಾಭ ಕಂಡಿದೆ. ಸದ್ಯ ‘ಪುಷ್ಪ 2’ ಮೊದಲಾದ ಚಿತ್ರದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ‘ಗುಡ್ ಬ್ಯಾಡ್ ಅಗ್ಲಿ’ಯ ಮಾರ್ಚ್ 14ರಂದು,ಸೋಷಿಯಲ್‌ ಮೀಡಿಯಾ ಮೂಲಕ ಟೈಟಲ್‌ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು .ಈ ಚಿತ್ರವನ್ನು ಅಧಿಕ್ ರವಿಚಂದ್ರನ್ ನಿರ್ದೇಶಿಸಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಅಭಿನಂದನ್ ರಾಮಾನುಜಂ ಛಾಯಾಗ್ರಹಣ, ವಿಜಯ್ ವೇಲುಕುಟ್ಟಿ ಸಂಕಲನವಿದೆ.

ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಮೈತ್ರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಜಿತ್ ಕುಮಾರ್ ಅವರು ಬೇರೆ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಅವರಿಗೆ ಅನಾರೋಗ್ಯ ಕಾಡಿದ್ದು ಇದರಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಚಿತ್ರದ ಶೂಟಿಂಗ್​ ಜೂನ್​ನಲ್ಲಿ ಆರಂಭ ಆಗಲಿದ್ದು, 2025ರ ಪೊಂಗಲ್​ಗೆ ಸಿನಿಮಾ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದ್ದಾರೆ.. ‘ಗುಡ್ ಬ್ಯಾಡ್ ಆಗ್ಲಿ’ ಎಂಬ ಶೀರ್ಷಿಕೆಯ ಈ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ಬರೆದು ನಿರ್ದೇಶಿಸಿದ್ದಾರೆ ಮತ್ತು ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.

Continue Reading
Advertisement
Health Tips
ಆರೋಗ್ಯ59 seconds ago

Health Tips: ಗ್ಯಾಸ್ಟ್ರಿಕ್‌, ಅಜೀರ್ಣ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಇದೆ ಪರಿಣಾಮಕಾರಿ ಮದ್ದು!

Road Accident jigani anekal
ಬೆಂಗಳೂರು ಗ್ರಾಮಾಂತರ13 mins ago

Road Accident: ಕುಡಿದ ಮತ್ತಿನಲ್ಲಿ ಕಾರು ಹರಿಸಿದ ಚಾಲಕ, ಒಬ್ಬನ ಸಾವು, ಇಬ್ಬರಿಗೆ ಗಾಯ

India Pakistan War
ದೇಶ24 mins ago

India Pakistan War: ಭಾರತಕ್ಕೆ ನುಗ್ಗಿದ ಪಾಕ್‌ನ 600 ಕಮಾಂಡೋಗಳು; ನಡೆಯುತ್ತಾ ಮತ್ತೊಂದು ಯುದ್ಧ?

ITR Filing
ಮನಿ-ಗೈಡ್31 mins ago

ITR Filing: ಐಟಿಆರ್ ಸಲ್ಲಿಕೆ; ಜುಲೈ 31ರ ಗಡುವು ತಪ್ಪಿಸಿಕೊಂಡರೆ ಎಷ್ಟು ದಂಡ?

peenya flyover
ಪ್ರಮುಖ ಸುದ್ದಿ35 mins ago

Peenya flyover: ಇಂದಿನಿಂದ ಪೀಣ್ಯ ಮೇಲ್ಸೇತುವೆ ಎಲ್ಲ ವಾಹನಗಳಿಗೆ ಮುಕ್ತ

bbmp lorry road accident
ಬೆಂಗಳೂರು57 mins ago

Road Accident: ಬೆಂಗಳೂರಿನಲ್ಲಿ ಕಸದ ಲಾರಿಯ ಆರ್ಭಟಕ್ಕೆ ಇಬ್ಬರು ಟೆಕ್ಕಿಗಳು ಬಲಿ

Lakshadweep Tour
Latest1 hour ago

Lakshadweep Tour: ಲಕ್ಷದ್ವೀಪದಲ್ಲಿ ಪ್ರವಾಸಿಗರನ್ನು ಸೆಳೆಯುವ ಪಂಚರತ್ನಗಳಿವು

Monsoon Healthy Cooking Tips
ಆರೋಗ್ಯ1 hour ago

Monsoon Healthy Cooking Tips: ಮಳೆಗಾಲದಲ್ಲಿ ಸೊಪ್ಪಿನ ಅಡುಗೆ ಮಾಡುವ ಮುನ್ನ ಈ ಎಚ್ಚರಿಕೆಗಳನ್ನು ವಹಿಸಿ

Vastu Tips
ಧಾರ್ಮಿಕ2 hours ago

Vastu Tips: ಈ ವಾಸ್ತು ನಿಯಮ ಪಾಲಿಸಿ; ಹಣಕಾಸಿನ ಸಮಸ್ಯೆಯಿಂದ ಪಾರಾಗಿ

Nonstick Pans
ಆರೋಗ್ಯ2 hours ago

Nonstick Pans: ನಾನ್‌ಸ್ಟಿಕ್‌ ಪಾತ್ರೆಗಳ ತಪ್ಪು ಬಳಕೆಯಿಂದಲೂ ಜ್ವರ ಬಾಧಿಸುತ್ತದೆ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ14 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ16 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ18 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ19 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌