ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ರಕ್ಷಿತ್ ಶೆಟ್ಟಿ ಬಂಡವಾಳ ಹಾಕಿ ನಾಯಕ ನಟನಾಗಿ ನಟಿಸಿದ ‘ಕಿರಿಕ್ ಪಾರ್ಟಿ’ ಸಿನಿಮಾ ಡಿಸೆಂಬರ್ 30 ಶುಕ್ರವಾರ ಆರು ವರ್ಷಗಳನ್ನು ಪೂರೈಸಿದೆ. ಇದೀಗ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ತಮ್ಮ ಸಿನಿ ಜರ್ನಿಯನ್ನು ಶುರು ಮಾಡಿದ್ದರು. ಸಂದರ್ಶನವೊಂದರಲ್ಲಿ ಮೊದಲ ಸಿನಿಮಾ ಆಫರ್ ಬಂದ ವಿಷಯ ಮಾತನಾಡುವಾಗ ಮೊದಲು ನಟಿಸಿದ ಚಿತ್ರ, ಯಾವ ನಿರ್ಮಾಣ ಸಂಸ್ಥೆ ಎಂದು ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡದೆ ಕೈಗಳಿಂದ ಕೋಟ್ ರೀತಿಯಲ್ಲಿ ಸನ್ನೆ ಮಾಡಿ ತೋರಿ ಟ್ರೋಲ್ಗೆ ಗುರಿಯಾಗಿದ್ದರು. ವಿಡಿಯೊಗೆ ಅನೇಕರು ಅಸಮಾಧಾನ ಹೊರ ಹಾಕಿದ್ದರು. ಅದೇ ರೀತಿ ರಿಷಬ್ ಶೆಟ್ಟಿ ಅವರು ಇನ್ನೊಂದು ಸಂದರ್ಶನವೊಂದರಲ್ಲಿ ಸನ್ನೆ ಮಾಡುವುದರ ಮೂಲಕವೇ ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಅವರಿಗೆ ತಿರುಗೇಟು ನೀಡಿದ್ದರು. ಇದೀಗ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ಪೋಸ್ಟರ್ ಹಂಚಿಕೊಂಡು ʻʻಕಿರಿಕ್ ಪಾರ್ಟಿ ಸಿನಿಮಾಗೆ 6 ವರ್ಷ. ಎಲ್ಲವೂ ಪ್ರಾರಂಭವಾದ ದಿನʼʼ ಎಂದು ಬರೆದುಕೊಂಡಿದ್ದಾರೆ. ಇದೀಗ ನೆಟ್ಟಿಗರು ಮತ್ತೆ ರಶ್ಮಿಕಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ | Rashmika Mandanna | ಬಾಲಿವುಡ್ ಹಾಡು ಮಧುರ, ದಕ್ಷಿಣದ ಹಾಡು ಮಸಾಲಾ ಎಂದ ರಶ್ಮಿಕಾ ಮಂದಣ್ಣ! ತಿರುಗಿ ಬಿದ್ದ ಜನ!!
ರಶ್ಮಿಕಾ ವಿರುದ್ಧ ನೆಟ್ಟಿಗರು ಫುಲ್ ಗರಂ
ಸಂದರ್ಶನವೊಂದರಲ್ಲಿ ರಶ್ಮಿಕಾ ಅವರು ತಮ್ಮ ಸಿನಿ ಪಯಣವನ್ನು ಮಾತನಾಡಿದ್ದಾರೆ. ಈ ವೇಳೆ ʻʻನಾನು ಫ್ರೆಶ್ ಫೇಸ್ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆದರೆ ನನಗೆ ಅದರಲ್ಲಿ ಭಾಗವಹಿಸಲು ಮನಸಿರಲಿಲ್ಲ. ನನ್ನ ಶಿಕ್ಷಕರು ತುಂಬ ಪ್ರೋತ್ಸಾಹ ನೀಡಿದರು. ಬಳಿಕ ಅದರಲ್ಲಿ ವಿಜೇತಳಾದೆ. ಪೇಪರ್ನಲ್ಲಿ ಫೋಟೊ ಬಂತುʼʼ ಎಂಬಿತ್ಯಾದಿ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ನಂತರ ತಮಗೆ ಮೊದಲ ಸಿನಿಮಾ ಆಫರ್ ಬಂದ ವಿಷಯ ಮಾತನಾಡುವಾಗ ಮೊದಲು ನಟಿಸಿದ ಚಿತ್ರ, ಯಾವ ನಿರ್ಮಾಣ ಸಂಸ್ಥೆ ಎಂದು ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡದೆ ಕೈಗಳಿಂದ ಕೋಟ್ ರೀತಿಯಲ್ಲಿ ಸನ್ನೆ ಮಾಡಿ ತೋರಿಸಿದ್ದಾರೆ ನಟಿ. ಈ ಕುರಿತಾಗಿ ನೆಟ್ಟಿಗರು ಗರಂ ಆಗಿದ್ದು, ಟ್ರೋಲ್ ಮಾಡಿದ್ದರು.
2016ರಲ್ಲಿ ಡಿಸೆಂಬರ್ 30ರಂದು ʻಕಿರಿಕ್ ಪಾರ್ಟಿʼ ಬಿಡುಗಡೆಗೊಂಡಿತ್ತು. ʻʻರಕ್ಷಿತ್ ಶೆಟ್ಟಿʼʼ ಕೆರಿಯರ್ ದಿಕ್ಕನ್ನೇ ಬದಲಿಸಿದ ಸಿನಿಮಾ ʻಕಿರಿಕ್ ಪಾರ್ಟಿ’. ಈ ಸಿನಿಮಾ ಕಥೆಯನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಕರ್ಣ ಮತ್ತು ಸಾನ್ವಿ ಲವ್ಸ್ಟೋರಿಯಿಂದ ಹಿಡಿದು ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿದ್ದವು.
ಇದನ್ನೂ ಓದಿ | Rashmika Mandanna | ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಚೇರಿ ಎದುರು ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ!