Rashmika Mandanna | ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಚೇರಿ ಎದುರು ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ! - Vistara News

ಬಾಲಿವುಡ್

Rashmika Mandanna | ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಚೇರಿ ಎದುರು ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ!

ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಕಡೆಯಿಂದ ಆಫರ್‌ ಬಂದಿದೆ ಎನ್ನಲಾಗುತ್ತಿದೆ.

VISTARANEWS.COM


on

Rashmika Mandanna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಟ್ರೋಲ್‌ಗೆ ಎಷ್ಟೇ ಗುರಿಯಾಗಿದ್ದರೂ, ಸಿನಿರಂಗದಲ್ಲಿ ಸಖತ್‌ ಆ್ಯಕ್ಟಿವ್‌ ಆಗಿದ್ದಾರೆ. ಏನಾದರೂ ಒಂದು ವಿವಾದದಲ್ಲಿ ಸಿಲುಕುತ್ತಿರುವ ರಶ್ಮಿಕಾ ಇದೀಗ ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಕಡೆಯಿಂದ ಆಫರ್‌ ಬಂದಿದೆ ಎನ್ನಲಾಗುತ್ತಿದೆ.

ʻಗುಡ ಬೈʼ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ರಶ್ಮಿಕಾ, ಈ ಸಿನಿಮಾ ಅಷ್ಟಾಗಿ ಯಶಸ್ಸು ಕಂಡಿಲ್ಲ. ಈ ಸಿನಿಮಾ ಬಳಿಕ ಸಿದ್ಧಾರ್ಥ್‌ ಮಲ್ಹೋತ್ರ ಜತೆ ʻಮಿಷನ್ ಮಜ್ನುʼನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಇದೀಗ ಹೊಸ ಸುದ್ದಿಯನ್ನು ನೀಡಿದ್ದಾರೆ.

ಇದನ್ನೂ ಓದಿ | Rashmika Mandanna | ರಶ್ಮಿಕಾ ಮಂದಣ್ಣ ಭೋಜ್‌ಪುರಿ ಸಿನಿಮಾಗೆ ಸೂಕ್ತ, ಹಿಂದಿಗಲ್ಲ ಎಂದ ವಿಮರ್ಶಕ ಕಮಾಲ್ ಖಾನ್!

ಬುಧವಾರ ಡಿಸೆಂಬರ್‌ 28ರ ರಾತ್ರಿ ನಿರ್ದೇಶಕ ಹಾಗೂ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಕಚೇರಿ ಎದುರು ಕಾಣಿಸಿಕೊಂಡಿದ್ದಾರೆ. ಸಿನಿಮಾ ಕುರಿತು ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ಆಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Rashmika Mandanna | ಬಾಲಿವುಡ್‌ ಹಾಡು ಮಧುರ, ದಕ್ಷಿಣದ ಹಾಡು ಮಸಾಲಾ ಎಂದ ರಶ್ಮಿಕಾ ಮಂದಣ್ಣ! ತಿರುಗಿ ಬಿದ್ದ ಜನ!!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಐಷಾರಾಮಿ ಅಪಾರ್ಟ್‌ಮೆಂಟ್ ಹೇಗಿದೆ? ವಿಡಿಯೊ ನೋಡಿ!

Sonakshi Sinha: ಸಿನಿಮಾ ನಟಿಯರು ಎಂದಾಕ್ಷಣ ಜನರಿಗೆ ಕುತೂಹಲವಿರುತ್ತದೆ. ಅವರು ಉಂಡಿದ್ದು, ತಿಂದಿದ್ದು, ಮುಖಕ್ಕೆ ಹಚ್ಚಿಕೊಳ್ಳುವ ಮೇಕಪ್ ತನಕನೂ ಕುತೂಹಲದಿಂದ ಗಮನಿಸುವ ಮಂದಿ ಇದ್ದಾರೆ. ಸಿನಿಮಾ ಮಂದಿ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಇತ್ತೀಚೆಗೆ ಹೀರಾಮಂಡಿಯಲ್ಲಿ ಅಭಿನಯಿಸಿ ಎಲ್ಲರ ಗಮನಸೆಳೆದ ನಟಿ ಸೋನಾಕ್ಷಿ ಸಿನ್ಹಾ ಸುದ್ದಿಯಲ್ಲಿದ್ದಾರೆ. ಅವರು 7 ವರ್ಷಗಳಿಂದ ಸಂಬಂಧದಲ್ಲಿದ್ದ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ. ಇದರ ಮಧ್ಯೆ ಈಗ ಎಲ್ಲರ ಕುತೂಹಲ ಕೆರಳಿಸಿದ್ದು ಸೋನಾಕ್ಷಿ ಸಿನ್ಹಾ ಅವರ ಮನೆ!

VISTARANEWS.COM


on

Sonakshi Sinha
Koo

ಮುಂಬೈ : ಸಿನಿಮಾ ತಾರೆಯರು ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಸಿನಿಮಾ ತಾರೆಯರು ಯಾವುದೇ ಸ್ಥಳಕ್ಕೆ ಹೋದರೂ, ಯಾರನ್ನೇ ಭೇಟಿ ಮಾಡಿದರೂ, ಮನೆ ಖರೀದಿಸಿದರೂ, ತಮ್ಮ ಸಂಗಾತಿ ಜೊತೆ ಸುತ್ತಾಡಿದರೂ, ಮದುವೆ ವಿಚಾರಕ್ಕೆ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಅಂದಹಾಗೇ ಇದೀಗ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಸುದ್ದಿಯಲ್ಲಿದ್ದಾರೆ.

ನಟಿ ನಟಿ ಸೋನಾಕ್ಷಿ ಸಿನ್ಹಾ ಅವರು ಬಾಲಿವುಡ್ ಖ್ಯಾತ ನಟಿಯರಲ್ಲಿ ಒಬ್ಬರು. ಇವರು ಬಾಲಿವುಡ್‌ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಯ ಮೂಲಕ ಜನಪ್ರಿಯರಾದ ನಟಿ ಇದೀಗ ತಮ್ಮ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ನಟಿ ಸೋನಾಕ್ಷಿ ಸಿನ್ಹಾ ಅವರು ಜೂನ್ 23, 2024ರಂದು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿದೆ. ವರದಿ ಪ್ರಕಾರ ಅವರು 7 ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

Sonakshi Sinha

ಕಳೆದ ಒಂದು ವರ್ಷದಿಂದ ಇಬ್ಬರು ಜೊತೆಯಲ್ಲಿ ವಾಸಿಸುತ್ತಿದ್ದು, ನಟಿ ಸೋನಾಕ್ಷಿ ಸಿನ್ಹಾ ಅವರು ಮುಂಬೈನಲ್ಲಿ ದೊಡ್ಡದಾದ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಮಾರ್ಚ್ 2020ರಲ್ಲಿ ಮನೆಯನ್ನು ಖರೀದಿಸಿ ನಂತರ 2023ರಲ್ಲಿ ಆ ಮನೆಗೆ ತೆರಳಿ ತಮ್ಮ ಪ್ರೇಮಿ ಜೊತೆ ಅಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಸೋನಾಕ್ಷಿ ಸಿನ್ಹಾ ಖರೀದಿಸಿದ ಆ ಮನೆ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ನಟಿ ಸೋನಾಕ್ಷಿ ಸಿನ್ಹಾ ಅವರು ಖರೀದಿಸಿದ ಮುಂಬೈ ಮನೆ ಸಮುದ್ರಕ್ಕೆ ಮುಖ ಮಾಡಿದೆ. ಅದು 4,628 ಚದರ ಅಡಿಗಳಷ್ಟು ವಿಸ್ತಾರವಾಗಿದೆಯಂತೆ. ಮನೆಯು ಪ್ರೀಮಿಯಂ ರೆಸಿಡೆನ್ಸಿಯಲ್ ಟವರ್‌ನಲ್ಲಿ 16ನೇ ಮಹಡಿಯಲ್ಲಿದೆ.

Sonakshi Sinha

ವರದಿಗಳ ಪ್ರಕಾರ ಅವರ ಮುಂಬೈ ಮನೆ ಮಾರುಕಟ್ಟೆ ಮೌಲ್ಯ 14 ಕೋಟಿ ರೂಪಾಯಿ. ಅವರ ಮನೆ ಕಿತ್ತಳೆ ಮತ್ತು ನೀಲಿ ಬಣ್ಣವನ್ನು ಹೊಂದಿದ್ದು, ಟೆರಾಕೋಟಾ ಲುಕ್‌ ನೀಡುತ್ತದೆ. ಮಲಗುವ ಕೋಣೆ ಸ್ಲೈಡಿಂಗ್ ವಾಲ್ ಅನ್ನು ಹೊಂದಿದ್ದು, ಅದರ ಎಲ್ಲಾ ಬದಿಯಲ್ಲಿ ನೀಲಿ ಬಣ್ಣದ ಕಪಾಟುಗಳೊಂದಿಗೆ ಮರ್ಫಿ ಬೆಡ್ ಇದೆ. ಮನೆಯ ಬಾಲ್ಕನಿಯಿಂದ ಬಾಂದ್ರಾ-ವಲ್ಲಿ ಸಮುದ್ರದ ನೋಟವನ್ನು ಸುಲಭವಾಗಿ ಆನಂದಿಸಬಹುದು. ನಾಲ್ಕು ಬೆಡ್ ರೂಮ್‌ ಅಪಾರ್ಟ್‌ಮೆಂಟ್ ಅನ್ನು 1.5 ಬೆಡ್ ರೂಮ್ ಮನೆಯನ್ನಾಗಿ ಪರಿವರ್ತಿಸಲಾಗಿದೆಯಂತೆ. ಅವರ ಮನೆಯಲ್ಲಿ ಆರ್ಟ್ ಸ್ಟುಡಿಯೋ, ಯೋಗ ಮಾಡುವುದಕ್ಕೆ ಜಾಗ ಹಾಗೂ ಡ್ರೆಸ್ಸಿಂಗ್ ರೂಮ್‌ ಕೂಡ ಇದೆಯಂತೆ. ಇನ್ನು ಇವರ ರೂಂನಲ್ಲಿರುವ ವಾಕ್ ಇನ್ ವಾರ್ಡ್‌ರೋಬ್ ತುಂಬಾ ಚೆನ್ನಾಗಿದೆ.

ಇದನ್ನೂ ಓದಿ: flight problems: ವಿಮಾನದಲ್ಲಿ ಕೈಕೊಟ್ಟ ಎಸಿ; ಸೆಕೆ ತಾಳಲಾರದೆ ಬಟ್ಟೆ ಬಿಚ್ಚಿದ ಪ್ರಯಾಣಿಕರು!

ನಟಿ ಸೋನಾಕ್ಷಿ ಸಿನ್ಹಾ ಅವರು ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿ ಅವರ ಚೊಚ್ಚಲ ವೆಬ್ ಸರಣಿ ಹೀರಾಮಂಡಿ ಯಶಸ್ಸಿನಲ್ಲಿ ಮುಳುಗಿದ್ದಾರೆ. ಅಲ್ಲಿ ಅವರು ವೇಶ್ಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ.

Continue Reading

ಬಾಲಿವುಡ್

Anant Ambani: ಅನಂತ್ ಅಂಬಾನಿ ಕೊಟ್ಟ ಪ್ರೇಮ ಪತ್ರ ಪ್ರಿಂಟ್ ಆಗಿದ್ದ ಗೌನ್‌ನಲ್ಲಿ ಮಿಂಚಿದ ರಾಧಿಕಾ ಮರ್ಚಂಟ್‌!

Anant Ambani: ಇಟಲಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ವಿವಾಹ ಪೂರ್ವ ಆಚರಣೆಯಲ್ಲಿ ರಾಧಿಕಾ ಮರ್ಚಂಟ್‌ ಅವರ ಡ್ರೆಸ್‌ ಕೂಡ ಹೈಲೈಟ್‌ ಆಗಿತ್ತು. ಆರ್ಕೈವಲ್ ಡಿಯೊರ್ ಸ್ಕರ್ಟ್‌ (archival Dior dress) ಧರಿಸಿದ್ದರು ರಾಧಿಕಾ. 1959ರ ಫ್ಯಾಷನ್‌ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್‌, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್‌ ಬೆಲೆ 3,20,714ರೂ. ಆಗಿದೆ.

VISTARANEWS.COM


on

Anant Ambani Love Letter Printed On Radhika Merchant Pre-Wedding Dress
Koo

ಬೆಂಗಳೂರು: ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚಂಟ್‌ ಅವರು ಯುರೋಪ್‌ನಲ್ಲಿ ಕ್ರೂಸ್‌ನಲ್ಲಿ ಅದ್ಧೂರಿಯಾಗಿ ಎರಡನೇ ವಿವಾಹ ಪೂರ್ವ ಸಂಭ್ರಮಾಚರಣೆ ಮಾಡಿದರು. ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ ಹೈಲೈಟ್‌ ಆಗಿದ್ದು ರಾಧಿಕಾ ಅವರ ವಿಭಿನ್ನವಾದ ಉಡುಪುಗಳು. 22ನೇ ವಯಸ್ಸಿನಲ್ಲಿದ್ದಾಗ ಗೆಳೆಯ ಅನಂತ್ ಅಂಬಾನಿ ಅವರು ಆಕೆಗಾಗಿ ಬರೆದ ಪ್ರೇಮಪತ್ರವನ್ನು ಈ ಗವನ್‌ನಲ್ಲಿ ಪ್ರಿಂಟ್ ಮಾಡಲಾಗಿದೆ. ಈ ಗೌನ್‌ ಧರಿಸಿ ಪೋಸ್‌ ಕೊಟ್ಟಿದ್ದಾರೆ ರಾಧಿಕಾ.

ರಾಧಿಕಾ ಈ ಕುರಿತು ಮಾತನಾಡಿ, “ಅನಂತ್‌ ನನ್ನ ಜನ್ಮದಿನದಂದು ಪ್ರೇಮ ಪತ್ರ ಬರೆದಿದ್ದರು. ಈ ಪ್ರೇಮ ಪತ್ರವನ್ನು ನಾನು ನನ್ನ ಮುಂದಿನ ಪೀಳಿಗೆಗೆ ತೋರಿಸಲು ಬಯಸುವೆ, ನಮ್ಮ ಪ್ರೀತಿ ಹೀಗಿತ್ತು ಎಂಬುದನ್ನು ನಾನು ನನ್ನ ಮಕ್ಕಳಿಗೆ ಮೊಮ್ಮಕ್ಕಳಿಗೆ ತೋರಿಸಲು ಬಯಸುವೆʼʼ ಎಂದು ರಾಧಿಕಾ ಮರ್ಚೆಂಟ್ ಹೇಳಿದ್ದಾರೆ. ಪತ್ರದ ಪ್ರಿಂಟೆಡ್‌ ಉಡುಪಿನಲ್ಲಿ ಅಂದವಾಗಿ ಕಾಣುತ್ತಿದ್ದರು ರಾಧಿಕಾ.

ಇಟಲಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ವಿವಾಹ ಪೂರ್ವ ಆಚರಣೆಯಲ್ಲಿ ರಾಧಿಕಾ ಮರ್ಚಂಟ್‌ ಅವರ ಡ್ರೆಸ್‌ ಕೂಡ ಹೈಲೈಟ್‌ ಆಗಿತ್ತು. ಆರ್ಕೈವಲ್ ಡಿಯೊರ್ ಸ್ಕರ್ಟ್‌ (archival Dior dress) ಧರಿಸಿದ್ದರು ರಾಧಿಕಾ. 1959ರ ಫ್ಯಾಷನ್‌ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್‌, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್‌ ಬೆಲೆ 3,20,714ರೂ. ಆಗಿದೆ.

ಇದನ್ನೂ ಓದಿ: Kotee Movie: ಡಾಲಿ ಧನಂಜಯ್ ಅಭಿನಯದ ‘ಕೋಟಿ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ

ರಾಧಿಕಾ ಮರ್ಚಂಟ್‌ ಇಟಲಿಯ ಪೋರ್ಟೋಫಿನೋದಲ್ಲಿ ನಡೆದ ಆಚರಣೆಗಳಿಗಾಗಿ ಬಾರ್ಬಿಕೋರ್ ಟ್ರೆಂಡ್ ಧರಿಸಿದ್ದರು. ಈ ಉಡುಪನ್ನು ಯೆವ್ಸ್ ಸೇಂಟ್ ಲಾರೆಂಟ್ ವಿನ್ಯಾಸಗೊಳಿಸಿದ್ದಾರೆ. ವರದಿಯ ಪ್ರಕಾರ ರಾಧಿಕಾ ಅವರ ಆರ್ಕೈವಲ್ ಡಿಯೊರ್ ಉಡುಪನ್ನು ಸ್ಯಾನ್ ಫ್ರಾನ್ಸಿಸ್ಕೋದ ಕಸ್ಸಂದ್ರ ಕಾರ್ಪೆಂಟರ್ ಅವರಿಂದ ಪಡೆಯಲಾಗಿದೆ ಎನ್ನಲಾಗಿದೆ . ಇದು ಮೂಲತಃ ಜೀನಿ ಮ್ಯಾಗ್ನಿನ್ ಅವರದ್ದು ಎನ್ನಲಾಗಿದೆ.

ವೈರಲ್ ಬಾರ್ಬಿಕೋರ್ ಮತ್ತು ಕೊಕ್ವೆಟ್ ಕೋರ್ ಫ್ಯಾಷನ್ ಒಳಗೊಂಡ ಈ ಡ್ರೆಸ್‌ ಪ್ರಕಾಶಮಾನವಾದ ರಾಸ್ಪ್ಬೆರಿ ಗುಲಾಬಿ ಬಣ್ಣಗಳ ಮಿಶ್ರಣದಲ್ಲಿದೆ. 1959ರ ಫ್ಯಾಷನ್‌ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್‌, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್‌ ಬೆಲೆ 3,20,714ರೂ. ಆಗಿದೆ. ರಾಧಿಕಾ ಅವರು ಈ ಸ್ಕರ್ಟ್‌ ಜತೆಗೆ ವಜ್ರದ ಉಂಗುರ, ಗುಲಾಬಿ ಬಣ್ಣದ ಹರ್ಮೆಸ್ ಮಿನಿ ಕೆಲ್ಲಿ ಬ್ಯಾಗ್ ಧರಿಸಿದ್ದರು. ಪೋನಿಟೇಲ್‌ಗೆ ರೇಷ್ಮೆಯ ಸ್ಕಾರ್ಫ್‌ ಧರಿಸಿದ್ದರು.

ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಭವ್ಯವಾದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್​ನಲ್ಲಿ ಮದುವೆ ನಡೆಯಲಿದೆ.

ಜುಲೈ 12 ರಿಂದ ಮೂರು ದಿನಗಳ ಕಾಲ ವಿವಾಹ ಉತ್ಸವಗಳು ನಡೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12ರಂದು ರಂದು ವಿವಾಹದೊಂದಿಗೆ ಆಚರಣೆಗೆ ಚಾಲನೆ ಸಿಗಲಿದೆ. ಅಂದು ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸುವ ನಿರೀಕ್ಷೆಯಿದೆ. ಮದುವೆಯ ನಂತರ, ಮುಂದಿನ ಕಾರ್ಯಕ್ರಮವು ಜುಲೈ 13 ರಂದು ಶುಭ ಆಶಿರ್ವಾದ್ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ. ಅಂದು ಡ್ರೆಸ್ ಕೋಡ್ ಭಾರತೀಯ ಕ್ಯಾಶುವಲ್ ಡ್ರೆಸ್​ ಆಗಿದೆ. ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಚಿಕ್ ಉಡುಪನ್ನು ಧರಿಸುವ ನಿರೀಕ್ಷೆಯಿದೆ.

Continue Reading

ಬಾಲಿವುಡ್

Alia Bhatt: ಆಲಿಯಾ ಭಟ್ ಮತ್ತೊಂದು ಡೀಪ್‌ಫೇಕ್ ವೀಡಿಯೊ ವೈರಲ್‌; ಫ್ಯಾನ್ಸ್‌ ಕೆಂಡಾಮಂಡಲ!

Alia Bhatt: ಇತ್ತೀಚೆಗೆ, ರಶ್ಮಿಕಾ ಮಂದಣ್ಣ, ಕಾಜೋಲ್ ಮತ್ತು ಕತ್ರಿನಾ ಕೈಫ್ ಸೇರಿದಂತೆ ಹಲವಾರು ನಟರು ಡೀಪ್‌ಫೇಕ್‌ಗೆ ಬಲಿಯಾಗಿದ್ದಾರೆ. ಡೀಪ್‌ಫೇಕ್ ವಂಚನೆಗೆ ಒಳಗಾದವರಲ್ಲಿ 57 ಪ್ರತಿಶತದಷ್ಟು ಸೆಲೆಬ್ರಿಟಿಗಳಾಗಿದ್ದಾರೆ. ವಿಡಿಯೊ ಚಿತ್ರ ಅಥವಾ ಆಡಿಯೊವನ್ನು ನೋಡಿ ಅದು ನಿಜವೆಂದು ಭಾವಿಸಿ ಶೇ. 31 ರಷ್ಟು ಮಂದಿ ಹಣವನ್ನು ಕಳೆದುಕೊಂಡಿದ್ದಾರೆ. ಶೇ. 40ರಷ್ಟು ಮಂದಿ ಜನರು ತಮ್ಮ ಧ್ವನಿಯನ್ನು ಕಾಪಿ ಮಾಡಲಾಗಿದೆ. ವೈಯಕ್ತಿಕ ಮಾಹಿತಿ ಅಥವಾ ಹಣದ ಲೆಕ್ಕವನ್ನು ಬಹಿರಂಗಪಡಿಸಲು ತಮಗೆ ತಿಳಿದಿರುವ ಯಾರನ್ನಾದರೂ ದಾರಿತಪ್ಪಿಸಲು ಬಳಸುತ್ತಾರೆ ಎಂದು ಕಂಡುಹಿಡಿಯಲಾಗಿದೆ.

VISTARANEWS.COM


on

Alia Bhatt Fans A Deepfake Video Goes Viral Again
Koo

ಬೆಂಗಳೂರು: ಆಲಿಯಾ ಭಟ್ ಅವರ ಹೊಸ ಡೀಪ್‌ಫೇಕ್ ವೀಡಿಯೊ (Deepfake Video) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹೀಗಾಗಿ ಆಲಿಯಾ ಫ್ಯಾನ್ಸ್‌ ಆಘಾತಕ್ಕೊಳಗಾಗಿದ್ದಾರೆ. “Sameeksha Avtr ಎಂಬ ಬಳಕೆದಾರರಿಂದ ಸಾಕಷ್ಟು ವಿಡಿಯೊಗಳು ಪೋಸ್ಟ್‌ ಆಗಿವೆ. ಡೀಪ್‌ಫೇಕ್ ಕ್ಲಿಪ್ ವೈರಲ್ ಆದ ಕೂಡಲೇ, ಆಲಿಯಾ ಭಟ್ ಅವರ ಅಭಿಮಾನಿಗಳು “ವಿಡಿಯೊ ನೋಡಿದ ಕೂಡಲೇ ನಾನು ಆಲಿಯಾ ಎಂದು ಭಾವಿಸಿದೆ. ಆದರೆ ಮತ್ತೆ ಎಚ್ಚರಿಕೆಯಿಂದ ನೋಡಿದ ಕೂಡಲೇ ಆಲಿಯಾ ಅಲ್ಲ ಎಂದು ತಿಳಿಯಿತು” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ಇನ್ನೂ ಕೆಲವರು “AI ತುಂಬಾ ಅಪಾಯಕಾರಿ” ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಆಲಿಯಾ ಅವರ ಡೀಪ್‌ಫೇಕ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಮೇ ತಿಂಗಳಲ್ಲಿ, ಆಲಿಯಾ ಅವರ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಇತ್ತೀಚೆಗೆ, ರಶ್ಮಿಕಾ ಮಂದಣ್ಣ, ಕಾಜೋಲ್ ಮತ್ತು ಕತ್ರಿನಾ ಕೈಫ್ ಸೇರಿದಂತೆ ಹಲವಾರು ನಟರು ಡೀಪ್‌ಫೇಕ್‌ಗೆ ಬಲಿಯಾಗಿದ್ದಾರೆ. ಡೀಪ್‌ಫೇಕ್ ವಂಚನೆಗೆ ಒಳಗಾದವರಲ್ಲಿ 57 ಪ್ರತಿಶತದಷ್ಟು ಸೆಲೆಬ್ರಿಟಿಗಳಾಗಿದ್ದಾರೆ. ವಿಡಿಯೊ ಚಿತ್ರ ಅಥವಾ ಆಡಿಯೊವನ್ನು ನೋಡಿ ಅದು ನಿಜವೆಂದು ಭಾವಿಸಿ ಶೇ. 31 ರಷ್ಟು ಮಂದಿ ಹಣವನ್ನು ಕಳೆದುಕೊಂಡಿದ್ದಾರೆ. ಶೇ. 40ರಷ್ಟು ಮಂದಿ ಜನರು ತಮ್ಮ ಧ್ವನಿಯನ್ನು ಕಾಪಿ ಮಾಡಲಾಗಿದೆ. ವೈಯಕ್ತಿಕ ಮಾಹಿತಿ ಅಥವಾ ಹಣದ ಲೆಕ್ಕವನ್ನು ಬಹಿರಂಗಪಡಿಸಲು ತಮಗೆ ತಿಳಿದಿರುವ ಯಾರನ್ನಾದರೂ ದಾರಿತಪ್ಪಿಸಲು ಬಳಸುತ್ತಾರೆ ಎಂದು ಕಂಡುಹಿಡಿಯಲಾಗಿದೆ.

ಇದನ್ನೂ ಓದಿ: OTT Release: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು

ಈ ವರ್ಷದ ಆರಂಭದಲ್ಲಿ, ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಅವರ ಡೀಪ್‌ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.  ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ (Aamir Khan) ಅವರು ರಾಜಕೀಯ ಪಕ್ಷವನ್ನು ಬೆಂಬಲಿಸುವ ರೀತಿಯಲ್ಲಿ 27-ಸೆಕೆಂಡ್ ವಿಡಿಯೊ ಕ್ಲಿಪ್‌ ತಯಾರಿಸಿಲಾಗಿತ್ತು. ಇದು ನಕಲಿ ವಿಡಿಯೊ ಎಂದು ವಕ್ತಾರರು ಹೇಳಿಕೆ ನೀಡಿದ್ದರು ವಿಡಿಯೊ ಕೊನೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇದೆ. ‘ವೋಟ್ ಫಾರ್ ನ್ಯಾಯ್, ವೋಟ್ ಫಾರ್ ಕಾಂಗ್ರೆಸ್’ ಎಂಬುದು ಇತ್ತು. ಬಳಿಕ ಆಮೀರ್‌ ಈ ಬಗ್ಗೆ ಕೇಸ್‌ ಕೂಡ ದಾಖಲಿಸಿದ್ದರು.

ಇದಕ್ಕೂ ಮೊದಲು, ರಣವೀರ್ ಸಿಂಗ್ ಅವರ ಡೀಪ್‌ಫೇಕ್ ವೀಡಿಯೊ ಕೂಡ ವೈರಲ್ ಆಗಿದ್ದು, ಇದರಲ್ಲಿ ನಟ ಸರ್ಕಾರವನ್ನು ಟೀಕಿಸಿರುವಂತೆ ವೈರಲ್‌ ಆಗಿತ್ತು.

Continue Reading

Latest

OTT Release: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು

OTT Release: ಈ ವಾರ ಕೂಡ ಒಟಿಟಿಯಲ್ಲಿ ಹಲವಾರು ಹಿಟ್ ಶೋಗಳು ರಿಲೀಸ್ ಆಗಲಿವೆ. ಹೌಸ್ ಆಫ್ ದಿ ಡ್ರ್ಯಾಗನ್, ಬ್ರಿಡ್ಜರ್ಟನ್, ದಿ ಬಾಯ್ಸ್, ಪ್ರಿಸ್ಯುಮಡ್ ಇನ್ನೊಸೆಂಟ್ ಹಾಗೂ ವಿದ್ಯಾಬಾಲನ್ ಹಾಗೂ ಪ್ರತೀಕ್ ಗಾಂಧಿ ಅಭಿನಯಿಸಿದ ಗಲ್ಲಾ ಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ಕಂಡ ಬಾಲಿವುಡ್ ಚಲನಚಿತ್ರ ದೋ ಔರ್ ದೋ ಪ್ಯಾರ್ ಕೂಡ ಈ ಬಾರಿ ಒಟಿಟಿಯಲ್ಲಿ ರಿಲೀಸ್ ಆಗಲಿವೆ. ಒಟ್ಟಾರೆ ಈ ವಾರ ಸಿನಿ ಪ್ರಿಯರಿಗೆ ಹಬ್ಬದೂಟವನ್ನು ಉಣಬಡಿಸಲಿದೆ.

VISTARANEWS.COM


on

OTT Release
Koo

ಮುಂಬೈ : ಪ್ರತಿವಾರ ಒಟಿಟಿಯಲ್ಲಿ ಸಾಕಷ್ಟು ಸೂಪರ ಹಿಟ್ ಶೋಗಳು ರಿಲೀಸ್ ಆಗುತ್ತಿರುತ್ತವೆ. ಈ ಮೂಲಕ ಒಟಿಟಿ ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಹಾಗಾಗಿ ಈ ವಾರವೂ ಕೂಡ ಒಟಿಟಿ(OTT Release)ಯಲ್ಲಿ ಹಲವಾರು ಹಿಟ್ ಶೋಗಳು ರಿಲೀಸ್ ಆಗಲಿವೆ. ಗಲ್ಲಾ ಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ಕಂಡ ಕೆಲವು ಬಾಲಿವುಡ್ ಚಲನಚಿತ್ರಗಳೂ ಈ ಬಾರಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಅವುಗಳ ವಿವರ ಇಲ್ಲಿದೆ.

ಹೌಸ್ ಆಫ್ ದಿ ಡ್ರ್ಯಾಗನ್ (ಸೀಸನ್ 2)

ಎಚ್‌ಬಿಓನ ಸೀರಿಸ್ ʼಹೌಸ್ ಆಫ್ ದಿ ಡ್ರ್ಯಾಗನ್ʼ ಸೀಸನ್ 2 ಜೂನ್ 16ರಂದು ಹೊಸ ಸಂಘರ್ಷ, ಸೇಡು ತೀರಿಸಿಕೊಳ್ಳುವ ಹೊಸ ಕಥಾವಸ್ತುಗಳೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬಂದಿದೆ. ಜಾರ್ಜ್ ಆರ್ ಆರ್ ಮಾರ್ಟಿನ್ ಅವರ ʼಫೈರ್ ಆ್ಯಂಡ್ ಬ್ಲಡ್ʼ ಆಧರಿಸಿದ ಈ ಸರಣಿಯು ರಾಜ ಕುಟುಂಬದ ಕಥೆಯನ್ನು ಒಳಗೊಂಡಿದೆ. ರಾಜ ಕುಟುಂಬ ಅಧಿಕಾರದ ಸಂಘರ್ಷ, ಒಳಸಂಚು, ಕೌಟುಂಬಿಕ ಶತ್ರುತ್ವವನ್ನು ಇದರಲ್ಲಿ ಕಾಣಬಹುದು.
ಇದು ಜೂನ್ 16ರಂದು ಜಿಯೋ ಸಿನಿಮಾದಲ್ಲಿ ಬೆಳಗ್ಗೆ 6.30ರಿಂದ ಲಭ್ಯವಾಗಲಿದೆ.

ಬ್ರಿಡ್ಜರ್ಟನ್(ಸೀಸನ್ 3, ಭಾಗ 2)

ಇದರಲ್ಲಿ ಕಾಲಿನ್ ಮತ್ತು ಪೆನೆಲೋಪ್ ಅವರ ಪ್ರಣಯವನ್ನು ಪ್ರೇಕ್ಷಕರು ಕಣ್ತುಂಬಿಸಿಕೊಳ್ಳಬಹುದು. ಇದು ರೀಜೆನ್ಸಿ ಯುಗದ ಪ್ರಣಯ ಸರಣಿಯು ಜೂಲಿಯಾ ಕ್ವಿನ್ ಅವರ ಪುಸ್ತಕಗಳನ್ನು ಆಧರಿಸಿದೆ. ಪ್ರತಿಯೊಂದು ದೃಶ್ಯ ಬ್ರಿಡ್ಜರ್ಟನ್ ಕುಟುಂಬದ ಒಡಹುಟ್ಟಿದವರ ಮೇಲೆ ಕೇಂದ್ರೀಕರಿಸುತ್ತದೆ. ಮೂರನೇ ಸೀಸನ್‌ನಲ್ಲಿ ಪೆನೆಲೋಪ್ ಲೇಡಿ ವಿಸ್ಲ್ ಡೌನ್‌ನ ರಹಸ್ಯ ಗುರುತಿನಿಂದಾಗಿ ತನ್ನ ಜೀವನದ ಪ್ರೀತಿಯನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಾಳೆ. ಅವಳ ಸತ್ಯ ಬಯಲಾಗುವುದೋ? ಅಥವಾ ಅವಳು ಸುಖವಾಗಿ ಬದುಕುವಳೋ? ಎಂಬುದನ್ನು ನೋಡಬೇಕು. ಇದು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್‌ನಲ್ಲಿ ನೋಡಬಹುದು.

ದೋ ಔರ್ ದೋ ಪ್ಯಾರ್

ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ಕಂಡ ವಿದ್ಯಾ ಬಾಲನ್ ಅವರ ರೊಮ್ಯಾಂಟಿಕ್ ಕಾಮಿಡಿ ಇದೀಗ ಒಟಿಟಿಯಲ್ಲಿ ಕಾಣಿಸಿಕೊಂಡಿದೆ. ʼದೋ ಔರ್ ದೋ ಪ್ಯಾರ್‌ʼನಲ್ಲಿ ಕಾವ್ಯ ಮತ್ತು ಅನಿಯ ಪಾತ್ರದಲ್ಲಿ ವಿದ್ಯಾ ಬಾಲನ್ ಹಾಗೂ ಪ್ರತೀಕ್ ಗಾಂಧಿ ಅಭಿನಯಿಸಿದ್ದಾರೆ. ಊಟಿ ಪ್ರವಾಸದ ನಂತರ ವಿವಾಹೇತರ ಸಂಬಂಧದಲ್ಲಿ ತೊಡಗಿಕೊಂಡಿದ್ದರೂ ಸಹ ಪರಸ್ಪರ ಪ್ರೀತಿಸುವ ವಿವಾಹಿತ ದಂಪತಿಗಳಂತೆ ಇವರಿಬ್ಬರು ನಟಿಸುತ್ತಾರೆ. ಇದನ್ನು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ನಲ್ಲಿ ನೋಡಬಹುದು.

ದಿ ಬಾಯ್ಸ್ (ಸೀಸನ್ 4)

ವಿಡಂಬನಾತ್ಮಕ ಸೂಪರ್ ಹೀರೋ ಸರಣಿಯ ʼದಿ ಬಾಯ್ಸ್ʼ ಸೀಸನ್ 4ರ ಮೊದಲ ಮೂರು ಸಂಚಿಕೆಗಳನ್ನು ಗುರುವಾರ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆ ಮಾಡಲಾಗಿದೆ. ಕಾರ್ಲ್ ಅರ್ಬನ್, ಜ್ಯಾಕ್ ಕ್ವೈಡ್, ಆಂಟೋನಿ ಸ್ಟಾರ್, ಜೆನ್ಸಿ ಟಿ ಉಷರ್, ಎರಿನ್ ಮೊರಿಯಾರ್ಟಿ ಮತ್ತು ಚೇಸ್ ಕ್ರಾಫೋರ್ಡ್ ಹಿಂದಿನ ಪಾತ್ರವರ್ಗದವರಾದರೆ ವ್ಯಾಲೋರಿ ಕರಿ ಮತ್ತು ಸುಸಾನ್ ಹೇವಾರ್ಡ್ ಇಬ್ಬರು ಹೊಸ ಸೂಪರ್ ಹೀರೋಗಳಾಗಿದ್ದಾರೆ. ಇದನ್ನು ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ನಲ್ಲಿ ನೋಡಬಹುದು.

ಇದನ್ನೂ ಓದಿ: Yogi Adityanath: ರಸ್ತೆಯಲ್ಲಿ ನಮಾಜ್ ಮಾಡಿದರೆ ಹುಷಾರ್! ಬಕ್ರೀದ್ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಯೋಗಿ ವಾರ್ನಿಂಗ್!

ಪ್ರಿಸ್ಯುಮಡ್ ಇನ್ನೊಸೆಂಟ್ (Presumed Innocent)

ಜೇಕ್ ಗಿಲೆನ್ ಹಾಲ್ ʼಪ್ರಿಸ್ಯುಮಡ್ ಇನ್ನೊಸೆಂಟ್‌ʼನಲ್ಲಿ ಕೊಲೆ ಪ್ರಕರಣದಲ್ಲಿನ ಪ್ರಾಸಿಕ್ಯೂಟರ್ ಆಗಿ ನಟಿಸಿದ್ದಾರೆ. ಇದು ಸ್ಕಾಟ್ ಟುರೊವ್ ಅವರ ಕಾದಂಬರಿ ಆಧರಿಸಿದೆ. ನಿಜ ಜೀವನದಲ್ಲಿ ಜೇಕ್‌ನ ಸಹೋದರಿ ಮ್ಯಾಗಿಯನ್ನು ಮದುವೆಯಾಗಿರುವ ಪೀಟರ್ ಸರ್ಸ್ ಗಾರ್ಡ್, ಗಿಲೆನ್ ಹಾಲ್‌ನ ನ್ಯಾಯಾಲಯದಲ್ಲಿ ಎದುರಾಳಿಯಾಗಿ ನಟಿಸಿದ್ದಾರೆ. ಇದನ್ನು ಆಪಲ್ ಟಿವಿ ಸ್ಟ್ರೀಮಿಂಗ್‌ನಲ್ಲಿ ನೋಡಬಹುದು.

Continue Reading
Advertisement
Petrodollar Deal
ವಿದೇಶ58 seconds ago

Petrodollar Explainer: ಅಮೆರಿಕ ಜೊತೆಗಿನ 50 ವರ್ಷಗಳ ಪೆಟ್ರೊಡಾಲರ್‌ ಒಪ್ಪಂದ ಕೊನೆಗೊಳಿಸಿದ ಸೌದಿ ಅರೇಬಿಯಾ; ಡಾಲರ್‌ ಗರ್ವ ಭಂಗ?

Raaj Kumar Anand
ದೇಶ20 mins ago

Raaj Kumar Anand: ಆಪ್‌ ಮಾಜಿ ಸಚಿವ ರಾಜ್‌ ಕುಮಾರ್‌ ಆನಂದ್‌ ಶಾಸಕ ಸ್ಥಾನದಿಂದಲೂ ಅನರ್ಹ; ಕಾರಣ ಇಲ್ಲಿದೆ

Star Saree Fashion
ಫ್ಯಾಷನ್35 mins ago

Star Saree Fashion: ರೇಷ್ಮೆ ಸೀರೆಯಲ್ಲಿ ನಟಿ ಕೀರ್ತಿ ಸುರೇಶ್‌ರಂತೆ ಗ್ಲಾಮರಸ್‌ ಆಗಿ ಕಾಣಿಸಬೇಕೆ? 5 ಟಿಪ್ಸ್ ಫಾಲೋ ಮಾಡಿ!

Sonakshi Sinha
Latest38 mins ago

Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಐಷಾರಾಮಿ ಅಪಾರ್ಟ್‌ಮೆಂಟ್ ಹೇಗಿದೆ? ವಿಡಿಯೊ ನೋಡಿ!

Karnataka Weather Forecast
ಮಳೆ43 mins ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Gangster Ravi Pujari
ಕರ್ನಾಟಕ46 mins ago

Gangster Ravi Pujari: ಭೂಗತ ಪಾತಕಿ ರವಿ ಪೂಜಾರಿಗೆ ಅನಾರೋಗ್ಯ; ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು

BS Yediyurappa
ಕರ್ನಾಟಕ50 mins ago

BS Yediyurappa: ಪೋಕ್ಸೊ ಕೇಸ್;‌ ಮಾಜಿ ಸಿಎಂಗೇ ಹೀಗಾದರೆ ಜನರ ಗತಿ ಏನು? ಸರ್ಕಾರಕ್ಕೆ ಕೋರ್ಟ್‌ ಚಾಟಿ!

Allergic Asthma
ಆರೋಗ್ಯ59 mins ago

Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

Due to heavy rain water entered the houses of Tharkas Pet village of Chittapur taluk
ಮಳೆ1 hour ago

Karnataka Rain: ಧಾರಾಕಾರ ಮಳೆ; ಚಿತ್ತಾಪುರ ತಾಲೂಕಿನ ತರ್ಕಸ್‌ಪೇಟೆ ಗ್ರಾಮ ತತ್ತರ

Pawan Kalyan
Latest2 hours ago

Akira Nandan: ಅಕಿರಾ ನಂದನ್‌; ಆರೂವರೆ ಅಡಿ ಎತ್ತರದ ಪವನ್ ಕಲ್ಯಾಣ್ ಪುತ್ರನಿಗೆ ಭಾರಿ ಡಿಮ್ಯಾಂಡ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ43 mins ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌