ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವಿವಾಹವಾಗಿದ್ದ ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮೀ ಮತ್ತು ಖ್ಯಾತ ನಿರ್ಮಾಪಕ ರವಿ ಚಂದ್ರಶೇಖರ್ ಇದೀಗ ತಮ್ಮ ವೈವಾಹಿಕ ಜೀವನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇವರಿಬ್ಬರೂ ಮದುವೆಯಾದಾಗ ಅನೇಕರು ವ್ಯಂಗ್ಯವಾಡಿ ಕಮೆಂಟ್ ಮಾಡಿದ್ದರು. ಈ ಜೋಡಿಯನ್ನು ಟ್ರೋಲ್ ಕೂಡ ಮಾಡಿದ್ದರು. ಆದರೆ ರವಿ ಚಂದ್ರಶೇಖರ್ ಮತ್ತು ಮಹಾಲಕ್ಷ್ಮೀ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಟ್ರಿಪ್, ದೇವಸ್ಥಾನ ಸುತ್ತಾಟದಲ್ಲಿ ತೊಡಗಿದ್ದಾರೆ. ತಮ್ಮ ಪಾಡಿಗೆ ತಾವು ಹಬ್ಬ-ಹರಿದಿನ ಆಚರಣೆ ಮಾಡಿಕೊಂಡು ಫುಲ್ ಖುಷಿ ಮೂಡ್ನಲ್ಲಿದ್ದಾರೆ.
ಇದೀಗ ಮಹಾಲಕ್ಷ್ಮೀ ಮತ್ತು ಅವರ ಪತಿ ರವಿ ಚಂದ್ರಶೇಖರ್ ‘ಥಾಯ್ ಪೂಸಮ್’ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಇದು ಭರತ ಹುಣ್ಣಿಮೆಯಂದು ತಮಿಳುನಾಡಿನಲ್ಲಿ ಆಚರಿಸುವ ಹಬ್ಬ. ಫೆ 5ರಂದು ಆಚರಿಸಲ್ಪಟ್ಟ ಈ ಹಬ್ಬದ ನಿಮಿತ್ತ ಮಹಾಲಕ್ಷ್ಮೀ ಮತ್ತು ರವಿಚಂದ್ರಶೇಖರ್ ಅವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ಫೋಟೊವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ‘ನಾವು ಪ್ರೀತಿಸುವ ಸಂಬಂಧಗಳಿಗಾಗಿ ಮಾತ್ರವಲ್ಲದೆ, ನಮ್ಮನ್ನು ಪ್ರೀತಿಸುವ ಸಂಬಂಧಗಳಿಗಾಗಿಯೂ ನಾವು ಪ್ರಾರ್ಥಿಸಬೇಕು’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ರವಿಚಂದ್ರಶೇಖರ್ ಅವರು ಬಿಳಿ ಬಣ್ಣದ ಧೋತಿ-ಕುರ್ತಾ ಧರಿಸಿದ್ದರೆ, ಮಹಾಲಕ್ಷ್ಮೀ ಆರೆಂಜ್ ಬಣ್ಣದ ಸೀರೆಯುಟ್ಟಿದ್ದನ್ನು ಫೋಟೋದಲ್ಲಿ ನೋಡಬಹುದು.
ಇದನ್ನೂ ಓದಿ: Vasishta Simha and Haripriya: ಸಿಂಹಪ್ರಿಯಾ ಅದ್ಧೂರಿ ಆರತಕ್ಷತೆ; ಶುಭಕೋರಿದ ಗಣ್ಯರು
ಈ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಹೊಗಳಿಕೆ ಕಮೆಂಟ್ ಬರುತ್ತಿದೆ. ಅನೇಕರು ಹಬ್ಬದ ಶುಭಾಶಯ ಕೋರಿದ್ದಾರೆ. ವೈವಾಹಿಕ ಜೀವನ ಸುಂದರವಾಗಿರಲಿ ಎಂದೂ ಹಾರೈಸಿದ್ದಾರೆ. ಅದರೊಂದಿಗೆ ಒಂದಷ್ಟು ಜನರು ಯಥಾಪ್ರಕಾರ ಟೀಕೆ ಮಾಡಿದ್ದಾರೆ. ಅಂದಹಾಗೇ, ಮಹಾಲಕ್ಷ್ಮೀ ಮತ್ತು ರವಿಚಂದ್ರಶೇಖರ್ ಅವರಿಬ್ಬರಿಗೂ ಇದು ಎರಡನೇ ಮದುವೆ. ವಯಸ್ಸಿನಲ್ಲೂ ತುಂಬ ಅಂತರವಿದೆ. ರವಿಚಂದ್ರಶೇಖರ್ ಅವರು ಗಾತ್ರದ ವಿಷಯಕ್ಕೂ ಟ್ರೋಲ್ ಆಗಿದ್ದಾರೆ. ಮಹಾಲಕ್ಷ್ಮೀ ಅವರು ರವಿಚಂದ್ರಶೇಖರ್ ಬಳಿ ಇರುವ ಹಣ ನೋಡಿ ಮರುಳಾಗಿ ಮದುವೆಯಾಗಿದ್ದಾರೆ ಎಂದೂ ಅನೇಕರು ವ್ಯಂಗ್ಯವಾಡಿದ್ದಾರೆ. ಈ ಜೋಡಿಯ ಮಧ್ಯೆಯ ಪ್ರೀತಿಯೇನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಮಡದಿ ಮಹಾಲಕ್ಷ್ಮೀ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದ ರವಿಚಂದ್ರಶೇಖರ್, ‘ಈಕೆ ನನ್ನ ಜೀವನದ 8ನೇ ಅಚ್ಚರಿ’ ಎಂದು ಹೇಳಿದ್ದರು.