Site icon Vistara News

Actress Mahalakshmi: ಮಹಾಲಕ್ಷ್ಮೀ ಸ್ವಲ್ಪ ದುರಂಹಕಾರಿ, ಟಿವಿಯಲ್ಲಿ ಕಾಣುವಂತೆ ಆಕೆ ಇಲ್ಲ ಎಂದ ರವೀಂದರ್!

Ravindar Chandrasekaran Actress Mahalakshmi

ಬೆಂಗಳೂರು: ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ವಿವಾಹವಾಗಿದ್ದ ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮೀ (Actress Mahalakshmi) ಮತ್ತು ಖ್ಯಾತ ನಿರ್ಮಾಪಕ  ರವೀಂದರ್ ಚಂದ್ರಶೇಖರ್​ ಇದೀಗ ಸೆಪ್ಟೆಂಬರ್​ 1ರಂದು ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಂಡರು. ಇವರಿಬ್ಬರೂ ಮದುವೆಯಾದಾಗ ಅನೇಕರು ವ್ಯಂಗ್ಯವಾಡಿ ಕಮೆಂಟ್​ ಮಾಡಿದ್ದರು. ಈ ಜೋಡಿಯನ್ನು ಟ್ರೋಲ್ ಕೂಡ ಮಾಡಿದ್ದರು. ಆದರೆ ರವಿ ಚಂದ್ರಶೇಖರ್​ (actress mahalakshmi ravindran) ಮತ್ತು ಮಹಾಲಕ್ಷ್ಮೀ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹಬ್ಬ-ಹರಿದಿನ ಆಚರಣೆ ಮಾಡಿಕೊಂಡು ಫುಲ್​ ಖುಷಿ ಮೂಡ್​​ನಲ್ಲಿದ್ದಾರೆ. ಈ ಜೋಡಿ ಒಟ್ಟಾಗಿ (Mahalakshmi and Ravindar ) ಇರುವ ಚಾನ್ಸೇ ಇಲ್ಲ ಎಂದವರೇ ಹೆಚ್ಚು. ಇದೀಗ ಈ ಜೋಡಿ ಮದುವೆಯಾಗಿ ಒಂದು ವರ್ಷವಾಗಿದೆ. ಮೊನ್ನೆ ಸೆಪ್ಟೆಂಬರ್​ 1ರಂದು ಇವರ ಮೊದಲ ವಿವಾಹ ವಾರ್ಷಿಕೋತ್ಸವ. ಈ ಸಂದರ್ಭದಲ್ಲಿ (Tamil TV actress Mahalakshmi) ರವೀಂದರ್‌ ಪತ್ನಿಗೆ ವಿಶೇಷ ಪತ್ರದ ಮೂಲಕ ಶುಭಾಶಯ ಕೋರಿದ್ದಾರೆ. ಅವರು ಬರೆದಿರುವ ಪತ್ರ ಈಗ ವೈರಲ್​ ಆಗಿದೆ

ರವಿಂದರ್‌ ತಮ್ಮ ಪತ್ರದಲ್ಲಿ ʻʻಇದು ನಮ್ಮಿಬ್ಬರ ಮೊದಲ ವಿವಾಹ ವಾರ್ಷಿಕೋತ್ಸವ. ಕಳೆದ ವರ್ಷ ನಮ್ಮ ದೇಶದಲ್ಲಿ ಮೊದಲ ಸಮಸ್ಯೆ ಆಗಿದ್ದು ನಮ್ಮಿಬ್ಬರ ವಿವಾಹ. ನನ್ನ ಜೀವನಕ್ಕೆ ನೀನು ಸಿಕ್ಕ ವರ. ನಾನು ನಿಜವಾಗಿಯೂ ಮಹಾಲಕ್ಷ್ಮಿಯ ಪ್ರೀತಿ ಮತ್ತು ಪ್ರಾಮಾಣಿಕತೆಗೆ ಅರ್ಹನಲ್ಲ. ಆದರೂ ಪರವಾಗಿಲ್ಲ ನಮ್ಮ ಜೀವನ ತುಂಬ ಸುಂದರವಾಗಿದೆ. ಸಂತೋಷದಲ್ಲಿ ನಮ್ಮನ್ನು ನಗಿಸುವ ಹುಡುಗಿ ಮತ್ತು ಸಂತೋಷದಲ್ಲಿ ನಮ್ಮನ್ನು ಅಳುವಂತೆ ಮಾಡುವ ಹುಡುಗಿ ಮಾತ್ರ ನಮಗೆ ಅತ್ಯುತ್ತಮವಾದ ಜೀವನವನ್ನು ನೀಡಬಲ್ಲಳು. ನನ್ನ ಬಂಗಾರ ಈಕೆ ನನ್ನ ಪತ್ನಿ ಮಹಾಲಕ್ಷ್ಮೀʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kaveri Kannada Medium: `ಸ್ವಾಭಿಮಾನʼ ಸಿನಿಮಾ ಖ್ಯಾತಿಯ ನಟಿ ಮಹಾಲಕ್ಷ್ಮೀ ಕನ್ನಡ ಕಿರುತೆರೆಗೆ ಎಂಟ್ರಿ!

ʻʻಮದುವೆಯಾದ ಹೊಸತರದಲ್ಲಿ ಆಕೆಯ ಕೆಲವು ವಿಷಯಗಳು ನನಗೂ ಅಚ್ಚರಿ ತಂದಿದ್ದವು ಎಂದು ರವೀಂದರ್​ ಹೇಳಿದ್ದಾರೆ. ಆಕೆಯನ್ನು ಮದುವೆಯಾದಾಗ, ನನ್ನ ಮನೆಕೆಲಸ, ಕಾಫಿ, ಅಡುಗೆ ಎಲ್ಲವನ್ನು ಮನೆ ಕೆಲಸದವರೇ ಮಾಡಬೇಕು ಎಂದುಕೊಂಡಿದ್ದೆ. ಬೆಳಗ್ಗೆ ಬೇಗ ಎದ್ದು ಕಾಫಿ ಮಾಡಿ ಕೊಡುತ್ತಾಳೆ. ಒಮ್ಮೊಮ್ಮೆ ಕೆಟ್ಟದಾದ ಅಡುಗೆ ಮಾಡಿದ್ದೂ ಇದೆ. ಆಗ ಆನ್​ಲೈನ್​ ಮೂಲಕ ತಿನಿಸು ತರಿಸಿಕೊಂಡಿದ್ದೂ ಇದೆ. ಟಿವಿಯಲ್ಲಿ ಕಾಣುವಂತೆ ಆಕೆ ಇಲ್ಲ. ಸ್ವಭಾವ ಬದಲಿದೆ. ಅವಳಿಗೆ ಕೊಂಚ ಆಟಿಟ್ಯೂಡ್‌ ಇದೆ. ದುರಂಹಕಾರಿಯೂ ಹೌದು. ಆದರೆ, ನನ್ನ ಮೇಲೆ ಅತಿಯಾದ ಪ್ರೀತಿ ಬಂದಾಗ, ಆಕೆ ನೇರವಾಗಿ ಅಡುಗೆ ಮನೆಗೆ ಹೋಗುತ್ತಾಳೆ. ನನಗಾಗಿ ಏನಾದರೂ ಮಾಡಿ ತರುತ್ತಾಳೆ. ನಾವು ದೂರವಾಗಿದ್ದೇವೆ ಎಂದು ಯೂಟ್ಯೂಬ್‌ಗಳಲ್ಲಿ ಸುದ್ದಿಗಳು ಬಂದಾಗ, ನಾವು ಅವರೆಲ್ಲರ ಮುಂದೆ ಬಾಳಿ ಬದುಕಬೇಕು ಎಂದು ಹೇಳುತ್ತಾಳೆ. ಅದನ್ನು ನಾವು ಸಾಬೀತುಪಡಿಸಬೇಕು ಎನ್ನುತ್ತಾಳೆʼʼ ಎಂದು ರವೀಂದರ್​ ಹೇಳಿದ್ದಾರೆ.

ಇದನ್ನೂ ಓದಿ: ಹುಣ್ಣಿಮೆ ಹಬ್ಬದ ಸಂಭ್ರಮದಲ್ಲಿ ನಟಿ ಮಹಾಲಕ್ಷ್ಮೀ-ರವಿಚಂದ್ರಶೇಖರ್​ ದಂಪತಿ; ದೇವಸ್ಥಾನದಲ್ಲಿ ಪೂಜೆ

ಪತಿಯ ಪತ್ರಕ್ಕೆ ಮಹಾಲಕ್ಷ್ಮೀ ಕೂಡ ಸಂತಸ ಹೊರಹಾಕಿದ್ದಾರೆʻʻ ನನ್ನ ಪ್ರೀತಿಯನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸಲು ನನಗೆ ತಿಳಿದಿಲ್ಲ. ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಬೆಟರ್‌ ಹಾಫ್‌ʼʼಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಂದಹಾಗೇ, ಮಹಾಲಕ್ಷ್ಮೀ ಮತ್ತು ರವಿಚಂದ್ರಶೇಖರ್ ಅವರಿಬ್ಬರಿಗೂ ಇದು ಎರಡನೇ ಮದುವೆ. ವಯಸ್ಸಿನಲ್ಲೂ ತುಂಬ ಅಂತರವಿದೆ. ರವಿಚಂದ್ರಶೇಖರ್ ಅವರು ಗಾತ್ರದ ವಿಷಯಕ್ಕೂ ಟ್ರೋಲ್​ ಆಗಿದ್ದಾರೆ. ಮಹಾಲಕ್ಷ್ಮೀ ಅವರು ರವಿಚಂದ್ರಶೇಖರ್​ ಬಳಿ ಇರುವ ಹಣ ನೋಡಿ ಮರುಳಾಗಿ ಮದುವೆಯಾಗಿದ್ದಾರೆ ಎಂದೂ ಅನೇಕರು ವ್ಯಂಗ್ಯವಾಡಿದ್ದಾರೆ. ಈ ಜೋಡಿಯ ಮಧ್ಯೆಯ ಪ್ರೀತಿಯೇನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಮಡದಿ ಮಹಾಲಕ್ಷ್ಮೀ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದ ರವಿಚಂದ್ರಶೇಖರ್​, ‘ಈಕೆ ನನ್ನ ಜೀವನದ 8ನೇ ಅಚ್ಚರಿ’ ಎಂದು ಹೇಳಿದ್ದರು.

Exit mobile version