Site icon Vistara News

Actor Ramcharan: ಒಂದು ದಿನ ಮುಂಚಿತವಾಗಿ ರಾಮ್‌ಚರಣ್‌ ಜನುಮದಿನವನ್ನು ಆಚರಿಸಿದ RC15 ಚಿತ್ರತಂಡ

RC15 set celebrates Actor Ramcharan birthday

ಬೆಂಗಳೂರು: ಮಾರ್ಚ್ 27 ರಂದು ರಾಮ್ ಚರಣ್ (Actor Ramcharan) ಅವರ ಜನುಮದಿನ. ಆದರೆ ಇದೀಗ ರಾಮ್‌ಚರಣ್‌ ಅವರ ಜನುಮದಿನದ ಒಂದು ದಿನ ಮುಂಚಿತವಾಗಿ RC15 ಚಿತ್ರತಂಡ ನಟನ ಹುಟ್ಟುಹಬ್ಬವನ್ನು ಸೆಟ್‌ನಲ್ಲಿ ಆಚರಿಸಿದೆ. ಗುಲಾಬಿ ದಳಗಳ ಸುರಿಮಳೆಯೊಂದಿಗೆ ರಾಮ್‌ಚರಣ್‌ಗೆ ಸ್ವಾಗತಿಸಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದೆ. ರಾಮ್ ಚರಣ್ ಅವರ ಸಹನಟಿ ಕಿಯಾರಾ ಆಡ್ವಾಣಿ ಕೂಡ ಹಾಜರಿದ್ದರು.

ಇದೀಗ ಸೆಲೆಬ್ರೇಷನ್‌ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ರಾಮ್ ಚರಣ್ ನೀಲಿ ಶರ್ಟ್ ಮತ್ತು ತಿಳಿ ನೀಲಿ ಪ್ಯಾಂಟ್‌ನಲ್ಲಿ ಸನ್‌ಗ್ಲಾಸ್ ನೊಂದಿಗೆ ಕಾಣಿಸಿಕೊಂಡರೆ, ಕಿಯಾರಾ ಬಿಳಿ ಟಾಪ್ ಮತ್ತು ನೀಲಿ ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ಎಸ್ ಶಂಕರ್ ಮತ್ತು ನೃತ್ಯ ಸಂಯೋಜಕ-ನಟ ಪ್ರಭುದೇವ ಅವರು ಭಾಗಿಯಾಗಿದ್ದರು.

ಆರ್‌ಆರ್‌ಆರ್ ಆಸ್ಕರ್‌ ಪ್ರಶಸ್ತಿ ದೊರೆತ ಬಳಿಕ ರಾಮ್‌ ಚರಣ್‌ ಅವರಿಗೆ ಕೆಲವು ದಿನಗಳ ಹಿಂದೆಯಷ್ಟೇ ಚಿತ್ರತಂಡದಿಂದ ವಿಭಿನ್ನವಾಗಿ ನಟನನ್ನು ವೆಲ್‌ಕಮ್‌ ಮಾಡಲಾಗಿತ್ತು. ಪ್ರಭುದೇವ ಹಾಗೂ ಚಿತ್ರತಂಡ ನಾಟು ನಾಟು ಹಾಡನ್ನು ಸೆಟ್‌ನಲ್ಲಿಯೇ ಸ್ಟೆಪ್ಸ್‌ ಹಾಕಿ ರಾಮ್‌ಚರಣ್‌ ಅವರನ್ನು ಸ್ವಾಗತಿಸಿದ್ದರು. ಇದೀಗ ಚಿತ್ರತಂಡ ನಟನ ಹುಟ್ಟುಹಬ್ಬವನ್ನು ಗ್ರ್ಯಾಂಡ್‌ ಆಗಿ ಆಚರಿಸಿದೆ.

ಇದನ್ನೂ ಓದಿ: Actor Ramcharan: RRR ಆಸ್ಕರ್‌ ಗೆದ್ದ ಬಳಿಕ ದೇಶಕ್ಕೆ ವಾಪಸ್ಸಾದ ರಾಮ್‌ಚರಣ್‌ಗೆ ಪ್ರಭುದೇವರಿಂದ ಬಿಗ್ ಸರ್‌ಪ್ರೈಸ್

RC15

ಚಲನಚಿತ್ರಕ್ಕೆ ತಾತ್ಕಾಲಿಕವಾಗಿ RC15 ಎಂದು ಹೆಸರಿಸಲಾಗಿದೆ. ಇದರಲ್ಲಿ ಕಿಯಾರಾ ಆಡ್ವಾಣಿ, ಎಸ್‌ಜೆ ಸೂರ್ಯ, ಜಯರಾಮ್, ಅಂಜಲಿ ಮತ್ತು ಶ್ರೀಕಾಂತ್ ಕೂಡ ನಟಿಸಿದ್ದಾರೆ. ಈ ಪ್ರಾಜೆಕ್ಟ್ ಅನ್ನು ಪ್ಯಾನ್-ಇಂಡಿಯಾ ಬಿಡುಗಡೆಗಾಗಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಆರ್‌ಸಿ 15 ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Exit mobile version