Site icon Vistara News

Krishnam Raju died | ತೆಲುಗು ಸಿನಿಮಾದ ರೆಬೆಲ್‌ ಸ್ಟಾರ್‌ ಕೃಷ್ಣಂ ರಾಜು ಇನ್ನಿಲ್ಲ

krishnam raju

ಹೈದರಾಬಾದ್:‌ ತೆಲುಗು ಸಿನಿಮಾ ರಂಗದ ಖ್ಯಾತ ನಟ, ರೆಬೆಲ್‌ ಸ್ಟಾರ್‌ ಕೃಷ್ಣಂ ರಾಜು (Krishnam Raju died) ಅವರು ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗಿನ ಜಾವ 3.25ಕ್ಕೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಉಪ್ಪಲಾಪತಿ ವೆಂಕಟ ಕೃಷ್ಣಂ ರಾಜು 1940 ರ ಜನವರಿ 20ರಂದು ಜನಿಸಿದರು. ಜನಪ್ರಿಯ ನಟ ಹಾಗೂ ರಾಜಕಾರಣಿಯೂ ಆಗಿದ್ದರು ತಮ್ಮ ನಟನಾ ಚಾತುರ್ಯದಿಂದ ರೆಬೆಲ್‌ ಸ್ಟಾರ್‌ ಎಂದೇ ಹೆಸರಾಗಿದ್ದರು. ಉತ್ತಮ ನಟನೆಗೆ ನಂದಿ ಪ್ರಶ್ಸ್ತಿ ಗಳಿಸಿದ್ದರು. 183 ಚಿತ್ರಗಳಲ್ಲಿ ನಟಿಸಿದ್ದಾರೆ. ಜೀವನ ತರಂಗಲು, ಕೃಷ್ಣವೇಣಿ, ಭಕ್ತ ಕಣ್ಣಪ್ಪ, ಅಮರ ದೀಪಮ್‌, ಸತಿ ಸಾವಿತ್ರಿ, ಕಾಟಟಾಲ ರುದ್ರಯ್ಯ, ಮಾನ ವೂರಿ ಪಾಂಡವಾಲು, ರಂಗೂನ್‌ ರೌಡಿ, ಶ್ರೀ ವಿನಾಯಕ ವಿಜಯಮು, ಅಂತಿಮ ತೀರ್ಪು, ತ್ರಿಶೂಲಮ್‌ ಮುಂತಾದವುಗಳು ಅವರ ಅಭಿನಯದ ಸಿನಿಮಾಗಳಾಗಿವೆ.

ಕೇಂದ್ರ ಸಚಿವರಾಗಿ ಸೇವೆ: 1990ರ ಬಳಿಕ ರಾಜಕಾರಣದಲ್ಲಿ ಸಕ್ರಿಯರಾದ ಕೃಷ್ಣರಾಜು ಅವರು ಭಾರತೀಯ ಜನತಾ ಪಕ್ಷವನ್ನು ಸೇರಿದರು. 12 ಮತ್ತು 13ನೇ ಲೋಕಸಭೆಗೆ ಕಾಕಿನಾಡ ಮತ್ತು ನರಸಾಪುರಂ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ವಾಜಪೇಯಿ ಸರ್ಕಾರದಲ್ಲಿ 1999-2004ರ ಅವಧಿಯಲ್ಲಿ ವಿದೇಶಾಂಗ ಖಾತೆಯ ಸಹಾಯಕ ಸಚಿವರಾಗಿದ್ದರು. 2009ರಲ್ಲಿ ಚಿರಂಜೀವಿ ಅವರ ಪ್ರಜಾ ರಾಜ್ಯಂ ಪಕ್ಷಕ್ಕೆ ಸೇರಿದರು. 2009ರಲ್ಲಿ ರಾಜಮಂಡ್ರಿಯಿಂದ ಲೋಕಸಭೆಗೆ ಸ್ಪರ್ಧಿಸಿದರೂ, ಪರಾಭವಗೊಂಡಿದ್ದರು.

Exit mobile version