Site icon Vistara News

Recreation of Kantara: ʻಕಾಂತಾರʼ ಎಫೆಕ್ಟ್ ; ಬೆಂಕಿ ಅವಘಡಕ್ಕೆ ಮಕ್ಕಳು ಸೇರಿ ಹಲವರಿಗೆ ಗಂಭೀರ ಗಾಯ

Recreation of Kantara

ಆಂಧ್ರ ಪ್ರದೇಶ: ರಿಷಬ್ ಶೆಟ್ಟಿ ಅಭಿನಯದ ʻಕಾಂತಾರʼ ಚಿತ್ರದ (Recreation of Kantara) ವರಾಹ ರೂಪಂ ಹಾಡಿಗೆ ನೃತ್ಯ ಪ್ರದರ್ಶನ ಎಲ್ಲೆಡೆ ನಡೆಯುತ್ತಲೇ ಇರುತ್ತದೆ. ಗಣೇಶ ವಿಸರ್ಜನೆಯಲ್ಲಿ ಫಿಲ್ಮಿ ಎಫೆಕ್ಟ್ ಸೃಷ್ಟಿಸಲು ಕೆಲವು ಯುವಕರು ಮತ್ತು ನೃತ್ಯಪಟುಗಳು ಪ್ರಯತ್ನ ಮಾಡಿದ್ದು, ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಇದು ನಡೆದಿದ್ದು ಆಂಧ್ರ ಪ್ರದೇಶದ ಕಡಪಾ ವೈಎಸ್‌ಆರ್ ಜಿಲ್ಲೆಯ ಎರ್ರಗುಂಟ್ಲ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ. ಈ ವೇಳೆ ಮಕ್ಕಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಂತಾರ ಚಿತ್ರದ ಪಾತ್ರಧಾರಿಯಂತೆ ವೇಷ ಕೂಡ ಕಲಾವಿದರು ಧರಿಸಿದ್ದರು. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕುಣಿಯಲು ನಿರ್ಧರಿಸಿದ್ದರು. ಆದರೆ, ಜ್ವಾಲೆಯು ಎತ್ತರಕ್ಕೆ ಏರಿತು. ಜ್ವಾಲೆಯಿಂದಾಗಿ ಕಲಾವಿದರು ತೊಂದರೆ ಎದುರಿಸಿದರು ಮತ್ತು ನೃತ್ಯ ಮಾಡಲು ಸಾಧ್ಯವಾಗಲಿಲ್ಲ. ಬದಲಾಗಿ, ಅವರಿಗೆ ಸುಟ್ಟ ಗಾಯಗಳಾದವು. ಇಬ್ಬರು ಕಲಾವಿದರು ಸೇರಿ ಆರು ಮಕ್ಕಳು ಬೆಂಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Tiger 3 teaser: ಸಲ್ಮಾನ್‌ ಖಾನ್‌ಗೆ ಭಾರತದಿಂದ ‘ಕ್ಯಾರೆಕ್ಟರ್ ಸರ್ಟಿಫಿಕೇಟ್ʼ ಬೇಕಂತೆ; ಟೈಗರ್‌ 3 ಟೀಸರ್‌ ಔಟ್‌!

ಪೊಲೀಸರ ಕಣ್ಣೆದುರೇ ಪೆಟ್ರೋಲ್ ಕ್ಯಾನ್ ತೆಗೆದುಕೊಂಡು ಬೆಂಕಿ ಹಚ್ಚಲು ಯತ್ನಿಸುತ್ತಿದ್ದರೂ ಪೊಲೀಸರು ತಡೆಯುವ ಪ್ರಯತ್ನ ಮಾಡಲಿಲ್ಲ ಎನ್ನಲಾಗಿದೆ. ಪೊಲೀಸರು ಮೆರವಣಿಗೆ ವೇಳೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಮೆರವಣಿಗೆ ನಡೆಯುತ್ತಿದ್ದರೂ ಪೊಲೀಸರು ತಲೆಕೆಡಿಸಿಕೊಂಡಿಲ್ಲ. ಅದರಿಂದ ಈ ದುರಂತ ಸಂಭವಿಸಿದೆ ಎನ್ನುತ್ತಾರೆ ಸ್ಥಳೀಯರು.

Exit mobile version