Tiger 3 teaser: ಸಲ್ಮಾನ್‌ ಖಾನ್‌ಗೆ ಭಾರತದಿಂದ ‘ಕ್ಯಾರೆಕ್ಟರ್ ಸರ್ಟಿಫಿಕೇಟ್ʼ ಬೇಕಂತೆ; ಟೈಗರ್‌ 3 ಟೀಸರ್‌ ಔಟ್‌! Vistara News

South Cinema

Tiger 3 teaser: ಸಲ್ಮಾನ್‌ ಖಾನ್‌ಗೆ ಭಾರತದಿಂದ ‘ಕ್ಯಾರೆಕ್ಟರ್ ಸರ್ಟಿಫಿಕೇಟ್ʼ ಬೇಕಂತೆ; ಟೈಗರ್‌ 3 ಟೀಸರ್‌ ಔಟ್‌!

Tiger 3 teaser: ಸೆ. 27ರಂದು ಟೈಗರ್‌ 3 ಸಿನಿಮಾದ ಹೊಸ ಟೀಸರ್‌ ʻಟೈಗರ್‌ ಕಾ ಮೆಸೆಜ್‌ʼ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ.ʻʻನಾನು ಭಾರತದಿಂದ ಕ್ಯಾರೆಕ್ಟರ್​ ಸರ್ಟಿಫಿಕೇಟ್​ ಕೇಳುತ್ತಿದ್ದೇನೆʼʼಎಂಬುವ ಡೈಲಾಗ್‌ ಇದೀಗ ವೈರಲ್‌ ಆಗುತ್ತಿದೆ.

VISTARANEWS.COM


on

Tiger 3 teaser Salman Khan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಬಳಿಕ, ʻಟೈಗರ್‌ 3ʼ (Tiger 3 teaser) ಮೂಲಕ ಸಲ್ಮಾನ್ ಖಾನ್ ರಗಡ್‌ ಲುಕ್‌ನೊಂದಿಗೆ ಬಂದಿದ್ದಾರೆ. ʻಟೈಗರ್‌ ಕಾ ಮೆಸೆಜ್‌ʼ ಎಂಬ ವಿಡಿಯೊ ಮೂಲಕ ಮತ್ತೆ ಸಲ್ಮಾನ್‌ ಅಬ್ಬರಿಸಿದ್ದಾರೆ. ಸಲ್ಮಾನ್‌ ಖಾನ್‌ (Salman Khan ) ಅವರು ಯಶ್‌ರಾಜ್‌ಫಿಲ್ಮ್ಸ್‌ ಸ್ಪೈ ಯುನಿವರ್ಸ್‌ನಲ್ಲಿ ಏಜೆಂಟ್‌ ಟೈಗರ್‌ ಆಗಿ ಮರಳಿದ್ದಾರೆ. ಸೆ. 27ರಂದು ಟೈಗರ್‌ 3 ಸಿನಿಮಾದ ಹೊಸ ಟೀಸರ್‌ ʻಟೈಗರ್‌ ಕಾ ಮೆಸೆಜ್‌ʼ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ.ʻʻನಾನು ಭಾರತದಿಂದ ಕ್ಯಾರೆಕ್ಟರ್​ ಸರ್ಟಿಫಿಕೇಟ್​ ಕೇಳುತ್ತಿದ್ದೇನೆʼʼಎಂಬುವ ಡೈಲಾಗ್‌ ಇದೀಗ ವೈರಲ್‌ ಆಗುತ್ತಿದೆ.

ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ದೀಪಾವಳಿಯಂದು ಬಿಡುಗಡೆಯಾಗಲಿದೆ. ‘ಟೈಗರ್ 3’ ಟೀಸರ್‌ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅಭಿಮಾನಿಗಳು ವಿಮರ್ಶಿಸಿ ಹಾಡಿ ಹೊಗಳಿದ್ದಾರೆ. ಟೈಗರ್‌ 3 ಬಳಿಕ ಹಲವು ಪತ್ತೆದಾರಿ ಸಿರೀಸ್‌ ಚಿತ್ರಗಳನ್ನು ವೈಆರ್‌ಎಫ್‌ ಬಿಡುಗಡೆ ಮಾಡಲಿದೆ. “ಎಲ್ಲಿಯವರೆಗೆ ಟೈಗರ್‌ ಸಾಯುವುದಿಲ್ಲವೋ, ಅಲ್ಲಿಯವರೆಗೆ ಅವನು ಕಾಣೆಯಾಗುವುದಿಲ್ಲ” ಎಂಬ ಡೈಲಾಗ್‌ ಸಖತ್‌ ಮಜವಾಗಿದೆ.

ಒಂದು ನಿಮಿಷದ 43 ಸೆಕೆಂಡುಗಳ ಅವಧಿಯ ಟೀಸರ್ ಇದಾಗಿದೆ. “ಭಾರತಕ್ಕೆ 20 ವರ್ಷಗಳ ಸೇವೆಯ ನಂತರ, ನಾನು ಪ್ರತಿಯಾಗಿ ಏನನ್ನೂ ಕೇಳಲಿಲ್ಲ. ಆದರೆ ಇಂದು ನನಗೆ ಬೇಡಿಕೆಯಿದೆ. ಟೈಗರ್​ ನಿಮ್ಮ ಶತ್ರು ಎಂದು ಹೇಳಲಾಗುತ್ತಿದೆ. ಟೈಗರ್​ ಒಬ್ಬ ದ್ರೋಹಿ ಎಂದು ಹೇಳಲಾಗುತ್ತಿದೆ. 20 ವರ್ಷಗಳ ಸೇವೆಯ ನಂತರವೂ ನಾನು ಭಾರತದಿಂದ ಕ್ಯಾರೆಕ್ಟರ್​ ಸರ್ಟಿಫಿಕೇಟ್​ ಕೇಳುತ್ತಿದ್ದೇನೆʼʼಎಂಬುವ ಸಲ್ಮಾನ್‌ ಡೈಲಾಗ್‌ ಹೈಲೈಟ್‌ ಆಗಿದೆ.

ಇದನ್ನೂ ಓದಿ: Tiger 3 teaser: ಸೆಪ್ಟೆಂಬರ್ 27ಕ್ಕೆ ಸಲ್ಮಾನ್ ಖಾನ್‌ರಿಂದ ಹೊಸ ಸಂದೇಶ! ಏನದು?

ಈ ವರ್ಷ ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೀಗ ಚಿತ್ರವು ಈ ದೀಪಾವಳಿಗೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ʻಈಗಾಗಲೇ ಯಶ್‌ ರಾಜ್‌ ಫಿಲ್ಮ್ಸ್‌ 2012 ರಲ್ಲಿ ಏಕ್ ಥಾ ಟೈಗರ್ ನಂತರ ಟೈಗರ್ ಜಿಂದಾ ಹೈ (2017), ವಾರ್ (2019), ಮತ್ತು ಪಠಾಣ್‌ (2023) ಸಿನಿಮಾವನ್ನು ನೀಡಿತ್ತು. ಎಲ್ಲವೂ ಹಿಟ್‌ ಚಿತ್ರಗಳೇ ಆಗಿದೆ. ಟೈಗರ್ 3 ನವೆಂಬರ್‌ನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ತಿಂಗಳ ಆರಂಭದಲ್ಲಿ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್, ಚಿತ್ರದ ಹೊಸ ಪೋಸ್ಟರ್‌ನೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದರು.

ಟೈಗರ್‌ 3 ಸಿನಿಮಾವು ನವೆಂಬರ್‌ 10ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಬಿಡುಗೆಡೆಯಾಗುತ್ತಿಲ್ಲ. ಈ ಸಿನಿಮಾದಲ್ಲಿ ಪಠಾಣ್‌ ಸಿನಿಮಾದ ಮುಂದುವರಿದ ಭಾಗವಾಗಿ ಶಾರೂಖ್‌ ಖಾನ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಸಲ್ಮಾನ್‌ ಖಾನ್‌, ಕತ್ರಿನಾ ಕೈಫ್‌, ಇಮ್ರಾನ್‌ ಹಶ್ಮಿ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

South Cinema

Lakshmika Sajeevan : 24 ವರ್ಷದ ಮಲಯಾಳಂ ನಟಿ ಹೃದಯಾಘಾತದಿಂದ ನಿಧನ

Lakshmika Sajeevan: ದುಲ್ಕರ್ ಸಲ್ಮಾನ್ ಅಭಿನಯದ “ಒರು ಯಮಂದನ್ ಪ್ರೇಮಕಥಾ” ಚಿತ್ರದಲ್ಲಿಯೂ ನಟಿ ಬಣ್ಣ ಹಚ್ಚಿದ್ದರು. ಪುಳ್ಯಮ್ಮದಲ್ಲಿ ದೇವಯಾನಿ ಟೀಚರ್ ಆಗಿ ಮೆಚ್ಚುಗೆ ಗಳಿಸಿದ್ದರು.

VISTARANEWS.COM


on

Malayalam Actress Lakshmika Sajeevan Dies Due To Heart Attack
Koo

ಬೆಂಗಳೂರು: ಮಲಯಾಳಂ ಯುವ ನಟಿ ಲಕ್ಷ್ಮಿಕಾ ಸಜೀವನ್​​ (Lakshmika Sajeevan) ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟಿಗೆ ಕೇವಲ 24 ವರ್ಷ ವಯಸ್ಸಾಗಿತ್ತು. ಅರಬ್‌ ರಾಷ್ಟ್ರ ಶಾರ್ಜಾದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಅಲ್ಲಿಯೇ ಹಠಾತ್ ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದಾರೆ.

ಹಲವು ಸಿರೀಯಲ್‌ಗಳು ಹಾಗೂ ಸಿನಿಮಾಗಳಲ್ಲಿ ನಟಿಸುವ ಮೂಲಕ ಕೇರಳದಲ್ಲಿ ಮನೆ ಮಾತಾಗಿದ್ದರು ಲಕ್ಷ್ಮಿಕಾ ಸಜೀವನ್​​. ಅವರು ʻಕಾಕʼ ಸೀರಿಯಲ್‌ನ ಪಂಚಮಿ ಪಾತ್ರದಿಂದ ಸಾಕಷ್ಟು ಜನಪ್ರಿಯರಾಗಿದ್ದರು. ಸೀರಿಯಲ್​ ಮಾತ್ರವಲ್ಲದೇ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿದ್ದರು. ಪಂಚವರ್ಣ ತತ್ತ , ಸೌದಿ ವೆಲ್ಲಕ್ಕ, ಪುಳಯಮ್ಮ, ಉಯಿರೆ ಸೇರಿ ಹಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. ದುಲ್ಕರ್ ಸಲ್ಮಾನ್ ಅಭಿನಯದ “ಒರು ಯಮಂದನ್ ಪ್ರೇಮಕಥಾ” ಚಿತ್ರದಲ್ಲಿಯೂ ನಟಿ ಬಣ್ಣ ಹಚ್ಚಿದ್ದರು. ಪುಳ್ಯಮ್ಮದಲ್ಲಿ ದೇವಯಾನಿ ಟೀಚರ್ ಆಗಿ ಮೆಚ್ಚುಗೆ ಗಳಿಸಿದ್ದರು.

Malayalam Actress Lakshmika Sajeevan Dies Due To Heart Attack

ʼಲವ್‌ ಸ್ಟೋರಿʼ ಖ್ಯಾತಿಯ ಹಾಲಿವುಡ್‌ ನಟ ರಿಯಾನ್‌ ಒ ನೀಲ್‌ ನಿಧನ

ಹಾಲಿವುಡ್‌ ನಟ, ʼಲವ್‌ ಸ್ಟೋರಿʼ, ʼಪೇಪರ್‌ ಮೂನ್‌ʼ ಚಿತ್ರಗಳ ಖ್ಯಾತಿಯ ರಿಯಾನ್‌ ಒ ನೀಲ್‌ (Ryan O’Neal) ನಿಧನ ಹೊಂದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Ryan O’Neal: ʼಲವ್‌ ಸ್ಟೋರಿʼ ಖ್ಯಾತಿಯ ಹಾಲಿವುಡ್‌ ನಟ ರಿಯಾನ್‌ ಒ ನೀಲ್‌ ನಿಧನ

1941ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಜನಿಸಿದ ರಿಯಾನ್‌ ಒ ನಿಲ್‌ ಆರಂಭದಲ್ಲಿ ಬಾಕ್ಸರ್‌ ಆಗಿದ್ದರು. 1960ರಲ್ಲಿ ಅವರು ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ʼದಿ ಮೆನಿ ಲವ್ಸ್‌ ಆಫ್‌ ಡೋಬಿ ಗಿಲ್ಲಿಸ್‌ʼ ಎನ್ನುವ ಟಿವಿ ಶೋ ಮೂಲಕ ರಿಯಾನ್‌ ಒ ನಿಲ್‌ ಬಣ್ಣದ ಪ್ರಪಂಚ ಪ್ರವೇಶಿಸಿದರು. 1969ರಲ್ಲಿ ತೆರೆಕಂಡ ʼದಿ ಬಿಗ್‌ ಬೌನ್ಸ್‌ʼ ರಿಯಾನ್‌ ಒ ನಿಲ್‌ ಅಭಿನಯಿಸಿದ ಮೊದಲ ಚಿತ್ರ.

1964ರ ಎಬಿಸಿ ಪ್ರೈಮ್‌ ಟೈಮ್‌ ಟೆಲಿವಿಷನ್‌ ಧಾರಾವಾಹಿ ʼಪೇಟನ್‌ ಪ್ಲೇಸ್‌ʼನಲ್ಲಿ ರಾಡ್ನಿ ಹ್ಯಾರಿಂಗ್ಟನ್‌ ಪಾತ್ರವನ್ನು ನಿರ್ವಹಿಸುವ ಮೂಲಕ ಜನಪ್ರಿಯರಾದರು. ಇನ್ನು 1970ರಲ್ಲಿ ತೆರೆಕಂಡ ರೊಮ್ಯಾಂಟಿಕ್‌ ಡ್ರಾಮಾ ʼಲವ್‌ ಸ್ಟೋರಿʼ ಚಿತ್ರದ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು. ಎರಿಕ್‌ ಸೆಗಲ್‌ ಅವರ ಅದೇ ಶೀರ್ಷಿಕೆಯ ಕಾದಂಬರಿ ಆಧಾರಿತ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 2015ರಲ್ಲಿ ಬಿಡುಗಡೆಯಾದ ʼಯೂನಿಟ್‌ʼ ಮತ್ತು ʼನೈಟ್‌ ಆಫ್‌ ಕಪ್ಸ್‌ʼ ರಿಯಾನ್‌ ಒ ನಿಲ್‌ ಅಭಿನಯಿಸಿದ ಕೊನೆಯ ಚಿತ್ರಗಳು. ರಿಯಾನ್‌ ಒ ನಿಲ್‌ ಆಸ್ಕರ್‌ ಪ್ರಶಸ್ತಿಗಾಗಿ ನಾಮ ನಿರ್ದೇಶನಗೊಂಡಿದ್ದರು. ಅವರು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

Continue Reading

South Cinema

Actress Leelavathi: ಅನ್ನ, ನೀರು ಬಿಟ್ಟಿದೆ ಲೀಲಾವತಿ ಅವರ ಪ್ರೀತಿಯ ಶ್ವಾನ; ಕಣ್ಣೀರಿಟ್ಟ ವಿನೋದ್‌!

Actress Leelavathi: ರಾತ್ರಿಯಿಂದಲೇ ಮನೆಯಲ್ಲಿ ಅಮ್ಮ ಇಲ್ಲದಿರುವುದನ್ನು ಕಂಡು ಲೀಲಾವತಿಯವರು ಫೋಟೊ ಮುಂದೆ ಸುಮ್ಮನೆ ಕುಳಿತಿದ್ದ ಕರಿಯ ಇದೀಗ ಅಮ್ಮನ ಅಂತಿಮ ದರ್ಶನ ಪಡೆದಿದೆ.

VISTARANEWS.COM


on

Actress Leelavathi kariya Dog
Koo

ಬೆಂಗಳೂರು; ಹಿರಿಯ ನಟಿ ಲೀಲಾವತಿ (Actress Leelavathi) ಅವರ ಸೋಲದೇವನಹಳ್ಳಿ ನಿವಾಸದಲ್ಲಿ ನೀರವ ಆವರಿಸಿದೆ. ಅಮ್ಮನನ್ನು ಕಳೆದುಕೊಂಡ ಅವರ ಪ್ರೀತಿಯ ಶ್ವಾನ ‘ಕರಿಯ’ ಕಣ್ಣೀರನ್ನು ಹಾಕುತ್ತಿದೆ. ಮನೆಯ ಒಳಭಾಗಲ್ಲಿ ಇಟ್ಟಿರುವ ಲೀಲಾವತಿಯವರ ಪೋಟೊ ಮುಂದೆ ಕರಿಯ ವೇದನೆ ಅನುಭವಿಸುತ್ತಿರುವ ಫೋಟೊ ಇದೀಗ ವೈರಲ್‌ ಆಗಿದೆ. ರಾತ್ರಿಯಿಂದಲೇ ಮನೆಯಲ್ಲಿ ಅಮ್ಮ ಇಲ್ಲದಿರುವುದನ್ನು ಕಂಡು ಲೀಲಾವತಿಯವರು ಫೋಟೊ ಮುಂದೆ ಸುಮ್ಮನೆ ಕುಳಿತಿದ್ದ ಕರಿಯ ಇದೀಗ ಅಮ್ಮನ ಅಂತಿಮ ದರ್ಶನ ಪಡೆದಿದೆ.

ಕರಿಯ ಅನೇಕ ವರ್ಷಗಳಿಂದ ಲೀಲಾವತಿಯವರ ಅಚ್ಚುಮೆಚ್ಚಿನ ಶ್ವಾನ. ಎರಡು ಕಾಲುಗಳಲ್ಲಿ ಬಹುತೇಕ ಸ್ವಾಧೀನ ಕಳೆದುಕೊಂಡಿದ್ದರೂ ಲೀಲಾವತಿಯವರ ಫೋಟೊ ಮುಂದೆ ಕರಿಯ ರಾತ್ರಿಯೇ ಆಹಾರ ಬಿಟ್ಟು ಕುಳಿತಿತ್ತು. ಈ ದೃಶ್ಯ ಲೀಲಾವತಿ ಅವರ ಅಭಿಮಾನಿಗಳಿಗೂ ಕಣ್ಣೀರು ತರಿಸಿತ್ತು. ಇದೀಗ ಶ್ವಾನ ಅಮ್ಮನ ಅಂತಿಮ ದರ್ಶನ ಪಡೆದಿದೆ. ಈ ವೇಳೆ ವಿನೋದ್‌ ರಾಜ್‌ ಅವರು ಕಣ್ಣೀರಿಟ್ಟರು.

ಇದನ್ನೂ ಓದಿ: Actress Leelavathi: ಲೀಲಾವತಿ ಅಂತಿಮ ದರ್ಶನ ಪಡೆದ ಸೊಸೆ, ಮೊಮ್ಮಗ

ಅಂತ್ಯಕ್ರಿಯೆ ಎಲ್ಲಿ?
ಮಧ್ಯಾಹ್ನ 2 ಗಂಟೆಯ ವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ಮುಖಂಡರು ಲೀಲಾವತಿ ಅವರ ಅಂತಿಮ ದರ್ಶನ ಪಡೆದುಕೊಳ್ಳಲಿದ್ದಾರೆ. 2 ಗಂಟೆಯ ನಂತರ ಸೋಲದೇವನಹಳ್ಳಿಯ ತೋಟದ ಮನೆಗೆ ಲೀಲಾವತಿಯವರ ಪಾರ್ಥಿವ ಶರೀರವನ್ನು ಕೊಂಡೊಯ್ದು ಅಲ್ಲಿ ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಕುಟುಂಬಸ್ಥರು ಅಂತ್ಯ ಸಂಸ್ಕಾರ ಮಾಡಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಲಿದ್ದಾರೆ. ಸೋಲದೇವನಹಳ್ಳಿಯಲ್ಲಿರುವ ಫಾರ್ಮ್​​ಹೌಸ್​ನಲ್ಲಿ ಬಂಟರ ಸಂಪ್ರದಾಯದಂತೆ ಮಧ್ಯಾಹ್ನ 3:30ಕ್ಕೆ ಅಂತಿಮ ಸಂಸ್ಕಾರ ನಡೆಯಲಿದೆ.

ನೆಲಮಂಗಲದ ಅತೀ ದೊಡ್ಡ ಕ್ರೀಡಾಂಗಣವಾದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.

Continue Reading

South Cinema

Actress Leelavathi: ಲೀಲಾವತಿ ಅಂತಿಮ ದರ್ಶನ ಪಡೆದ ಸೊಸೆ, ಮೊಮ್ಮಗ

ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಲೀಲಾವತಿ ಅವರ ಸೊಸೆ, ಅಂದರೆ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಲೀಲಾವತಿ (Actress Leelavathi) ಮೊಮ್ಮಗ ಯುವರಾಜ್ (Yuvraj) ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.

VISTARANEWS.COM


on

Grandson, daughter-in-law of Actress Leelavathi
Koo

ಬೆಂಗಳೂರು: ನಟಿ ಲೀಲಾವತಿ (Actress Leelavathi) ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಇಂದು ಮುಂಜಾನೆ 5 ಗಂಟೆಯಿಂದ ನೆಲಮಂಗಲದಲ್ಲಿ ಆರಂಭವಾಗಿದ್ದು, ಸಾವಿರಾರು ಜನ ಸೇರಿ ದರ್ಶನ ಪಡೆದರು. ಕೆಲವೇ ಕ್ಷಣಗಳಲ್ಲಿ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಲೀಲಾವತಿ ಅವರ ಸೊಸೆ, ಅಂದರೆ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಲೀಲಾವತಿ (Leelavati) ಮೊಮ್ಮಗ ಯುವರಾಜ್ (Yuvraj) ಆಗಮಿಸಿದ್ದಾರೆ.

ಈ ಮುಂಚೆ ವಿನೋದ್‌ ರಾಜ್‌ ಅವರ ಮದುವೆ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ವಿನೋದ್‌ ರಾಜ್‌ ಅವರಿಗೆ ಈಗಾಗಲೇ ಮದುವೆಯಾಗಿದೆ ಮತ್ತು ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗನೂ ಇದ್ದಾನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ಪೋಸ್ಟ್‌ ಹಂಚಿಕೊಂಡಿದ್ದರು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಇದಾದ ಬಳಿಕ ವಿನೋದ್ ರಾಜ್ ಮದುವೆ ವಿಚಾರವನ್ನು ಸ್ವತಃ ಲೀಲಾವತಿ ಮತ್ತು ವಿನೋದ್ ರಾಜ್ ಕೂಡ ಒಪ್ಪಿಕೊಂಡಿದ್ದರು.

ಇದನ್ನೂ ಓದಿ: Actress Leelavathi: 500 ರೂ. ಸಂಭಾವನೆ ಇದ್ದಾಗಲೇ 50 ಸಾವಿರ ರೂ. ಪಡೆಯುತ್ತಿದ್ದ ಲೀಲಾವತಿ!

ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ಹಳೆಯ ಪೋಸ್ಟ್‌

ಅಂತ್ಯಕ್ರಿಯೆ ಎಲ್ಲಿ?

ಮಧ್ಯಾಹ್ನ 2 ಗಂಟೆಯ ವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ಮುಖಂಡರು ಲೀಲಾವತಿ ಅವರ ಅಂತಿಮ ದರ್ಶನ ಪಡೆದುಕೊಳ್ಳಲಿದ್ದಾರೆ. 2 ಗಂಟೆಯ ನಂತರ ಸೋಲದೇವನಹಳ್ಳಿಯ ತೋಟದ ಮನೆಗೆ ಲೀಲಾವತಿಯವರ ಪಾರ್ಥಿವ ಶರೀರವನ್ನು ಕೊಂಡೊಯ್ದು, ಅಲ್ಲಿ ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಕುಟುಂಬಸ್ಥರು ಅಂತ್ಯ ಸಂಸ್ಕಾರ ಮಾಡಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಲಿದ್ದಾರೆ. ಸೋಲದೇವನಹಳ್ಳಿಯಲ್ಲಿರುವ ಫಾರ್ಮ್​​ಹೌಸ್​ನಲ್ಲಿ ಬಂಟರ ಸಂಪ್ರದಾಯದಂತೆ ಮಧ್ಯಾಹ್ನ 3:30ಕ್ಕೆ ಅಂತಿಮ ಸಂಸ್ಕಾರ ನಡೆಯಲಿದೆ.

ನೆಲಮಂಗಲದ ಅತೀ ದೊಡ್ಡ ಕ್ರೀಡಾಂಗಣವಾದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.

ಕಾರ್ಯಕ್ರಮ ಮುಂದೂಡಿಕೆ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಏರ್ಪಡಿಸಲಾಗಿದ್ದ ʼಕರ್ನಾಟಕ ಸಂಭ್ರಮ-50 ಜಾನಪದ ಜಾತ್ರೆʼಯನ್ನು ಲೀಲಾವತಿ ಅಂತಿಮ ದರ್ಶನದ ಹಿನ್ನೆಲೆಯಲ್ಲಿ ನಾಳೆಗೆ ಮುಂದೂಡಿಕೆ ಮಾಡಲಾಗಿದೆ.

Continue Reading

South Cinema

Actress Leelavathi: 500 ರೂ. ಸಂಭಾವನೆ ಇದ್ದಾಗಲೇ 50 ಸಾವಿರ ರೂ. ಪಡೆಯುತ್ತಿದ್ದ ಲೀಲಾವತಿ!

Actress Leelavathi: ಮುಂಜಾನೆ 6ರಿಂದ 10 ಗಂಟೆಯವರೆಗೆ ನೆಲಮಂಗಲದ ಅಂಬೇಡ್ಕರ್ ಗ್ರೌಂಡ್‌ನಲ್ಲಿ ಅಂತಿಮ ದರ್ಶನ ನಡೆಯುತ್ತಿದೆ. 10 ಗಂಟೆಗೆ ಅಲ್ಲಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ. ಮಧ್ಯಾಹ್ನ 2 ಗಂಟೆಯ ವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ಮುಖಂಡರು ಲೀಲಾವತಿ ಅವರ ಅಂತಿಮ ದರ್ಶನ ಪಡೆದುಕೊಳ್ಳಲಿದ್ದಾರೆ.

VISTARANEWS.COM


on

Actress Leelavathi
Koo
Actress Leelavathi

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Actress Leelavathi) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಪ್ರಮುಖ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರರನ್ನು ರಂಜಿಸಿದ್ದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಪ್ರಮುಖರು ಕಂಬನಿ ಮಿಡಿದಿದ್ದಾರೆ.

Actress Leelavathi

ಮುಂಜಾನೆ 6ರಿಂದ 10 ಗಂಟೆಯವರೆಗೆ ನೆಲಮಂಗಲದ ಅಂಬೇಡ್ಕರ್ ಗ್ರೌಂಡ್‌ನಲ್ಲಿ ಅಂತಿಮ ದರ್ಶನ ನಡೆಯುತ್ತಿದೆ. 10 ಗಂಟೆಗೆ ಅಲ್ಲಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ. ಮಧ್ಯಾಹ್ನ 2 ಗಂಟೆಯ ವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ಮುಖಂಡರು ಲೀಲಾವತಿ ಅವರ ಅಂತಿಮ ದರ್ಶನ ಪಡೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: Actress Leelavathi: ನೆಲಮಂಗಲದಲ್ಲಿ ನಟಿ ಲೀಲಾವತಿ ಅಂತಿಮ ದರ್ಶನ, ರವೀಂದ್ರ ಕಲಾಕ್ಷೇತ್ರದಲ್ಲಿ 11 ಗಂಟೆಯಿಂದ ಅವಕಾಶ

Actress Leelavathi

ಸಿನಿಮಾಗಳಲ್ಲಿ ‌ಪ್ರಮುಖ ಕಲಾವಿದರಿಗೆ ತಿಂಗಳ ಸಂಬಳ 500 ರೂಪಾಯಿಗಳಷ್ಟೆ ಇದ್ದ ಸಮಯದಲ್ಲಿಯೇ ಅವರು ನಾಟಕದಲ್ಲಿ ಅಭಿನಯಿಸಲು 50 ಸಾವಿರ ರೂಪಾಯಿ ಸಂಭಾವನೆ ಒಟ್ಟಿಗೆ ಪಡೆದಿದ್ದರಂತೆ. ಈ ಬಗ್ಗೆ ಸ್ವತಃ ಲೀಲಾವತಿಯವರೇ ಈ ಮುಂಚೆ ಹೇಳಿಕೊಂಡಿದ್ದರು.

Actress Leelavathi

500ಕ್ಕೂ ಅಧಿಕ ಸಿನಿಮಾಗಳಲ್ಲಿ ಲೀಲಾವತಿ ಬಣ್ಣ ಹಚ್ಚಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತೆಲುಗು, ಮಲಯಾಳಂ, ತುಳು ಸಿನಿಮಾಗಳಲ್ಲೂ ಮಿಂಚಿ ಮೋಡಿ ಮಾಡಿದ್ದರು.

ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಜೋಡಿ ಸೂಪರ್ ಹಿಟ್ ಆಗಿತ್ತು. ‘ವೀರ ಕೇಸರಿ’, ‘ಭಕ್ತ ಕುಂಬಾರ’, ‘ಸಿಪಾಯಿ ರಾಮು’, ‘ರಣಧೀರ ಕಂಠೀರವ’ ಸೇರಿದಂತೆ ಏಳೆಂಟು ಸಿನಿಮಾಗಳಲ್ಲಿ ಇಬ್ಬರು ಒಟ್ಟಾಗಿ ನಟಿಸಿದ್ದರು.

Continue Reading
Advertisement
kaivara tatayya
ಅಂಕಣ8 mins ago

ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

Madhu Bangarappa Beluru Gopalakrishna
ಅಂಕಣ23 mins ago

ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ

Rain News
ಉಡುಪಿ23 mins ago

Karnataka Weather : ಮೈಸೂರು ಸೇರಿ 11 ಜಿಲ್ಲೆಗಳಿಗೆ ಮಳೆ ಅಲರ್ಟ್‌!

Vistara Editorial, Let the strengthening government schools
ಕರ್ನಾಟಕ38 mins ago

ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

HD Kumaraswamy
ಕರ್ನಾಟಕ7 hours ago

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

Car accident
ಕರ್ನಾಟಕ7 hours ago

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Houses without infrastructure are not completed PMAY houses
ದೇಶ8 hours ago

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

UP Yoddhas vs Telugu Titans
ಕ್ರೀಡೆ8 hours ago

Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ3 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ಟ್ರೆಂಡಿಂಗ್‌