ಬೆಂಗಳೂರು: ತೆಲುಗು ಮತ್ತು ತಮಿಳು ನಟಿ ರೆಜಿನಾ ಕಸ್ಸಂದ್ರ (Regina Cassandra) ಸಂದರ್ಶನವೊಂದರಲ್ಲಿ ಡಬಲ್ ಮೀನಿಂಗ್ ಜೋಕ್ ಮಾಡಿ ಸಖತ್ ಸುದ್ದಿಯಲ್ಲಿದ್ದರು. ʻʻಹುಡುಗರ ಲೈಂಗಿಕ ಸಾಮರ್ಥ್ಯ ಮತ್ತು ಮ್ಯಾಗಿ ಎರಡೂ ಒಂದೇ. ಎರಡೇ ನಿಮಿಷದಲ್ಲಿ ಮುಗಿದು ಹೋಗುತ್ತದೆʼ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಗುಟ್ಟಾಗಿ ನಟ ಸಂದೀಪ್ ಕಿಶನ್ ಮತ್ತು ರೆಜಿನಾ ಕಸ್ಸಂದ್ರ ಡೇಟಿಂಗ್ ಮಾಡ್ತಿದ್ದಾರಾ ಎಂಬ ವದಂತಿ ಸದ್ದು ಮಾಡುತ್ತಿದೆ.
ಕನ್ನಡದ ʻಸೂರ್ಯಕಾಂತಿ’ ಸಿನಿಮಾ ಮೂಲಕ ಗಮನ ಸೆಳೆದ ನಟಿ ರೆಜಿನಾ ಈಗ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸಂದೀಪ್ ಕಿಶನ್ ಡಿ.13ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ರೆಜಿನಾ ಕಸ್ಸಂದ್ರ ಜತೆಗಿನ ವಿಶೇಷ ಫೋಟೊ ಹಂಚಿಕೊಂಡಿದ್ದರು. ಇದೀಗ ಈ ಜೋಡಿ ಡೇಟಿಂಗ್ ಮಾಡುತ್ತಿದೆ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ.
ಇದನ್ನೂ ಓದಿ | Manushi Chhillar | ಬೆಂಗಳೂರು ಮೂಲದ ಉದ್ಯಮಿ ಜತೆ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಡೇಟಿಂಗ್?
ʻʻಹ್ಯಾಪಿ ಬರ್ತ್‌ಡೇ ಪಾಪಾ, ನಿನ್ನನ್ನು ಪ್ರೀತಿಸುತ್ತೇನೆ, ನಿಮಗೆ ಸದಾ ಒಳ್ಳೆದಾಗಲಿ. ಯಾವಾಗಲೂ ಖುಷಿಯಾಗಿರುʼʼ ಎಂದು ನಟಿ ರೆಜಿನಾ ಕಸ್ಸಂದ್ರ ಜತೆಗಿನ ಸೆಲ್ಫಿಯನ್ನು ಸಂದೀಪ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ | Kriti Sanon | ನಟ ಫ್ರಭಾಸ್-ಕೃತಿ ಸೇನನ್ ಡೇಟಿಂಗ್: ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟ ನಟಿ, ಪೋಸ್ಟ್ ವೈರಲ್!