ಬೆಂಗಳೂರು: ಶಿವರಾಜ್‌ಕುಮಾರ್- ಧನುಷ್ ಕಾಂಬಿನೇಶನ್‌ನ ಸಿನಿಮಾದ ಕ್ಯಾಪ್ಟನ್ ಮಿಲ್ಲರ್ (Captain Miller)ಸಿನಿಮಾ ಅಂತೂ ಸಿಹಿ ಸುದ್ದಿ ಕೊಟ್ಟಿದೆ. 2024ರ ಜನವರಿ 12ರಂದು ‘ಕ್ಯಾಪ್ಟನ್ ಮಿಲ್ಲರ್’ ವಿಶ್ವಾದ್ಯಂತ ತೆರೆ ಕಾಣಲಿದೆ. ಧನುಷ್ ಹಾಗೂ ಶಿವಣ್ಣ ಅವರ ಈ ಕಾಂಬಿನೇಶನ್ ನೋಡುವುದಕ್ಕೆ ಸಿನಿಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅರುಣ್ ಮಾಥೇಶ್ವರನ್ ನಿರ್ದೇಶನ ಈ ಸಿನಿಮಾಕ್ಕಿದೆ.
ಈ ಸಿನಿಮಾ ಬಿಡುಗಡೆ ದಿನದಂದೇ ಮಹೇಶ್ ಬಾಬು ಅವರ ʻಗುಂಟೂರು ಖಾರಂʼ ಹಾಗೂ ಪ್ರಶಾಂತ್ ವರ್ಮಾ ಅವರ ʻಹನುಮಾನ್ʼ ಸಿನಿಮಾ ಬಿಡುಗಡೆಯಾಗಲಿದೆ.
ಈ ಮುಂಚೆ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಬ್ರಿಟಿಷರ ವಿರುದ್ಧ ಹೋರಾಡುವ ಕ್ಯಾಪ್ಟನ್ ಆಗಿ ಧನುಷ್ ಮಿಂಚಿದ್ದರು. ಎಂದೂ ನಟಿಸಿರದ ಪಾತ್ರದಲ್ಲಿ ನಟ ಕಾಣಿಸಿಕೊಂಡಿದ್ದರು. ಕ್ಯಾಪ್ಟನ್ ಮಿಲ್ಲರ್ ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದು, ಜಿವಿ ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಧನುಷ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅವರು ತಂದೆ ಮತ್ತು ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ ಶಿವರಾಜ್ ಕುಮಾರ್, ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಮತ್ತು ಮೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ʻಕ್ಯಾಪ್ಟನ್ ಮಿಲ್ಲರ್ʼ ಚಿತ್ರದಲ್ಲಿ ಧನುಷ್ ಒಟ್ಟು ಮೂರು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಅರುಣ್ ಬಹಿರಂಗಪಡಿಸಿದ್ದರು. “ಚಿತ್ರದಲ್ಲಿ ಧನುಷ್ ಮೂರು ಗೆಟಪ್‌ಗಳನ್ನು ಹೊಂದಿರುತ್ತಾರೆ. ಉಳಿದವುಗಳನ್ನು ಮುಂದಿನ ಪ್ರಚಾರದ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಶಿವ ರಾಜ್‌ಕುಮಾರ್ ಅವರ ಭಾಗಗಳನ್ನು ಸಹ ಶೂಟಿಂಗ್ ಮುಗಿಸಿದ್ದೇವೆʼʼ ಎಂದಿದ್ದರು. ಚಿತ್ರದಲ್ಲಿ ನಟ ಧನುಷ್ (Actor Dhanush ) ಜತೆ ಶಿವಣ್ಣ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಧನುಷ್ ಅಣ್ಣನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Captain Miller: ಧನುಷ್- ಶಿವರಾಜ್‌ಕುಮಾರ್ ನಟನೆಯ ತಮಿಳು ಸಿನಿಮಾ ರಿಲೀಸ್ ಡೇಟ್ ಅನೌನ್ಸ್!
13 more days to go 💥😈💯 #CaptainMillerFromPongal 😎#CaptainMiller #Dhanush pic.twitter.com/68ak2Ee4VL
— 𝘼𝙉𝙏𝙊 ★ D•Stan (@VPradeep0210) December 30, 2023
#CaptainMiller – 12th January 2024
— Mr. D (@VimalM120296) December 30, 2023
USA 🇺🇸 Premieres on Jan11th
#Dhanush #CaptainMillerFromPongal pic.twitter.com/ycGJa1sZlO
ಈ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಈ ಸಿನಿಮಾವನ್ನು ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕನ್ನಡದಲ್ಲಿ ಬಿಡುಗಡೆ ಮಾಡಲಿದೆಯಾ? ಎನ್ನುವ ಮಾಹಿತಿ ತಿಳಿದು ಬಂದಿಲ್ಲ. ಈ ಸಿನಿಮಾ ಬಿಡುಗಡೆಗೂ ಮುನ್ನ 100 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದೆ ಎನ್ನಲಾಗಿದೆ. ಇನ್ನೊಂದು ಕಡೆ ಜನವರಿ ಮೊದಲ ವಾರ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಳ್ಳುವ ಸಾಧ್ಯತೆಯಿದೆ. ಸತ್ಯಜ್ಯೋತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸೆಂಧಿಲ್ ತ್ಯಾಗರಾಜ್ ಮತ್ತು ಅರ್ಜುನ್ ತ್ಯಾಗರಾಜನ್ ಸಿನಿಮಾವನ್ನು ನಿರ್ಮಿಸಿದ್ದಾರೆ.