ಕಾಮಿಡಿಗೆ ಅತ್ಯುತ್ತಮ ಟೈಮಿಂಗ್ ಬೇಕು; ಕಾಮಿಡಿಯನ್‌ಗಳಾಗಿ (comedian) ಸದಾಕಾಲ ಬೇಡಿಕೆಯಲ್ಲಿ ಇರುವವರು, ಗೆಲ್ಲುವವರು ವಿರಳ. ಹೀಗೆ ಇದ್ದುಕೊಂಡು ಕಾಸು ಮಾಡುವುದೂ ಕಷ್ಟ. ಒಂದು ಕಾಲದಲ್ಲಿ ಬೆಳ್ಳಿತೆರೆಯ ಹೀರೋ ಮಾತ್ರ ಹಣ ಮಾಡುತ್ತಿದ್ದ. ಇಂದು ಕಾಮಿಡಿಯನ್‌ಗಳು ಸಹ ಉತ್ತಮ ಗಳಿಕೆ ಮಾಡುತ್ತಿದ್ದಾರೆ. ಈ ಹಾಸ್ಯನಟರು ಸಿನಿಮಾಗಳಲ್ಲಿ ಸಣ್ಣದಾದರೂ ಮಹತ್ವದ ಪಾತ್ರ ಪಡೆಯುವುದರಲ್ಲಿ ಅನುಮಾನವಿಲ್ಲ. ಇವರಲ್ಲಿ ಕೆಲವರು ನಾಯಕ ಮತ್ತು ನಾಯಕಿಯರಿಗಿಂತ ಹೆಚ್ಚು ಹಣವನ್ನು ಗಳಿಸುತ್ತಾರೆ ಅಂದರೆ ಆಶ್ಚರ್ಯ ಪಡಬೇಡಿ.
ಹಾಗಾದರೆ ಯಾರು ಭಾರತದ ಅತ್ಯಂತ ಶ್ರೀಮಂತ ಕಾಮಿಡಿ ನಟ? ಚಾಲ್ತಿಯಲ್ಲಿರುವ ಯುವ ಕಾಮಿಡಿಯನ್‌ಗಳನ್ನೂ ಮೀರಿಸಿ ತಮ್ಮ ಹೆಸರಿನಲ್ಲಿ ದಾಖಲೆ ಬರೆದುಕೊಂಡಿರುವ ಅವರೇ ತೆಲುಗಿನ ಹಾಸ್ಯಬ್ರಹ್ಮ ಬ್ರಹ್ಮಾನಂದಂ.
ಬ್ರಹ್ಮಾನಂದಂ (Brahmanandam)
ತೆಲುಗು ದಿಗ್ಗಜ ನಟ ಬ್ರಹ್ಮಾನಂದಂ ದಕ್ಷಿಣ ಚಿತ್ರರಂಗದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಚಿರಪರಿಚಿತ. ಕೆನ್ನಿಗಂಟಿ ಬ್ರಹ್ಮಾನಂದಂ ಅವರು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ಚಿಂತನಶೀಲ ಹಾಸ್ಯದಿಂದ ಅವರನ್ನು ರಂಜಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಮೂಲಗಳ ಪ್ರಕಾರ ಬ್ರಹ್ಮಾನಂದಂ ಪ್ರತಿ ಚಿತ್ರಕ್ಕೆ 1-2 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ಅವರ ಸ್ವಂತ ಆಸ್ತಿ ಮೌಲ್ಯ ಸುಮಾರು 350 ಕೋಟಿ ರೂ.
ಕಪಿಲ್ ಶರ್ಮಾ (Kapil sharma)
ಸ್ಟ್ಯಾಂಡ್-ಅಪ್ ಕಾಮಿಡಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟ ಕಪಿಲ್ ಶರ್ಮಾ ಇಂದು ಭಾರತದ ಅತ್ಯಂತ ಜನಪ್ರಿಯ ಕಲಾವಿದರಲ್ಲಿ ಒಬ್ಬರು. ತಮ್ಮ ಶಾಣ್ಯಾತನದಿಂದ ಪ್ರೇಕ್ಷಕರನ್ನು ಖುಷಿಪಡಿಸುವ ಕಪಿಲ್ ಶರ್ಮಾ ಕೆಲವು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಕಪಿಲ್ ಶರ್ಮಾ ಅವರು ಸುಮಾರು 300 ಕೋಟಿ ಆಸ್ತಿ ಹೊಂದಿದ್ದಾರೆ.
ಜಾನಿ ಲಿವರ್ (Johnny lever)
1990ರ ದಶಕದ ಅನೇಕ ಚಲನಚಿತ್ರಗಳಲ್ಲಿ ಪ್ರೇಕ್ಷಕರನ್ನು ನಗಿಸಿದ ಪ್ರಸಿದ್ಧ ಹಿಂದಿ ಚಲನಚಿತ್ರ ಹಾಸ್ಯನಟ ಜಾನಿ ಲಿವರ್ ಇನ್ನೂ ಬಹಳಷ್ಟು ಜನಪ್ರಿಯ. ವರದಿಗಳ ಪ್ರಕಾರ, ಜಾನಿ ಲಿವರ್ ಪ್ರಸ್ತುತ 225 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಪರೇಶ್ ರಾವಲ್ (Paresh Rawal)
ಇವರು ಭಾರತದ ಶ್ರೀಮಂತ ಹಾಸ್ಯನಟರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ತಮ್ಮ ಅದ್ಭುತ ಅಭಿನಯ ಮತ್ತು ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಪರೇಶ್ ರಾವಲ್ ಹಿಂದಿ ಮತ್ತು ಗುಜರಾತಿ ಚಿತ್ರಗಳಲ್ಲಿ ಬಹುಬೇಡಿಕೆಯವರು. ಹೇರಾ ಫೇರಿ ಮತ್ತು ಫಿರ್ ಹೇರಾ ಫೇರಿ ಚಿತ್ರಗಳಿಂದ ಹಾಸ್ಯ ಪಾತ್ರಗಳಿಗಾಗಿ ಪ್ರಾಮುಖ್ಯ ಪಡೆದ ಪರೇಶ್ ರಾವಲ್ ಅವರ ಆಸ್ತಿಯ ನಿವ್ವಳ ಮೌಲ್ಯ ಸುಮಾರು 93 ಕೋಟಿ.
ರಾಜಪಾಲ್ ಯಾದವ್ (Rajpal Yadav)
ರಾಜ್‌ಪಾಲ್ ಯಾದವ್ ಅವರು ಚುಪ್ ಚುಪ್ ಕೆ, ಭೂಲ್ ಭುಲೈಯಾ, ಮತ್ತು ಭೂಲ್ ಭುಲೈಯಾ 2 ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರಾಜ್‌ಪಾಲ್ ಯಾದವ್ ಪ್ರಸ್ತುತ 50 ಕೋಟಿ ಮೌಲ್ಯದ ಆಸ್ತಿಯ ಒಡೆಯ.