ಬೆಂಗಳೂರು: ನಟ-ನಿರ್ದೇಶಕ, ʻಕಾಂತಾರʼ ಖ್ಯಾತಿಯ ರಿಷಬ್ ಶೆಟ್ಟಿ (Rishab Shetty) ಮಗಳು ರಾಧ್ಯಾ ಅವರ ಕಿವಿ ಚುಚ್ಚುವ ಶಾಸ್ತ್ರವನ್ನು ತಮ್ಮ ಹುಟ್ಟೂರಿನಲ್ಲೇ ಮಾಡಿದ್ದಾರೆ. ಕೆರಾಡಿಯ ರಿಷಬ್ ಅವರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ನಟ ಮತ್ತು ಪತ್ನಿ ಪ್ರಗತಿ ಶೆಟ್ಟಿ ಮತ್ತು ಅವರ ಕುಟುಂಬವು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ʻʻನಾ ಹುಟ್ಟಿ ಬೆಳೆದ ಮನೆಯಲ್ಲಿ ರಾಧ್ಯಾಳ ಕಿವಿ ಚುಚ್ಚಿಸಿದ ಸಂಭ್ರಮದ ನೆನಪೊಂದು ಹೊಸದಾಗಿ ಸೇರಿದೆʼʼಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಅದರ ಜತೆ ಕ್ಯೂಟ್ ವಿಡಿಯೊ ಹಂಚಿಕೊಂಡಿದ್ದಾರೆ.
ಸಮಾರಂಭಕ್ಕೆ ರಿಷಬ್ ಹಸಿರು ಶರ್ಟ್ ಜತೆ ಬಿಳಿ ಪಂಚೆ ಧರಿಸಿದ್ದರು. ಸಾಂಪ್ರದಾಯಿಕ ಹಸಿರು ಸೀರೆ ಪತ್ನಿ ಪ್ರಗತಿ ಮಿಂಚಿದ್ದರು. ವಿಡಿಯೊ ಹಂಚಿಕೊಂಡ ರಿಷಬ್ ʻʻನಾ ಹುಟ್ಟಿ ಬೆಳೆದ ಮನೆ ನನ್ನ ಬಾಲ್ಯದ ನೆನಪುಗಳ ಖಜಾನೆ.
ಅದಕ್ಕೀಗ ರಾಧ್ಯಾಳ ಕಿವಿ ಚುಚ್ಚಿಸಿದ ಸಂಭ್ರಮದ ನೆನಪೊಂದು ಹೊಸದಾಗಿ ಜತೆ ಸೇರಿದೆʼʼಎಂದು ಬರೆದುಕೊಂಡಿದ್ದಾರೆ.
ವಿಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ‘ನಿಮ್ಮ ಇಬ್ಬರು ಮಕ್ಕಳು ತುಂಬಾ ಮುದ್ದಾಗಿದ್ದಾರೆʼʼಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʻʻಕಾಂತಾರ-2 ಸಿನಿಮಾಗಾಗಿ ಕಾಯುತ್ತಿದ್ದೇವೆʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Rishab Shetty : ಕುದುರೆ ಸವಾರಿಯಲ್ಲಿ ಶೆಟ್ರು ಬ್ಯುಸಿ; ಹೇಗಿದೆ ಕಾಂತಾರ-2 ತಯಾರಿ?
ರಿಷಬ್ ಟ್ವೀಟ್
ಕಾಂತಾರ-2
ಆಗಸ್ಟ್ ತಿಂಗಳಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಾಂತಾರ-1 ಸಿಕ್ವೆಲ್ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್ (Prequel film) ಆಗಿ ಮೂಡಿಬರಲಿದೆ.
ಈ ಪ್ರೀಕ್ವೆಲ್‌ನಲ್ಲಿ ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಮತ್ತು ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಸಾಥ್ ನೀಡುತ್ತಿದ್ದಾರೆ. ‘ಕಾಂತಾರ’ ಹಿನ್ನಲೆ ಹೇಗಿರಲಿದೆ ಈಗಾಗಲೇ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಆಗಸ್ಟ್ 27ರಂದು ಸಿನಿಮಾಗೆ ಮುಹೂರ್ತ ನೆರವೇರುವ ಸಾಧ್ಯತೆ ಇದೆ. ಆ ಬಳಿಕ ಚಿತ್ರತಂಡ ನೇರವಾಗಿ ಶೂಟಿಂಗ್ಗೆ ಇಳಿಯಲಿದೆ.
ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಕಾಂತಾರ ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡ ಬಳಿಕ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಇದು ತೆರೆ ಕಂಡಿತ್ತು.