Site icon Vistara News

Rocking Star Yash | ರಾಕಿ ಬಾಯ್‌ ಯಶ್‌ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಇಂದಿಗೆ 14 ವರ್ಷ!

Rocking Star Yash

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್‌ (Rocking Star Yash) ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಇಂದಿಗೆ (ಜು.18) 14 ವರ್ಷಗಳಾಗಿವೆ. ʻಮೊಗ್ಗಿನ ಮನಸುʼ ಚಿತ್ರದಿಂದ ಆರಂಭವಾದ ಅವರ ಸಿನಿ ಪಯಣ, ೨೦ಕ್ಕೂ ಹೆಚ್ಚು ಚಿತ್ರಗಳನ್ನು ದಾಟಿ ಮುಂದುವರಿದಿದೆ. ಕೆಜಿಎಫ್‌ ಸಿನಿಮಾದಿಂದಾಗಿ ಇಂದು ಅವರ ಖ್ಯಾತಿ ಜಗತ್ತಿನಾದ್ಯಂತ ಹರಡಿದೆ.

ಅವರ ಮೊದಲ ಚಿತ್ರ ʻಮೊಗ್ಗಿನ ಮನಸುʼ 2008 ಜುಲೈ 18ರಂದು ತೆರೆ ಕಂಡಿತ್ತು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಮೈಲುಗಳ್ಳನೇ ಸೃಷ್ಟಿ ಮಾಡಿತ್ತು. ಯಶ್, ರಾಧಿಕಾ ಪಂಡಿತ್, ಶುಭ ಪೂಂಜಾ, ರಾಜೇಶ್ ಮುಂತಾದ ಕಲಾವಿದರು ನಟಿಸಿದ್ದ ಈ ಸಿನಿಮಾವನ್ನು ಶಶಾಂಕ್ ನಿರ್ದೇಶಿಸಿದ್ದರು.

2004ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʻಉತ್ತರಾಯಣʼ ಧಾರಾವಾಹಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದರು. ಒಟ್ಟು ಐದು ಧಾರಾವಾಹಿಗಳಲ್ಲಿ ನಟಿಸಿದ್ದರು. ʻನಂದ ಗೋಕುಲʼ ಧಾರಾವಾಹಿಯಲ್ಲಿ ನಟಿ ರಾಧಿಕಾ ಪಂಡಿತ್‌ ಜತೆ ನಟಿಸಿದ್ದ ಅವರು ಮುಂದೆ ಅವರೊಂದುಗೆ ಹಲವು ಸಿನಿಮಾ ಮಾಡಿ ಅವರನ್ನೇ ಮದುವೆ ಕೂಡ ಆಗಿದ್ದಾರೆ. ʻಮೊಗ್ಗಿನ ಮನಸುʼ ಇಬ್ಬರಿಗೂ ಮೊದಲ ಚಿತ್ರವಾಗಿತ್ತು.

2004ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʻಉತ್ತರಾಯಣʼ ಧಾರಾವಾಹಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು. ಒಟ್ಟು ಐದು ಧಾರಾವಾಹಿಯಲ್ಲೂ ನಟಿಸಿ ʻನಂದ ಗೋಕುಲʼ ಧಾರಾವಾಹಿ ಮೂಲಕವೇ ನಟಿ ರಾಧಿಕಾ ಪಂಡಿತ್‌ ಬೆಳ್ಳಿತೆರೆಗೆ ಬಂದಿದ್ದರು. ನಂತರ ಯಶ್‌ ಮತ್ತು ರಾಧಿಕಾ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.

ಇದನ್ನೂ ಓದಿ | ಕೆಜಿಎಫ್‌ ಸ್ಟಾರ್‌ ಯಶ್‌ ಲಕ್ಷುರಿ ಲೈಫ್‌ಸ್ಟೈಲ್‌ ಹೇಗಿದೆ ನಿಮಗೆ ಗೊತ್ತೆ?

ʻಜಂಬದ ಹುಡುಗಿʼ ಚಿತ್ರದಲ್ಲಿ ಸಹ ಕಲಾವಿದನಾಗಿ ನಟಿಸಿದ ಯಶ್‌ ಬಳಿಕ 2007 ರಲ್ಲಿ ಮೊಗ್ಗಿನ ಮನಸ್ಸಿಗೆ ನಾಯಕರಾದರು. ನಂತರ ʻಕಿರಾತಕʼ, ʻಲಕ್ಕಿʼ, ʻಮಾಸ್ಟರ್‌ ಪೀಸ್‌ʼ, ʻಡ್ರಾಮಾʼ, ʻಮಿ.ಆಂಡ್‌ ಮಿಸಸ್‌ ರಾಮಾಚಾರಿʼ, ʻಗಜಕೇಸರಿʼ, ʻಗೂಗ್ಲಿʼ, ʻಕೆಜಿಎಫ್‌ʼ ಅಂತಹ ಅನೇಕ ಬ್ಲಾಕ್‌ ಬಸ್ಟರ್‌ ಸಿನಿಮಾ ನೀಡಿದರು.

ಮೊಗ್ಗಿನ ಮನಸ್ಸು ಸಿನಿಮಾಗೆ ಯಶ್‌ ಫಿಲ್ಮಫೇರ್‌ ಅವಾರ್ಡ್‌ ಪಡೆದಿದ್ದರು. ಆದರೆ ಎರಡನೇ ಚಿತ್ರ ರಾಕಿ ಹೆಚ್ಚಿನ ಯಶಸ್ಸು ಪಡೆದಿರಲಿಲ್ಲ. 2009ರಲ್ಲಿ ಕಳ್ಳರ ಸಂತೆ, ಗೋಕುಲ ಚಿತ್ರದಲ್ಲಿ ನಟಿಸಿದ್ದರು. 2010ರಲ್ಲಿ ʻಮೊದಲ ಸಲʼ ಚಿತ್ರ ಮತ್ತೆ ಅವರಿಗೆ ಮತ್ತೆ ಬ್ರೇಕ್‌ ನೀಡಿತ್ತು.

ʻಲಕ್ಕಿʼ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿದ್ದು, ರಾಧಿಕಾ ಅವರು ನಿರ್ಮಿಸಿದ್ದರು. ಈ ಸಿನಿಮಾ ಕೂಡ ಹೆಸರು ಮಾಡಿತ್ತು. ಬಳಿಕ ʻಡ್ರಾಮಾʼ ಚಿತ್ರದಲ್ಲಿ ಹಳ್ಳಿ ಹುಡುಗನ ಪಾತ್ರದಲ್ಲಿ ಮಿಂಚಿದರು ಯಶ್‌. ʻರಾಜಾ ಹುಲಿʼ ಚಿತ್ರದಲ್ಲಿ ಮೇಘನಾ ರಾಜ್‌ ಅವರೊಂದಿಗೆ ನಟಿಸಿದ್ದು, ಈ ಸಿನಿಮಾಗೆ ಸೈಮಾ ಪ್ರಶಸ್ತಿ ಲಭಿಸಿತ್ತು.

ʻಗಜಕೇಸರಿʼ ಹಾಗೂ ʻಮಿ.ಆಂಡ್‌ ಮಿಸಸ್‌ ರಾಮಾಚಾರಿʼ ಚಿತ್ರಗಳು ಸೂಪರ್‌ ಹಿಟ್‌ ಆದವು. ಗಜಕೇಸರಿಯಲ್ಲಿ ಅಮೂಲ್ಯ ನಾಯಕಿಯಾಗಿ ನಟಿಸಿದರೆ, ಮಿ.ಆಂಡ್‌ ಮಿಸಸ್‌ ರಾಮಾಚಾರಿ ಚಿತ್ರದಲ್ಲಿ ರಾಧಿಕಾ ಪಂಡಿತ್‌ ಯಶ್‌ ಅವರಿಗೆ ನಾಯಕಿಯಾಗಿ ನಟಿಸಿದ್ದರು. 2015-2016ರಲ್ಲಿ ʻಮಾಸ್ಟರ್‌ ಪೀಸ್‌ʼ ಹಾಗೂ ʻಸಂತು ಸ್ಟ್ರೈಟ್‌ ಫಾವರ್ಡ್‌ʼ ಹೀಗೆ ಒಂದರ ಹಿಂದೆ ಒಂದು ಚಿತ್ರಗಳಲ್ಲಿ ನಟಿಸಿದರು.

ಇದನ್ನೂ ಓದಿ | Radhika Pandit | ಮಗ ಯಥರ್ವ್‌ ಫೋಟೊ ಹಾಕಿ ಎಲ್ಲೋ ನೋಡಿದ ಹಾಗಿದೆ ಅಲ್ವಾ ಅಂದಿದ್ಯಾಕೆ?

2018ರಲ್ಲಿ ಅವರ ಜೀವನಕ್ಕೆ ಹೊಸ ತಿರುವು ನೀಡಿದ ಸಿನಿಮಾ ಎಂದರೆ ʻಕೆಜಿಎಫ್‌ʼ. ಇದು ಪ್ಯಾನ್‌ ಇಂಡಿಯಾ ಸಿನಿಮಾ ಆಗಿ, ಪಂಚ ಭಾಷೆಗಳಲ್ಲಿ ತೆರೆ ಕಂಡಿತು. ಈ ಸಿನಿಮಾ ದೇಶದಲ್ಲದೇ ವಿದೇಶದಲ್ಲಿಯೂ ಹೆಸರು ಪಡೆಯಿತು. ಇನ್ನೂ ಕೆಜಿಎಫ್‌-2 ಸಿನಿಮಾ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ದಾಖಲೆ ಬರೆದಿದೆ. ಕೇವಲ 14 ವರ್ಷ ಸಿನಿ ಯಾನದಲ್ಲಿ ಯಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಷ್ಟು ಬೆಳೆದಿದ್ದಾರೆ.

ಇದನ್ನೂ ಓದಿ | ಧೂಮಪಾನ ವೈಭವೀಕರಣ: ಕೆಜಿಎಫ್‌-2 ಬಿಡುಗಡೆಗೆ ತಡೆ ಕೋರಿದ್ದ ಅರ್ಜಿ ವಜಾ

Exit mobile version