Site icon Vistara News

Rocking Star Yash: ಮಲೇಷ್ಯಾಗೆ ಹಾರಿದ ಯಶ್‌; ನಟನಿಗೆ ಅದ್ಧೂರಿ ಸ್ವಾಗತ? ಹೋಗಿದ್ದೇಕೆ?

Yash Visits Malaysia

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ (Rocking Star Yash: ) ಸದ್ಯ ಮಲೇಷ್ಯಾಗೆ ಹಾರಿದ್ದಾರೆ. ಮಲೇಷ್ಯಾದ ವಿಡಿಯೊಗಳು ವೈರಲ್‌ ಆಗುತ್ತಿದ್ದಂತೆ ಸಿನಿಮಾ ಶೂಟಿಂಗ್‌ ತೆರೆಳಿದ್ರಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಹುಟ್ಟಿತ್ತು. ಆದರೆ ಯಶ್‌ ಹೋಗಿದ್ದು ಸಿನಿಮಾ, ಜಾಹೀರಾತು ಇದೆಲ್ಲ ಕಾರಣಕ್ಕೆ ಅಲ್ಲ. ಬದಲಾಗಿ, ಚಿನ್ನದ ಶೋರೂಂ ಒಂದರ ಉದ್ಘಾಟನೆಗೆ. ಎಂ ಜಿ ಗೋಲ್ಡ್ ಶೋ ಶೋರೂಂ ಉದ್ಘಾಟನೆಗೆ ಆಗಮಿಸಿದ ಯಶ್​ರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ ಅಲ್ಲಿನ ಯುವ ಉದ್ಯಮಿಯೊಬ್ಬರು.

ಯಶ್​ಗಾಗಿ ಹಲವು ಬಾಡಿಗಾರ್ಡ್​ಗಳನ್ನು ನೇಮಿಸಿ, ಕಪ್ಪು ಬಣ್ಣದ ಐಷಾರಾಮಿ ರಾಲ್ಸ್ ರಾಯ್ಸ್ ಲಿಮೋನಲ್ಲಿ ಹೋಟೆಲ್​ಗೆ ಕರೆತರಲಾಗಿದೆ. ಮಲೇಷ್ಯಾದಲ್ಲಿ ಯಶ್‌ಗೆ ಸಿಕ್ಕಿರುವ ಸ್ವಾಗತದ ವಿಡಿಯೊ ಇದೀಗ ಸಖತ್ ವೈರಲ್ ಆಗಿದೆ. ಮಲೇಷಿಯಾದಲ್ಲಿ ಎಂಜಿ ಗೋಲ್ಡ್ ಹೆಸರಿನ ಚಿನ್ನದ ಶೋರೂಂ ಅನ್ನು ಯಶ್ ಉದ್ಘಾಟನೆ ಮಾಡಿದ್ದಾರೆ. ಭಾರತದ ಹಲವು ಸಿನಿಮಾಗಳು ಮಲೇಷ್ಯಾದಲ್ಲಿ ಸೂಪರ್ ಹಿಟ್ ಆಗಿವೆ. ಅಂತೆಯೇ ಯಶ್​ ಅವರ ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾಗಳು ಮಲೇಷ್ಯಾದಲ್ಲಿ ಸೂಪರ್ ಹಿಟ್ ಆಗಿತ್ತು. ಅಲ್ಲಿಯೂ ಯಶ್​ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಇದನ್ನೂ ಓದಿ: Actor Yash: ರಾಮಾಯಣ ಆಧರಿಸಿದ ಸಿನಿಮಾದಲ್ಲಿ ರಣಬೀರ್‌, ಆಲಿಯಾ; ರಾಕಿಂಗ್‌ ಸ್ಟಾರ್‌ ಯಶ್‌ ಪಾತ್ರವೇನು?

ಜಪಾನ್‌ ಭಾಷೆಯಲ್ಲಿ ಮಾತನಾಡಿದ್ದ ʻರಾಕಿ ಭಾಯ್‌ʼ

ಕೆಜಿಎಫ್‌ 1 ಮತ್ತು ಕೆಜಿಎಫ್‌ 2 ಸಿನಿಮಾ ಜಪಾನ್‌ನಲ್ಲಿ ಜುಲೈ 14ರಂದು ರಿಲೀಸ್‌ ಆಗುತ್ತಿದೆ. ಈ ಬಗ್ಗೆ ಸ್ವತಃ ರಾಕಿಂಗ್‌ ಸ್ಟಾರ್‌ ಯಶ್‌ ಜಪಾನ್‌ ಭಾಷೆಯಲ್ಲಿ ಮಾತನಾಡಿ, ಸಿನಿಮಾ ನೋಡಿ ಎಂದು ವಿಶೇಷ ಮನವಿ ಈಗಾಗಲೇ ಮಾಡಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ಅವರ ಮುಂಬರುವ ಸಿನಿಮಾ ಅಪ್‌ಡೇಟ್‌ಗಾಗಿ ಅವರ ಫ್ಯಾನ್ಸ್‌ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ರಾಕಿಂಗ್‌ ಸ್ಟಾರ್‌ ಯಶ್‌ ಕೆಜಿಎಫ್‌ 1 ಮತ್ತು ಕೆಜಿಎಫ್‌ 2 ಸಿನಿಮಾವನ್ನು ಜಪಾನ್‌ನಲ್ಲಿ ಬಿಡುಗಡೆಯಾಗುವದ ಬಗ್ಗೆ ವಿಡಿಯೊ ಶೇರ್‌ ಮಾಡಿಕೊಂಡಿದ್ದರು. ಅದು ಕೂಡ ಜಪಾನ್‌ ಭಾಷೆಯಲ್ಲೇ ಮಾತನಾಡಿದ್ದರು. ಇದೇ ಜುಲೈ 14ರಂದು ಜಪಾನ್‌ನಲ್ಲಿ ಸಿನಿಮಾ ರಿಲೀಸ್‌ ಆಗುತ್ತಿದೆ. ಜಪಾನ್ ಭಾಷೆಯಲ್ಲೇ ಸಿನಿಮಾ ನೋಡಿ ಎಂದು ನಟ ಮನವಿ ಮಾಡಿದ್ದರು.

ಇದನ್ನೂ ಓದಿ: Video: ಮುದ್ದು ಮಕ್ಕಳೊಂದಿಗೆ ನಂಜನಗೂಡಿಗೆ ಭೇಟಿ ಕೊಟ್ಟ ಯಶ್​-ರಾಧಿಕಾ; ಮುಂದಿನ ಸಿನಿಮಾ ಬಗ್ಗೆ ಏನಂದ್ರು ರಾಕಿಂಗ್ ಸ್ಟಾರ್​?

ತಮ್ಮ ಚಿತ್ರದಲ್ಲಿ ಏನೆಲ್ಲ ಇದೆ ಎಂಬುದನ್ನು ಕೂಡ ಯಶ್‌ ಹೇಳಿಕೊಂಡಿದ್ದರು. ಸಿನಿಮಾದಲ್ಲಿ ರಾಕಿಯ ಧೈರ್ಯ ನೋಡಬಹುದು. ಅಷ್ಟೇ ಅಲ್ಲ ರಾಕಿಯ ಹೋರಾಟವನ್ನ ಕಾಣಬಹುದು ಅಂತಲೂ ಯಶ್ ಹೇಳಿದ್ದರು.ಅದೇ ರೀತಿ ಈಗ ಜಪಾನ್ ಭಾಷೆಯ ಸಿನಿಪ್ರೇಮಿಗಳಿಗೆ ಅವರದೇ ಭಾಷೆಯ ಸಬ್ ಟೈಟಲ್‌ನೊಂದಿಗೆ ಕೆಜಿಎಫ್ ಎರಡೂ ಭಾಗ ರಿಲೀಸ್ ಆಗುತ್ತಿದೆ.

Exit mobile version