ನಟಿ ಸಾಯಿ ಪಲ್ಲವಿ (Sai Pallavi) ಅವರ ಸಹೋದರಿ ಪೂಜಾ ಕಣ್ಣನ್ ನಿಶ್ಚಿತಾರ್ಥ ಮಾಡಿಕೊಂಡರು.ಇದೀಗ ಸಾಯಿ ಪಲ್ಲವಿ ಸಮಾರಂಭದ ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಸಾಯಿ ಪಲ್ಲವಿ ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ್ದರು. ಸಾಯಿ ಪಲ್ಲವಿ ಅವರ ಸಹೋದರಿ ಪೂಜಾ ಕಣ್ಣನ್ ಅವರು ತಮ್ಮ ಕುಟುಂಬದೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ದೊಡ್ಡ ಕುಟುಂಬ, ತುಂಬಿದ ಹೃದಯಗಳು. 21.01.2024ʼʼಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಪೂಜಾ ಕಣ್ಣನ್ ಅವರು ವಿನೀತ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿನೀತ್ ಹಾಗೂ ಪೂಜಾ ಹಲವು ವರ್ಷಗಳಿಂದಲೂ ಪ್ರೀತಿಯಲ್ಲಿದ್ದರು.
ಇದನ್ನೂ ಓದಿ: Sai Pallavi: ಮದುವೆ ವದಂತಿ ಬಗ್ಗೆ ಕೊನೆಗೂ ಬಾಯ್ಬಿಟ್ಟ ಸಾಯಿ ಪಲ್ಲವಿ!
ಸಾಯಿ ಪಲ್ಲವಿಯವರ ಕುಟುಂಬ ಸಹೋದರಿಯ ಭಾವಿ ಪತಿಯ ಕುಟುಂಬದವರು ವಿವಿಧ ಆಟಗಳನ್ನು ಆಡಿ ಖುಷಿ ಪಟ್ಟಿದ್ದಾರೆ.
ಸಾಯಿ ಪಲ್ಲವಿ .ಕೊನೆಯದಾಗಿ ʻಗಾರ್ಗಿʼ ಚಿತ್ರದಲ್ಲಿ ಕಾಣಿಸಿಕೊಂಡರು. ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ನಟಿ ಮುಂದೆ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.