ಬೆಂಗಳೂರು: ಕಮಲ್ ಹಾಸನ್ ಅವರು ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ (Sai Pallavi) ಅವರ ಮುಂದಿನ ಸಿನಿಮಾಗೆ ಚಾಲನೆ ನೀಡಿದರು. ಈ ಚಿತ್ರದ ಮುಹೂರ್ತ ಮೇ 5ರಂದು ಚೆನ್ನೈನಲ್ಲಿ ನಡೆದಿದೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರವನ್ನು ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ (ಆರ್‌ಕೆಎಫ್‌ಐ) ಮತ್ತು ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಷನಲ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿವೆ. ಐದು ತಿಂಗಳ ಬಳಿಕ ಸಿನಿಮಾ ಸೆಟ್ಟೇರಲಿದೆ ಎಂದು ವರದಿಯಾಗಿದೆ.
ತಾತ್ಕಾಲಿಕವಾಗಿ ಈ ಚಿತ್ರವನ್ನು ʻಎಸ್‌ಕೆ 21ʼ ಎಂದು ಹೆಸರಿಡಲಾಗಿದೆ. ಶಿವಕಾರ್ತಿಕೇಯನ್, ಸಾಯಿ ಪಲ್ಲವಿ, ಸಂಗೀತ ಸಂಯೋಜಕ ಜಿ.ವಿ.ಪ್ರಕಾಶ್ ಸೇರಿದಂತೆ ಚಿತ್ರತಂಡದವರು ಹಾಜರಿದ್ದರು. ಮುಹೂರ್ತದ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ SK21ಜರ್ನಿ ಪ್ರಾರಂಭವಾಗುತ್ತದೆʼʼ ಎಂದು ಚಿತ್ರತಂಡ ಹೇಳಿಕೊಂಡಿದೆ.
ಕಮಲ್ ಹಾಸನ್ ಮತ್ತು ರಾಜ್‌ಕುಮಾರ್ ಪೆರಿಯಾಸಾಮಿ ಚಿತ್ರದ ಬಗ್ಗೆ ಮಾತನಾಡಿ ʻʻಈ ಸಿನಿಮಾ ನೋಡುಗರನ್ನು ಪ್ರೇರೇಪಿಸುತ್ತದೆ. ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ, ನಟ ಶಿವಕಾರ್ತಿಕೇಯನ್ ಅವರೊಂದಿಗೆ ಕೆಲಸ ಮಾಡಲು ತುಂಬ ಹೆಮ್ಮೆಪಡುತ್ತೇನೆʼʼ ಎಂದು ಕಮಲ್ ಹಾಸನ್ ಹೇಳಿಕೆ ನೀಡಿದರು.
ಇದನ್ನೂ ಓದಿ: Sai Pallavi | ರಕ್ಷಿತ್ ಶೆಟ್ಟಿ ಎದುರು ಬೋ… ಮಕ್ಳಾ ಎಂದ ಸಾಯಿ ಪಲ್ಲವಿ!
ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಮಾತನಾಡಿ, “ಈ ಚಿತ್ರವನ್ನು ನಿರ್ಮಿಸಲು ಮತ್ತು ಈ ವಿಶೇಷ ಕಥೆಯನ್ನು ಹೇಳಲು ನನಗೆ ಗೌರವವಾಗಿದೆ. ನಾನು ನನ್ನ ಬಾಲ್ಯದಿಂದಲೂ ಕಮಲ್ ಹಾಸನ್ ಸರ್ ಅವರ ಕಟ್ಟಾ ಅಭಿಮಾನಿ. ಶಿವಕಾರ್ತಿಕೇಯನ್ ನನಗೆ ತುಂಬ ಆತ್ಮೀಯ ಸ್ನೇಹಿತ. ಹಾಗಾಗಿ ಈ ಸಿನಿಮಾ ಈಗಾಗಲೇ ನನ್ನ ಹೃದಯಕ್ಕೆ ಹತ್ತಿರವಾದಂತಿದೆʼ ಎಂದರು.