ಬೆಂಗಳೂರು: ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅವರು ಜಪಾನ್ನ (Sai Pallavi Mass Dance) ಪಬ್ ಒಂದರಲ್ಲಿ ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಜತೆ (Junaid) ಕುಣಿದು ಕುಪ್ಪಳಿಸಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ. ಆಮೀರ್ ಪುತ್ರನ ಜತೆ ಸಾಯಿ ಪಲ್ಲವಿ ಇಲ್ಲೇನು ಮಾಡುತ್ತಿದ್ದಾರೆ? ಎಂದು ಫ್ಯಾನ್ಸ್ ಬೇಸರ ಹೊರ ಹಾಕಿದ್ದಾರೆ. ಆದರೆ ಅಸಲಿಗೆ ಕಾರಣ ಬೇರೆಯೇ ಇದೆ.
ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್ ಜಪಾನ್‌ನಲ್ಲಿ ನಡೆಯುತ್ತಿದೆ. ಈ ಚಿತ್ರದ ಚಿತ್ರೀಕರಣ ಜಪಾನ್‌ನಲ್ಲಿ ಭರದಿಂದ ನಡೆಯುತ್ತಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಜುನೈದ್ ಜತೆ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸಾಯಿ ಪಲ್ಲವಿ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ. ಮುಂಬೈನಲ್ಲಿ ಈಗಾಗಲೇ ಶೂಟಿಂಗ್ ಮುಗಿದಿದೆ.
ಮೂಲಗಳ ಪ್ರಕಾರ”ಜುನೈದ್ ಖಾನ್ ಅವರು ಅಮೀರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸಿದ್ದಾರೆ. ಹೆಸರಿಡದ ಈ ಚಿತ್ರದ 50 ದಿನಗಳ ಶೆಡ್ಯೂಲ್ ಪೂರ್ಣಗೊಳಿಸಿದ ನಂತರ ಜಪಾನ್‌ನಿಂದ ಹಿಂತಿರುಗುತ್ತಿದ್ದಾರೆʼʼ ಎನ್ನಲಾಗಿದೆ.
ಇದನ್ನೂ ಓದಿ: Sai Pallavi: ಸಹೋದರಿಯ ನಿಶ್ಚಿತಾರ್ಥದಲ್ಲಿ ಕುಣಿದು ಕುಪ್ಪಳಿಸಿದ ನಟಿ ಸಾಯಿ ಪಲ್ಲವಿ!
Sai Pallavi is all set to make her debut in Bollywood with Aamir Khan's son Junaid Khan. The Natural Star actress was seen dancing her heart out at the Japan schedule wrap of 'EkDin'.#SaiPallavi #AamirKhan #JunaidKhan #EkDin #Bollywood pic.twitter.com/fhepwqkEaj
— cine_sdn (@sdn789_) March 9, 2024
ಮಗ ಜುನೈದ್ ಚಿತ್ರರಂಗಕ್ಕೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ಆಮೀರ್ ಖಾನ್ ಎಂದಿಗೂ ಉತ್ತರಿಸಿಲ್ಲ. ಆದರೆ ಇದೀಗ ಸಾಯಿ ಪಲ್ಲವಿ ಜತೆ ಜಪಾನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆಮೀರ್ ಪುತ್ರ ಕೂಡ ಇದೀಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದ್ದು, ಇದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ.
Sai Pallavi hindi debut film with Junaid Khan is titled as "EK DIN ♥️" @Sai_Pallavi92 🤍 #SaiPallavi#JunaidKhan #AamirkhanProductions pic.twitter.com/z7lVsrpS1d
— 𝗦𝗮𝗶_𝗣𝗮𝗹𝗹𝗮𝘃𝗶_𝗖𝗿𝗮𝘇𝘆_𝗙𝗮𝗻𝘀™︎ (@saipallavi_CF) February 18, 2024
ಜುನೈದ್ ಅವರು ಇದಾಗಲೇ ಮಹಾರಾಜ್ ಎಂಬ ಚಿತ್ರದಲ್ಲಿ ನಟಿಸಿದ್ದು, ಅದು ನೆಟ್ ಫ್ಲಿಕ್ಸ್ ನಲ್ಲಿ ಸದ್ಯದಲ್ಲಿಯೇ ಪ್ರಸಾರವಾಗಲಿದೆ. ಜಪಾನ್‌ನಲ್ಲಿ ಕಳೆದ ಕೆಲ ದಿನಗಳಿಂದಲೂ ಸಿನಿಮಾ ಚಿತ್ರೀಕರಣದಲ್ಲಿದ್ದ ತಂಡ ಇತ್ತೀಚೆಗಷ್ಟೆ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಶೂಟಿಂಗ್ ಸಾಂಗವಾಗಿ ಮುಗಿದ ಖುಷಿಯಲ್ಲಿ ಪಾರ್ಟಿ ಮಾಡಿದೆ. ಪಾರ್ಟಿಯಲ್ಲಿ ನಟಿ ಸಾಯಿ ಪಲ್ಲವಿ ಚಿತ್ರತಂಡದ ಜತೆಗೆ ಡ್ಯಾನ್ಸ್ ಮಾಡಿದ್ದಾರೆ.
ಈ ಹಿಂದೆ ಸಾಯಿ ಪಲ್ಲವಿ ಮತ್ತು ಜುನೈದ್‌ನ ಸೆಟ್‌ಗಳ ಫೋಟೊಗಳು ವೈರಲ್ ಆಗಿದ್ದವು. ಹೆಸರಿಡದ ಈ ಚಿತ್ರಕ್ಕೆ ‘ಹಿಚ್ಕಿ’ ಖ್ಯಾತಿಯ ಸಿದ್ಧಾರ್ಥ್ ಪಿ ಮಲ್ಹೋತ್ರಾ ನಿರ್ದೇಶಿಸಿದ್ದಾರೆ.