Sai Pallavi Mass Dance: ಆಮೀರ್​ ಖಾನ್​ ಪುತ್ರನ ಜತೆ ಪಬ್‌ನಲ್ಲಿ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ! - Vistara News

ಸಿನಿಮಾ

Sai Pallavi Mass Dance: ಆಮೀರ್​ ಖಾನ್​ ಪುತ್ರನ ಜತೆ ಪಬ್‌ನಲ್ಲಿ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ!

Sai Pallavi Mass Dance: ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್​ ಜಪಾನ್​ನಲ್ಲಿ ನಡೆಯುತ್ತಿದೆ. ಈ ಚಿತ್ರದ ಚಿತ್ರೀಕರಣ ಜಪಾನ್‌ನಲ್ಲಿ ಭರದಿಂದ ನಡೆಯುತ್ತಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಜುನೈದ್ ಜತೆ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

sai pallavi mass dance in pub japan video with Aamir Khan son Junaid
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನ್ಯಾಚುರಲ್​ ಬ್ಯೂಟಿ ಸಾಯಿ ಪಲ್ಲವಿ ಅವರು ಜಪಾನ್​ನ (Sai Pallavi Mass Dance) ಪಬ್ ಒಂದರಲ್ಲಿ ಆಮೀರ್​ ಖಾನ್​ ಪುತ್ರ ಜುನೈದ್​ ಖಾನ್​ ಜತೆ (Junaid) ಕುಣಿದು ಕುಪ್ಪಳಿಸಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗಿದೆ. ಆಮೀರ್​​ ಪುತ್ರನ ಜತೆ ಸಾಯಿ ಪಲ್ಲವಿ ಇಲ್ಲೇನು ಮಾಡುತ್ತಿದ್ದಾರೆ? ಎಂದು ಫ್ಯಾನ್ಸ್‌ ಬೇಸರ ಹೊರ ಹಾಕಿದ್ದಾರೆ. ಆದರೆ ಅಸಲಿಗೆ ಕಾರಣ ಬೇರೆಯೇ ಇದೆ.

ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್​ ಜಪಾನ್​ನಲ್ಲಿ ನಡೆಯುತ್ತಿದೆ. ಈ ಚಿತ್ರದ ಚಿತ್ರೀಕರಣ ಜಪಾನ್‌ನಲ್ಲಿ ಭರದಿಂದ ನಡೆಯುತ್ತಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಜುನೈದ್ ಜತೆ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸಾಯಿ ಪಲ್ಲವಿ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ. ಮುಂಬೈನಲ್ಲಿ ಈಗಾಗಲೇ ಶೂಟಿಂಗ್‌ ಮುಗಿದಿದೆ.

ಮೂಲಗಳ ಪ್ರಕಾರ”ಜುನೈದ್ ಖಾನ್ ಅವರು ಅಮೀರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸಿದ್ದಾರೆ. ಹೆಸರಿಡದ ಈ ಚಿತ್ರದ 50 ದಿನಗಳ ಶೆಡ್ಯೂಲ್‌ ಪೂರ್ಣಗೊಳಿಸಿದ ನಂತರ ಜಪಾನ್‌ನಿಂದ ಹಿಂತಿರುಗುತ್ತಿದ್ದಾರೆʼʼ ಎನ್ನಲಾಗಿದೆ.

ಇದನ್ನೂ ಓದಿ: Sai Pallavi: ಸಹೋದರಿಯ ನಿಶ್ಚಿತಾರ್ಥದಲ್ಲಿ ಕುಣಿದು ಕುಪ್ಪಳಿಸಿದ ನಟಿ ಸಾಯಿ ಪಲ್ಲವಿ!

ಮಗ ಜುನೈದ್ ಚಿತ್ರರಂಗಕ್ಕೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ಆಮೀರ್ ಖಾನ್​ ಎಂದಿಗೂ ಉತ್ತರಿಸಿಲ್ಲ. ಆದರೆ ಇದೀಗ ಸಾಯಿ ಪಲ್ಲವಿ ಜತೆ ಜಪಾನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆಮೀರ್​ ಪುತ್ರ ಕೂಡ ಇದೀಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದ್ದು, ಇದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ.

ಜುನೈದ್ ಅವರು ಇದಾಗಲೇ ಮಹಾರಾಜ್ ಎಂಬ ಚಿತ್ರದಲ್ಲಿ ನಟಿಸಿದ್ದು, ಅದು ನೆಟ್ ಫ್ಲಿಕ್ಸ್ ನಲ್ಲಿ ಸದ್ಯದಲ್ಲಿಯೇ ಪ್ರಸಾರವಾಗಲಿದೆ. ಜಪಾನ್​ನಲ್ಲಿ ಕಳೆದ ಕೆಲ ದಿನಗಳಿಂದಲೂ ಸಿನಿಮಾ ಚಿತ್ರೀಕರಣದಲ್ಲಿದ್ದ ತಂಡ ಇತ್ತೀಚೆಗಷ್ಟೆ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಶೂಟಿಂಗ್ ಸಾಂಗವಾಗಿ ಮುಗಿದ ಖುಷಿಯಲ್ಲಿ ಪಾರ್ಟಿ ಮಾಡಿದೆ. ಪಾರ್ಟಿಯಲ್ಲಿ ನಟಿ ಸಾಯಿ ಪಲ್ಲವಿ ಚಿತ್ರತಂಡದ ಜತೆಗೆ ಡ್ಯಾನ್ಸ್ ಮಾಡಿದ್ದಾರೆ.

ಈ ಹಿಂದೆ ಸಾಯಿ ಪಲ್ಲವಿ ಮತ್ತು ಜುನೈದ್‌ನ ಸೆಟ್‌ಗಳ ಫೋಟೊಗಳು ವೈರಲ್ ಆಗಿದ್ದವು. ಹೆಸರಿಡದ ಈ ಚಿತ್ರಕ್ಕೆ ‘ಹಿಚ್ಕಿ’ ಖ್ಯಾತಿಯ ಸಿದ್ಧಾರ್ಥ್ ಪಿ ಮಲ್ಹೋತ್ರಾ ನಿರ್ದೇಶಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Love Case : ಸಿರಿಯಲ್ ನಟಿಯ ಮದುವೆ ಕಿರಿಕ್‌; ವಾಶ್‌ರೂಮ್‌ನಲ್ಲಿ ಯುವಕ ಆತ್ಮಹತ್ಯೆ

Love Case : ಸಿರಿಯಲ್ ನಟಿ ಮದುವೆ ಆಗುವಂತೆ ಒತ್ತಾಯಿಸಿದ್ದಕ್ಕೆ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

VISTARANEWS.COM


on

By

Love case
Koo

ಬೆಂಗಳೂರು: ಸಿರಿಯಲ್ ನಟಿ ಮದುವೆ ಆಗುವಂತೆ ಪೀಡಿಸುತ್ತಿದ್ದಳು ಎಂದು ಯುವಕನೊಬ್ಬ ಆತ್ಮಹತ್ಯೆಗೆ (Love Case) ಶರಣಾಗಿದ್ದಾನೆ. ಮದನ್ (25) ಮೃತ ದುರ್ದೈವಿ. ಸಿರಿಯಲ್ ನಟಿ ವೀಣಾ ಎಂಬಾಕೆ ಜತೆಗೆ ಮದನ್ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದ. ನಿನ್ನೆ ರಾತ್ರಿ ಇಬ್ಬರು ಒಂದೇ ರೂಮಿನಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿ ನಂತರ ಮದನ್‌ ಜತೆಗೆ ವೀಣಾ ಮದುವೆ ಪ್ರಸ್ತಾಪಿಸಿದ್ದಳಂತೆ.

ಮದನ್‌ ಇವೆಂಟ್ ಮ್ಯಾನೇಜ್ ಮೆಂಟ್‌ನಲ್ಲಿ ಡೆಕೊರೇಟ್ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಸಿರಿಯಲ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ ವೀಣಾಳನ್ನು ಕೆಲ ತಿಂಗಳ ಹಿಂದೆ ಪರಿಚಯ ಮಾಡಿಕೊಂಡಿದ್ದ. ಸಲುಗೆ ಬೆಳೆಸಿಕೊಂಡು ಇಬ್ಬರು ಲೀವಿಂಗ್ ರಿಲೇಶನ್ ಹೊಂದಿದ್ದರು.

ವೀಣಾ ಕನ್ನಡತಿ ಸೀರಿಯಲ್ ಹಾಗೂ ಕೆಲವು ಆ್ಯಡ್ ಗಳಲ್ಲಿ ನಟಿಸುತ್ತಿದ್ದಳು ಎನ್ನಲಾಗಿದೆ. ಸದ್ಯ ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಯುವತಿ ಹಲವು ಯುವಕರಿಗೆ ಮದುವೆ ಆಗುವುದಾಗಿ ವಂಚಿಸಿದ್ದಾಳೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.

ಕೈ ಕೊಯ್ದುಕೊಂಡು ಗಲಾಟೆ ಮಾಡಿದ್ದ ನಟಿ

ಮದುವೆಯಾಗುವಂತೆ ಒತ್ತಾಯಿಸಿ ವೀಣಾ ಈ ಹಿಂದೆ ಕೈ ಕೊಯ್ದುಕೊಂಡು ಮದನ್‌ ಮನೆ ಮುಂದೆ ಗಲಾಟೆ ಮಾಡಿದ್ದಳಂತೆ. ವೀಣಾಗೆ ಹಲವು ಹುಡುಗರ ಪರಿಚಯವಿತ್ತು. ಇದರಿಂದ ಆಕೆಯ ಕ್ಯಾರೆಕ್ಟರ್ ಮೇಲೆ ಮದನ್‌ ಅನುಮಾನ ಪಟ್ಟಿದ್ದ. ಹೀಗಾಗಿ ಮದನ್‌ ಮದುವೆಯಾಗಲು ನಿರಾಕರಿಸಿದ್ದ ಎನ್ನಲಾಗಿದೆ.

ಆದರೆ ಫೋನ್‌ ಮೂಲಕ ಮದನ್‌ಗೆ ಟಾರ್ಚರ್ ನೀಡುತ್ತಿದ್ದಳಂತೆ. ಸಿಕೆ ಪಾಳ್ಯದಲ್ಲಿ ರೂಂ ಮಾಡಿ ವಾಸವಿದ್ದ ವೀಣಾ ನಿನ್ನೆಯೂ ಸಹ ಮದನ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ನಿನ್ನೆ ಇಬ್ಬರು ಪಾರ್ಟಿ ಮಾಡಿದ್ದು, 8:30 ರಾತ್ರಿಯಲ್ಲಿ ಮತ್ತೆ ಮದುವೆ ವಿಚಾರ ಪ್ರಸ್ತಾಪವಾಗಿದೆ. ಇಬ್ಬರೂ ಕಂಠಪೂರ್ತಿ ಪಾನಮತ್ತರಾಗಿದ್ದರು. ಈ ವೇಳೆ ವಾಶ್ ರೂಂ ಗೆ ಹೋಗಿ ಬರ್ತಿನಿ ಅಂತ ಹೇಳಿದ್ದ ಮದನ್, ಅಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Assault Case : ಡೋರ್‌ ಹತ್ರ ನಿಲ್ಲಬೇಡ ಒಳಗೆ ಹೋಗು ಎಂದಿದ್ದಕ್ಕೆ ಬಿಎಂಟಿಸಿ ಕಂಡಕ್ಟರ್‌ಗೆ ಚಾಕು ಇರಿದು ಹುಚ್ಚನಂತೆ ವರ್ತಿಸಿದ ಪ್ರಯಾಣಿಕ!

ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ

ರಾಯಚೂರು: ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾನೆ. ಜಮೀನು ವಿಚಾರಕ್ಕೆ (Land dispute) ಅತ್ತೆ – ಅಳಿಯನ ನಡುವೆ ಜಗಳ (Family Dispute) ನಡೆದಿದ್ದು, ಅತ್ತೆಯ ಬೆದರಿಕೆಗೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಹುಲಿಗೇಪ್ಪ (20) ಮೃತ ದುರ್ದೈವಿ.

ಮನೆಯಲ್ಲಿ ಯಾರು ಇಲ್ಲದ ವೇಳೆ ಡೆತ್‌ ನೋಟ್ ಬರೆದಿಟ್ಟು ವಿಷ ಸೇವಿಸಿದ್ದಾನೆ. ಡೆತ್ ನೋಟ್‌ನಲ್ಲಿ ಜಾಗದ ವಿಚಾರವಾಗಿ ಅತ್ತೆ ಲಕ್ಷ್ಮಿ, ಅತ್ತೆಯ ಮಗಳ ಅನುರಾಧ, ಮಹಾದೇವಿ, ಅನಿಲ್ ಎಂಬುವವರ ಹೆಸರು ಪ್ರಸ್ತಾಪ ಮಾಡಿದ್ದಾನೆ. ನನ್ನ ಸಾವಿಗೆ ನನ್ನ ಅತ್ತೆ ಲಕ್ಷ್ಮಿದೇವಿ ಮತ್ತು ಆಕೆಯ ಮಕ್ಕಳೇ ಕಾರಣ. ನಮ್ಮ 17 ಗುಂಟೆ ಜಾಗ ತಮ್ಮದು ಎಂದು ನಮಗೆ ಬೆದರಿಕೆ ಹಾಕಿದ್ದಾರೆ. ನನ್ನ ಸಾವಿನ ಬಳಿಕವಾದರೂ ನಮ್ಮ ಜಾಗ ನಮಗೆ ಕೊಡಿ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಸಿರವಾರ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಾಲಿವುಡ್

Actor Govinda : ಬಾಲಿವುಡ್​ ನಟ ಗೋವಿಂದ ಕಾಲಿಗೆ ಗುಂಡೇಟು! ಮುಂಬೈ ಆಸ್ಪತ್ರೆಗೆ ದಾಖಲು

Actor Govinda : ಬಾಲಿವುಡ್​ ನಟ ಗೋವಿಂದ ಕಾಲಿಗೆ ಗುಂಡು ತಗುಲಿದ್ದು, ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

VISTARANEWS.COM


on

By

Actor Govinda
Koo

ಬಾಲಿವುಡ್‌ ನಟ ಗೋವಿಂದ (Actor Govinda) ಕಾಲಿಗೆ ಗುಂಡು ತಗುಲಿದೆ. ರಿವಾಲ್ವರ್​​ ಲಾಕ್​ ಓಪನ್​ ಆಗಿದ್ದರಿಂದ ಜೇಬಿಗೆ ರಿವಾಲ್ವರ್​ ಇಟ್ಟುಕೊಳ್ಳುವಾಗ ಮಿಸ್ ಫೈರ್ ಆಗಿದೆ. ಕೂಡಲೇ ಗೋವಿಂದ ಕುಟುಂಬಸ್ಥರು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂದು ಮುಂಜಾನೆ 4.45ರ ಸುಮಾರಿಗೆ ಘಟನೆ ನಡೆದಿದೆ.

ನಟ ಗೋವಿಂದ ಲೈಸೆನ್ಸ್​ ರಿವಾಲ್ವರ್​ ಬಳಕೆ ಮಾಡುತ್ತಿದ್ದರು. ಮನೆ ಬಿಡುವಾಗ ಗನ್​ ಚೆಕ್​ ಮಾಡುತ್ತಿದ್ದರು. ಈ ವೇಳೆ ಗೋವಿಂದ ಕಾಲಿಗೆ ಬುಲೆಟ್ ತಗುಲಿದೆ. ತನ್ನದೇ ರಿವಾಲ್ವರ್​​ನಿಂದ ಫೈರಿಂಗ್​​​ ಆಗಿದೆ. ಮುಂಬೈನ ಅಂಧೇರಿಯಲ್ಲಿರುವ ಆಸ್ಪತ್ರೆಯಲ್ಲಿ ಗೋವಿಂದಗೆ ಟ್ರೀಟ್​ಮೆಂಟ್​ ಮುಂದುವರಿದಿದೆ. ಅದೃಷ್ಟವಶಾತ್‌ ಗೋವಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಬೈ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಲಿದ್ದು, ಈ ಸಂಬಂಧ ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ: Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರು; ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು

ಮುಂಜಾನೆ ಕೋಲ್ಕತ್ತಾಗೆ ಹೊರಡುವ ಮೊದಲು ನಟ ತನ್ನ ಪರವಾನಗಿ ಪಡೆದ ರಿವಾಲ್ವರ್ ಅನ್ನು ಪರಿಶೀಲಿಸುತ್ತಿದ್ದಾಗ ಜುಹು ನಿವಾಸದಲ್ಲಿ ಈ ಘಟನೆ ನಡೆದಿದೆ. ರಿವಾಲ್ವರ್ ಆಕಸ್ಮಿಕವಾಗಿ ಗೋವಿಂದ ಕೈಯಿಂದ ಬಿದ್ದು, ಕಾಲಿಗೆ ಗುಂಡು ತಗುಲಿದೆ ಎನ್ನಲಾಗಿದೆ. ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಹೋಗಲು ಬೆಳಿಗ್ಗೆ 6 ಗಂಟೆಗೆ ಫ್ಲೈಟ್‌ ಇತ್ತು. ನಾನು ಮೊದಲೇ ವಿಮಾನ ನಿಲ್ದಾಣವನ್ನು ತಲುಪಿದ್ದೆ. ಗೋವಿಂದ ಅವರು ತಮ್ಮ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಹೊರಟಿದ್ದರು. ಆಗ ಈ ಅವಘಡ ಸಂಭವಿಸಿದೆ. ಸದ್ಯ ವೈದ್ಯರು ಗುಂಡು ಹೊರತೆಗೆದಿದ್ದು, ಗೋವಿಂದ ಆರೋಗ್ಯ ಸ್ಥಿರವಾಗಿದೆ ಎಂದು ನಟನ ಮ್ಯಾನೇಜರ್ ಶಶಿ ಸಿನ್ಹಾ ಹೇಳಿದ್ದಾರೆ.

ಆಸ್ಪತ್ರೆಯಿಂದ ನಟ ಗೋವಿಂದ ಆಡಿಯೋ ಮೆಸೇಜ್ ರಿಲೀಸ್ ಮಾಡಿದ್ದಾರೆ. ಎಲ್ಲರ ಹಾರೈಕೆ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ. ಗುಂಡು ಬಿದ್ದಿದನ್ನು ತೆಗೆಯಲಾಗಿದೆ. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಸಂದೇಶ ಕಳುಹಿಸಿದ್ದಾರೆ. ಗೋವಿಂದ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರು; ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು

Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಧ್ಯರಾತ್ರಿಯೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

VISTARANEWS.COM


on

By

Superstar Rajinikanth is unwell Family members admitted to hospital in the middle of the night
Koo

ಸೂಪರ್‌ ಸ್ಟಾರ್‌ ರಜನಿಕಾಂತ್ (Actor Rajinikanth) ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಜನಿಕಾಂತ್ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ (ಸೆ.30) ಮಧ್ಯರಾತ್ರಿ ತಲೈವಾ ರಜನಿಕಾತ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯ ಡಾ. ಸಾಯಿ ಸತೀಶ್ ಅವರು ರಜನಿಕಾಂತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರಜನಿಕಾಂತ್​ಗೆ ಕಾರ್ಡಿಯಾಕ್​ ಕ್ಯಾಥ್​ ಲ್ಯಾಬ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೂ ದಾಖಲಾಗುವುದಕ್ಕೂ ಮುನ್ನ ರಜನಿಕಾಂತ್‌ ಅಭಿನಯಿಸಿರುವ ವೆಟ್ಟೈಯನ್​​​ ಸಿನಿಮಾದ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ರಜನಿಕಾಂತ್‌ಗೆ 73 ವರ್ಷ ವಯಸ್ಸು ಆಗಿದೆ. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Mallikarjun Kharge: ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಅಸ್ವಸ್ಥಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

ಕೂಲಿ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ತಲೈವಾ ಜತೆಗೆ ರಿಯಲ್ ಸ್ಟಾರ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಹೊಸ ಸಿನಿಮಾ ಕೂಲಿಯಲ್ಲಿ ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯಿಸಲಿದ್ದಾರೆ. ಈ ಕುರಿತು ಉಪೇಂದ್ರ ಅವರು ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.

Real Star Upendra Acting with Superstar Rajinikanth Coolie Movie
Real Star Upendra Acting with Superstar Rajinikanth Coolie Movie

ಕೂಲಿ ಸಿನಿಮಾವು ತಮಿಳು, ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರಲಿದೆ. ಲೋಕೇಶ್ ಕನಕರಾಜ್‌ ಡೈರೆಕ್ಷನ್‌ನಲ್ಲಿ ಕೂಲಿ ಸಿನಿಮಾ ಮೂಡಿಬರುತ್ತಿದೆ.

Real Star Upendra Acting with Superstar Rajinikanth Coolie Movie
Real Star Upendra Acting with Superstar Rajinikanth Coolie Movie

ತಲೈವಾ ರಜನಿಕಾಂತ್‌ ಅವರ 171ನೇ ಸಿನಿಮಾ ಕೂಲಿ ಆಗಿದೆ. ಜೈಲರ್‌ನಂತಹ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸನ್ ಪಿಕ್ಚರ್ಸ್ ಕೂಲಿಯನ್ನು ನಿರ್ಮಿಸಲಿದೆ.

Real Star Upendra Acting with Superstar Rajinikanth Coolie Movie
Real Star Upendra Acting with Superstar Rajinikanth Coolie Movie

ರಜನಿಕಾಂತ್‌ ಮತ್ತು ಲೋಕೇಶ್ ಕನಕರಾಜ್‌ ಕಾಂಬಿನೇಷನ್‌ನ ‘ಕೂಲಿ’ ಸಿನಿಮಾದಲ್ಲಿ ಕನ್ನಡದ ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಲಿದ್ದಾರೆ.

ಈ ಕುರಿತು ಉಪೇಂದ್ರ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಕೂಲಿ ಸಿನಿಮಾದ ಪೋಸ್ಟರ್‌ ಹಾಕಿ ತಿಳಿಸಿದ್ದಾರೆ. ತಲೈವಾ ರಜಿನಿಕಾಂತ್‌ ನಟನೆಯ ಕೂಲಿ ಚಿತ್ರದಲ್ಲಿ ಉಪೇಂದ್ರ ಕಲೀಷ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

Real Star Upendra Acting with Superstar Rajinikanth Coolie Movie
Real Star Upendra Acting with Superstar Rajinikanth Coolie Movie

ನಿಮ್ಮ ಆಶೀರ್ವಾದದಿಂದ ನನ್ನ ಗುರು ನನ್ನ ಸೂಪರ್‌ ಸ್ಟಾರ್‌ ರಜಿನಿ ಸರ್‌ ಜತೆಗೆ ಕೂಲಿ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಫೀಲಿಂಗ್‌‌ ಬ್ಲೆಸ್ಡ್ ಅಂತ ಲೋಕೇಶ್‌ ಕನಕರಾಜ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Continue Reading

ಬೆಂಗಳೂರು

Actor Darshan : ನಟ ದರ್ಶನ್‌, ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆ

Actor Darshan : ಕೊಲೆ ಕೇಸ್‌ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ಹಾಗೂ ಪವಿತ್ರಾಗೌಡರ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆಯಿತು. ಇದೇ ವೇಳೆ ಇಬ್ಬರ ಅರ್ಜಿ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿಕೆ ಮಾಡಿ ಕೋರ್ಟ್‌ ಆದೇಶಿಸಿದೆ.

VISTARANEWS.COM


on

By

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder) ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಜೈಲುಪಾಲಾಗಿದ್ದಾರೆ. ಪ್ರಕರಣ ಸಂಬಂಧ 57ನೇ ಸೆಷನ್ ಕೋರ್ಟ್‌ನಲ್ಲಿ ನಟ ದರ್ಶನ್‌ ಹಾಗೂ ಪವಿತ್ರಾಗೌಡರ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ದರ್ಶನ್‌ ಪರ ವಕೀಲರು ವಾದ ಮಾಡಲು ಸಮಯ ಕೇಳಿದ ಹಿನ್ನೆಲೆಯಲ್ಲಿ ದರ್ಶನ್‌ರ ಜಾಮೀನು ಅರ್ಜಿ ಮುಂದೂಡಿಕೆ ಮಾಡಲಾಗಿದೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿಕೆ ಮಾಡಿ ಕೋರ್ಟ್‌ ಆದೇಶ ಹೊರಡಿಸಿದೆ.

ಇನ್ನು ಎಸ್‌ಪಿಪಿ ಕೋರ್ಟ್ ಹಾಲ್‌ನಲ್ಲಿ ನಡೆದ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರವಾಗಿ ಎಸ್‌ಪಿಪಿ ಪ್ರಸನ್ನಕುಮಾರ್‌ ಅವರನ್ನು ಕರೆಸುವಂತೆ ನ್ಯಾಯಾಧೀಶರು ಸೂಚನೆ ನೀಡಿದರು. ರವಿಶಂಕರ್ ಅರ್ಜಿ ವಿಚಾರಣೆಗೂ ಎಸ್‌ಎಸ್‌ಪಿ ಅಗತ್ಯ ಹಿನ್ನೆಲೆಯಲ್ಲಿ ಎಸ್‌ಎಸ್‌ಪಿ ಅವರ ಹಾಜರಾತಿಗೆ ನ್ಯಾಯಾಲಯ ಸೂಚಿಸಿತು. ಇದಕ್ಕಾಗಿ ಕೆಲಕಾಲ ವಿಚಾರಣೆ ಮುಂದೂಡಲಾಯಿತು.

ಬಳಿಕ ಶುರುವಾದ ಪವಿತ್ರಗೌಡ ಗೌಡ ಜಾಮೀನು ಅರ್ಜಿ ವಿಚಾರಣೆ ವೇಳೆ ಎಸ್‌ಪಿಪಿ ಪರ ವಕೀಲರು 15 ದಿನಗಳ ಸಮಯಾವಕಾಶ ಕೇಳಿದರು. ಸಮಯಾವಕಾಶ ನೀಡಲು ಆಗಲ್ಲ, ಇವತ್ತೇ ನಿಮ್ಮ ಸಿನಿಯರ್ ವಕೀಲರನ್ನು ಕರೆಸಿ ಎಂದು ನ್ಯಾಯಾಧೀಶರು ಸೂಚಿಸಿ, ಜಾಮೀನು ಅರ್ಜಿಯನ್ನು ಕೆಲ ಕಾಲ ಮುಂದೂಡಿದರು. ಬಳಿಕ ಅಕ್ಟೋಬರ್‌ 4ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಈಗಾಗಲೆ ದರ್ಶನ್, ಲಕ್ಷ್ಮಣ್ ಜಾಮೀನು ಅರ್ಜಿಯನ್ನು ಅ .4ಕ್ಕೆ ಮುಂದೂಡಿಕೆ ಮಾಡಲಾಗಿದ್ದು, ಸದ್ಯ ಪವಿತ್ರಾ ಗೌಡ ಅರ್ಜಿ ವಿಚಾರಣೆ ಕೂಡ ಮುಂದೂಡಿಕೆ ಮಾಡಿ ನ್ಯಾಯಾಧೀಶ ಶ್ರೀ ಜೈಶಂಕರ್ ಆದೇಶ ಹೊರಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor Darshan
ಬೆಂಗಳೂರು39 ನಿಮಿಷಗಳು ago

Parappana Agrahara : ಜೈಲಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಕೇಸ್; ಕ್ಲೈ ಮ್ಯಾಕ್ಸ್ ಹಂತದಲ್ಲಿ ರಿವೈಲ್ ಆಯ್ತು ಜೈಲಿನೊಳಗಿನ ಅಂದರ್ ಕಿ ದರ್ಬಾರ್!

Bengaluru News
ಬೆಂಗಳೂರು3 ಗಂಟೆಗಳು ago

Bengaluru News : ಮತ್ತೆ ಮೂವರು ಪಾಕ್ ಪ್ರಜೆಗಳ ಬಂಧನ; ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಕುಟುಂಬ

HD kumaraswamy And Vijayetata
ಬೆಂಗಳೂರು4 ಗಂಟೆಗಳು ago

HD Kumaraswamy : ಎಲೆಕ್ಷನ್‌ಗೆ 50 ಕೋಟಿ ರೂ.ಗೆ ಡಿಮ್ಯಾಂಡ್‌ ಮಾಡಿ ಉದ್ಯಮಿಗೆ ಬೆದರಿಕೆ; ಎಚ್‌ಡಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

Karnataka weather Forecast
ಪ್ರಮುಖ ಸುದ್ದಿ4 ಗಂಟೆಗಳು ago

Karnataka Rain : ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; ಹೈರಾಣಾದ ವಾಹನ ಸವಾರರು

MLA Muniratna
ಬೆಂಗಳೂರು5 ಗಂಟೆಗಳು ago

MLA Muniratna: ಶಾಸಕ ಮುನಿರತ್ನ ಕೇಸ್‌; ರಾಜಕಾರಣಿಗಳ ಹನಿಟ್ರ್ಯಾಪ್‌ ಮಾಡುತ್ತಿದ್ದ ರೂಮಿನ ಸ್ಥಳ ಮಹಜರು ಮಾಡಿದ ಎಸ್‌ಐಟಿ ಅಧಿಕಾರಿಗಳು

Power cut off due to a technical problem in the transformer Bengaluru faces water crisis today
ಬೆಂಗಳೂರು6 ಗಂಟೆಗಳು ago

Water supply: ಟ್ರಾನ್ಸಫಾರ್ಮರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತ; ಬೆಂಗಳೂರಿಗೆ ಇಂದು ನೀರಿನ ಸಮಸ್ಯೆ

Gandhi Jayanti 2024
ಬೆಂಗಳೂರು7 ಗಂಟೆಗಳು ago

Gandhi Jayanti 2024: ಗಾಂಧಿ ಜಯಂತಿ ಹಿನ್ನೆಲೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸಿದ ಎನ್‌ಸಿಸಿ ಕೆಡೆಟ್‌ಗಳು

Drugs Mafia
ಕೊಡಗು8 ಗಂಟೆಗಳು ago

Drugs Mafia: ಥೈಲ್ಯಾಂಡ್ ಟು ದುಬೈ ಡ್ರಗ್‌ ಮಾಫಿಯಾಗೆ ಇಂಡಿಯಾನೆ ಮೈನ್ ಲಿಂಕ್; 3 ಕೋಟಿ ಮೌಲ್ಯದ ಗಾಂಜಾ ವಶ

Mysuru Dasara 2024
ಮೈಸೂರು8 ಗಂಟೆಗಳು ago

Mysuru Dasara 2024: ವೈಭವದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ

PSI exam slated to be held across the state today
ಬೆಂಗಳೂರು13 ಗಂಟೆಗಳು ago

PSI Exam : ರಾಜ್ಯಾದ್ಯಂತ ಇಂದು ಪಿಎಸ್‌ಐ ಪರೀಕ್ಷೆ; ಇಎನ್‌ಟಿ ವೈದ್ಯರಿಂದ ಅಭ್ಯರ್ಥಿಗಳಿಗೆ ತಪಾಸಣೆ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌