Site icon Vistara News

Salaar Movie: ʻಸಲಾರ್ʼ ಸಿನಿಮಾ ರಿಲೀಸ್‌ ಡೇಟ್‌ ಪೋಸ್ಟ್‌ಪೋನ್‌?

Salaar Movie

ಬೆಂಗಳೂರು: ಟಾಲಿವುಡ್‌ ನಟ ಪ್ರಭಾಸ್ ಅಭಿನಯದ ʻಸಲಾರ್ʼ ಸಿನಿಮಾ (Salaar Movie) ಮುಂದೂಡಿಕೆಯಾಗಿರುವ (Salaar postponed) ಬಗ್ಗೆ ಟಾಲಿವುಡ್ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ. ಆರಂಭದಲ್ಲಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿತ್ತು. ಸಲಾರ್ ಬಿಡುಗಡೆ ದಿನಾಂಕವನ್ನು ಇನ್ನೂ 27 ದಿನಗಳವರೆಗೆ ಮುಂದೂಡಲಾಗಿದೆ ಎಂದು ವರದಿಯಾಗಿದೆ. ನಿರ್ಮಾಣ ತಂಡ ಗ್ರಾಫಿಕ್ಸ್ ಕೆಲಸವನ್ನು ಪೂರ್ಣಗೊಳಿಸುವ ಹಂತದಲ್ಲಿದೆ ಎನ್ನಲಾಗಿದೆ.

ʻಆದಿಪುರುಷ’ ಚಿತ್ರದ ಸೋಲಿನ ನಂತರ, ಪ್ರಭಾಸ್ (Actor Prabhas) ತಮ್ಮ ಮುಂಬರುವ ಬಿಗ್-ಬಜೆಟ್ ಚಿತ್ರ ‘ಸಲಾರ್‌’ (Salaar Movie) ಮೇಲೆ ತಮ್ಮ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ವರದಿಗಳ ಪ್ರಕಾರ, ‘ಸಲಾರ್’ ಚಿತ್ರದ ಟ್ರೈಲರ್ ಸೆಪ್ಟೆಂಬರ್ (Salaar trailer ) 6ರಂದು ಬಿಡುಗಡೆಯಾಗುವ ಸಾಧ್ಯತೆಯಿಲ್ಲ. ಅಷ್ಟೇ ಅಲ್ಲದೇ ಬಿಡುಗಡೆಯ ದಿನಾಂಕ ಕೂಡ ಮುಂದೂಡಿದೆ ಎನ್ನಲಾಗುತ್ತಿದೆ.

ಈಗಾಗಲೇ ಸಿನಿಮಾದ ಟ್ರೆಂಡ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸೆಪ್ಟೆಂಬರ್ 28 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಸಲಾರ್ ನಿರ್ಮಾಪಕರು ಚಿತ್ರದ ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂತಲೂ ವರದಿಯಾಗಿದೆ.

ಇದನ್ನೂ ಓದಿ: Salaar Movie : ಸಲಾರ್ ವಿರುದ್ಧ ಅಗ್ನಿಹೋತ್ರಿಯ ವ್ಯಾಕ್ಸಿನ್ ‘ವಾರ್​’

ಸಲಾರ್’ ಟೀಸರ್ ಈಗಾಗಲೇ ಬಿಡುಗಡೆಗೊಂಡಿದ್ದು. ಸೂಪರ್ ಹಿಟ್ ಆಗಿದೆ. 100 ಮಿಲಿಯನ್‌ಗೂ ಅಧಿಕ ವ್ಯೂಸ್ ಸಾಧಿಸಿದೆ. ಆದರೂ ಕೂಡ ಟೀಸರ್ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಪ್ರಭಾಸ್‌ ಲುಕ್ ರಿವೀಲ್ ಮಾಡಿಲ್ಲ ಎಂದಿದ್ದರು.

ಇನ್ನು ಸಲಾರ್‌ ಸಿನಿಮಾದ ವಿತರಣೆ ಹಕ್ಕನ್ನು ಪ್ರತ್ಯಾಂಗೀರ್‌ ಸಿನಿಮಾಸ್‌ ಪಡೆದುಕೊಂಡಿದೆ. ಸಿನಿಮಾವನ್ನು ಭರ್ಜರಿಯಾಗಿ ಬಿಡುಗಡೆ ಮಾಡುವುದಕ್ಕೆ ಪ್ರತ್ಯಾಂಗೀರ್‌ ಸಿನಿಮಾಸ್‌ ಭಾರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಎಲ್ಲೆಡೆ ಸಿನಿಮಾ ಬಿಡುಗಡೆಗೆ ಮೊದಲೇ ಭಾರೀ ಸದ್ದು ಮಾಡುತ್ತಿದ್ದು, ಈ ಸಿನಿಮಾ ಪ್ರಭಾಸ್‌ಗೆ ಮತ್ತೆ ಒಳ್ಳೆಯ ಫೇಮ್‌ ಒಂದನ್ನು ತಂದುಕೊಡುವ ನಿರೀಕ್ಷೆಯಿದೆ. ಬಹು ನಿರೀಕ್ಷೆಯ ಸಲಾರ್‌ ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್‌ ಅವರು ನಾಯಕ ನಟಿಯಾಗಿದ್ದಾರೆ. ಪೃಥ್ವಿರಾಜ್‌ ಸುಕುಮಾರನ್‌, ಜಗಪತಿ ಬಾಬು, ಈಶ್ವರಿ ರಾವ್‌ ಸೇರಿ ಅನೇಕರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ನಿರ್ಮಾಣವಾಗಿದೆ ಎಂತಲೂ ವರದಿಯಾಗಿದೆ. 

Exit mobile version