Site icon Vistara News

Bigg Boss OTT season 2: ʻಹಿಂದಿ ಬಿಗ್‌ ಬಾಸ್‌ ಒಟಿಟಿ 2ನೇʼ ಸೀಸನ್‌ ಹಾಸ್ಟ್‌ ಮಾಡುತ್ತಿದ್ದಾರೆ ಸಲ್ಮಾನ್‌ ಖಾನ್‌; ಪ್ರೊಮೊ ಇಲ್ಲಿದೆ!

Salman Khan announces Bigg Boss OTT S2 on JioCinema

ಬೆಂಗಳೂರು: ಬಿಗ್‌ ಬಾಸ್‌ ಹಿಂದಿ ಒಟಿಟಿ (Bigg Boss OTT season 2) ಸೀಸನ್‌ ಒಂದನ್ನು ಕರಣ್ ಜೋಹರ್ ಹೋಸ್ಟ್‌ ಮಾಡಿದ್ದರು. ‘ಬಿಗ್​ ಬಾಸ್​ ಒಟಿಟಿ 2ನೇ ಸೀಸನ್​’ ಯಾರು ನಿರೂಪಣೆ ಮಾಡಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿತ್ತು. ಇದೀಗ ಎಲ್ಲ ವದಂತಿಗಳಿಗೆ ಫುಲ್‌ ಸ್ಟಾಪ್‌ ಬಿದ್ದಿದೆ. ಅಂತಿಮವಾಗಿ ಬಿಗ್ ಬಾಸ್ OTT ಸೀಸನ್ 2ವನ್ನು ಸಲ್ಮಾನ್‌ ಖಾನ್‌ ಹೋಸ್ಟ್‌ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಜಿಯೋ ಸಿನಿಮಾದಲ್ಲಿ ಜೂನ್‌ ತಿಂಗಳಲ್ಲಿ ಪ್ರಸಾರ ಕಾಣುತ್ತಿದೆ. ಇದೀಗ ಪ್ರೊಮೊ ಕೂಡ ಹೊರ ಬಿದ್ದಿದೆ.

ಸಲ್ಮಾನ್‌ ಖಾನ್‌ ನಟ 201 ರಿಂದ ಬಿಗ್ ಬಾಸ್ ಹೋಸ್ಟ್ ಮಾಡುತ್ತಿದ್ದರು. ಈ ನಡುವೆ, ಫರಾ ಖಾನ್ 2015ರಲ್ಲಿ ಬಿಗ್ ಬಾಸ್ʻ ಹಲ್ಲಾ ಬೋಲ್ʼ ಎಂಬ ಶೀರ್ಷಿಕೆಯ ಸ್ಪಿನ್‌ಆಫ್ ಆವೃತ್ತಿಯನ್ನು ಹೋಸ್ಟ್ ಮಾಡಿದರು. ಕರಣ್ ಜೋಹರ್ 2021ರಲ್ಲಿ ಬಿಗ್ ಬಾಸ್ OTT ಸೀಸನ್‌ ಒಂದನ್ನು ಹೋಸ್ಟ್ ಮಾಡಿದರು. ಇದೀಗ ಈ ಬಾರಿ ‘ಬಿಗ್​ ಬಾಸ್​ ಒಟಿಟಿ 2ನೇ ಸೀಸನ್​’ ನಿರೂಪಕರ ಸ್ಥಾನಕ್ಕೆ ಕರಣ್​ ಜೋಹರ್​ ಬದಲಿಗೆ ಸಲ್ಮಾನ್​ ಖಾನ್​ (Salman Khan) ಬಂದಿದ್ದಾರೆ. ಬಿಗ್ ಬಾಸ್ ಅತ್ಯಂತ ಯಶಸ್ವಿ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ ಹಾಗೂ ನಂಬರ್ ಒನ್ ಸ್ಥಾನವನ್ನು ಪಡೆದಿದೆ.

ಈ ಸೀಸನ್‌ನಲ್ಲಿ ಯಾರೆಲ್ಲಾ ಭಾಗವಹಿಸಬಹುದು ಎಂಬ ಹಲವು ಹೆಸರುಗಳು ಹರಿದಾಡುತ್ತಿದ್ದು, ಮುಂಬರುವ ಸೀಸನ್‌ನಲ್ಲಿ ನಟ ತನುಜ್ ಕೇವಲರಮಣಿ ಕೂಡ ಕಾಣಿಸಿಕೊಳ್ಳಬಹುದು ಎಂಬ ವದಂತಿಗಳು ಹಬ್ಬಿವೆ. ಬಿಗ್ ಬಾಸ್ OTT ಸೀಸನ್ 2ಗಾಗಿ ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ಅವರನ್ನು ಸಂಪರ್ಕಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇ-ಟೈಮ್ಸ್ ಪ್ರಕಾರ, ʻʻರಾಜೀವ್ ಸೇನ್‌ ಶೋನಲ್ಲಿ ಭಾಗವಹಿಸಲು ತುಂಬ ಉತ್ಸುಕರಾಗಿದ್ದಾರೆʼʼಎಂದು ವರದಿ ಮಾಡಿತ್ತು.

ಇದನ್ನೂ ಓದಿ : Bigg Boss OTT : ಬರಲಿದೆ ಹಿಂದಿ ಬಿಗ್‌ ಬಾಸ್‌ ಒಟಿಟಿ 2 ನೇ ಸೀಸನ್‌: ನಿರೂಪಕರು ಯಾರು?

ಹಿಂದಿ ಬಿಗ್‌ ಬಾಸ್‌ ಒಟಿಟಿ 2ನೇ ಸೀಸನ್‌ ಪ್ರೊಮೊ

ಉರ್ಫಿ ಜಾವೇದ್, ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ಜೀಶನ್ ಖಾನ್, ನಿಶಾಂತ್ ಭಟ್ ಮತ್ತು ನೇಹಾ ಭಾಸಿನ್ ಬಿಗ್‌ ಬಾಸ್‌ ಒಟಿಟಿಯ ಮೊದಲ ಸೀಸನ್‌ನಲ್ಲಿ ಸ್ಪರ್ಧಿಗಳಾಗಿದ್ದರು. ಎಂಸಿ ಸ್ಟಾನ್ ಬಿಗ್ ಬಾಸ್ 16ರ ಅಂತಿಮ ವಿಜೇತರಾಗಿದ್ದರು. ಶಿವ ಠಾಕರೆ ಮತ್ತು ಪ್ರಿಯಾಂಕಾ ಚಾಹರ್ ಚೌಧರಿ ರನ್ನರ್ಸ್ ಅಪ್ ಆಗಿ ಬಂದರು. ಟಿವಿಗೆ ಹೋಲಿಸಿದರೆ ಒಟಿಟಿಯಲ್ಲಿ ನಿರ್ಬಂಧಗಳು ಕಡಿಮೆ. ಸೆನ್ಸಾರ್​ನ ಹಂಗಿಲ್ಲದೇ ಕೆಲವು ಟಾಸ್ಕ್​ಗಳನ್ನು ನಡೆಸಬಹುದು. ಹಾಗಾಗಿ ‘ಬಿಗ್​ ಬಾಸ್​ ಒಟಿಟಿ’ ಕಾರ್ಯಕ್ರಮ ಕಳೆದ ವರ್ಷ ಹೈಪ್​ ಪಡೆದುಕೊಂಡಿತ್ತು.

ಸಲ್ಮಾನ್ ಪ್ರಸ್ತುತ ಟೈಗರ್ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಕೊನೆಯ ಬಾರಿಗೆ ಫ್ಯಾಮಿಲಿ ಎಂಟರ್ಟೈನರ್ ಕಿಸಿ ಕಾ ಭಾಯ್ ಕಿಸಿ ಜಾನ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. .

Exit mobile version