Site icon Vistara News

Viral Video: ಸಲ್ಮಾನ್ ಖಾನ್​ರನ್ನು ಮಾತಾಡಿಸಲು ಬಂದ ವಿಕ್ಕಿ ಕೌಶಲ್​​ಗೆ ಅವಮಾನ?-ಬಾಡಿಗಾರ್ಡ್ಸ್ ಮಾಡಿದ್ದೇನು?

Salman Khan And Vicky Kaushal

#image_title

ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ (IIFA 2023) ಅಬುಧಾಬಿಯಲ್ಲಿ ನಡೆಯುತ್ತಿದೆ. ಇದರಲ್ಲಿ ಬಾಲಿವುಡ್​ ಖ್ಯಾತ ತಾರೆಯರಾದ ಅಭಿಷೇಕ್ ಬಚ್ಚನ್, ನೋರಾ ಸಿಂಗ್, ರಾಕುಲ್ ಪ್ರೀತ್ ಸಿಂಗ್ ಮತ್ತು ಇಶಾ ಗುಪ್ತಾ, ಸಲ್ಮಾನ್​ ಖಾನ್​, ವಿಕ್ಕಿ ಕೌಶಲ್​ ಸೇರಿ ಬಾಲಿವುಡ್​ನ ಹಲವು ಗಣ್ಯರು ಪಾಲ್ಗೊಂಡಿದ್ದಾರೆ. ಅದರಲ್ಲೀಗ ನಟ ಸಲ್ಮಾನ್​ ಖಾನ್​​ ಮತ್ತು ವಿಕ್ಕಿ ಕೌಶಲ್​ ಸುದ್ದಿಯಲ್ಲಿದ್ದಾರೆ. ಅಬುಧಾಬಿಯ ಯಾಸ್ ದ್ವೀಪದಲ್ಲಿ ನಡೆಯುತ್ತಿರುವ IIFA 2023ರಲ್ಲಿ ವಿಕ್ಕಿ ಕೌಶಲ್​ ಅವರು ಸಲ್ಮಾನ್​ ಖಾನ್​​ ಅವರನ್ನು ಮಾತನಾಡಿಸಲು ಬರುತ್ತಿದ್ದ ವೇಳೆ, ಸಲ್ಮಾನ್ ಖಾನ್ (Salman Khan)​ ಅವರ ಅಂಗರಕ್ಷಕರು (ಬಾಡಿಗಾರ್ಡ್​ಗಳು) ವಿಕ್ಕಿ ಕೌಶಲ್ (Vicky Kaushal)​​ರನ್ನು ಪಕ್ಕಕ್ಕೆ ತಳ್ಳಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ನಟ ವಿಕ್ಕಿ ಕೌಶಲ್ ಅಭಿಮಾನಿಗಳನ್ನು ನೋಯಿಸಿದೆ.

filmyselfies.official ಎಂಬ ಇನ್​ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್ ಆಗಿದೆ. ಸಲ್ಮಾನ್​ ಖಾನ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಲು ಹೋಗುತ್ತಿದ್ದರು. ಅವರ ಅಕ್ಕಪಕ್ಕ ಭದ್ರತಾ ಸಿಬ್ಬಂದಿ, ಇನ್ನಿತರರು ನಡೆದು ಬರುತ್ತಿದ್ದರು. ಆಗ ವಿಕ್ಕಿ ಕೌಶಲ್​ ಎದುರಿನಿಂದ ಬರುತ್ತಾರೆ. ಸಲ್ಮಾನ್ ಖಾನ್​ ಒಂದು ಕ್ಷಣ ನಿಂತು ವಿಕ್ಕಿ ಕೌಶಲ್ ಬಳಿ ಮಾತಾಡುತ್ತಾರೆ. ಆದರೆ ಅಷ್ಟರಲ್ಲಿ ಸಲ್ಮಾನ್​ ಖಾನ್​ ಸೆಕ್ಯೂರಿಟಿ ಸಿಬ್ಬಂದಿ ವಿಕ್ಕಿ ಕೌಶಲ್​​ರನ್ನು ಪಕ್ಕಕ್ಕೆ ತಳ್ಳುತ್ತಾರೆ. ಸಲ್ಮಾನ್​ ಖಾನ್ ಮುಂದೆ ಹೋಗುವುದನ್ನು ವಿಡಿಯೊದಲ್ಲಿ ನೋಡಬಹುದು. ವಿಡಿಯೊ ವೈರಲ್ ಆಗುತ್ತಿದ್ದಂತೆ ವಿಕ್ಕಿ ಕೌಶಲ್ ಅಭಿಮಾನಿಗಳು, ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ’ಸಲ್ಮಾನ್ ಖಾನ್ ಅಂಗರಕ್ಷಕರಿಗೆ ಗೌರವ ಕೊಟ್ಟು ಗೊತ್ತಿಲ್ಲ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ‘ವಿಕ್ಕಿ ಕೌಶಲ್​ ಅವರು ಅಷ್ಟು ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರೂ, ಸಲ್ಮಾನ್ ಖಾನ್​ ಯಾಕೆ ಅವರ ಬಳಿ ಅಷ್ಟು ಸೂಕ್ತವಾಗಿ ಮಾತನಾಡಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ವೈರಲ್ ಆಗುತ್ತಿರುವ ವಿಡಿಯೊ ವಿಕ್ಕಿ ಕೌಶಲ್​ ಅಭಿಮಾನಿಗಳಿಗೆ ನೋವುಂಟು ಮಾಡಿದೆ.

ವಿಕ್ಕಿ ಕೌಶಲ್ ಪ್ರತಿಕ್ರಿಯೆ ಏನು?

ಈ ವಿಡಿಯೊ ವೈರಲ್ ಆದ ಕೆಲವೇ ಕ್ಷಣದಲ್ಲಿ ವಿಕ್ಕಿ ಕೌಶಲ್ ಮತ್ತು ಸಲ್ಮಾನ್ ಖಾನ್​ ಪರಸ್ಪರ ಅಪ್ಪಿಕೊಂಡ ದೃಶ್ಯವೂ ವೈರಲ್ ಆಯಿತು. ಆದರೆ ಅಭಿಮಾನಿಗಳು ಸಮಾಧಾನ ಪಟ್ಟುಕೊಂಡಿಲ್ಲ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದ್ದ ಮಾಧ್ಯಮದವರೂ ವಿಕ್ಕಿ ಕೌಶಲ್​ಗೆ ಇದೇ ಪ್ರಶ್ನೆಯನ್ನು ಹಲವು ಬಾರಿ ಕೇಳಲು ಶುರು ಮಾಡಿದರು. ಆಗ ಪ್ರತಿಕ್ರಿಯೆ ನೀಡಿದ ನಟ, ‘ಈ ವಿಷಯವನ್ನು ದೊಡ್ಡದು ಮಾಡಬೇಕಿಲ್ಲ. ಮಾತಾಡುವುದು ಅನಗತ್ಯ’ ಎಂದಿದ್ದಾರೆ. ‘ಒಂದು ವಿಡಿಯೊ ನೋಡಿ ಏನೋ ಆಯಿತು ಅಂದುಕೊಳ್ಳುವುದು ಸರಿಯಲ್ಲ. ವಿಡಿಯೊದಲ್ಲಿ ಕಂಡಿದ್ದೇ ನಿಜವಾಗಿರುವುದಿಲ್ಲ’ ಎಂದೂ ತಿಳಿಸಿದ್ದಾರೆ.

Exit mobile version