ಬಾಲಿವುಡ್
Viral Video: ಸಲ್ಮಾನ್ ಖಾನ್ರನ್ನು ಮಾತಾಡಿಸಲು ಬಂದ ವಿಕ್ಕಿ ಕೌಶಲ್ಗೆ ಅವಮಾನ?-ಬಾಡಿಗಾರ್ಡ್ಸ್ ಮಾಡಿದ್ದೇನು?
filmyselfies.official ಎಂಬ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್ ಆಗಿದೆ. ಸಲ್ಮಾನ್ ಖಾನ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಲು ಹೋಗುತ್ತಿದ್ದರು. ಅವರ ಅಕ್ಕಪಕ್ಕ ಭದ್ರತಾ ಸಿಬ್ಬಂದಿ, ಇನ್ನಿತರರು ನಡೆದು ಬರುತ್ತಿದ್ದರು. ಆಗಲೇ ವಿಕ್ಕಿ ಕೌಶಲ್ ಕೂಡ ಅಲ್ಲಿಗೆ ಬಂದಿದ್ದರು.
ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ (IIFA 2023) ಅಬುಧಾಬಿಯಲ್ಲಿ ನಡೆಯುತ್ತಿದೆ. ಇದರಲ್ಲಿ ಬಾಲಿವುಡ್ ಖ್ಯಾತ ತಾರೆಯರಾದ ಅಭಿಷೇಕ್ ಬಚ್ಚನ್, ನೋರಾ ಸಿಂಗ್, ರಾಕುಲ್ ಪ್ರೀತ್ ಸಿಂಗ್ ಮತ್ತು ಇಶಾ ಗುಪ್ತಾ, ಸಲ್ಮಾನ್ ಖಾನ್, ವಿಕ್ಕಿ ಕೌಶಲ್ ಸೇರಿ ಬಾಲಿವುಡ್‌ನ ಹಲವು ಗಣ್ಯರು ಪಾಲ್ಗೊಂಡಿದ್ದಾರೆ. ಅದರಲ್ಲೀಗ ನಟ ಸಲ್ಮಾನ್ ಖಾನ್ ಮತ್ತು ವಿಕ್ಕಿ ಕೌಶಲ್ ಸುದ್ದಿಯಲ್ಲಿದ್ದಾರೆ. ಅಬುಧಾಬಿಯ ಯಾಸ್ ದ್ವೀಪದಲ್ಲಿ ನಡೆಯುತ್ತಿರುವ IIFA 2023ರಲ್ಲಿ ವಿಕ್ಕಿ ಕೌಶಲ್ ಅವರು ಸಲ್ಮಾನ್ ಖಾನ್ ಅವರನ್ನು ಮಾತನಾಡಿಸಲು ಬರುತ್ತಿದ್ದ ವೇಳೆ, ಸಲ್ಮಾನ್ ಖಾನ್ (Salman Khan) ಅವರ ಅಂಗರಕ್ಷಕರು (ಬಾಡಿಗಾರ್ಡ್ಗಳು) ವಿಕ್ಕಿ ಕೌಶಲ್ (Vicky Kaushal)ರನ್ನು ಪಕ್ಕಕ್ಕೆ ತಳ್ಳಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ನಟ ವಿಕ್ಕಿ ಕೌಶಲ್ ಅಭಿಮಾನಿಗಳನ್ನು ನೋಯಿಸಿದೆ.
filmyselfies.official ಎಂಬ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್ ಆಗಿದೆ. ಸಲ್ಮಾನ್ ಖಾನ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಲು ಹೋಗುತ್ತಿದ್ದರು. ಅವರ ಅಕ್ಕಪಕ್ಕ ಭದ್ರತಾ ಸಿಬ್ಬಂದಿ, ಇನ್ನಿತರರು ನಡೆದು ಬರುತ್ತಿದ್ದರು. ಆಗ ವಿಕ್ಕಿ ಕೌಶಲ್ ಎದುರಿನಿಂದ ಬರುತ್ತಾರೆ. ಸಲ್ಮಾನ್ ಖಾನ್ ಒಂದು ಕ್ಷಣ ನಿಂತು ವಿಕ್ಕಿ ಕೌಶಲ್ ಬಳಿ ಮಾತಾಡುತ್ತಾರೆ. ಆದರೆ ಅಷ್ಟರಲ್ಲಿ ಸಲ್ಮಾನ್ ಖಾನ್ ಸೆಕ್ಯೂರಿಟಿ ಸಿಬ್ಬಂದಿ ವಿಕ್ಕಿ ಕೌಶಲ್ರನ್ನು ಪಕ್ಕಕ್ಕೆ ತಳ್ಳುತ್ತಾರೆ. ಸಲ್ಮಾನ್ ಖಾನ್ ಮುಂದೆ ಹೋಗುವುದನ್ನು ವಿಡಿಯೊದಲ್ಲಿ ನೋಡಬಹುದು. ವಿಡಿಯೊ ವೈರಲ್ ಆಗುತ್ತಿದ್ದಂತೆ ವಿಕ್ಕಿ ಕೌಶಲ್ ಅಭಿಮಾನಿಗಳು, ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ’ಸಲ್ಮಾನ್ ಖಾನ್ ಅಂಗರಕ್ಷಕರಿಗೆ ಗೌರವ ಕೊಟ್ಟು ಗೊತ್ತಿಲ್ಲ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ‘ವಿಕ್ಕಿ ಕೌಶಲ್ ಅವರು ಅಷ್ಟು ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರೂ, ಸಲ್ಮಾನ್ ಖಾನ್ ಯಾಕೆ ಅವರ ಬಳಿ ಅಷ್ಟು ಸೂಕ್ತವಾಗಿ ಮಾತನಾಡಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ವೈರಲ್ ಆಗುತ್ತಿರುವ ವಿಡಿಯೊ ವಿಕ್ಕಿ ಕೌಶಲ್ ಅಭಿಮಾನಿಗಳಿಗೆ ನೋವುಂಟು ಮಾಡಿದೆ.
ವಿಕ್ಕಿ ಕೌಶಲ್ ಪ್ರತಿಕ್ರಿಯೆ ಏನು?
ಈ ವಿಡಿಯೊ ವೈರಲ್ ಆದ ಕೆಲವೇ ಕ್ಷಣದಲ್ಲಿ ವಿಕ್ಕಿ ಕೌಶಲ್ ಮತ್ತು ಸಲ್ಮಾನ್ ಖಾನ್ ಪರಸ್ಪರ ಅಪ್ಪಿಕೊಂಡ ದೃಶ್ಯವೂ ವೈರಲ್ ಆಯಿತು. ಆದರೆ ಅಭಿಮಾನಿಗಳು ಸಮಾಧಾನ ಪಟ್ಟುಕೊಂಡಿಲ್ಲ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದ್ದ ಮಾಧ್ಯಮದವರೂ ವಿಕ್ಕಿ ಕೌಶಲ್ಗೆ ಇದೇ ಪ್ರಶ್ನೆಯನ್ನು ಹಲವು ಬಾರಿ ಕೇಳಲು ಶುರು ಮಾಡಿದರು. ಆಗ ಪ್ರತಿಕ್ರಿಯೆ ನೀಡಿದ ನಟ, ‘ಈ ವಿಷಯವನ್ನು ದೊಡ್ಡದು ಮಾಡಬೇಕಿಲ್ಲ. ಮಾತಾಡುವುದು ಅನಗತ್ಯ’ ಎಂದಿದ್ದಾರೆ. ‘ಒಂದು ವಿಡಿಯೊ ನೋಡಿ ಏನೋ ಆಯಿತು ಅಂದುಕೊಳ್ಳುವುದು ಸರಿಯಲ್ಲ. ವಿಡಿಯೊದಲ್ಲಿ ಕಂಡಿದ್ದೇ ನಿಜವಾಗಿರುವುದಿಲ್ಲ’ ಎಂದೂ ತಿಳಿಸಿದ್ದಾರೆ.
South Cinema
IIFA 2023 Winners Full List: ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ; ವಿಜೇತರ ಪಟ್ಟಿ ಇಲ್ಲಿದೆ!
IIFA 2023 Winners Full List: ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿ, ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.ಆಲಿಯಾ ಸಮಾರಂಭದಲ್ಲಿ ಗೈರಾದ ಕಾರಣ ನಿರ್ಮಾಪಕ ಜಯಂತಿಲಾಲ್ ಗಡಾ ಪ್ರಶಸ್ತಿಯನ್ನು ಸ್ವೀಕರಿಸಿದರು.
ಬೆಂಗಳೂರು: ಅಬುಧಾಬಿಯಲ್ಲಿ ಮೇ 27ರಂದು ನಡೆದ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA 2023)ರಲ್ಲಿ (IIFA 2023 Winners Full List) ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಸೈಫ್ ಅಲಿ ಖಾನ್ ನಟಿಸಿದ ವಿಕ್ರಮ್ ವೇದಾದಲ್ಲಿ ಅವರ ಸಾಹಸಮಯ ಅಭಿನಯಕ್ಕಾಗಿ ಟ್ರೋಫಿಯನ್ನು ಪಡೆದರು. ಅಷ್ಟೇ ಅಲ್ಲದೇ ʻಗಂಗೂಬಾಯಿ ಕಥಿಯಾವಾಡಿʼಗಾಗಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಲಿಯಾ ಸಮಾರಂಭದಲ್ಲಿ ಗೈರಾದ ಕಾರಣ ನಿರ್ಮಾಪಕ ಜಯಂತಿಲಾಲ್ ಗಡಾ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಬಾರಿ ʻಗಂಗೂಬಾಯಿ ಕಥಿಯಾವಾಡಿ ಸಿನಿಮಾಗೆ ಹಲವು ಪ್ರಶಸ್ತಿಗಳು ಸಂದಿವೆ.
ಹಿರಿಯ ನಟ ಅನಿಲ್ ಕಪೂರ್ ಅವರು IIFA 2023ರಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದರು. ʻಜಗ್‌ಜಗ್ ಜೀಯೋದಲ್ಲಿʼನ ಅವರ ಪಾತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸಿದರು.
ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಕಮಲ್ ಹಾಸನ್‌ಗೆ ಪ್ರಶಸ್ತಿ
ಹಿರಿಯ ನಟ ಕಮಲ್ ಹಾಸನ್ ಅವರು ಐಐಎಫ್‌ಎ 2023ರಲ್ಲಿ (IIFA 2023) ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿಯನ್ನು ನೀಡಿದಾಗ ಭಾರೀ ಕರತಾಡನದ ಪಡೆದರು. ಗಾಯಕ ಮತ್ತು ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರು ಕಮಲ್ ಹಾಸನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಮಲ್ ಹಾಸನ್ ಟ್ರೋಫಿ ಸ್ವೀಕರಿಸಿದ ತಕ್ಷಣ, ಸಲ್ಮಾನ್ ಖಾನ್ ಸೇರಿದಂತೆ ಎಲ್ಲರೂ ತಮ್ಮ ಸ್ಥಾನದಿಂದ ಎದ್ದು ನಿಂತು ನಟನನ್ನು ಶ್ಲಾಘಿಸಿದರು.
ವಿಕ್ರಮ್ ವೇದಾ ತಮಿಳು ಚಿತ್ರದ ರಿಮೇಕ್ ಆಗಿದೆ. ತಮಿಳಿನಲ್ಲಿ ಆರ್ ಮಾಧವನ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ ಹೃತಿಕ್ ಹಾಗೂ ಸೈಫ್ ನಟಿಸಿದ್ದರು.
ಇದನ್ನೂ ಓದಿ: Aahana Kumra: ಐಫಾ ಕಾರ್ಯಕ್ರಮದಲ್ಲಿ ನಟಿ ಅಹಾನಾ ಕುಮ್ರಾಳ ಡ್ರೆಸ್ ಜಾರುವುದರಲ್ಲಿತ್ತು, ಆಗ? ವಿಡಿಯೊ ವೈರಲ್
CRYING 😭😭😭😭😭 FINALLY #HrithikRoshan𓃵 #IIFA2023 #IIFA https://t.co/DhJrpvwtZK
— ✨️ (@ADushtKanya) May 27, 2023
ಬ್ರಹ್ಮಾಸ್ತ್ರ ಮತ್ತು ಗಂಗೂಬಾಯಿ ಕಾಠಿಯಾವಾಡಿಗೆ ದೊಡ್ಡ ಗೆಲುವು
ಬಾಲಿವುಡ್ ಫ್ಯಾಂಟಸಿ ಚಿತ್ರ ಬ್ರಹ್ಮಾಸ್ತ್ರ: ಭಾಗ ಒಂದು – ಶಿವ, ಮತ್ತು ಜೀವನಚರಿತ್ರೆ ಗಂಗೂಬಾಯಿ ಕಾಠಿಯಾವಾಡಿ ಈ ವರ್ಷದ IIFAನಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಶ್ರೇಯಾ ಘೋಷಾಲ್ ಮತ್ತು ಅರಿಜಿತ್ ಸಿಂಗ್ ಅತ್ಯುತ್ತಮ ಹಿನ್ನೆಲೆ ಗಾಯಕಿ, ಗಾಯಕಿ ವಿಭಾಗ, ಹಾಗೆಯೇ ಮೌನಿ ರಾಯ್ ಅತ್ಯುತ್ತಮ ಪೋಷಕ ನಟಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ದಿವಂಗತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಮಗ, ಬಾಬಿಲ್ ಖಾನ್, ʻಕಾಲಾʼ ಚಿತ್ರಕ್ಕಾಗಿ ಬೆಸ್ಟ್ ಡೆಬ್ಯೂಟ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಧೋಕಾ ಅರೌಂಡ್ ದಿ ಕಾರ್ನರ್‌ಗಾಗಿ ಖುಶಾಲಿ ಕುಮಾರ್ ಬೆಸ್ ಡೆಬ್ಯೂಟ್ ಫಿಮೇಲ್ ಅವಾರ್ಡ್ ಪಡೆದುಕೊಂಡರು.
ಗಂಗೂಬಾಯಿ ಕಾಠಿಯಾವಾ ಡಿಸಿನಿಮಾದ ತಾಂತ್ರಿಕ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಛಾಯಾಗ್ರಹಣ, ಚಿತ್ರಕಥೆ ಮತ್ತು ಸಂಭಾಷಣೆಗಾಗಿ ಟ್ರೋಫಿಗಳನ್ನು ಗೆದ್ದುಕೊಂಡಿತು. ಈ ಚಿತ್ರದಲ್ಲಿ ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದರು.
ಇದನ್ನೂ ಓದಿ: Pavan Wadeyar: ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ನಿರ್ಮಾಪಕ ಪವನ್ ಒಡೆಯರ್‌ಗೆ ದುಬೈನಲ್ಲಿ ಸನ್ಮಾನ
Here are the highlights of the glitz, glamour, and golden moments of your favourite celebrities lifting the IIFA trophy for their exceptional achievements in Bollywood.
— IIFA (@IIFA) May 27, 2023
Read more: https://t.co/Aj81Wnua0L pic.twitter.com/YHkyZfx3cc
ಪ್ರಶಸ್ತಿಗಳ ವಿವರ ಇಲ್ಲಿದೆ!
- ಅತ್ಯುತ್ತಮ ಚಿತ್ರ: ದೃಶ್ಯಂ 2
- ಅತ್ಯುತ್ತಮ ನಿರ್ದೇಶಕ: ಆರ್ ಮಾಧವನ್ ರಾಕೆಟ್ರಿ: ದಿ ನಂಬಿ ಎಫೆಕ್ಟ್
- ಅತ್ಯುತ್ತಮ ನಟಿ : ಗಂಗೂಬಾಯಿ ಕಾಠಿಯಾವಾಡಿಗಾಗಿ ಆಲಿಯಾ ಭಟ್
- ಅತ್ಯುತ್ತಮ ನಟ : ವಿಕ್ರಮ್ ವೇದಕ್ಕಾಗಿ ಹೃತಿಕ್ ರೋಷನ್
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಬ್ರಹ್ಮಾಸ್ತ್ರ ಸಿನಿಮಾದ ಮೌನಿ ರಾಯ್: ಭಾಗ ಒಂದು – ಶಿವ
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ : ಜಗ್ ಜಗ್ ಜೀಯೋಗಾಗಿ ಅನಿಲ್ ಕಪೂರ್
- ಫ್ಯಾಷನ್ ವಿಭಾಗ : ಮನೀಶ್ ಮಲ್ಹೋತ್ರಾ
- ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆ: ಕಮಲ್ ಹಾಸನ್
- ಅತ್ಯುತ್ತಮ ಅಡಾಪ್ಟೆಡ್ ಸ್ಟೋರಿ : ಆಮಿಲ್ ಕೀಯಾನ್ ಖಾನ್ ಮತ್ತು ಅಭಿಷೇಕ್ ಪಾಠಕ್ ದೃಶ್ಯಂ 2
- ಅತ್ಯುತ್ತಮ ಮೂಲ ಕಥೆ: ಡಾರ್ಲಿಂಗ್ಸ್‌ಗಾಗಿ ಪರ್ವೀಜ್ ಶೇಖ್ ಮತ್ತು ಜಸ್ಮೀತ್ ರೀನ್
- ಪ್ರಾದೇಶಿಕ ಸಿನಿಮಾದಲ್ಲಿ ಅತ್ಯುತ್ತಮ ಸಾಧನೆ: ರಿತೇಶ್ ದೇಶಮುಖ್ ನಿರ್ದೇಶನದ ಮರಾಠಿ ಚಲನಚಿತ್ರ ವೇದ್
- ಬೆಸ್ಟ್ ಡೆಬ್ಯೂಟ್ ಅವಾರ್ಡ್ (ಪುರುಷರ ವಿಭಾಗ): ಗಂಗೂಬಾಯಿ ಕಾಠಿಯಾವಾಡಿಗಾಗಿ ಶಾಂತನು ಮಹೇಶ್ವರಿ ಮತ್ತು ಕ್ಲಾಗಾಗಿ ಬಾಬಿಲ್ ಖಾನ್
- ಬೆಸ್ಟ್ ಡೆಬ್ಯೂಟ್ ಅವಾರ್ಡ್ (ಮಹಿಳೆಯ ವಿಭಾಗ): ಧೋಕಾ ಅರೌಂಡ್ ದಿ ಕಾರ್ನರ್‌ಗಾಗಿ ಖುಶಾಲಿ ಕುಮಾರ್
- ಅತ್ಯುತ್ತಮ ಹಿನ್ನೆಲೆ ಗಾಯಕಿ : ಬ್ರಹ್ಮಾಸ್ತ್ರ, ಶ್ರೇಯಾ ಘೋಷಾಲ್
- ಅತ್ಯುತ್ತಮ ಹಿನ್ನೆಲೆ ಗಾಯಕ: ಬ್ರಹ್ಮಾಸ್ತ್ರದ ಕೇಸರಿಯಾ ಹಾಡಿಗೆ ಅರಿಜಿತ್ ಸಿಂಗ್
- ಅತ್ಯುತ್ತಮ ಸಂಗೀತ ನಿರ್ದೇಶನ: ಬ್ರಹ್ಮಾಸ್ತ್ರಕ್ಕಾಗಿ ಪ್ರೀತಮ್
- ಅತ್ಯುತ್ತಮ ಗೀತರಚನೆಕಾರ: ಅಮಿತಾಭ್ ಭಟ್ಟಾಚಾರ್ಯ ಬ್ರಹ್ಮಾಸ್ತ್ರದ ಕೇಸರಿಯಾ
- ಅತ್ಯುತ್ತಮ ಛಾಯಾಗ್ರಹಣ: ಗಂಗೂಬಾಯಿ ಕಾಠಿಯಾವಾಡಿ
- ಅತ್ಯುತ್ತಮ ಚಿತ್ರಕಥೆ: ಗಂಗೂಬಾಯಿ ಕಾಠಿಯಾವಾಡಿ
- ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಾಠಿಯಾವಾಡಿ
- ಶೀರ್ಷಿಕೆ ಗೀತೆಗಾಗಿ ಅತ್ಯುತ್ತಮ ನೃತ್ಯ ಸಂಯೋಜನೆ: ಭೂಲ್ ಭುಲೈಯಾ 2
- ಅತ್ಯುತ್ತಮ ಧ್ವನಿ ವಿನ್ಯಾಸ: ಭೂಲ್ ಭುಲೈಯಾ 2
- ಅತ್ಯುತ್ತಮ ಸಂಕಲನ: ದೃಶ್ಯಂ 2
- ಅತ್ಯುತ್ತಮ ಹಿನ್ನೆಲೆ ಸಂಗೀತ: ವಿಕ್ರಮ್ ವೇದಾ
- ಸೌಂಡ್ ಮಿಕ್ಸಿಂಗ್: ಮೋನಿಕಾ ಓ ಮೈ ಡಾರ್ಲಿಂಗ್
ಬಾಲಿವುಡ್
Aahana Kumra: ಐಫಾ ಕಾರ್ಯಕ್ರಮದಲ್ಲಿ ನಟಿ ಅಹಾನಾ ಕುಮ್ರಾಳ ಡ್ರೆಸ್ ಜಾರುವುದರಲ್ಲಿತ್ತು, ಆಗ? ವಿಡಿಯೊ ವೈರಲ್
ನಟಿ ಅಹಾನಾ ಕುಮ್ರಾ (Aahana Kumra) ಅವರು ದುಬೈನಲ್ಲಿ ಐಫಾ ಕಾರ್ಯಕ್ರಮದ ಗ್ರೀನ್ ಕಾರ್ಪೆಟ್‌ನಲ್ಲಿ ಭಾಗವಹಿಸಿದ್ದು, ಅಲ್ಲಿ ಅವರು ತೊಟ್ಟ ಉಡುಗೆಯಿಂದ ಇರಿಸುಮುರಿಸಾಗಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ದುಬೈ: ಬಾಲಿವುಡ್‌ನ ಹಲವು ಗಣ್ಯರು ಸದ್ಯ ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ನಡೆಯುತ್ತಿರುವ ಐಫಾ 2023 (IIFA awards 2023) ಕಾರ್ಯಕ್ರಮದಲ್ಲಿದ್ದಾರೆ. ಅದರಂತೆ ನಟಿ ಅಹಾನಾ ಕುಮ್ರಾ (Aahana Kumra) ಕೂಡ ಇದೇ ಕಾರ್ಯಕ್ರಮದಲ್ಲಿದ್ದಾರೆ. ಈ ವೇಳೆ ನಟಿ ತೊಟ್ಟ ಉಡುಗೆ ಅವರಿಗೆ ಸರಿಯಾಗದೆ ಜಾರುತ್ತಿದ್ದು, ನಟಿ ಅದನ್ನು ಜಾರದಂತೆ ಹಲವು ಬಾರಿ ಹಿಡಿದುಕೊಂಡಿದ್ದು ಕಂಡುಬಂದಿದೆ.
ಹೌದು. ಐಫಾ ಕಾರ್ಯಕ್ರಮದ ಗ್ರೀನ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಅಹಾನಾ ಭಾಗಿಯಾಗಿದ್ದರು. ಅದರಲ್ಲಿ ಅವರು ಆಫ್ ಶೋಲ್ಡರ್ ಇರುವ ಕಪ್ಪು ಬಣ್ಣದ ಗೌನ್ ಅನ್ನು ತೊಟ್ಟಿದ್ದರು. ಅವರು ಮಾಧ್ಯಮದವರೆದುರು ಕ್ಯಾಮರಾಗಳಿಗೆ ಫೋಸ್ ಕೊಡುವಾಗ ಹಲವು ಬಾರಿ ಡ್ರೆಸ್ ಜಾರಿದೆ. ಹಾಗಾಗಿ ನಟಿ ಅದನ್ನು ಎಳೆದುಕೊಂಡು ಸರಿ ಮಾಡಿಕೊಂಡು ಫೋಸ್ ಕೊಟ್ಟಿದ್ದಾರೆ. ಈ ದೃಶ್ಯಗಳಿರುವ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: Aahana s Kumra | ಸ್ಟೈಲಿಶ್ ಪರ್ಪಲ್ ಡ್ರೆಸ್‌ನಲ್ಲಿ ಮಿಂಚಿದ ಅಹಾನಾ ಕುಮ್ರಾ
ಅಂದ ಹಾಗೆ ನಟಿ ಕಳೆದ ವಾರ ಕಾರ್ಯಕ್ರಮದವೊಂದರಲ್ಲಿ ಭಾಗಿಯಾಗಿದ್ದಾ ಅಭಿಮಾನಿಯೊಬ್ಬರಿಗೆ ಸಿಟ್ಟಿನಿಂದ ಬೈದಿದ್ದರು. ನಟಿ ಜತೆ ಫೋಟೋ ತೆಗೆಸಿಕೊಳ್ಳಲೆಂದು ಬಂದ ಅಭಿಮಾನಿಯೊಬ್ಬರು ಆಕೆಯ ಸೊಂಟಕ್ಕೆ ಕೈ ಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ನಟಿ, “ನನ್ನನ್ನು ಮುಟ್ಟಬೇಡಿ” ಎಂದು ಜೋರಾಗಿಯೇ ಹೇಳಿದ್ದರು. ಆ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿತ್ತು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಆಕೆ, “ನಾವು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಓಪನ್ ಆಗಿ ಇರುತ್ತೇವೆ ಎನ್ನುವ ಕಾರಣಕ್ಕೆ ನಮ್ಮೊಂದಿಗೆ ಏನು ಬೇಕಾದರೂ ಮಾಡಬಹುದು ಎಂದು ಕೆಲವರು ಅಂದುಕೊಂಡುಬಿಡುತ್ತಾರೆ. ಆದರೆ ಎಲ್ಲದಕ್ಕೂ ಗಡಿ ಇದ್ದೇ ಇರುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ನಮ್ಮ ಸುರಕ್ಷತೆ ಬಹುಮುಖ್ಯ. ಅದಕ್ಕಾಗಿ ಬೌನ್ಸರ್‌ಗಳನ್ನು ನೇಮಿಸಬೇಕು” ಎಂದು ಹೇಳಿದ್ದರು.
South Cinema
Ashish Vidyarthi: ಯಾವುದೇ ವಯಸ್ಸಲ್ಲಾದರೂ ಸಂತೋಷವಾಗಿರಬಹುದು; ಮದುವೆ ಬಗ್ಗೆ ಆಶಿಶ್ ವಿದ್ಯಾರ್ಥಿ ಹೇಳಿದ್ದೇನು?
Ashish Vidyarthi: ʻʻಪ್ರತಿಯೊಬ್ಬರು ಯಾವುದೇ ವಯಸ್ಸಿನಲ್ಲಾದರೂ ಸಂತೋಷವಾಗಿರಬಹುದು. ವಯಸ್ಸು ಮುಖ್ಯವಲ್ಲ. ಪ್ರತಿಯೊಬ್ಬರ ಜೀವನದ ಆಯ್ಕೆಗಳನ್ನು ನಾವು ಗೌರವಿಸಬೇಕುʼʼ ಎಂದರು.
ಮುಂಬೈ: ಹಿಂದಿ ಚಿತ್ರರಂಗದಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದ ಜನಪ್ರಿಯ ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಅವರು ತಮ್ಮ 60 ನೇ ವಯಸ್ಸಿನಲ್ಲಿ ಅಸ್ಸಾಂನ ರೂಪಾಲಿ ಬರುವಾ (Rupali Barua) ಅವರನ್ನು ಮೇ 25ರಂದು ವಿವಾಹವಾದರು. ಇದೀಗ ತಮ್ಮ ಮದುವೆಯ ಬಗ್ಗೆ ನಟ ವಿಡಿಯೊ ಮೂಲಕ ಮನಬಿಚ್ಚಿ ಮಾತನಾಡಿದ್ದಾರೆ. ʻʻಪ್ರತಿಯೊಬ್ಬರು ಯಾವುದೇ ವಯಸ್ಸಿನಲ್ಲಾದರೂ ಸಂತೋಷವಾಗಿರಬಹುದು. ವಯಸ್ಸು ಮುಖ್ಯವಲ್ಲ. ಪ್ರತಿಯೊಬ್ಬರ ಜೀವನ ಆಯ್ಕೆಗಳನ್ನು ನಾವು ಗೌರವಿಸಬೇಕುʼʼ ಎಂದರು.
“ನಮ್ಮ ಪ್ರತಿಯೊಬ್ಬರ ಜೀವನವು ವಿಭಿನ್ನವಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಸವಾಲುಗಳು, ಹಿನ್ನೆಲೆಗಳು, ಶಿಕ್ಷಣ ಮತ್ತು ನಾವು ಯೋಚಿಸುವ ರೀತಿ ಇದೆ. ನಮ್ಮಲ್ಲಿ ಎಲ್ಲರಿಗೂ ಅವರದ್ದೇ ಆದ ವೃತ್ತಿಗಳಿವೆ. ನಾವೆಲ್ಲರೂ ವಿವಿಧ ದೇಶಗಳು, ಧರ್ಮಗಳು ಮತ್ತು ನಂಬಿಕೆಗಳಿಂದ ಬಂದವರು, ಆದರೆ ಒಂದು ಸಾಮಾನ್ಯ ವಿಷಯವೆಂದರೆ ನಾವೆಲ್ಲರೂ ಸಂತೋಷವಾಗಿರಲು ಬಯಸುತ್ತೇವೆʼʼಎಂದರು.
22 ವರ್ಷಗಳ ತಮ್ಮ ಹಾಗೂ ಮೊದಲ ಪತ್ನಿಯ (ರಾಜೋಶಿ ಬರುವಾ ) ದಾಂಪತ್ಯ ಜೀವನ ಕಳೆದ ಎರಡು ವರ್ಷಗಳಿಂದ ಸರಿ ಇರಲಿಲ್ಲ ಎಂದು ಹೇಳಿಕೊಂಡರು. “22 ವರ್ಷಗಳ ಹಿಂದೆ ಪಿಲೂ (ರಾಜೋಶಿ ಬರುವಾ) ಮತ್ತು ನಾನು ಭೇಟಿಯಾದೆವು. ಬಳಿಕ ಮದುವೆಯಾದೆವು. ಅಲ್ಲದೆ, ಜೀವನ ಚೆನ್ನಾಗಿಯೇ ಇತ್ತು. ಎರಡು ವರ್ಷಗಳಿಂದ ಸರಿ ಇರಲಿಲ್ಲʼʼಎಂದರು.
ʻʻಪಿಲೂ ಮತ್ತು ನಾನು ಸೌಹಾರ್ದಯುತವಾಗಿ ಒಟ್ಟಿಗೆ ನಡೆಯಲು ಸಾಧ್ಯವಾಗದಿದ್ದರೆ, ಪ್ರತ್ಯೇಕವಾಗಿ ನಡೆಯೋಣ ಎಂದು ನಿರ್ಧರಿಸಿದೆವುʼʼ ಎಂದು ಆಶಿಶ್ ಹೇಳಿದರು. “ನಾನು ಯಾರೊಂದಿಗಾದರೂ ಇರಲು ಬಯಸುತ್ತೇನೆಯೋ ಅವರೊಂದಿಗೆ ಮದುವೆಯಾಗಲು ಬಯಸುತ್ತೇನೆ ಎಂದು ನನಗೆ ದೃಢವಾದ ನಂಬಿಕೆ ಇತ್ತು. ನಾನು ರೂಪಾಲಿ ಬರುವಾ ಅವರನ್ನು ಭೇಟಿಯಾದೆ. ನಾವು ಒಂದು ವರ್ಷದ ಹಿಂದೆ ಭೇಟಿಯಾದೆವು. ಪರಸ್ಪರ ಮಾತನಾಡಿದೆವು. ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ಬದುಕಬೇಕೆಂದು ನಿರ್ಧರಿಸಿ ರೂಪಾಲಿ ಮತ್ತು ನಾನು ಮದುವೆಯಾದೆವು. ಅವಳ ವಯಸ್ಸು 50 ಮತ್ತು ನನಗೆ 57 ವರ್ಷ, 60 ಅಲ್ಲ, ಆದರೆ ವಯಸ್ಸು ಮುಖ್ಯವಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಯಾವುದೇ ವಯಸ್ಸಿನಲ್ಲಾದರೂ ಸಂತೋಷವಾಗಿರಬಹುದು ”ಎಂದು ನಟ ಹೇಳಿಕೊಂಡರು. ಪ್ರತಿಯೊಬ್ಬರ ಜೀವನ ಆಯ್ಕೆಗಳನ್ನು ನಾವು ಗೌರವಿಸಬೇಕು ಎಂದು ಹೇಳುವ ಮೂಲಕ ಆಶಿಶ್ ವಿದ್ಯಾರ್ಥಿ ಮಾತಿಗೆ ಪೂರ್ಣ ವಿರಾಮ ಇಟ್ಟರು.
ಇದನ್ನೂ ಓದಿ: Ashish Vidyarthi Marriage: ಆಶಿಶ್ ವಿದ್ಯಾರ್ಥಿ ಮರು ಮದುವೆ ಬಳಿಕ ಮೊದಲ ಪತ್ನಿಯ ಪೋಸ್ಟ್ ವೈರಲ್!
ಆಶಿಶ್ ವಿದ್ಯಾರ್ಥಿ ಪೋಸ್ಟ್
ಆಶಿಶ್ ವಿದ್ಯಾರ್ಥಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಕೋರ್ಟ್ ಮ್ಯಾರೇಜ್ ಆಗಿದ್ದಾರೆ. ಮದುವೆಯಲ್ಲಿ ಕೇರಳ ಮತ್ತು ಅಸ್ಸಾಂ ಸಂಪ್ರದಾಯಗಳನ್ನು ಅನುಸರಿಸಿದ್ದಾರೆ. ʻ ರಾಜೋಶಿ ಬರುವಾ ವೃತ್ತಿಯಲ್ಲಿ ನಟಿ. ಶಕುಂತಲಾ ಬರುವಾ ಅವರ ಮಗಳು. ಆಶಿಶ್ ಮತ್ತು ರಾಜೋಶಿ ಮದುವೆಯಾಗಿ 23 ವರ್ಷಗಳಾಗಿದ್ದು, ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನಿದ್ದಾನೆ. ಆಶಿಶ್ ವಿದ್ಯಾರ್ಥಿ ಅವರ ತಂದೆ ಮಲಯಾಳಿಯಾಗಿದ್ದು ಕೇರಳದ ಕಣ್ಣೂರಿನವರಾಗಿದ್ದರು. ಅವರ ತಾಯಿ ಬೆಂಗಾಲಿಯವರಾಗಿದ್ದು ರಾಜಸ್ಥಾನ ಮೂಲದವರು.
ಆಶಿಶ್ ಇದುವರೆಗೆ 11 ವಿವಿಧ ಭಾಷೆಗಳಲ್ಲಿ ಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿದ್ದರು. ಸರ್ದಾರ್ ವಲ್ಲಭಭಭಾಯಿ ಪಟೇಲ್ ಅವರ ಜೀವನವನ್ನು ಆಧರಿಸಿದ ಸರ್ದಾರ್‌ನಲ್ಲಿ ಆಶಿಶ್ ವಿದ್ಯಾರ್ಥಿ ವಿ ಪಿ ಮೆನನ್ ಪಾತ್ರವನ್ನು ನಿರ್ವಹಿಸಿದ್ದಾರೆ.
South Cinema
Anushka Sharma: ಕಾನ್ ಚಲನಚಿತ್ರೋತ್ಸವದಲ್ಲಿ ಮಿಂಚಿದ ಅನುಷ್ಕಾ ಶರ್ಮಾ
Anushka Sharma: 76ನೇ ಕಾನ್ ಚಲನಚಿತ್ರೋತ್ಸವ ತಾರಾ ಬಳಗದಿಂದ ಕೂಡಿದೆ. ಅನುಷ್ಕಾ ಶರ್ಮಾ ಇದೇ ಮೊದಲ ಬಾರಿಗೆ ಕಾನ್ ಉತ್ಸವದಲ್ಲಿ ಭಾಗಿಯಾಗಿದ್ದರು. ನಟಿಯ ಫೋಟೊಗಳು ಇಲ್ಲಿವೆ!
76ನೇ ಕಾನ್ ಚಲನಚಿತ್ರೋತ್ಸವದಲ್ಲಿ ನಟಿ ಅನುಷ್ಕಾ ಶರ್ಮಾ (Anushka Sharma) ಇದೇ ಮೊದಲ ಬಾರಿಗೆ ಕಾನ್ ಭಾಗಿಯಾಗಿದ್ದರು.
ಅದಿತಿ ರಾವ್ ಹೈದರಿ, ಮೃಣಾಲ್ ಠಾಕೂರ್, ಸನ್ನಿ ಲಿಯೋನ್, ಐಶ್ವರ್ಯಾ ರೈ, ಊರ್ವಶಿ ರೌಟೇಲಾ, ಸಾರಾ ಅಲಿ ಖಾನ್ ಸೇರಿದಂತೆ ಭಾರತದ ಹಲವು ಸೆಲೆಬ್ರಿಟಿಗಳು ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.
ಬೆರಗುಗೊಳಿಸುವ ಬಿಳಿ ಹೂವಿನ ಗೌನ್‌ನಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದು ಹೀಗೆ. ಈ ಫೋಟೋದಲ್ಲಿ ಅನುಷ್ಕಾ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಅನೇಕರು ಬರೆದುಕೊಂಡಿದ್ದಾರೆ.
ಅನುಷ್ಕಾ ಫೋಟೊ ಶೇರ್ ಮಾಡುತ್ತಿದ್ದಂತೆ ಪತಿ, ಕ್ರಿಕೆಟರ್ ವಿರಾಟ್ ಕೊಹ್ಲಿ ಸೇರಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಅನುಷ್ಕಾ ಶರ್ಮಾ ಅವರು ಚಕ್ ದೇ ಎಕ್ಸ್ಪ್ರೆಸ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಜೂಲನ್ ಗೋಸ್ವಾಮಿ ಪಾತ್ರವನ್ನು ಮಾಡಿದ್ದಾರೆ.
-
ಕರ್ನಾಟಕ22 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ22 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ21 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ16 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್12 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ5 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ13 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
EXPLAINER3 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?