Site icon Vistara News

Sam Bahadur: ವಿಕ್ಕಿ ಕೌಶಲ್ ʻಸ್ಯಾಮ್ ಬಹದ್ದೂರ್ʼ ಫಸ್ಟ್‌ ರಿವ್ಯೂ ಔಟ್‌!

Sam Bahadur

ಬೆಂಗಳೂರು: ಮೇಘನಾ ಗುಲ್ಜಾರ್ ನಿರ್ದೇಶನದಲ್ಲಿ ವಿಕ್ಕಿ ಕೌಶಲ್ (Vicky Kaushal) ಅಭಿನಯದ ʻಸ್ಯಾಮ್ ಬಹದ್ದೂರ್ʼ (Sam Bahadur) ನಾಳೆ (ಡಿ.1) ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದ ನಟನ ಸಹೋದರ ಸನ್ನಿ ಕೌಶಲ್ ಅವರು ತಮ್ಮ ಇನ್‌ಸ್ಟಾದಲ್ಲಿ ವಿಕ್ಕಿ ಕೌಶಲ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ. ಸ್ಯಾಮ್ ಬಹದ್ದೂರ್ ನಟನೆಯನ್ನು ‘ಇನ್‌ಕ್ರೆಡಿಬಲ್’ ಎಂದು ಕರೆದಿದ್ದಾರೆ ಸನ್ನಿ ಕೌಶಲ್.

ಸನ್ನಿ ಕೌಶಲ್ “ಎಂತಹ ಚಿತ್ರ.. ಎಂತಹ ಅದ್ಭುತ ಚಿತ್ರ ಇದು. ಮನುಷ್ಯನ ಜೀವನ, ಪ್ರೀತಿಯನ್ನು ನೀವು ಎಷ್ಟು ಸುಂದರವಾಗಿ ತೋರಿಸಿದ್ದೀರಿ ಎಂಬುದು ನಿಜಕ್ಕೂ ಗಮನಾರ್ಹವಾಗಿದೆ. 2.5 ಗಂಟೆಗಳ ಅವಧಿಯ ಈ ಸಿನಿಮಾ ಸ್ಫೂರ್ತಿ ನೀಡಿತು”ಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಅವರ ಅಭಿನಯವು “ಅದ್ಭುತ” ಎಂದು ಸನ್ನಿ ಮತ್ತಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಅವರು ತಮ್ಮ ಸಹೋದರನ ಬಗ್ಗೆ ಮಾತನಾಡುತ್ತಾ, ಈ ಚಿತ್ರದಲ್ಲಿ ವಿಕ್ಕಿ ತನ್ನನ್ನು ಮೀರಿಸಿದ್ದಾರೆ ಎಂದು ಹೇಳಿದರು. ವಿಕ್ಕಿಯ ಬಗ್ಗೆ “ತುಂಬಾ ಹೆಮ್ಮೆ ಪಡುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK SEASON 10: ಕನ್ನಡ ಬಿಗ್ ಬಾಸ್‌ಗೆ ವಿಕ್ಕಿ ಕೌಶಲ್‌ ಬಂದಿದ್ದಾರಾ?!

ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ.  ಸ್ಯಾಮ್‌ ಮಾಣೆಕ್‌ ಶಾ ಅವರು ಫೀಲ್ಡ್‌ ಮಾರ್ಷಲ್‌ ಹುದ್ದೆಗೇರಿದ ಮೊದಲ ಭಾರತೀಯ ಸೇನಾ ಅಧಿಕಾರಿ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ತಮ್ಮ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿ, ನಾಲ್ಕು ದಶಕಗಳ ಕಾಲ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಐದು ಯುದ್ಧಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ. ಸ್ಯಾಮ್‌ ಮಾಣೆಕ್‌ ಶಾ ಪಾತ್ರವನ್ನೇ ವಿಕ್ಕಿ ನಿರ್ವಹಿಸಿದ್ದಾರೆ. ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

Sam Bahadur

ಸ್ಯಾಮ್ ಮಾಣೆಕ್ ಶಾ (ಏಪ್ರಿಲ್ 3, 1914-ಜೂನ್ 27, 2008) ಅವರನ್ನು ಸ್ಯಾಮ್ ಬಹದ್ದೂರ್ (ಸ್ಯಾಮ್ ದಿ ಬ್ರೇವ್) ಎಂದೂ ಕರೆಯಲಾಗುತ್ತದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ಭಾರತೀಯ ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ ಸ್ಥಾನಕ್ಕೆ ಬಡ್ತಿ ಪಡೆದ ಮೊದಲ ಭಾರತೀಯ ಸೇನಾಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Exit mobile version