Sam Bahadur: ವಿಕ್ಕಿ ಕೌಶಲ್ ʻಸ್ಯಾಮ್ ಬಹದ್ದೂರ್ʼ ಫಸ್ಟ್‌ ರಿವ್ಯೂ ಔಟ್‌! - Vistara News

ಬಾಲಿವುಡ್

Sam Bahadur: ವಿಕ್ಕಿ ಕೌಶಲ್ ʻಸ್ಯಾಮ್ ಬಹದ್ದೂರ್ʼ ಫಸ್ಟ್‌ ರಿವ್ಯೂ ಔಟ್‌!

Sam Bahadur: ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದ ನಟನ ಸಹೋದರ ಸನ್ನಿ ಕೌಶಲ್ ಅವರು ತಮ್ಮ ಇನ್‌ಸ್ಟಾದಲ್ಲಿ ವಿಕ್ಕಿ ಕೌಶಲ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ. ಸ್ಯಾಮ್ ಬಹದ್ದೂರ್ ನಟನೆಯನ್ನು ‘ಇನ್‌ಕ್ರೆಡಿಬಲ್’ ಎಂದು ಕರೆದಿದ್ದಾರೆ ಸನ್ನಿ ಕೌಶಲ್.

VISTARANEWS.COM


on

Sam Bahadur
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮೇಘನಾ ಗುಲ್ಜಾರ್ ನಿರ್ದೇಶನದಲ್ಲಿ ವಿಕ್ಕಿ ಕೌಶಲ್ (Vicky Kaushal) ಅಭಿನಯದ ʻಸ್ಯಾಮ್ ಬಹದ್ದೂರ್ʼ (Sam Bahadur) ನಾಳೆ (ಡಿ.1) ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದ ನಟನ ಸಹೋದರ ಸನ್ನಿ ಕೌಶಲ್ ಅವರು ತಮ್ಮ ಇನ್‌ಸ್ಟಾದಲ್ಲಿ ವಿಕ್ಕಿ ಕೌಶಲ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ. ಸ್ಯಾಮ್ ಬಹದ್ದೂರ್ ನಟನೆಯನ್ನು ‘ಇನ್‌ಕ್ರೆಡಿಬಲ್’ ಎಂದು ಕರೆದಿದ್ದಾರೆ ಸನ್ನಿ ಕೌಶಲ್.

ಸನ್ನಿ ಕೌಶಲ್ “ಎಂತಹ ಚಿತ್ರ.. ಎಂತಹ ಅದ್ಭುತ ಚಿತ್ರ ಇದು. ಮನುಷ್ಯನ ಜೀವನ, ಪ್ರೀತಿಯನ್ನು ನೀವು ಎಷ್ಟು ಸುಂದರವಾಗಿ ತೋರಿಸಿದ್ದೀರಿ ಎಂಬುದು ನಿಜಕ್ಕೂ ಗಮನಾರ್ಹವಾಗಿದೆ. 2.5 ಗಂಟೆಗಳ ಅವಧಿಯ ಈ ಸಿನಿಮಾ ಸ್ಫೂರ್ತಿ ನೀಡಿತು”ಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಅವರ ಅಭಿನಯವು “ಅದ್ಭುತ” ಎಂದು ಸನ್ನಿ ಮತ್ತಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಅವರು ತಮ್ಮ ಸಹೋದರನ ಬಗ್ಗೆ ಮಾತನಾಡುತ್ತಾ, ಈ ಚಿತ್ರದಲ್ಲಿ ವಿಕ್ಕಿ ತನ್ನನ್ನು ಮೀರಿಸಿದ್ದಾರೆ ಎಂದು ಹೇಳಿದರು. ವಿಕ್ಕಿಯ ಬಗ್ಗೆ “ತುಂಬಾ ಹೆಮ್ಮೆ ಪಡುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK SEASON 10: ಕನ್ನಡ ಬಿಗ್ ಬಾಸ್‌ಗೆ ವಿಕ್ಕಿ ಕೌಶಲ್‌ ಬಂದಿದ್ದಾರಾ?!

ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ.  ಸ್ಯಾಮ್‌ ಮಾಣೆಕ್‌ ಶಾ ಅವರು ಫೀಲ್ಡ್‌ ಮಾರ್ಷಲ್‌ ಹುದ್ದೆಗೇರಿದ ಮೊದಲ ಭಾರತೀಯ ಸೇನಾ ಅಧಿಕಾರಿ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ತಮ್ಮ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿ, ನಾಲ್ಕು ದಶಕಗಳ ಕಾಲ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಐದು ಯುದ್ಧಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ. ಸ್ಯಾಮ್‌ ಮಾಣೆಕ್‌ ಶಾ ಪಾತ್ರವನ್ನೇ ವಿಕ್ಕಿ ನಿರ್ವಹಿಸಿದ್ದಾರೆ. ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

Sam Bahadur

ಸ್ಯಾಮ್ ಮಾಣೆಕ್ ಶಾ (ಏಪ್ರಿಲ್ 3, 1914-ಜೂನ್ 27, 2008) ಅವರನ್ನು ಸ್ಯಾಮ್ ಬಹದ್ದೂರ್ (ಸ್ಯಾಮ್ ದಿ ಬ್ರೇವ್) ಎಂದೂ ಕರೆಯಲಾಗುತ್ತದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ಭಾರತೀಯ ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ ಸ್ಥಾನಕ್ಕೆ ಬಡ್ತಿ ಪಡೆದ ಮೊದಲ ಭಾರತೀಯ ಸೇನಾಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬಾಲಿವುಡ್

The Sabarmati Report: ಗೋದ್ರಾ ಹತ್ಯಾಕಾಂಡ ಆಧರಿಸಿದ ʻದಿ ಸಬರಮತಿ ರಿಪೋರ್ಟ್‌ʼ ಟೀಸರ್‌ ಔಟ್‌!

ʻಗೋಧ್ರಾ ಹತ್ಯಾಕಾಂಡʼ ಕುರಿತ ಸಿನಿಮಾ ತಯಾರಾಗಿದೆ. ಈ ಚಿತ್ರಕ್ಕೆ ʻದಿ ಸಬರಮತಿ ರಿಪೋರ್ಟ್‌ʼʼಎಂದು (The Sabarmati Report) ಟೈಟಲ್‌ ಇಡಲಾಗಿದೆ. ಇದರ ಟೀಸರ್‌ ಔಟ್‌ ಆಗಿದ್ದು ಭಾರಿ ಸದ್ದು ಮಾಡುತ್ತಿದೆ.

VISTARANEWS.COM


on

Vikrant Massey The Sabarmati Report on 2002 Godhra incident
Koo

ಬೆಂಗಳೂರು: 2002ರ ಫೆಬ್ರವರಿ 27ರಂದು ಗುಜರಾತ್‌ನ ಗೋದ್ರಾದಲ್ಲಿ `ಸಬರಮತಿ ರೈಲಿಗೆ’ ಬೆಂಕಿ ಹಚ್ಚಿದ್ದ ವಿಧ್ವಂಸಕ ಕೃತ್ಯದಲ್ಲಿ 59 ಮಂದಿ ಮೃತಪಟ್ಟಿದ್ದರು. ಅದರ ಮಾರನೇ ದಿನ ಅಂದರೆ ಫೆ.28ರಂದು ರಾಜ್ಯದ ಹಲವೆಡೆ ಗಲಭೆಗಳು (Post Godhra Case) ನಡೆದಿದ್ದವು. ಇದೀಗ ʻಗೋದ್ರಾ ಹತ್ಯಾಕಾಂಡʼ ಕುರಿತ ಸಿನಿಮಾ ತಯಾರಾಗಿದೆ. ಈ ಚಿತ್ರಕ್ಕೆ ʻದಿ ಸಬರಮತಿ ರಿಪೋರ್ಟ್‌ʼʼಎಂದು (The Sabarmati Report) ಟೈಟಲ್‌ ಇಡಲಾಗಿದೆ. ಇದರ ಟೀಸರ್‌ ಔಟ್‌ ಆಗಿದ್ದು ಭಾರಿ ಸದ್ದು ಮಾಡುತ್ತಿದೆ.

’12th ಫೇಲ್’ ಸಿನಿಮಾ ಯಶಸ್ಸಿನ ಬಳಿಕ ವಿಕ್ರಾಂತ್ ಮಾಸ್ಸಿ ಈ ಸಿನಿಮಾ ಘೋಷಿಸಿದ್ದಾರೆ. ವಿಕ್ರಾಂತ್ ಮಾಸ್ಸಿ ಅವರು ಟೀಸರ್‌ನೊಂದಿಗೆ ಚಿತ್ರವನ್ನು ಘೋಷಿಸಿದರು. ವಿಡಿಯೊದಲ್ಲಿ, ಅವರು ಗೋದ್ರಾ ಘಟನೆಯ ಸುದ್ದಿಯನ್ನು ಬ್ರೇಕಿಂಗ್ ಮಾಡುವ ಪತ್ರಕರ್ತ ಶ್ರಬನ್ ಕುಮಾರ್ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್ ಹಂಚಿಕೊಂಡ ಅವರು, “22 ವರ್ಷಗಳ ಹಿಂದೆ ಗೋದ್ರಾ ರೈಲು ದುರಂತದಲ್ಲಿ ಪ್ರಾಣ ಕಳೆದುಕೊಂಡ 59 ಅಮಾಯಕರಿಗೆ ಇಂದು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. 2024ರ ಮೇ 3ರಂದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆʼʼಎಂದು ಬರೆದುಕೊಂಡಿದ್ದಾರೆ.

ಸಬರಮತಿ ವರದಿಯಲ್ಲಿ ಮಾಸ್ಸಿಯ ಹೊರತಾಗಿ ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಅಮುಲ್ ವಿ ಮೋಹನ್ ಮತ್ತು ಅಂಶುಲ್ ಮೋಹನ್ ನಿರ್ಮಾಣದ ರಂಜನ್ ಚಂದೇಲ್ ನಿರ್ದೇಶನದ ಈ ಚಿತ್ರ ಮೇ 3 ರಂದು ತೆರೆಗೆ ಬರಲಿದೆ.

ಇದನ್ನೂ ಓದಿ: Rama Devotees Insult: ಗೋಧ್ರಾ ಮಾದರಿ ರೈಲು ಸುಡುವ ಬೆದರಿಕೆ: ಬಿ.ಕೆ. ಹರಿಪ್ರಸಾದ್‌ರನ್ನೂ ತನಿಖೆಗೊಳಪಡಿಸಿ: ಸಿ.ಟಿ. ರವಿ

ʻದಿ ಸಾಬರಮತಿ ರಿಪೋರ್ಟ್‌ ಟೀಸರ್‌

ಏನಿದು ʻಗೋದ್ರಾ ಹತ್ಯಾಕಾಂಡʼ?

2002ರ ಪೆಬ್ರವರಿ 27ರಂದು ಅಯೋಧ್ಯೆಯಿಂದ ಕರಸೇವಕರನ್ನು ಹೊತ್ತು ಬಂದ ಸಬರಮತಿ ಎಕ್ಸ್‌ಪ್ರೆಸ್ ರೈಲು ಗುಜರಾತ್‌ನ ಗೋಧ್ರಾ ರೈಲ್ವೆ ನಿಲ್ದಾಣದ ಬಳಿಕ ನಿಲ್ಲಿಸಿತ್ತು. ಆಗ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ತಗುಲಿ 59 ಮಂದಿ ಸಜೀವ ದಹನವಾದರು. ಇನ್ನೂ ದುರಂತವೆಂದರೆ ಸತ್ತವರಲ್ಲಿ 25 ಮಹಿಳೆಯರು ಮತ್ತು 25 ಮಕ್ಕಳು ಸೇರಿದ್ದರು. ಒಂದು ವರ್ಷದವರೆಗೆ ನಡೆದ ಗಲಭೆಗಳಲ್ಲಿ 1044 ಮಂದಿ ಮೃತಪಟ್ಟಿರುವುದು ಅಧಿಕೃತವಾಗಿ ದಾಖಲಾಗಿರುವ ಮಾಹಿತಿ. 2500 ಜನರು ಗಾಯಗೊಂಡಿದ್ದರು. ಇನ್ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು ಮೃತಪಟ್ಟ ಸಾವಿರ ಮಂದಿ ಪೈಕಿ ಮುಸ್ಲಿಮರು 790 ಮತ್ತು ಹಿಂದೂಗಳು 254 ಮಂದಿ ಎಂಬುದು ಅಧಿಕೃತ ಲೆಕ್ಕ. ಕೆಲವೊಂದು ವರದಿಗಳ ಪ್ರಕಾರ ಹತ್ಯೆಯಾದವರ ಸಂಖ್ಯೆ 2 ಸಾವಿರಕ್ಕೂ ಹೆಚ್ಚು.

Continue Reading

ಬಾಲಿವುಡ್

Jaya Prada: ನಟಿ , ರಾಜಕಾರಣಿ ಜಯಪ್ರದಾ ಬಂಧನಕ್ಕೆ ಕೋರ್ಟ್‌ ಮತ್ತೊಮ್ಮೆ ಆದೇಶ

Jaya Prada: ನಟಿ ಗೈರಾಗಿದ್ದರಿಂದ ಜಯಪ್ರದಾ ವಿರುದ್ಧ ಸೆಕ್ಷನ್‌ 82ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್‌ ಹೇಳಿದೆ. ಪ್ರಕರಣದ ವಿಚಾರಣೆ ಮಾ.6ರಂದು ಮತ್ತೊಮ್ಮೆ ನಡೆಯಲಿದೆ.

VISTARANEWS.COM


on

Jaya Prada absconding in two cases
Koo

ಬೆಂಗಳೂರು: ಹಿರಿಯ ನಟಿ ಮತ್ತು ರಾಜಕಾರಣಿ ಜಯಪ್ರದಾ (Actress, former MP Jaya Prada) ಅವರನ್ನು ಬಂಧಿಸುವಂತೆ ರಾಂಪುರದ ಸಂಸದ/ಶಾಸಕ ನ್ಯಾಯಾಲಯವು (Rampur MP/MLA court) ಪೊಲೀಸ್ ವರಿಷ್ಠಾಧಿಕಾರಿಗೆ ಈ ಮುಂಚೆ ಆದೇಶ ನೀಡಿತ್ತು. ವಿಶೇಷ ತಂಡ ರಚಿಸಿ ಮಾಜಿ ಸಂಸದರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಲಾಗಿತ್ತು. ಮಂಗಳವಾರ (ಫೆ.27) ನ್ಯಾಯಾಲಯಕ್ಕೆ ಹಾಜರಾಗಲು ಡೇಟ್‌ ಕೂಡ ನೀಡಿತ್ತು. ನಟಿ ಗೈರಾಗಿದ್ದರಿಂದ ಜಯಪ್ರದಾ ವಿರುದ್ಧ ಸೆಕ್ಷನ್‌ 82ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್‌ ಹೇಳಿದೆ. ಪ್ರಕರಣದ ವಿಚಾರಣೆ ಮಾ.6ರಂದು ಮತ್ತೊಮ್ಮೆ ನಡೆಯಲಿದೆ.

ಹಲವಾರು ಬಾರಿ ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಹೊರಡಿಸಿದ ನಂತರವೂ ಅವರು ಮಂಗಳವಾರ (ಫೆ.27) ಹಾಜರಾಗದಿದ್ದಕ್ಕಾಗಿ ರಾಂಪುರದ ಎಂಪಿ/ಎಂಎಲ್‌ಎ ನ್ಯಾಯಾಲಯವು ಸಿಆರ್‌ಪಿಸಿ ಆದೇಶ 82 ಅನ್ನು ಹೊರಡಿಸಿದೆ. ಈ ಕುರಿತು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಅಮರನಾಥ್ ತಿವಾರಿ ಅವರು, ಜಯಾ ವಿರುದ್ಧ 2019 ರ ಚುನಾವಣಾ ನೀತಿ ಸಂಹಿತೆ ಪ್ರಕರಣ ರಾಂಪುರದ ನ್ಯಾಯಾಲಯದಲ್ಲಿ ಕೇಮ್ರಿ ಪೊಲೀಸ್ ಠಾಣೆ ಮತ್ತು ಸ್ವರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Jaya Prada: 7 ಸಾರಿ ವಾರಂಟ್‌ ನಿರ್ಲಕ್ಷಿಸಿದ ನಟಿ ಜಯಪ್ರದಾ ಮೇಲೆ ಕೋರ್ಟ್‌ ಕಿಡಿಕಿಡಿ, ಜಾಮೀನುರಹಿತ ಬಂಧನ ಆದೇಶ

ಎರಡು ಪ್ರಕರಣಗಳಲ್ಲಿ ಜಯಪ್ರದಾ ನೀತಿ ಸಂಹಿತೆ ಉಲ್ಲಂಘನೆ

2019ರ ಎರಡು ಪ್ರಕರಣಗಳಲ್ಲಿ ಜಯಪ್ರದಾ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರು 2019ರ ಲೋಕಸಭೆ ಚುನಾವಣೆಯಲ್ಲಿ ರಾಂಪುರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ನಟಿ ತಲೆಮರೆಸಿಕೊಂಡಿದ್ದರು. ಈವರೆಗೆ ಏಳು ಬಾರಿ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಲಾಗಿತ್ತು. ಈಗ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಿಂದ ಜಗಪ್ರದಾಗೆ ಸಂಕಷ್ಟ ಹೆಚ್ಚಿದೆ. ಪ್ರಕರಣದ ವಿಚಾರಣೆ ಮಾ.6ರಂದು ಮತ್ತೊಮ್ಮೆ ನಡೆಯಲಿದೆ. ಮಾರ್ಚ್ 6 ರಂದು ಅವರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ತಂಡವನ್ನು ರಚಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ.

ಇದೇನು ಮೊದಲಲ್ಲ

ಜಯಪ್ರದಾ ವಿವಾದಕ್ಕೆ ಸಿಲುಕುತ್ತಿರುವುದು ಇದೇನು ಮೊದಲಲ್ಲ. ಕಳೆದ ವರ್ಷ ಚೆನ್ನೈನ ನ್ಯಾಯಾಲಯವು ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯನ್ನು ತಪ್ಪಿತಸ್ಥರೆಂದು ಘೋಷಿಸಿತು. ಆಕೆಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿತ್ತು. ಜಯಪ್ರದಾ ಅವರ ಥಿಯೇಟರ್‌ನ ಕಾರ್ಮಿಕರಿಗೆ ಇಎಸ್‌ಐ ಹಣವನ್ನು ಪಾವತಿಸಿರಲಿಲ್ಲ. ವರದಿಗಳ ಪ್ರಕಾರ ಜಯಪ್ರದಾ ಅಪರಾಧವನ್ನು ಒಪ್ಪಿಕೊಂಡಿದ್ದು, ಬಾಕಿ ಪಾವತಿಸುವುದಾಗಿ ಒಪ್ಪಿದ್ದರು. ಪ್ರಕರಣವನ್ನು ವಜಾಗೊಳಿಸುವಂತೆ ಕೋರಿದ್ದರು. ಆದರೆ ನ್ಯಾಯಾಲಯ ಆಕೆಯ ಮನವಿಯನ್ನು ತಿರಸ್ಕರಿಸಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿತ್ತು.

ಜಯಪ್ರದಾ ಎಂದು ಕರೆಯಲ್ಪಡುವ ಲಲಿತಾ ರಾಣಿ ರಾವ್ ಅವರು 70, 80 ಮತ್ತು 90ರ ದಶಕದ ಆರಂಭದಲ್ಲಿ ಹಿಂದಿ, ಕನ್ನಡ ಮತ್ತು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕವಿರತ್ನ ಕಾಳಿದಾಸ, ಹಬ್ಬ, ಶಬ್ದವೇದಿ, ಹುಲಿಯ ಹಾಲಿನ ಮೇವು ಮುಂತಾದ ಕನ್ನಡ ಚಲನಚಿತ್ರಗಳಲ್ಲಿ, ಅಡವಿ ರಾಮುಡು, ಸಿರಿ ಸಿರಿ ಮುವ್ವ, ಸೀತಾ ರಾಮ ವನವಾಸಂ, ರಾಮ ಕೃಷ್ಣುಲು, ಮಜ್ಬೂರ್, ಫರಿಷ್ತೆ, ತ್ಯಾಗಿ, ಲವ್ ಕುಶ್, ಮುಂತಾದ ತೆಲುಗು, ತಮಿಳು, ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇಂಡಿಯನ್ ಐಡಲ್, ಸಸುರಲ್ ಸಿಮರ್ ಕಾ, ಡ್ರಾಮಾ ಜೂನಿಯರ್ಸ್ ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading

ಸಿನಿಮಾ

Aamir Khan: ‘ಸಿತಾರೆ ಜಮೀನ್ ಪರ್’ ಸಿನಿಮಾ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ಆಮೀರ್‌ ಖಾನ್‌!

Aamir Khan: ಆಮೀರ್ ಖಾನ್ ತಮ್ಮ ಮುಂಬರುವ ಚಿತ್ರ ‘ಸಿತಾರೆ ಜಮೀನ್ ಪರ್’ ಸಿನಿಮಾ (Sitare Zameen Par)  ಬಿಡುಗಡೆ ಯಾವಾಗ ಎಂಬುದನ್ನು ಮಾಧ್ಯಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಈ ವರ್ಷದ ಕ್ರಿಸ್‌ಮಸ್ ಸಂದರ್ಭದಲ್ಲಿ ‘ಸಿತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆ ಮಾಡಲು ಯೋಜಿಸುತ್ತಿದ್ದೇನೆ ಎಂದು ಆಮೀರ್ ಖಾನ್ ಬಹಿರಂಗಪಡಿಸಿದ್ದಾರೆ.

VISTARANEWS.COM


on

Aamir Khan on Sitaare Zameen Par release it on Christmas
Koo

ಬೆಂಗಳೂರು: `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸೋತ ಬಳಿಕ ಆಮೀರ್‌ (Aamir Khan) ಮುಂದಿನ ಪ್ರಾಜೆಕ್ಟ್‌ ಘೋಷಿಸಿದ್ದರು. ಅದುವೇ ‘ಸಿತಾರೆ ಜಮೀನ್ ಪರ್’. 2007ರಲ್ಲಿ ದರ್ಶೀಲ್ ಸಫಾರಿ ಮತ್ತು ಆಮೀರ್ ಖಾನ್ (Aamir Khan) ನಟನೆಯ ‘ತಾರೆ ಜಮೀನ್ ಪರ್’ (Taare Zameen Par) ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು. ಆಮೀರ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವ ಚಿಕ್ಕ ಹುಡುಗನ ಕುರಿತಾಗಿ ಈ ಸಿನಿಮಾ ಇತ್ತು. ಅಮೋಲ್ ಗುಪ್ತೆ ಬರೆದ ಈ ಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು. ಇದೀಗ ಆಮೀರ್ ಖಾನ್ ತಮ್ಮ ಮುಂಬರುವ ಚಿತ್ರ ‘ಸಿತಾರೆ ಜಮೀನ್ ಪರ್’ ಸಿನಿಮಾ (Sitare Zameen Par)  ಬಿಡುಗಡೆ ಯಾವಾಗ ಎಂಬುದನ್ನು ಮಾಧ್ಯಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಈ ವರ್ಷದ ಕ್ರಿಸ್‌ಮಸ್ ಸಂದರ್ಭದಲ್ಲಿ ‘ಸಿತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆ ಮಾಡಲು ಯೋಜಿಸುತ್ತಿದ್ದೇನೆ ಎಂದು ಆಮೀರ್ ಖಾನ್ ಬಹಿರಂಗಪಡಿಸಿದ್ದಾರೆ.

ಮಾಧ್ಯಮವೊಂದರ ಸಂವಾದದ ಸಮಯದಲ್ಲಿ, ನಟ ಆಮೀರ್ ಖಾನ್ ಮಾತನಾಡಿ, “ನಾಯಕ ನಟನಾಗಿ ನನ್ನ ಮುಂದಿನ ಚಿತ್ರ ‘ಸಿತಾರೆ ಜಮೀನ್ ಪರ್’. ನಾವು ಇದನ್ನು ಈ ವರ್ಷದ ಕೊನೆಯಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದೇನೆ. ಇದು ಮನರಂಜನಾ ಚಿತ್ರ. ಶೂಟಿಂಗ್‌ ಈಗಾಗಲೇ ಶುರುವಾಗಿದೆʼʼಎಂದು ಹೇಳಿಕೊಂಡಿದ್ದಾರೆ. ಜತೆಗೆ ಈ ಚಿತ್ರದಲ್ಲಿ ಆಮೀರ್‌ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಆಮೀರ್‌ ಅವರು ‘ಅತೀ ಸುಂದರ್’ (‘Aati Sundar’) ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡುತ್ತಿದ್ದಾರೆ. ಇದು ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Aamir Khan: ʻಸಿತಾರೆ ಜಮೀನ್ ಪರ್‌ʼನಲ್ಲಿ ಆಮೀರ್ -ದರ್ಶೀಲ್ ಸಫಾರಿ ಮತ್ತೆ ಒಂದಾಗ್ತಾರಾ?

‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಆಮೀರ್ ಖಾನ್ ಜೋಡಿಯಾಗಿ ಜೆನಿಲಿಯಾ ದೇಶಮುಖ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿತಾರೆ ಜಮೀನ್ ಪರ್’ ಚಿತ್ರದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ನಟ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ತಾರೆ ಜಮೀನ್ ಪರ್ ಸಿನಿಮಾ ಹೇಗಿರಲಿದೆ?

ಈ ಮುಂಚೆ ಆಮೀರ್‌ ಈ ಸಿನಿಮಾ ಕುರಿತು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ʻʻಈ ಚಿತ್ರದ ಹೆಸರು ‘ಸಿತಾರೆ ಜಮೀನ್ ಪರ್’ ಏಕೆಂದರೆ ನಾವು ಅದೇ ಥೀಮ್‌ನೊಂದಿಗೆ ಮುಂದೆ ಹೋಗುತ್ತಿದ್ದೇವೆ. ‘ತಾರೆ ಜಮೀನ್ ಪರ್’ ಭಾವನಾತ್ಮಕ ಚಿತ್ರವಾಗಿತ್ತು. ಈ ಚಿತ್ರ ನಿಮ್ಮನ್ನು ನಗಿಸುತ್ತದೆ. ಆ ಚಿತ್ರವು ನಿಮ್ಮನ್ನು ಅಳುವಂತೆ ಮಾಡಿತು, ಇದು ನಿಮಗೆ ಮನರಂಜನೆ ನೀಡುತ್ತದೆʼಎಂದು ಮಾಹಿತಿ ಹಂಚಿಕೊಂಡಿದ್ದರು.

ನಟ ಮಾತು ಮುಂದುವರಿಸಿʻʻ ಆದರೆ ಸಿನಿಮಾ ಥೀಮ್ ಒಂದೇ ಆಗಿರುತ್ತದೆ. ಅದಕ್ಕಾಗಿಯೇ ನಾವು ಈ ಹೆಸರನ್ನು ಬಹಳ ಯೋಚನೆ ಮಾಡಿ ಇಟ್ಟುಕೊಂಡಿದ್ದೇವೆ. ನಮ್ಮೆಲ್ಲರಲ್ಲೂ ನ್ಯೂನತೆ ಹಾಗೂ ದೌರ್ಬಲ್ಯಗಳು ಇರುತ್ತವೆ. ಜತೆಗೆ ನಮ್ಮೆಲ್ಲರಿಗೂ ಏನಾದರೂ ವಿಶೇಷತೆಯೂ ಇರುತ್ತದೆ. ಆ ಚಿತ್ರದಲ್ಲಿ ವಿಶೇಷ ಮಗು ಇಶಾನ್ ಪಾತ್ರವಾಗಿತ್ತು. ನನ್ನ ಪಾತ್ರವು ‘ತಾರೆ ಜಮೀನ್ ಪರ್’ನಲ್ಲಿ ಆ ಪಾತ್ರಕ್ಕೆ ಸಹಾಯ ಮಾಡಿತ್ತು. ‘ಸಿತಾರೆ ಜಮೀನ್ ಪರ್’ನಲ್ಲಿ, ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿರುವ ಆ ಒಂಬತ್ತು ಹುಡುಗರು ನನಗೆ ಸಹಾಯ ಮಾಡುತ್ತಾರೆ, ಹಾಗಾಗಿ ಕಥೆ ವಿರುದ್ಧವಾಗಿರಲಿದೆʼʼ ಎಂದಿದ್ದರು.

ಇದನ್ನೂ ಓದಿ: Aamir Khan: ಪತಿಯಾಗಿ ನನ್ನಲ್ಲಿದ್ದ ಕೊರತೆಗಳೇನು? ಮಾಜಿ ಪತ್ನಿಗೆ ಆಮೀರ್‌ ಖಾನ್ ಪ್ರಶ್ನೆ!

ʻತಾರೆ ಜಮೀನ್ ಪರ್’ ಸಿನಿಮಾದಲ್ಲಿ ಹುಡುಗನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದ ಹೆತ್ತವರು ಅವನನ್ನು ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾರೆ. ಶಿಕ್ಷಕ ಆಮೀರ್‌ ಖಾನ್ ಭೇಟಿಯಾಗುತ್ತಾರೆ. ಈ ಸಿನಿಮಾದಲ್ಲಿ ದರ್ಶೀಲ್ ನಟನೆಗೆ ಮೆಚ್ಚುಗೆ ಸಿಕ್ಕಿತ್ತು. ‘ತಾರೆ ಜಮೀನ್ ಪರ್’ 21 ಡಿಸೆಂಬರ್ 2007 ರಂದು ಬಿಡುಗಡೆಯಾಗಿತ್ತು.

Continue Reading

ಸಿನಿಮಾ

Taapsee Pannu : ಬ್ಯಾಡ್ಮಿಂಟನ್ ಆಟಗಾರನ ಜತೆ ಹಸೆಮಣೆ ಏರಲು ಸಜ್ಜಾದ ನಟಿ ತಾಪ್ಸಿ ಪನ್ನು!

Taapsee Pannu : ಸೆಲೆಬ್ರಿಟಿಗಳಿಗೆ ಮದುವೆಗೆ ಆಹ್ವಾನವಿಲ್ಲ ಎನ್ನಲಾಗುತ್ತಿದೆ. ಸಿಖ್ ಮತ್ತು ಕ್ರಿಶ್ಚಿಯನ್ ಧರ್ಮದ ಸಂಪ್ರದಾಯದಂತೆ ಜೋಡಿ ಮದುವೆಯಾಗಲಿದೆ ಎನ್ನಲಾಗಿದೆ.

VISTARANEWS.COM


on

Taapsee Pannu To Marry Boyfriend Mathias Boe
Koo

ಬೆಂಗಳೂರು: ಬಾಲಿವುಡನ್‌ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಕಳೆದ ವಾರವಷ್ಟೇ ರಕುಲ್ ಮತ್ತು ಜಾಕಿ ಭಗ್ನಾನಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇದಾದ ಬಳಿಕ ಗೂಗ್ಲಿ ಬೆಡಗಿ ಕೃತಿ ಕರಬಂಧ ಮಾರ್ಚ್‌ನಲ್ಲಿ ಮದುವೆ ಆಗುವುದಾಗಿ ಅನೌನ್ಸ್ ಮಾಡಿದ್ದರು. ಇದೀಗ ನಟಿ ತಾಪ್ಸಿ ಪನ್ನು ಹಸೆಮಣೆ ಏರಲು ರೆಡಿಯಾಗಿದ್ದಾರೆ. ತಾಪ್ಸಿ (Taapsee Pannu) ತಮ್ಮ ಬಹುಕಾಲದ ಗೆಳೆಯನ ಜತೆ ಮದುವೆಗೆ ರೆಡಿಯಾಗಿದ್ದಾರೆ. ಮಾರ್ಚ್ ಅಂತ್ಯದಲ್ಲಿ ಉದಯಪುರದಲ್ಲಿ ಮದುವೆ ನಡೆಯಲಿದೆ.‌ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ (Mathias Boe) ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.

ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ (Mathias Boe) ಜತೆ 10 ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು ತಾಪ್ಸಿ. ಈಗ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆಯಾಗುತ್ತಿದ್ದಾರೆ. ಮದುವೆಗೆ ಅವರ ಕುಟುಂಬದವರು ಮತ್ತು ಆಪ್ತರಷ್ಟೇ ಭಾಗಿಯಾಗಲಿದ್ದಾರೆ. ಸೆಲೆಬ್ರಿಟಿಗಳಿಗೆ ಮದುವೆಗೆ ಆಹ್ವಾನವಿಲ್ಲ ಎನ್ನಲಾಗುತ್ತಿದೆ. ಸಿಖ್ ಮತ್ತು ಕ್ರಿಶ್ಚಿಯನ್ ಧರ್ಮದ ಸಂಪ್ರದಾಯದಂತೆ ಜೋಡಿ ಮದುವೆಯಾಗಲಿದೆ ಎನ್ನಲಾಗಿದೆ.

ತಾಪ್ಸಿ ಪನ್ನು ಕೊನೆಯದಾಗಿ ಶಾರುಖ್​ ಖಾನ್ ಅವರ ʻಡಂಕಿʼ ಸಿನಿಮಾದಲ್ಲಿ ಕಾಣಿಸಿಕೊಂಡರು. ತಾಪ್ಸಿ ಪನ್ನು ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಸೇರಿ ಒಟ್ಟು 50 ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಸೀನ್ ದಿಲ್‌ರುಬಾ (Haseen Dilruba’s) ತಂಡದ ಮುಂಬರುವ ʼಫಿರ್ ಆಯಿ ಹಸೀನ್ ದಿಲ್‌ರುಬಾʼ (Phir Aayi Haseen Dilruba) ಸಿನಿಮಾದಲ್ಲಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Taapsee Pannu : ಎದೆ ಸೀಳಿನಲ್ಲಿ ಲಕ್ಷ್ಮೀ ಚಿತ್ರವಿರುವ ನೆಕ್ಲೆಸ್, ನಟಿ ತಾಪ್ಸಿ ಪನ್ನು ಮೇಲೆ ಬಿತ್ತು ಕೇಸ್​

ಈಗಾಗಲೇ ಸಿನಿಮಾದ ಹಾಟ್‌ ಪೋಸ್ಟರ್‌ ಅನಾವರಣಗೊಂಡಿದೆ. ಈ ಚಿತ್ರದಲ್ಲಿ ತಾಪ್ಸಿ ಜತೆಗೆ ವಿಕ್ರಾಂತ್ ಮಾಸ್ಸೆ ಮತ್ತು ಸನ್ನಿ ಕೌಶಲ್ ಕೂಡ ನಟಿಸಲಿದ್ದಾರೆ.ಹಸೀನ್ ದಿಲ್‌ರುಬಾ ದೊಡ್ಡ ಹಿಟ್ ಆಗಿತ್ತು. ಇದೀಗ ಅಭಿಮಾನಿಗಳು ಫಿರ್ ಆಯಿ ಹಸೀನ್ ದಿಲ್‌ರುಬಾದ ಸಿನಿಮಾದಿಂದ ಅದನ್ನೇ ಆಶಿಸುತ್ತಿದ್ದಾರೆ. ಕಲರ್ ಯೆಲ್ಲೋ ಪ್ರೊಡಕ್ಷನ್ಸ್, ತಾಪ್ಸಿ ಪನ್ನು ಸಹ-ನಿರ್ಮಾಪಕರಾಗಿದ್ದಾರೆ.

Continue Reading
Advertisement
Karnataka Weather Rain for first week of March
ಕರ್ನಾಟಕ20 mins ago

Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ?

Electricity Bil
ಸಂಪಾದಕೀಯ49 mins ago

ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

dina bhavishya read your daily horoscope predictions for February 28 2024
ಭವಿಷ್ಯ2 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Jain (Deemed-to-be University)
ಬೆಂಗಳೂರು7 hours ago

ಜೈನ್ ‘ಸ್ಕೂಲ್ ಆಫ್ ಸೈನ್ಸಸ್‌’ನಲ್ಲಿ ಯಶಸ್ವಿಯಾಗಿ ನೆರವೇರಿದ SciCon-2024; 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

Siddaramaiah
ಪ್ರಮುಖ ಸುದ್ದಿ7 hours ago

ಪಶು ಸಂಗೋಪನಾ ಇಲಾಖೆ ಆಸ್ತಿ ಅಲ್ಪಸಂಖ್ಯಾತ ಇಲಾಖೆಗೆ ವರ್ಗಾವಣೆ; ಸಿದ್ದರಾಮಯ್ಯ ಆದೇಶ

Reva University
ಬೆಂಗಳೂರು7 hours ago

ರೇವಾ ವಿವಿಯಲ್ಲಿ ಜಿಯೋಪಾಲಿಟಿಕ್ಸ್, ಇಂಟರ್ ನ್ಯಾಷನಲ್ ಸ್ಟಡೀಸ್ ಉನ್ನತ ಕೇಂದ್ರ ಉದ್ಘಾಟಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

Reliance Disney
ದೇಶ8 hours ago

Reliance Disney: ರಿಲಯನ್ಸ್‌-ಡಿಸ್ನಿ ವಿಲೀನ, ಮಾಧ್ಯಮದಲ್ಲಿ 70 ಸಾವಿರ ಕೋಟಿ ರೂ. ಹೂಡಿಕೆ

44 Congress workers to get power in corporations and boards
ಪ್ರಮುಖ ಸುದ್ದಿ8 hours ago

Congress Karnataka: ನಿಗಮ-ಮಂಡಳಿಗಳಲ್ಲಿ 44 ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ; ಸಿಎಂ ಗ್ರೀನ್ ಸಿಗ್ನಲ್

Puneri Paltan vs Haryana Steelers
ಕ್ರೀಡೆ8 hours ago

Pro Kabaddi: ಹಾಲಿ ಚಾಂಪಿಯನ್​ ಜೈಪುರಕ್ಕೆ ಸೋಲು; ಪುಣೇರಿ-ಹರ್ಯಾಣ ಫೈನಲ್​ ಫೈಟ್​

Mumbai Indians Women vs UP Warriorz
ಕ್ರೀಡೆ8 hours ago

WPL 2024: ಬಲಿಷ್ಠ ಮುಂಬೈಗೆ ಸೋಲುಣಿಸಿ ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್ಸ್

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ2 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ1 day ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ2 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ3 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌