Site icon Vistara News

Samantha Ruth Prabhu: ನನ್ನನ್ನು ನಾನು ಕೇರ್‌ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಇದೆ ಎಂದ ಸಮಂತಾ!

Samantha Ruth Prabhu

ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಬದಲಿಗೆ ಬರೋಬ್ಬರಿ ಒಂದು ವರ್ಷಗಳ ಕಾಲ ಸಿನಿಮಾಗಳಿಂದ ಬ್ರೇಕ್‌ ಪಡೆದಿದ್ದಾರೆ. ಸಮಂತಾ ಮೈಯೋಸಿಟಿಸ್‌ ಕಾಯಿಲೆಯಿಂದ ಬಳಲುತ್ತಿರುವ ವಿಚಾರ ಗೊತ್ತೇ ಇದೆ. ನಟಿ ಈ ಕಾಯಿಲೆಯಿಂದಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ. ನಟಿ ತೆಲುಗು ಚಿತ್ರರಂಗದ ಪ್ರಮುಖ ನಟನಿಂದ 25 ಕೋಟಿ ರೂ. ಸಾಲ ಪಡೆದಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಸಮಂತಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ʻʻತನ್ನನ್ನು ತಾನು ನೋಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೇನೆʼʼ ಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಸಾಕ್ಷಿ ಟಿವಿ ವಿಡಿಯೊ ವರದಿಯ ಪ್ರಕಾರ ಸಮಂತಾ ತೆಲುಗು ಚಿತ್ರರಂಗದ ಪ್ರಮುಖ ನಟರಿಂದ 25 ಕೋಟಿ ರೂ. ಸಾಲ ಪಡೆದಿದ್ದರು ಎಂದು ವರದಿ ಮಾಡಿತ್ತು. ನಟನ ಹೆಸರನ್ನು ಮಾತ್ರ ಮಾಧ್ಯಮ ಬಹಿರಂಗಪಡಿಸಿಲ್ಲ. ಆದರೆ ಈ ಬಗ್ಗೆ ನಟಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಇದೀಗ ಸ್ವತಃ ಸಮಂತಾ ಅವರೇ ಇನ್‌ಸ್ಟಾದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.

“ಮೈಯೋಸಿಟಿಸ್‌ ಚಿಕಿತ್ಸೆಗೆ ₹25 ಕೋಟಿ? ಯಾರೋ ನಿಮಗೆ ಸುಳ್ಳು ಸುದ್ದಿ ನೀಡಿದ್ದಾರೆ. ನಿಮ್ಮ ಜತೆ ರಾಂಗ್ ಡೀಲ್ ಮಾಡಿಕೊಂಡಿದ್ದಾರೆ. ಚಿಕಿತ್ಸೆಗಾಗಿ ನಾನು ಕಮ್ಮಿ ಮೊತ್ತವನ್ನು ಖರ್ಚು ಮಾಡುತ್ತಿರುವುದಕ್ಕೆ ಖುಷಿ ಇದೆ. ನನ್ನನ್ನು ನಾನು ನೋಡಿಕೊಳ್ಳುವಷ್ಟು ಸಾಮರ್ಥ್ಯ ಇದೆ. ಮೈಯೋಸಿಟಿಸ್‌ ಸಾವಿರಾರು ಮಂದಿ ಫೇಸ್ ಮಾಡುತ್ತಿರುವ ಕಾಯಿಲೆ. ಚಿಕಿತ್ಸೆಗೆ ಸಂಬಂಧಿಸಿದಂತೆ ನಾವು ನೀಡುವ ಮಾಹಿತಿಯೊಂದಿಗೆ ದಯವಿಟ್ಟು ಜವಾಬ್ದಾರರಾಗಿರೋಣʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Samantha Health | ನಟಿ ಸಮಂತಾ ರುತ್ ಪ್ರಭು ಆರೋಗ್ಯದಲ್ಲಿ ಏರುಪೇರು?

ಈ ತಿಂಗಳ ಆರಂಭದಲ್ಲಿ, ಸಮಂತಾ ತಮ್ಮ ಆರೋಗ್ಯದ ಮೇಲೆ ಕೇಂದ್ರೀಕರಿಸಲು ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿತ್ತು. ನಟಿ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಖುಷಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಸಿಟಾಡೆಲ್ ಇಂಡಿಯಾ ಇನ್ನೂ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಖುಷಿ ಸಿನಿಮಾದಲ್ಲಿ, ಸಮಂತಾ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿದರೆ, ರಾಜ್ ಮತ್ತು ಡಿಕೆ ಸಿರೀಸ್‌ ಸಿಟಾಡೆಲ್‌ನಲ್ಲಿ ವರುಣ್ ಧವನ್ ಜತೆ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ನಟಿ ಬಾಲಿಯಲ್ಲಿ ಸಖತ್‌ ಎಂಜಾಯ್‌ ಕೂಡ ಮಾಡಿ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಬಾಲಿಯೂ ಮುಂಚೆ ನಟಿ ಕೊಯಮತ್ತೂರಿನ ಸದ್ಗುರುಗಳ ಇಶಾ ಫೌಂಡೇಶನ್‌ಗೆ ಭೇಟಿ ನೀಡಿದ್ದರು ಫೋಟೊ ಮತ್ತು ವಿಡಿಯೊಗಳನ್ನು ನಟಿ ಹಂಚಿಕೊಂಡಿದ್ದರು.

Exit mobile version