Site icon Vistara News

Samantha Ruth Prabhu: ವಿಜಯ್ ದೇವರಕೊಂಡ- ಸಮಂತಾ ʻಗಟ್ಟಿಮೇಳʼ; ವಿಡಿಯೊ ವೈರಲ್‌!

Samantha Spotted at Temple with Vijay Deverakonda

ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಅವರು ವಧುವಿನಂತೆ ತಯಾರಾಗಿದ್ದು, ವಿಜಯ್ ದೇವರಕೊಂಡ ಅವರ ಪಕ್ಕದಲ್ಲಿ ನಿಂತಿರುವ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ. ಇವರಿಬ್ಬರು ಸಪ್ತಪದಿ ತುಳಿಯಲು ರೆಡಿಯಾಗಿರುವಂತೆ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ!

ಅಂದ ಹಾಗೆ ಈ ಜೋಡಿ ರೆಡಿಯಾಗಿದ್ದು ಖುಷಿ ಸಿನಿಮಾಗಾಗಿ. ತಮ್ಮ ಮುಂಬರುವ ಚಿತ್ರ ʼಖುಷಿʼ ಚಿತ್ರದ ಚಿತ್ರೀಕರಣದಲ್ಲಿರುವ ಸಮಂತಾ-ವಿಜಯ್‌ ದೇವರಕೊಂಡ ಆಂಧ್ರಪ್ರದೇಶದ ದ್ರಾಕ್ಷಾರಾಮದಲ್ಲಿರುವ ದೇವಸ್ಥಾನದಲ್ಲಿ ಪೂಜೆಯ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು. ವಿಡಿಯೊದಲ್ಲಿ, ಸಮಂತಾ ಸಿಂಪಲ್‌ ಮತ್ತು ಸುಂದರವಾದ ಕೆಂಪು ಸೀರೆಯಲ್ಲಿ ಮಿಂಚುತ್ತಿದ್ದರು. ವಿಜಯ್‌ ಬಿಳಿ ದಿರಸಿನಲ್ಲಿ ಕಂಗೊಳಿಸುತ್ತಿದ್ದರು.

ವಿಡಿಯೊದಲ್ಲಿ, ಸಮಂತಾ ಮತ್ತು ವಿಜಯ್ ಜತೆ ಇತರ ಪಾತ್ರವರ್ಗದ ಸದಸ್ಯರು ನೆರೆದಿದ್ದರು. ಇವರಿಬ್ಬರು ದೇವಸ್ಥಾನದಲ್ಲಿ ಇರುವ ಫೋಟೊಗಳು ಮತ್ತು ವಿಡಿಯೊಗಳು ಇದೀಗ ಅವರ ಅಭಿಮಾನಿಗಳನ್ನು ಪುಳಕಗೊಳಿಸಿದೆ.

ಸಮಂತಾ ಸೆಟ್‌ನಲ್ಲಿನ ಫೋಟೊವನ್ನೂ ಹಂಚಿಕೊಂಡಿದ್ದಾರೆ. ಕ್ಲೋಸ್‌ಅಪ್‌ನಲ್ಲಿ ಸಮಂತಾ ಸೆಲ್ಫಿ ಕ್ಲಿಕ್ಕಿಸುವಾಗ ಕೈಯಲ್ಲಿ ಫ್ಯಾನ್ ಹಿಡಿದಿರುವುದು ಕಂಡುಬಂದಿದೆ. ಕಳೆದ ವರ್ಷ ಕಾಶ್ಮೀರದಲ್ಲಿ ಚಿತ್ರದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಇದು ವಿಜಯ್‌ ಮತ್ತು ಸಮಂತಾ ಅವರು ಒಟ್ಟಿಗೆ ನಟಿಸಿರುವ ಎರಡನೇ ಚಿತ್ರವಾಗಿದೆ.

ಇದನ್ನೂ ಓದಿ: Samantha Ruth Prabhu: ʻಖುಷಿʼ ಸಿನಿಮಾ ಆಗುತ್ತಿದ್ದಂತೆ ನಟನೆಗೆ ಸಮಂತಾ ಗುಡ್‌ ಬೈ?

ʼಖುಷಿʼ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ. ವಿಜಯ್ ದೇವರಕೊಂಡ, ಸಮಂತಾ, ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಶರಣ್ ಮುಂತಾದ ಅದ್ಭುತ ನಟ-ನಟಿಯರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ, ಪೀಟರ್ ಹೆನ್ಸ್ ಸಾಹಸ ನಿರ್ದೇಶನ, ಪ್ರವೀನ್ ಪುಡಿ ಅವರ ಸಂಕಲನ, ಜಿ ಮುರಳಿ ಕ್ಯಾಮೆರಾ ಕೈಚಳಕವಿದೆ. ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತವಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ

ಕಳೆದ ತಿಂಗಳು ಇವರಿಬ್ಬರು ಹಾಡಿನ ಚಿತ್ರೀಕರಣಕ್ಕಾಗಿ ಟರ್ಕಿಗೆ ತೆರಳಿದ್ದರು. ವಿಜಯ್ ಮತ್ತು ಸಮಂತಾ ತಮ್ಮ ಟರ್ಕಿಗೆ ಭೇಟಿ ನೀಡಿದ ಫೋಟೊಗಳನ್ನು ಹಂಚಿಕೊಂಡಿದ್ದರು. ಖುಷಿ ಸೆಪ್ಟೆಂಬರ್ 1ರಂದು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

Exit mobile version