ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ (Samantha Ruth Prabhu) ಎಲ್ಲರ ಮನಗೆದ್ದ ಬೆಡಗಿ. ಪುಷ್ಪಾ 2 ಸಿನಿಮಾದಲ್ಲಿ ಉ ಅಂಟಾವಾ ಮಾಮ ಎನ್ನುತ್ತ ಎಲ್ಲರನ್ನೂ ಕುಣಿಸಿದ್ದ ನಟಿ ಸದ್ಯ ಸಿಟಾಡೆಲ್ ವೆಬ್ ಸೀರಿಸ್ ಚಿತ್ರೀಕರಣದಲ್ಲಿ ಬಿಜಿ ಇದ್ದಾರೆ. ಹೊಸ ವಿಚಾರ ಏನೆಂದರೆ ನಟಿ ಸದ್ದಿಲ್ಲದೆ ಹಾಲಿವುಡ್‌ನಲ್ಲಿ ಸಿನಿಮಾ ಮಾಡುವುದಕ್ಕೂ ಸಜ್ಜಾಗಿದ್ದಾರಂತೆ.
ಹೌದು. ಸಮಂತಾ ಹಾಲಿವುಡ್ ಸಿನಿಮಾ ಒಂದಕ್ಕೆ ಒಕೆ ಎಂದಿದ್ದಾರೆ. ಸಿಟಾಡೆಲ್ ಸೀರಿಸ್‌ನ ಶೂಟಿಂಗ್ ಮುಗಿಯುತ್ತಿದ್ದಂತೆಯೇ ನಟಿ ಹಾಲಿವುಡ್ ಸಿನಿಮಾದ ಚಿತ್ರೀಕರಣಕ್ಕೆ ತೆರಳಿದ್ದಾರೆ. ಚೆನ್ನೈ ಸ್ಟೋರಿ ಹೆಸರಿನಲ್ಲಿ ಸಿನಿಮಾ ತಯಾರಾಗಲಿದೆ. ಸಿನಿಮಾದಲ್ಲಿ ವಿವೇಲ್ ಕಲ್ರಾ ಅವರು ಸಮಂತಾಗೆ ಜೋಡಿಯಾಗಿ ನಟಿಸಲಿದ್ದಾರೆ.
ಇದನ್ನೂ ಓದಿ: Viral Video : ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಮದ್ಯಪಾನ, ಪುಷ್‌ಅಪ್ ಸ್ಟಂಟ್!
2004ರಲ್ಲಿ ತಿಮೇರಿ ಎನ್ ಮುರಾರಿ ಅವರು ಬರೆದ ʼದಿ ಅರೆಂಜ್‌ಮೆಂಟ್ಸ್ ಆಫ್ ಲವ್ʼ ಕಾದಂಬರಿ ಬಿಡುಗಡೆಯಾಗಿತ್ತು. ಇದೀಗ ಅದೇ ಕಾದಂಬರಿಯನ್ನು ಆಧರಿಸಿ ಚೆನ್ನೈ ಸ್ಟೋರಿ ಸಿನಿಮಾ ತಯಾರಿಸಲಾಗುತ್ತಿದೆ. ಬಿಎಎಫ್‌ಟಿಎ ಪ್ರಶಸ್ತಿ ಪಡೆದಿರುವ ಖ್ಯಾತಿಯ ಫಿಲಿಪ್ ಜಾನ್ ಅವರು ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಚೆನ್ನೈ ಮತ್ತು ಬ್ರಿಟನ್‌ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ ಎನ್ನುವ ಮಾಹಿತಿಯಿದೆ. ಸಿನಿಮಾ ಇಂಗ್ಲಿಷ್ ಜತೆಯಲ್ಲಿ ತಮಿಳು ಭಾಷೆಯಲ್ಲೂ ಬಿಡುಯಗಡೆಯಾಗಲಿದೆ.
ಬ್ರಿಟನ್‌ನ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಹುಡುಕಿಕೊಂಡು ಚೆನ್ನೈಗೆ ಬರುತ್ತಾನೆ. ಅಲ್ಲಿ ಆತ ಸ್ಥಳೀಯ ಪತ್ತೇದಾರಿಕೆ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಭೇಟಿ ಮಾಡಿ, ಆಕೆಗೆ ತಂದೆಯನ್ನು ಹುಡುಕುವ ಕೆಲಸ ವಹಿಸುತ್ತಾನೆ. ಈ ಕೆಲಸದಲ್ಲಿ ಅವರಿಬ್ಬರ ನಡುವೆ ನವಿರಾದ ಪ್ರೇಮಕಥೆಯೊಂದು ಹುಟ್ಟಿಕೊಳ್ಳುತ್ತದೆ. ಇದೇ ಕಥಾಹಂದರ ಚೆನ್ನೈ ಸ್ಟೋರಿ ಸಿನಿಮಾದಲ್ಲಿರಲಿದೆ. ವಿವೇಲ್ ಅವರು ತಂದೆಯನ್ನು ಹುಡುಕಿಕೊಂಡು ಬರುವ ವ್ಯಕ್ತಿಯ ಪಾತ್ರ ನಿರ್ವಹಿಸಿದರೆ ಸಮಂತಾ ಅವರು ಸ್ಥಳೀಯ ಪತ್ತೆದಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.