Samantha Ruth Prabhu : ಹಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಸಮಂತಾ! ಯಾವ ಸಿನಿಮಾ? - Vistara News

South Cinema

Samantha Ruth Prabhu : ಹಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಸಮಂತಾ! ಯಾವ ಸಿನಿಮಾ?

ಸಿಟಾಡೆಲ್‌ ವೆಬ್‌ ಸೀರಿಸ್‌ ಚಿತ್ರೀಕರಣದಲ್ಲಿ ಬಿಜಿ ಇರುವ ನಟಿ ಸಮಂತಾ (Samantha Ruth Prabhu) ಅವರು ಹಾಲಿವುಡ್‌ ಸಿನಿಮಾದಲ್ಲೂ ನಟಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾದಂಬರಿ ಆಧಾರಿತ ಸಿನಿಮಾವಾದ ಚೆನ್ನೈ ಸ್ಟೋರಿಯಲ್ಲಿ ಸಮಂತಾ ನಟಿಸಲಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್‌: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ (Samantha Ruth Prabhu) ಎಲ್ಲರ ಮನಗೆದ್ದ ಬೆಡಗಿ. ಪುಷ್ಪಾ 2 ಸಿನಿಮಾದಲ್ಲಿ ಉ ಅಂಟಾವಾ ಮಾಮ ಎನ್ನುತ್ತ ಎಲ್ಲರನ್ನೂ ಕುಣಿಸಿದ್ದ ನಟಿ ಸದ್ಯ ಸಿಟಾಡೆಲ್‌ ವೆಬ್‌ ಸೀರಿಸ್‌ ಚಿತ್ರೀಕರಣದಲ್ಲಿ ಬಿಜಿ ಇದ್ದಾರೆ. ಹೊಸ ವಿಚಾರ ಏನೆಂದರೆ ನಟಿ ಸದ್ದಿಲ್ಲದೆ ಹಾಲಿವುಡ್‌ನಲ್ಲಿ ಸಿನಿಮಾ ಮಾಡುವುದಕ್ಕೂ ಸಜ್ಜಾಗಿದ್ದಾರಂತೆ.

ಹೌದು. ಸಮಂತಾ ಹಾಲಿವುಡ್‌ ಸಿನಿಮಾ ಒಂದಕ್ಕೆ ಒಕೆ ಎಂದಿದ್ದಾರೆ. ಸಿಟಾಡೆಲ್‌ ಸೀರಿಸ್‌ನ ಶೂಟಿಂಗ್‌ ಮುಗಿಯುತ್ತಿದ್ದಂತೆಯೇ ನಟಿ ಹಾಲಿವುಡ್‌ ಸಿನಿಮಾದ ಚಿತ್ರೀಕರಣಕ್ಕೆ ತೆರಳಿದ್ದಾರೆ. ಚೆನ್ನೈ ಸ್ಟೋರಿ ಹೆಸರಿನಲ್ಲಿ ಸಿನಿಮಾ ತಯಾರಾಗಲಿದೆ. ಸಿನಿಮಾದಲ್ಲಿ ವಿವೇಲ್‌ ಕಲ್ರಾ ಅವರು ಸಮಂತಾಗೆ ಜೋಡಿಯಾಗಿ ನಟಿಸಲಿದ್ದಾರೆ.

ಇದನ್ನೂ ಓದಿ: Viral Video : ಚಲಿಸುತ್ತಿದ್ದ ಕಾರಿನ ರೂಫ್‌ ಮೇಲೆ ಮದ್ಯಪಾನ, ಪುಷ್‌ಅಪ್‌ ಸ್ಟಂಟ್‌!
2004ರಲ್ಲಿ ತಿಮೇರಿ ಎನ್‌ ಮುರಾರಿ ಅವರು ಬರೆದ ʼದಿ ಅರೆಂಜ್‌ಮೆಂಟ್ಸ್‌ ಆಫ್‌ ಲವ್‌ʼ ಕಾದಂಬರಿ ಬಿಡುಗಡೆಯಾಗಿತ್ತು. ಇದೀಗ ಅದೇ ಕಾದಂಬರಿಯನ್ನು ಆಧರಿಸಿ ಚೆನ್ನೈ ಸ್ಟೋರಿ ಸಿನಿಮಾ ತಯಾರಿಸಲಾಗುತ್ತಿದೆ. ಬಿಎಎಫ್‌ಟಿಎ ಪ್ರಶಸ್ತಿ ಪಡೆದಿರುವ ಖ್ಯಾತಿಯ ಫಿಲಿಪ್‌ ಜಾನ್‌ ಅವರು ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಚೆನ್ನೈ ಮತ್ತು ಬ್ರಿಟನ್‌ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ ಎನ್ನುವ ಮಾಹಿತಿಯಿದೆ. ಸಿನಿಮಾ ಇಂಗ್ಲಿಷ್‌ ಜತೆಯಲ್ಲಿ ತಮಿಳು ಭಾಷೆಯಲ್ಲೂ ಬಿಡುಯಗಡೆಯಾಗಲಿದೆ.

ಬ್ರಿಟನ್‌ನ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಹುಡುಕಿಕೊಂಡು ಚೆನ್ನೈಗೆ ಬರುತ್ತಾನೆ. ಅಲ್ಲಿ ಆತ ಸ್ಥಳೀಯ ಪತ್ತೇದಾರಿಕೆ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಭೇಟಿ ಮಾಡಿ, ಆಕೆಗೆ ತಂದೆಯನ್ನು ಹುಡುಕುವ ಕೆಲಸ ವಹಿಸುತ್ತಾನೆ. ಈ ಕೆಲಸದಲ್ಲಿ ಅವರಿಬ್ಬರ ನಡುವೆ ನವಿರಾದ ಪ್ರೇಮಕಥೆಯೊಂದು ಹುಟ್ಟಿಕೊಳ್ಳುತ್ತದೆ. ಇದೇ ಕಥಾಹಂದರ ಚೆನ್ನೈ ಸ್ಟೋರಿ ಸಿನಿಮಾದಲ್ಲಿರಲಿದೆ. ವಿವೇಲ್‌ ಅವರು ತಂದೆಯನ್ನು ಹುಡುಕಿಕೊಂಡು ಬರುವ ವ್ಯಕ್ತಿಯ ಪಾತ್ರ ನಿರ್ವಹಿಸಿದರೆ ಸಮಂತಾ ಅವರು ಸ್ಥಳೀಯ ಪತ್ತೆದಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Kannada New Movie: ಮನರಂಜನೆಯ ರಸದೌತಣ ಬಡಿಸಲು ಬಂದ ʻಮೂರನೇ ಕೃಷ್ಣಪ್ಪʼ: ಟ್ರೈಲರ್‌ ಔಟ್‌!

Kannada New Movie: ರೆಡ್ ಡ್ರ್ಯಾಗನ್ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಗೆ ಮೋಹನ್ ರೆಡ್ಡಿ ಜಿ, ರವಿಶಂಕರ್ ಹಣ ಹೂಡಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಇಟ್ಟುಕೊಂಡು ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಸಂಪತ್ ಮೈತ್ರೀಯಾ ನಾಯಕನಾಗಿ ನಟಿಸುತ್ತಿದ್ದರೆ, ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಶ್ರೀಪ್ರಿಯಾ ನಾಯಕಿಯಾಗಿದ್ದಾರೆ.

VISTARANEWS.COM


on

Kannada New Movie Moorane Krishnappa trailer Out
Koo

ಬೆಂಗಳೂರು: ವಿಭಿನ್ನ ಕಥಾನಕದ ಮೂಲಕವೇ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಹೊರಟಿರುವ ಸಿನಿಮಾ ʻಮೂರನೇ ಕೃಷ್ಣಪ್ಪʼ. ಇದೀಗ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಲೂಸ್ ಮಾದ ಯೋಗಿ (Kannada New Movie) ಸಂಭಾಷಣೆಯಲ್ಲಿ‌ ಶುರುವಾಗುವ ಟ್ರೈಲರ್‌ನಲ್ಲಿ ಕೋಲಾರ‌ ಕನ್ನಡ‌ , ರಂಗಾಯಣ ರಘು, ಸಂಪತ್ ಮೈತ್ರಿಯಾಯಂತಹ ಅದ್ಭುತ ಕಲಾವಿದರ ಅಭಿನಯ, ಹಳ್ಳಿ ಸೊಗಡನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಟ್ರೇಲರ್ ಪ್ರಾಮಿಸಿಂಗ್ ಆಗಿದ್ದು, ಸಿನಿಪ್ರಿಯರಿಗೆ ಮನರಂಜನೆ ಗ್ಯಾರೆಂಟಿ ಎಂಬ ಸಂದೇಶ ರವಾನಿಸಿದೆ.

‘ಮೂರನೇ ಕೃಷ್ಣಪ್ಪ’ ಸಿನಿಮಾವನ್ನು ನವೀನ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಶೀರ್ಷಿಕೆಯೊಂದಿಗೆ ಪ್ರೇಕ್ಷಕರನ್ನು ರಂಜಿಸುವುದಕ್ಕೆ ನವೀನ್ ಮುಂದಾಗಿದ್ದಾರೆ.

ರೆಡ್ ಡ್ರ್ಯಾಗನ್ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಗೆ ಮೋಹನ್ ರೆಡ್ಡಿ ಜಿ, ರವಿಶಂಕರ್ ಹಣ ಹೂಡಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಇಟ್ಟುಕೊಂಡು ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಸಂಪತ್ ಮೈತ್ರೀಯಾ ನಾಯಕನಾಗಿ ನಟಿಸುತ್ತಿದ್ದರೆ, ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಶ್ರೀಪ್ರಿಯಾ ನಾಯಕಿಯಾಗಿದ್ದಾರೆ.

ಇದನ್ನೂ ಓದಿ: Kannada New Movie: ‘ಗಾಡ್ ಪ್ರಾಮಿಸ್’ ಚಿತ್ರಕ್ಕೆ ಮುನ್ನುಡಿ; ಆನೆಗುಡ್ಡೆ ಗಣಪತಿ ದೇಗುಲದಲ್ಲಿ ಮುಹೂರ್ತ

ಇವರೊಂದಿಗೆ ತುಕಾಲಿ ಸಂತೋಷ್, ಉಗ್ರಂ ಮಂಜು ಸೇರಿದಂತೆ ಹಲವರು ನಟಿಸಿದ್ದಾರೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಕ್ಕೆ ಆನಂದ್ ರಾಜವಿಕ್ರಮ್ ಸಂಗೀತ ನೀಡಿದ್ದು, ಶ್ರೀಕಾಂತ್ ಎಡಿಟಿಂಗ್ ಮಾಡಿದ್ದರೆ, ಯೋಗಿ ಕ್ಯಾಮೆರಾ ಹ್ಯಾಂಡಲ್ ಮಾಡಿದ್ದಾರೆ. ಮೇ 24ಕ್ಕೆ ಮೂರನೇ ಕೃಷ್ಣಪ್ಪನ ಕಥೆ ತೆರೆಗೆ ಬರಲಿದೆ.

Continue Reading

ಸ್ಯಾಂಡಲ್ ವುಡ್

Vimala Raman: ಖಳನಟನ ಜತೆ ಪ್ರೀತಿಲಿ ಬಿದ್ದ ʻಆಪ್ತರಕ್ಷಕʼ ನಟಿ

Vimala Raman: ಕನ್ನಡದಲ್ಲಿ ‘ಆಪ್ತರಕ್ಷಕ’ ಚಿತ್ರದಲ್ಲಿ ನಾಗವಲ್ಲಿ ಆಗಿ ವಿಮಲಾ ರಾಮನ್ ಮಿಂಚಿದ್ದರು. ರಾಜರಾಜೇಂದ್ರ ಎನ್ನುವ ಮತ್ತೊಂದು ಚಿತ್ರದಲ್ಲಿ ಕೂಡ ನಟಿಸಿದ್ದರುವಯಸ್ಸು 40 ದಾಟಿದರೂ ಮದುವೆ ಬಗ್ಗೆ ಮೌನವಾಗಿಯೇ ಇದ್ದ ಆಕೆ ಇದೀಗ ನಟ ವಿನಯ್ ರೈ ಜತೆ ಪ್ರೀತಿಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.

VISTARANEWS.COM


on

Vimala Raman confirms her relationship with this villan actor
Koo

ಆಸ್ಟ್ರೇಲಿಯಾ ಮೂಲದ ವಿಮಲಾ ರಾಮನ್ ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡದಲ್ಲಿ ‘ಆಪ್ತರಕ್ಷಕ’ ಚಿತ್ರದಲ್ಲಿ ನಾಗವಲ್ಲಿ ಆಗಿ ವಿಮಲಾ ರಾಮನ್ ಮಿಂಚಿದ್ದರು. ರಾಜರಾಜೇಂದ್ರ ಎನ್ನುವ ಮತ್ತೊಂದು ಚಿತ್ರದಲ್ಲಿ ಕೂಡ ನಟಿಸಿದ್ದರು

ಮುಂಬೈನಲ್ಲಿ ತುಳು ಕುಟುಂಬದಲ್ಲಿ ಹುಟ್ಟಿ ಬೆಳೆದ ವಿನಯ್ ರೈ ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದರು. ಇದೀಗ ನಟಿ ವಿನಯ್ ರೈ ಜತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.

ವಿನಯ್‌ ರೈ ಜತೆ ಆತ್ಮೀಯವಾಗಿ ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ ನಟಿ.

ವಯಸ್ಸು 40 ದಾಟಿದರೂ ಮದುವೆ ಬಗ್ಗೆ ಮೌನವಾಗಿಯೇ ಇದ್ದ ಆಕೆ ಇದೀಗ ನಟ ವಿನಯ್ ರೈ ಜತೆ ಪ್ರೀತಿಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Arvind Kejriwal: ಚೀನಾದಿಂದ ಭಾರತದ ನೆಲ ವಾಪಸ್‌ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

ಇತ್ತೀಚೆಗೆ ಸೂಪರ್ ಹಿಟ್ ಆದ ‘ಹನುಮಾನ್’ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು ವಿನಯ್ ರೈ.
Continue Reading

ಸಿನಿಮಾ

Ram Charan: ಚುನಾವಣಾ ಪ್ರಚಾರದ ವೇಳೆ ರಾಮ್ ಚರಣ್ ಶರ್ಟ್‌ ಹರಿದ ಫ್ಯಾನ್ಸ್‌: ಅಲ್ಲು ಸುತ್ತ ಜನವೋ ಜನ!

Ram Charan: ಪವನ್ ಕಲ್ಯಾಣ್ ಪರವಾಗಿ ರೋಡ್​ ಶೋಗಳಲ್ಲಿ ಭಾಗಿಯಾದರು. ರಾಮ್ ಚರಣ್ ಜೊತೆಗೆ ಅವರ ತಾಯಿ ಸಹ ಪವನ್ ಕಲ್ಯಾಣ್ ಪರವಾಗಿ ಪ್ರಚಾರ ಮಾಡಿದರು. ಹೀಗಾಗಿ ಇಬ್ಬರೂ ನಟರ ಸುತ್ತ ಅಭಿಮಾನಿಗಳ ದಂಡೇ ಇತ್ತು. ಇದೇ ವೇಳೆ ರಾಮ್‌ಚರಣ್‌ ಅವರ ಶರ್ಟ್‌ ಕೂಡ ಹರಿದು ಹಾಕಿದ್ದಾರೆ ಫ್ಯಾನ್ಸ್‌. ಈ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ,

VISTARANEWS.COM


on

Ram Charan get mobbed by fans during public appearances
Koo

ಬೆಂಗಳೂರು: ಅಲ್ಲು ಅರ್ಜುನ್ (Allu Arjun) ಮತ್ತು ರಾಮ್ ಚರಣ್ (Ram Charan) ಇಬ್ಬರೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು, ಇಬ್ಬರೂ ತಾರೆಯರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ನಂದ್ಯಾಲದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ರವಿಚಂದ್ರ ಕಿಶೋರ್ ರೆಡ್ಡಿ ಪರ ಪ್ರಚಾರದಲ್ಲಿ ಅಲ್ಲು ಅರ್ಜುನ್ ಪಾಲ್ಗೊಂಡಿದ್ದರೆ, ನಟ ರಾಮ್ ಚರಣ್, ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್ ಪರವಾಗಿ ಚುನಾವಣೆ ಪ್ರಚಾರ ಮಾಡಲೆಂದು ಪೀಠಾಪುರಂಗೆ ತೆರಳಿದ್ದರು. ಪವನ್ ಕಲ್ಯಾಣ್ ಪರವಾಗಿ ರೋಡ್​ ಶೋಗಳಲ್ಲಿ ಭಾಗಿಯಾದರು. ರಾಮ್ ಚರಣ್ ಜೊತೆಗೆ ಅವರ ತಾಯಿ ಸಹ ಪವನ್ ಕಲ್ಯಾಣ್ ಪರವಾಗಿ ಪ್ರಚಾರ ಮಾಡಿದರು. ಹೀಗಾಗಿ ಇಬ್ಬರೂ ನಟರ ಸುತ್ತ ಅಭಿಮಾನಿಗಳ ದಂಡೇ ಇತ್ತು. ಇದೇ ವೇಳೆ ರಾಮ್‌ಚರಣ್‌ ಅವರ ಶರ್ಟ್‌ ಕೂಡ ಹರಿದು ಹಾಕಿದ್ದಾರೆ ಫ್ಯಾನ್ಸ್‌. ಈ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ,

ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ʻʻಅಲ್ಲು ಅರ್ಜುನ್ ಅವರು ಮುಂಬರುವ ಲೋಕಸಭೆ ಚುನಾವಣೆಗೆ ತಮ್ಮ ಸ್ನೇಹಿತ ರವಿಚಂದ್ರ ಕಿಶೋರ್ ರೆಡ್ಡಿ ಅವರನ್ನು ಬೆಂಬಲಿಸಲು ನಂದ್ಯಾಲಕ್ಕೆ ಭೇಟಿ ನೀಡಲು ಹೊರಟಾಗ ನೂರಾರು ಅಭಿಮಾನಿಗಳು ಸ್ವಾಗತಿಸಿರುವುದು ಕಂಡು ಬಂದಿದೆ. ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಕೈಮುಗಿದು ಸ್ವಾಗತಿ ಅವರತ್ತ ಕೈ ಬೀಸಿದರು ಮತ್ತು ಮುಗುಳ್ನಕ್ಕರು. ಅವರ ಪಕ್ಕದಲ್ಲಿ ಸ್ನೇಹಾ ರೆಡ್ಡಿ ಕೂಡ ನಿಂತಿದ್ದರು.

ಇದನ್ನೂ ಓದಿ: Ram Charan: ನಟ ರಾಮ್‌ಚರಣ್‌ಗೆ ಗೌರವ ಡಾಕ್ಟರೇಟ್​: ಫ್ಯಾನ್ಸ್‌ ಫುಲ್‌ ಖುಷ್‌!

ಇತ್ತ ರಾಮ್ ಚರಣ್, ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್ ಪರವಾಗಿ ಚುನಾವಣೆ ಪ್ರಚಾರ ಮಾಡಲೆಂದು ಪೀಠಾಪುರಂಗೆ ತೆರಳಿದ್ದರು. ಪವನ್ ಕಲ್ಯಾಣ್ ಪರವಾಗಿ ರೋಡ್​ ಶೋಗಳಲ್ಲಿ ಭಾಗಿಯಾದರು. ರಾಮ್ ಚರಣ್ ಜತೆಗೆ ಅವರ ತಾಯಿ ಸಹ ಪವನ್ ಕಲ್ಯಾಣ್ ಪರವಾಗಿ ಪ್ರಚಾರ ಮಾಡಿದರು. ರಾಮ್ ಚರಣ್, ಪವನ್ ಕಲ್ಯಾಣ್ ಒಟ್ಟಿಗೆ ಬಂದಿದ್ದನ್ನು ನೋಡಲು ಸಾವಿರಾರು ಮಂದಿ ಅಭಿಮಾನಿಗಳು ಪೀಠಾಪುರಂನಲ್ಲಿ ನೆರೆದಿದ್ದರು.

ರೋಡ್ ಶೋ ಮಾಡುವ ವೇಳೆ ರಾಮ್ ಚರಣ್ ಅನ್ನು ಅಭಿಮಾನಿಗಳು ಮುತ್ತಿಕೊಂಡರು. ರಾಮ್ ಚರಣ್ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟರು.. ಅಭಿಮಾನಿಗಳು ರಾಮ್ ಚರಣ್ ಅನ್ನು ತಳ್ಳಿದರು, ಶರ್ಟ್​ ಅನ್ನು ಹರಿದರು. . ಇಷ್ಟೆಲ್ಲ ಆದರೂ ಸಹ ರಾಮ್ ಚರಣ್ ಏನೂ ಪ್ರತಿಕ್ರಿಯೆ ನೀಡದೆ ಸಹಿಸಿಕೊಂಡು ಕಾರಿನ ಬಳಿ ಹೋಗಿ ಕುಳಿತುಕೊಂಡರು. ಈ ಘಟನೆಯ ಹಲವು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸಿನಿಮಾ ವಿಚಾರಕ್ಕೆ ಬಂದರೆ ಅಲ್ಲು ಅರ್ಜುನ್‌ ಪುಷ್ಪ: ದಿ ರೂಲ್ ಬಿಡುಗಡೆಗಾಗಿ ಸಜ್ಜಾಗಿದ್ದಾರೆ. ಆಗಸ್ಟ್ 15 ರಂದು ಅಲ್ಲು ಅವರ ಪುಷ್ಪ: ದಿ ರೂಲ್ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಧನಂಜಯ್, ರಾವ್ ರಮೇಶ್ ಮುಂತಾದವರು ನಟಿಸಿದ್ದಾರೆ. ರಾಮ್ ಚರಣ್‌ ಪ್ರಸ್ತುತ ಕಿಯಾರಾ ಆಡ್ವಾಣಿ ಜತೆ ಶಂಕರ್ ಅವರ ಗೇಮ್ ಚೇಂಜರ್ ಚಿತ್ರೀಕರಣದಲ್ಲಿದ್ದಾರೆ.

Continue Reading

ಸಿನಿಮಾ

Mother’s Day 2024: ಅಮ್ಮನ ನೆನೆದಾಗ ಮಗುವಾಗುವೆ ಎಂದ ಜಗ್ಗೇಶ್‌: ದುನಿಯಾ ವಿಜಯ್‌ ಭಾವುಕ ಪೋಸ್ಟ್‌!

Mother’s Day 2024: ತಾಯಂದಿರ ದಿನದ ಹಿನ್ನೆಲೆಯಲ್ಲಿ ಜಗ್ಗೇಶ್, ದುನಿಯಾ ವಿಜಯ್ ಸೇರಿದಂತೆ ಹಲವರು ತಮ್ಮ ತಾಯಿಯನ್ನು ಸ್ಮರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ (Manvita Kamath) ಅವರ ತಾಯಿ ಸುಜಾತಾ ಕಾಮತ್‌ ಕಿಡ್ನಿ ವೈಫಲ್ಯದಿಂದಾಗಿ ಕೊನೆಯುಸಿರೆಳೆದಿದ್ದರು. ಈ ದಿನ ನಟಿ ತಮ್ಮ ತಾಯಿಯನ್ನು ನೆನಪಿಸಿಕೊಂಡು, ಮಿಸ್‌ ಯೂ ಅಮ್ಮ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

VISTARANEWS.COM


on

Mother's Day 2024 Duniya Vijay jaggesh Post Viral
Koo

ಬೆಂಗಳೂರು: ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ..? ಭೂಮಿಗೆ ಬಂದ (Mother’s Day 2024) ಮೊದಲನೆ ಕಂದನ ಅಳುವ ದನಿಯಿಂದ ʼಈ ಸಾಲುಗಳು ಯಾವಾಗಲೂ ನಮ್ಮನ್ನ ಬಿಡದೇ ಕಾಡುತ್ತವೆ. ʼಅಮ್ಮʼ ಅನ್ನೋ ಶಬ್ದಕ್ಕೆ ಅರ್ಥ ನಿಡುವುದು ಕೂಸೇ ಆದ್ರೂ ಆ ಕೂಸಿಗೆ ರೆಕ್ಕೆ ಕಟ್ಟಿ ಹಾರೋ ಹಾಗೇ ಮಾಡೋಳು ತಾಯಿ. ಪ್ರತಿವರ್ಷ ಮೇ ತಿಂಗಳ 2ನೇ ಭಾನುವಾರ ಮದರ್ಸ್ ಡೇ. ತಾಯಂದಿರ ದಿನದ ಹಿನ್ನೆಲೆಯಲ್ಲಿ ಜಗ್ಗೇಶ್, ದುನಿಯಾ ವಿಜಯ್ ಸೇರಿದಂತೆ ಹಲವರು ತಮ್ಮ ತಾಯಿಯನ್ನು ಸ್ಮರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ನವರಸ ನಾಯಕ ಜಗ್ಗೇಶ್‌ ಅವರು ಇನ್‌ಸ್ಟಾದಲ್ಲಿ ಅಮ್ಮನ ತೊಡೆ ಮೇಲೆ ಮಲಗಿರುವ ಫೋಟೊ ಜತೆಗೆ ಹೀಗೆ ಬರೆದಿದ್ದಾರೆ. ಧನ್ಯವಾದ ಜೀ ಕನ್ನಡ. ನನ್ನ ಪ್ರೀತಿಯ ಅಮ್ಮನ ಈ ರೀತಿ ನೆನೆಯುವಂತ ಕಾಣಿಕೆಗಾಗಿ.
ನಾನು ಇಂದು 61 ವರ್ಷವಾದರು ಅಮ್ಮನ ನೆನೆದಾಗ ಮಗುವಾಗುವೆ. ಅಂತಹ ಶಕ್ತಿಯಿದೆ ಅಮ್ಮನ ಎರಡಕ್ಷರಕ್ಕೆ.
ಕಾರುಣ್ಯ ಸೆಲೆಯ ಓ ಅಮ್ಮಂದಿರೆ…ನೀವುಗಳು ಇರಬೇಕು ಶಾಶ್ವತ. ದೃವನಕ್ಷತ್ರದಂತೆ..! ಮರೆಯಾಗದೆ ಮಕ್ಕಳ ಮುಂದೆ..ʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್‌ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ

ದುನಿಯಾ ವಿಜಯ್‌ ಅವರು ಅಮ್ಮನ ಜತೆ ಇರುವ ಫೋಟೊ ಶೇರ್‌ ಮಾಡಿ ʻʻಈ ಉಸಿರು ಕೊಟ್ಟ ನಿನಗೆ
ನನ್ನ ಉಸಿರಿರೊವರೆಗೂ. ಪ್ರತಿ ದಿನ ಆಚರಣೆಯೇ ಅಮ್ಮʼʼ ಎಂದು ಬರೆದುಕೊಂಡಿದ್ದಾರೆ.

ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ದುನಿಯಾ ವಿಜಯ್‌ ಅಮ್ಮ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು. ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ಹಾಗೂ ತಾಯಿ ನಾರಾಯಣಮ್ಮ ಅವರಿಗೆ ಕೋವಿಡ್ 19 ಪಾಸಿಟಿವ್ ಕಂಡುಬಂದಿತ್ತು. ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿ, ತಂದೆ-ತಾಯಿಯನ್ನು ದುನಿಯಾ ವಿಜಯ್ ಆರೈಕೆ ಮಾಡಿದ್ದರು. ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು. 3 ವರ್ಷಗಳ ಹಿಂದೆ ನಟ ದುನಿಯಾ ವಿಜಯ್ ನಾರಾಯಣಮ್ಮ ನಿಧನರಾದರು.

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ (Manvita Kamath) ಅವರ ತಾಯಿ ಸುಜಾತಾ ಕಾಮತ್‌ ಕಿಡ್ನಿ ವೈಫಲ್ಯದಿಂದಾಗಿ ಕೊನೆಯುಸಿರೆಳೆದಿದ್ದರು. ಈ ದಿನ ನಟಿ ತಮ್ಮ ತಾಯಿಯನ್ನು ನೆನಪಿಸಿಕೊಂಡು, ಮಿಸ್‌ ಯೂ ಅಮ್ಮ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ (Duniya Vijay) ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ವಿಶೇಷ ಅಂದರೆ ಈ ಸಿನಿಮಾ ಮೂಲಕ ದುನಿಯಾ ವಿಜಯ್‌ ಅವರ ಮಗಳು ಮೋನಿಕಾ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಕಾಟೇರ’ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೋನಿಕಾ ಈಗ ಹೆಸರು ಬದಲಾಯಿಸಿಕೊಂಡಿದ್ದಾರೆ. ಸಿನಿಮಾಗಾಗಿ ರಿತಾನ್ಯಾ ಎಂದು ಹೆಸರು ಇಟ್ಟುಕೊಂಡಿದ್ದಾರೆ.

ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ್ಯ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ.

Continue Reading
Advertisement
Prajwal Revanna Case
ಕರ್ನಾಟಕ2 hours ago

Prajwal Revanna Case: ಅಶ್ಲೀಲ ವಿಡಿಯೊ ಕೇಸ್; ಚೇತನ್, ಲಿಖಿತ್‌ಗೆ 14 ದಿನ ನ್ಯಾಯಾಂಗ ಬಂಧನ‌

IPL 2024
ಪ್ರಮುಖ ಸುದ್ದಿ3 hours ago

IPL 2024 : ಡೆಲ್ಲಿ ವಿರುದ್ಧ ಆರ್​​ಸಿಬಿ 47 ರನ್ ಗೆಲುವು, ಪ್ಲೇಆಫ್​ಗೆ ಇನ್ನೊಂದು ಗೆಲುವು ಬೇಕು

Chetan Chandra
ಕರ್ನಾಟಕ3 hours ago

Chetan Chandra: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ; ರಕ್ತ ಬರುವಂತೆ ಥಳಿತ

Virat kohli
Latest3 hours ago

Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

Sunil Narine
ಪ್ರಮುಖ ಸುದ್ದಿ4 hours ago

Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

vijay Rao herur
ಸಿನಿಮಾ4 hours ago

Vijay Rao Herur: ‘ವಿಜಯದಾಸರು’ ಚಿತ್ರದ ಸಹ ನಟ ವಿಜಯ್‌ ರಾವ್ ಹೇರೂರು ವಿಧಿವಶ

Virat Kohli
ಪ್ರಮುಖ ಸುದ್ದಿ4 hours ago

Virat kohli: ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ; ವಿಡಿಯೊ ನೋಡಿ

Ravindra Jadeja
ಕ್ರೀಡೆ4 hours ago

Ravindra Jadeja : ವಿಕೆಟ್​ಗೆ ಹೋಗುತ್ತಿದ್ದ ಚೆಂಡು ತಡೆದ ಜಡೇಜಾಗೆ ಔಟ್ ಕೊಟ್ಟ ಅಂಪೈರ್​; ಇಲ್ಲಿದೆ ವಿಡಿಯೊ

Rain News
ಕರ್ನಾಟಕ4 hours ago

Rain News: ಬಾಗಲಕೋಟೆಯಲ್ಲಿ ಸಿಡಿಲಿಗೆ ಬಾಲಕ ಬಲಿ; ಬೆಳಗಾವಿಯ ಮನೆಗಳಿಗೆ ನುಗ್ಗಿದ ಮಳೆ ನೀರು

IPL 2024
ಪ್ರಮುಖ ಸುದ್ದಿ5 hours ago

IPL 2024 : ಅತಿಯಾಗಿ ಸಂಭ್ರಮಿಸುತ್ತಿದ್ದ ಡೆಲ್ಲಿ ಬೌಲರ್​ ರಸಿಕ್ ಸಲಾಮ್​ನನ್ನು ತಳ್ಳಿದ ರಜತ್​ ಪಾಟೀದಾರ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case I was never kidnapped and son has made a false complaint Video of victim goes viral
ಕ್ರೈಂ8 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ8 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ9 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ12 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ13 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ21 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ3 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

ಟ್ರೆಂಡಿಂಗ್‌