Site icon Vistara News

70th National Film Awards: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರಿಷಬ್‌ ಶೆಟ್ಟಿ ಅತ್ಯುತ್ತಮ ನಟ, ಕೆಜಿಎಫ್‌ 2 ಅತ್ಯುತ್ತಮ ಕನ್ನಡ ಚಿತ್ರ

70th National Film Awards Rishabh Shetty Best Actor, KGF 2 Best Kannada Movie

ಬೆಂಗಳೂರು: ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಎನಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ (70th National Film Awards) ಇಂದು (ಆಗಸ್ಟ್ 16) ಘೋಷಣೆ ಆಗಿದೆ. ‘ಕಾಂತಾರ’ ಸಿನಿಮಾಗಾಗಿ ರಿಷಬ್‌ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ಕೆಜಿಎಫ್‌ 2ಗೆ ಅತ್ತುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಸಾಹಸ ವಿಭಾಗದಲ್ಲೂ ಕೆಜಿಎಫ್‌ 2ಗೆ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಮನರಂಜನಾ ಪ್ರಶಸ್ತಿ ಕೂಡ ಕಾಂತಾರ ಪಡೆದುಕೊಂಡಿದೆ. ಈ ಮೂಲಕ ಕನ್ನಡ ಚಿತ್ರರಂಗ ಈ ಬಾರಿ ರಾಷ್ಟ್ರ ಮಟ್ಟದಲ್ಲಿ ಪಾರಮ್ಯ ಮೆರೆದಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2024 ವಿಜೇತ ಪಟ್ಟಿಯನ್ನು ಪ್ರಕಟಿಸಿದೆ. ಮಮ್ಮುಟ್ಟಿ ಮತ್ತು ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗಾಗಿ ರೇಸ್‌ನಲ್ಲಿದ್ದರು. 70ನೇ ರಾಷ್ಟ್ರೀಯ ಫಿಲ್ಮ್ ಅವಾರ್ಡ್ಸ್ 2024 ವಿಜೇತರ ಹೆಸರು ಪಟ್ಟಿಯನ್ನು ಘೋಷಿಸಲಾಗಿದೆ.  ವಿಶೇಷವಾಗಿ ಈ ಬಾರಿ ಅತ್ಯುತ್ತಮ ನಟ ಯಾರಾಗಬಹುದು ಎಂಬ ಕುತೂಹಲ ಹೆಚ್ಚಾಗಿತ್ತು.

ಪೃಥ್ವಿರಾಜ್ ಸುಕುಮಾರ್ ನಟನೆಯ ‘ಜನ ಗಣ ಮನ’, ಮಲಯಾಳಂ ನ ಇತರೆ ಕೆಲವು ಸಿನಿಮಾಗಳಾದ, ‘ರೊರಸಾಚ್’, ‘ಮುಕುಂದನ್ ಉನ್ನಿ ಅಸೋಸಿಯೇಟ್ಸ್’, ‘ಜಯ ಜಯ ಜಯ ಹೇ’, ‘ಪುಜು’, ‘ಅರಿಪ್ಪು’, ‘ಸಲ್ಯೂಟ್’ ಇನ್ನೂ ಕೆಲವು ಸಿನಿಮಾಗಳಿವೆ. ‘ಸೀತಾ ರಾಮಂ’ ಸಿನಿಮಾ 2022ರಲ್ಲಿ ಬಿಡುಗಡೆ ಆಗಿದ್ದು ಸ್ಪರ್ಧೆಯಲ್ಲಿತ್ತು.

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2024ಗಾಗಿ, ತೆಲುಗು ಚಿತ್ರ ಪುಷ್ಪ: ದಿ ರೈಸ್‌ಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದರು. ಮತ್ತು ಅತ್ಯುತ್ತಮ ನಟಿ ಗೌರವವನ್ನು ಆಲಿಯಾ ಮತ್ತು ಕೃತಿ ಗೆದ್ದಿದ್ದರು. ಮೂವರೂ ನಟರಿಗೆ ಇದು ಮೊದಲ ರಾಷ್ಟ್ರೀಯ ಪ್ರಶಸ್ತಿ.

ಇದನ್ನೂ ಓದಿ: 70th National Film Awards: 70ನೇ ರಾಷ್ಟ್ರೀಯ ಪ್ರಶಸ್ತಿ ಕ್ಷಣಗಣನೆ; ರಿಷಬ್‌ ಶೆಟ್ಟಿ ಮೇಲೆ ಸಿನಿಪ್ರಿಯರ ಕಣ್ಣು!

ರಿಷಬ್‌ ಶೆಟ್ಟಿ

2022ರಲ್ಲಿ ತೆರೆಕಂಡು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದ, ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿದ ʼಕಾಂತಾರʼ ಚಿತ್ರ ಈಗಾಗಲೇ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಅತ್ಯುತ್ತಮ ಚಿತ್ರದ ಜತೆಗೆ ನಟ, ನಿರ್ದೇಶಕ ವಿಭಾಗದಲ್ಲಿಯೂ ರಿಷಬ್‌ ಶೆಟ್ಟಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಗಮನವನ್ನೂ ಸೆಳೆದಿದ್ದಾರೆ. ʼಕಾಂತಾರʼ ಚಿತ್ರದ ಶಿವ ಪಾತ್ರದ ಮೂಲಕ ಅತ್ಯುತ್ತಮ ನಟ ವಿಭಾಗದಲ್ಲಿ ರಿಷಬ್‌ ಶೆಟ್ಟಿ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ತುಳುನಾಡಿನ ವಿಶಿಷ್ಟ ಭೂತಾರಾಧನೆಯ ಸಂಸ್ಕೃತಿಯನ್ನು ಜಗತ್ತಿಗೇ ಸಾರಿದ ಈ ಸಿನಿಮಾ ಮೇಕಿಂಗ್‌ನಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. ಅದರಲ್ಲಿಯೂ ನಾಯಕನಾಗಿ ರಿಷಭ್‌ ಶೆಟ್ಟಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಕ್ಲೈಮಾಕ್ಸ್‌ನಲ್ಲಂತೂ ಅವರ ಅಭಿನಯ ಅಮೋಘ ಎಂದಿದ್ದ ಹಲವರು ಅಂದೇ ನ್ಯಾಷನಲ್‌ ಅವಾರ್ಡ್‌ ಬಗ್ಗೆ ಭವಿಷ್ಯ ನುಡಿದಿದ್ದರು.

2016ರಲ್ಲಿ ʼರಿಕ್ಕಿʼ ಚಿತ್ರ ನಿರ್ದೇಶಿಸುವ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಬಳಿಕ ತೆರೆಕಂಡ ʼಕಿರಿಕ್‌ ಪಾರ್ಟಿʼ ಮತ್ತು ʼಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುʼ ಸಿನಿಮಾದಿಂದ ಸ್ಯಾಂಡಲ್‌ವುಡ್‌ನ ಗಮನ ಸೆಳೆದರು. ಇನ್ನು 2022ರಲ್ಲಿ ತೆರೆಕಂಡ ʼಕಾಂತಾರʼ ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ರೂ.ಗಿಂತ ಹೆಚ್ಚು ಗಳಿಸಿ ಮೈಲಿಗಲ್ಲು ನೆಟ್ಟಿದೆ. ಈಗಾಗಲೇ ಫಿಲಂಫೇರ್‌ನಂತಹ ಪ್ರಶಸ್ತಿ ಮುಡುಗೇರಿಸಿಕೊಂಡಿದ್ದಾರೆ.

Exit mobile version